ರಂಜ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Mimusops elengi
Spanish cherry.jpg
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: plantae
ವಿಭಾಗ: ಹೂ ಬಿಡುವಸಸ್ಯ
ವರ್ಗ: ಮ್ಯಾಗ್ನೋಲಿಪ್ಸಿಡ
ಗಣ: ಎರಿಕಾಲಸ್
ಕುಟುಂಬ: ಸಪೋಟಾಸಿಯೆ
ಕುಲ: ಮಿಮುಸೋಪ್ಸ್
ಪ್ರಭೇದ: M. elengi L.
ದ್ವಿಪದ ಹೆಸರು
Mimusops elengi
L.ರಂಜ(ಪಗಡೆಮರ)ಎಂಬುದು ಮುಖ್ಯವಾಗಿ ಪಶ್ಚಿಮ ಘಟ್ಟ ಹಾಗೂ ಸಹ್ಯಾದ್ರಿಪ್ರದೇಶದ ನಿತ್ಯಹರಿದ್ವರ್ಣಕಾಡುಗಳಲ್ಲಿ ಕಂಡುಬರುವ ಒಂದು ದೊಡ್ಡ ಪ್ರಮಾಣದ ಮರ.ಸುಂದರವಾಗಿ ದಟ್ಟ ಹಂದರ ಹೊಂದಿದ ಇದನ್ನು ಉದ್ಯಾನವನಗಳಲ್ಲಿಯೂ ಬೆಳೆಸುತ್ತಾರೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಸಪೋಟಾಸಿಯೆ ಕುಟುಂಬಕ್ಕೆ ಸೇರಿದ್ದು,ಮಿಮುಸೊಪ್ಸ್ ಎಲಂಗಿ ಎಂಬ ಸಸ್ಯಶಾಸ್ತ್ರೀಯ ಹೆಸರಿದೆ.ತುಳು ಬಾಷೆಯಲ್ಲಿ 'ರೆಂಜ' ಎಂದು ಹೆಸರು.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ದೊಡ್ಡಪ್ರಮಾಣದ ಹೊಳಪಿನ ಎಲೆಗಳಿಂದ ಕೂಡಿದ ಮರ.ಬಿಳಿಯ ನಕ್ಷತ್ರಾಕಾರದ ಹೂವುಗಳಿವೆ.ಹೂವಿಗೆ ನವಿರಾದ ಒಳ್ಳೆಯ ಪರಿಮಳವಿದೆ.ದಾರುವು ಬಹಳ ಗಡುಸಾಗಿದ್ದು ತೂಕವುಳ್ಳದ್ದಾಗಿದೆ.ಒಳ್ಳೆಯ ಬಾಳಿಕೆ ಬರುತ್ತದೆ.

ರಂಜ ಮರದ ಕಾಂಡ.

ಉಪಯೋಗಗಳು[ಬದಲಾಯಿಸಿ]

ದಾರುವು ಕಟ್ಟಡ ನಿರ್ಮಾಣದಲ್ಲಿ ಉಪಯೋಗವಾಗುತ್ತದೆ.ಇದರ ಬೀಜದಿಂದ ಸಿಗುವ ಎಣ್ಣೆಯನ್ನು ಅಡಿಗೆಗೆ,ಔಷಧಿಗಳಿಗೆ ಉಪಯೋಗಿಸುತ್ತಾರೆ.ತೊಗಟೆ ಹಳ್ಳಿಮದ್ದಿನಲ್ಲಿ ಉಪಯೋಗವಾಗುತ್ತದೆ. ಹೂವಿನಿಂದ ಸುಗಂಧದ್ರವ್ಯದೊರೆಯುತ್ತದೆ.

ಆಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ರಂಜ&oldid=684451" ಇಂದ ಪಡೆಯಲ್ಪಟ್ಟಿದೆ