ವಿಷಯಕ್ಕೆ ಹೋಗು

ರಂಗಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಂಗ ಭೂಮಿ ಇಂದ ಪುನರ್ನಿರ್ದೇಶಿತ)

ವಿಶ್ವ ರಂಗಭೂಮಿ ದಿನ

[ಬದಲಾಯಿಸಿ]

ಇಂಟರ್ ನ್ಯಾಷನಲ್ ಥಿಯೇಟರ್ ಇನ್ ಸ್ಟಿಟ್ಯೂಟ್ ೧೯೬೧ ರಲ್ಲಿ ವ್ಯವಸ್ಥೆಗೊಳಿಸಿದ ವಿಶ್ವ ರಂಗಭೂಮಿ ಸಮಾವೇಶದಲ್ಲಿ ಪ್ರತಿವರ್ಷ ಮಾರ್ಚ್ ೨೭ ರಂದು ವಿಶ್ವ ರಂಗಭೂಮಿ ದಿನ ಎಂದು ಆಚರಿಸಲು ನಿರ್ಧರಿಸಲಾಯಿತು. ೧೯೬೨ ರಲ್ಲಿಪ್ಯಾರಿಸ್ಸಿನಲ್ಲಿ ಅಂತಾರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಯೊಂದಿಗೆ ಮೊದಲ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.ಅಂದಿನಿಂದ ಪ್ರತಿವರ್ಷ ಮಾರ್ಚ್ ೨೭ ರಂದು ವಿಶ್ವ ರಂಗಭೂಮಿ ದಿನ ಆಚರಿಸಲಾಗುತ್ತದೆ."ನಮನ"

ಕನ್ನಡ ರಂಗ ಭೂಮಿ ಮತ್ತು ವ್ರತ್ತಿ ನಾಟಕ ಕಂಪನಿಗಳು

[ಬದಲಾಯಿಸಿ]

ಕನ್ನಡದಲ್ಲಿ ಜನಪದ ರಂಗಭೂಮಿ, ವ್ರತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು.ಕನ್ನಡ ಜನಪದ ರಂಗ ಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ "ಸೀತಾ ಸ್ವಯಂವರ" ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬಯಿ ಪ್ರಾಂತ್ಯ ಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸೀ ಕಂಪನಿಗಳದ್ದೆ ನಾಟಕದಾಟ,ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು.ಈ ವೇಳೆಗೆ "ಶಾಂತ ಕವಿ'ಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು.ಸಮಗ್ರ ಕರ್ನಾಟಕ ವರ್ತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.

೧೮೫೬ನೆ ಜನವರಿ ೧೫ ರಂದು ಹುಟ್ಟಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬವರ ಪ್ರೋತ್ಸಾಹದಿಂದ ಹಲವಾರು ರುವಕರ ನೆರವಿನಿಂದ ೧೮೭೨ ರಲ್ಲಿ 'ವೀರ ನಾರಾಯಣ ಪ್ರಸಾದಿತ ನಾಟಕ ಮಂಡಳಿ' ಸ್ತಾಪಿಸಿದರು.ಈ ಮಂಡಳಿ ಉತ್ತರ ಕರ್ನಾಟಕದ ಪ್ರಥಮ ವ್ರತ್ತಿ ನಾಟಕ ಸಂಸ್ಥೆ. ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು ೧೮೭೯-೮೦ ರಲ್ಲಿ ಸಿ.ಆರ್.ರಘುನಾಥ ರಾಯರ ನೇತ್ರತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ "ಶ್ರೀ ಶಾಕುಂತಲ ಕರ್ನಾಟಕ ನಾಟಕ ಸಬಾ"ಎಂದು ಹೆಸರಿಟ್ಟುಕಾರ್ಯ ನಿರತರಾದರು.ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರ ರ ನೆರವಿನೊಂದಿಗೆ ೧೮೮೦ರಲ್ಲಿ " ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ" ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗ ಭೂಮಿಗೆ ಭದ್ರ ಬುನಾದಿ ಹಾಕಿ ಸತ್ ಸಂಪ್ರ್ತದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು."ನಮನ"

೧೮೮೨ರಲ್ಲಿ ಅರಮನೆಗೆ ಸೇರಿದ ವಿಧ್ಯಾರ್ಥಿಗಳು ಸೇರಿ "ಮೈಸೂರ್ ರಾಯಲ್ ಸ್ಕೂಲ್ ಡ್ರಾಮ್ಯಟಿಕ್ ಕಂಪನಿ"ಸ್ಥಾಪನೆಯಾಯಿತು,ಮುಂದೆ ಪೆರಿಸ್ವಾಮಿ ಅಯ್ಯಂಗಾರ್ -ಚಿನ್ನ ಸ್ವಾಮೀ ಅಯ್ಯಂಗಾರ್ ಸಹೋದರರ "ರಸಿಕ ಮನೋಲ್ಲಾಸಿನಿ ನಾಟಕ ಕಂಪನಿ"ಜನ್ಮ ತಾಳಿತು. ಮುಂದೆ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ನಿಂತ ಮೇಲೆ ಅದರಲ್ಲಿನ ಕೆಲವರು ಸೇರಿ ೧೯೧೯ ರಲ್ಲಿ "ಶ್ರೀ ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ"ಎಂದು ಏನ್,ಸುಬ್ಬಣ್ಣನವರ ನೇತ್ರತ್ವದಲ್ಲಿ ಮುನ್ನಡೆಯಿತು.ಇದರಲ್ಲಿ ಮುಂದೆ ಆರ್,ನಾಗೇಂದ್ರ ರಾವ್ ,ಮಳವಳ್ಳಿ ಸುಂದರಮ್ಮನವರು ಬೇರೆ ಬೇರೆ ಕಾಲದಲ್ಲಿ ಆಡಳಿತ ಹೊಣೆ ಹೊತ್ತರು.

ನಾಟ್ಯ ಶಿರೋಮಣಿ ವರದಾಚಾರ್ಯರು "ರತ್ನಾವಳಿ ನಾಟಕ ಸಭಾ" ೧೯೦೨ ರಲ್ಲಿ ಸ್ಥಾಪಿಸಿದರು,ಮೈಸೂರು ರಂಗ ಭೂಮಿಯಲ್ಲಿ ಮೊತ್ತ ಮೊದಲು ವಿದ್ಯುತ್ ಶಕ್ತಿಯ ಸಹಾಯದಿಂದ ದೀಪಾಲಂಕಾರ,ಬಣ್ಣಗಳ ವಿಧವನ್ನು ಅಳವಡಿಸಿದರು.

ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ ಗುಬ್ಬಿ. "ಶ್ರೀ ಗುಬ್ಬಿ ಚೆನ್ನ ಬಸವೇಶ್ವರ ಕ್ರಪಾ ಪೋಷಿತ ನಾಟಕ ಮಂಡಳಿ Archived 2015-06-04 ವೇಬ್ಯಾಕ್ ಮೆಷಿನ್ ನಲ್ಲಿ."೧೮೮೪ರಲ್ಲಿ ಗುಬ್ಬಿ ಚಂದಣ್ಣನವರ ನೇತ್ರತ್ವದಲ್ಲಿ ಹುಟ್ಟಿತು.

ರಂಗ ಭೂಮಿಗೆ ತಮ್ಮದೇ ಆದ ಸೇವೆ ಸಲ್ಲಿಸಿದವರ ಪಟ್ಟಿ

[ಬದಲಾಯಿಸಿ]
  • ೧೮೮೮ ರಲ್ಲಿ ಸಿ,ಅರ್,ರಘುನಾಥರಾಯರ "ಶಕುಂತಲಾ ನಾಟಕ ಸಬಾ".
  • ೧೮೮೧ ರಲ್ಲಿ ಮಂಡ್ಯ ರಂಗಾಚಾರ್ಯರ "ರಾಜಧಾನಿ ನಾಟಕ ಮಂಡಳಿ".
  • ೧೮೮೨ ರಲ್ಲಿ ಪೆರಿಸ್ವಾಮಿ ಅಯ್ಯಂಗಾರರ "ರಸಿಕ ಮನೋಲ್ಲಾಸೀ ಸಬಾ".
  • ೧೮೮೪ ರಲ್ಲಿ ಶ್ರೀ ಚಂದಣ್ಣನವರ "ಗುಬ್ಬಿ ಚೆನ್ನ ಬಸವೇಶ್ವರ ಕೃಪಾ ಪೋಷಿತ ನಾಟಕ ಸಬಾ".
  • ೧೮೯೫ ರಲ್ಲಿ ಪೂರ್ಣ ರಾಘವೇಂದ್ರ ರಾಯರ "ಶ್ರೀ ಕಂಠಈಶ್ವರ ನಾಟಕ ಮಂಡಳಿ".
  • ೧೯೦೦ ರಲ್ಲಿ ವರದಾಚಾರ್ಯರ "ರತ್ನಾವಳಿ ನಾಟಕ ಸಭಾ".
  • ೧೯೧೮ ರಲ್ಲಿ ಎಂ,ಬಿ,ಶಿವಪ್ಪ ಮತ್ತು ಎಂ,ವಿ,ಮಾದಪನವರ "ಶಾರದಾ ವಿಲಾಸ ಒಥೆಲೊ ಥಿಯೇಟ್ರಿಕಲ್ ಯೂನಿಯನ್ ".
  • ೧೯೧೭ ರಲ್ಲಿ ಆರ್,ನಾಗೇಂದ್ರ ರಾಯರ "ಶಾಕುಂತಲಾ ನಾಟಕ ಸಬಾ".
  • ೧೯೧೯ ರಲ್ಲಿ ಸಿ.ಆರ್,ಸುಬ್ಬರಾಯರ "ಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ".
  • ೧೯೨೦ ರಲ್ಲಿ ಸಿ,ಮರಿದೇವ ಅವರ " ಸಾಹಿತ್ಯ ನಾಟಕ ಸಂಘ".
  • ೧೯೨೪ ರಲ್ಲಿ ಟಿ,ಎಸ್,ಗುರಿಕಾರ ಅವರ"ಭಾರತ ಜನಮನೋಲ್ಲಾಸಿನಿ ನಾಟಕ ಸಭಾ".
  • ೧೯೨೭ ರಲ್ಲಿ ನಂಜುಂಡಯ್ಯ ನವರ "ಚಂದ್ರ ಮೌಳೆಶ್ವರ ನಾಟಕ ಸಭಾ".
  • ೧೯೨೭ ರಲ್ಲಿ ಆರ್,ಬಾಲಾಜಿ ಸಿಂಗ್ ರವರ " ದುರ್ಗಾಂಬಾ ಕೃಪಾ ಪೋಷಿತ ಕರ್ನಾಟಕ ನಾಟಕ ಸಭಾ".
  • ೧೯೩೦ ರಲ್ಲಿ ಪೀರ್ ಮಹಮ್ಮದರ "ಚಂದ್ರ ಕಲಾ ನಾಟಕ ಮಂಡಳಿ".
  • ೧೯೩೨ ರಲ್ಲಿ ಎಂ,ವಿ, ಸುಬ್ಬಯ್ಯ ನಾಯ್ಡು ರವರ "ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ".
  • ೧೯೪೦ ರಲ್ಲಿ ಕೆ,ಹಿರಣ್ಣಯ್ಯ ನವರ "ಹಿರಣ್ಣಯ್ಯ ಮಿತ್ರ ಮಂಡಳಿ".
  • ೧೯೪೧ರಲ್ಲಿ ಸಿದ್ದಯ್ಯ ನವರ "ಸತ್ಯ ನಾರಾಯಣ ನಾಟಕ ಮಂಡಳಿ".
  • ೧೯೪೩ ರಲ್ಲಿ ಗುರುಮೂರ್ತಿಆಚಾರ್ಯರ "ಪಂಚ ರತ್ನಾಕರ ನಾಟಕ ಸಭಾ"
  • ೧೯೫೬ ರಲ್ಲಿ ಉದಯಕುಮಾರರ "ಉದಯ ಕಲಾ ನಿಕೇತನ".
  • ೧೦೯೬೦ ರಲ್ಲಿ ಬಿ,ಚೆನ್ನಪ್ಪನವರ "ಚಿನ್ಮಯಿ ನಾಟಕ ಮಂಡಳಿ".
  • ೧೮೯೫ರಲ್ಲಿ ಗೋವಿಂದಪ್ಪನವರ ನೇತ್ರತ್ವದಲ್ಲಿ "ಬಾಲ ನಾಟಕ ಮಂಡಳಿ" ಸ್ಥಾಪಿತವಾಯಿತು.
  • ೧೮೯೯ರಲ್ಲಿ ಶಿವ ಮೂರ್ತ ಸ್ವಾಮಿ ಕಣಬರಗಿಮಠರು "ಕೊಣ್ಣೂರಕರ ಕಾಡಸಿದ್ದೇಶ್ವರ ನಾಟಕ ಮಂಡಳಿ" ಸ್ಥಾಪಿಸಿ ಮೂವತ್ತು ವರ್ಷಗಳ ಕಾಲ ಅಖಂಡವಾಗಿ ರಂಗಭೂಮಿಯಲ್ಲಿ ಮೆರೆದರು.
  • ೧೯೦೦ ರಲ್ಲಿ ಶಿರಹಟ್ಟಿ ವೆಂಕೂಬ ರಾಯರ "ಶ್ರೀ ಮಹಾಲಕ್ಷ್ಮಿ ಪ್ರಸಾದಿತ ಮಂಡಳಿ" "ಅಮ್ಚೆ ಶಿರಹಟ್ಟಿ ಕಂಪೆನಿ "ಎಂದೇ ಪ್ರಸಿದ್ದಿ ಪಡೆಯಿತು.
  • ೧೯೦೬ರಲ್ಲಿ ನೇಕಾರ ಬಂದುಗಳಿಂದ ಕೂಡಿದ "ಆರ್ಯ ನಾಟಕ ಮಂಡಳಿ" ರಾಮದುರ್ಗ.
  • ೧೯೦೬ ರಲ್ಲಿ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು ಸ್ಥಾಪಿಸಿದ "ಶ್ರೀ ಶಿವಲಿಂಗೇಶ್ವರ ನಾಟಕ ಮಂಡಳಿ".
  • ೧೯೧೧ ರಲ್ಲಿ ದೊಡ್ಡ ಜಟ್ಟೆಪ್ಪನವರ ನೇತ್ರತ್ವದಲ್ಲಿ "ಶ್ರೀ ಹಾಲಸಿದ್ದೇಶ್ವರ ಸಂಗೀತ ನಾಟಕ ಮಂಡಳಿ".
  • ೧೯೧೨ರಲ್ಲಿ ಹೊಂಬಳ ಶಂಕರ ಗೌಡರ ಮುಂದಾಳತ್ವದಲ್ಲಿ "ಶ್ರೀ ಶಂಕರಲಿಂಗೇಶ್ವರ ಸಂಗೀತ ನಾಟಕ ಮಂಡಳಿ".
  • ೧೯೧೨ರಲ್ಲಿ ರೊಟ್ಟಿ ಗೋವಿಂದಾಚಾರ್ಯ ನೇತ್ರತ್ವದ "ಶ್ರೀ ಲಕ್ಷ್ಮಿ ವೆಂಕಟೇಶ ಸಂಗೀತ ನಾಟಕ ಮಂಡಳಿ".
  • ೧೯೧೪ ರಲ್ಲಿ ಶಿರಹಟ್ಟಿ ನಾಟಕ ಕಂಪನಿಯಲ್ಲಿ ಮುಖ್ಯ ನಟರಾಗಿದ್ದ ವಾಮನರಾಯರು ಇತರ ಕೆಲವು ನಟರೊಂದಿಗೆ ಹೊರಬಿದ್ದ ನಂತರ "ವಿಶ್ವ ಗುಣಾದರ್ಶಕ ನಾಟಕ ಮಂಡಳಿ" ಸ್ಥಾಪಿಸಿದರು.
  • ೧೯೧೫ ರಲ್ಲಿ ರಾಮರಾವ್ ವೈದ್ಯರ ನೇತ್ರತ್ವದಲ್ಲಿ "ಕೊಪ್ಪಳ ನಾಟಕ ಮಂಡಳಿ".
  • ೧೯೧೬ ರಲ್ಲಿ ಬಚ್ಚಾಸ್ತಾನಿ ದೊಡಮನಿಯವರ "ಲಕ್ಷ್ಮೇಶ್ವರ ಸ್ರೀ ನಾಟಕ ಮಂಡಳಿ".
  • ೧೯೧೫ರಲ್ಲಿ ಚೆನ್ನಮ್ಮನ ಕಿತ್ತೂರಿನಲ್ಲಿ "ಶ್ರೀ ವಿರೂಪಾಕ್ಷ ನಾಟಕ ಮಂಡಳಿ".
  • ೧೯೧೫ ರ ನವೆಂಬರ್ ೧೬ ರಲ್ಲಿ ಗರುಡಸದಾಶಿವರಾಯರು ಹುಟ್ಟು ಹಾಕಿದ "ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಅಭಿನಯಕ್ಕೆ ಹೆಸರಾಗಿ,ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ರಂಗದ ಮೂಲಕ ಜನಜಾಗೃತಿ, ಪ್ರಜ್ಞೆಗಳನ್ನು ಮೂಡಿಸಿತು.ಮಹಾರಾಷ್ಟ್ರಕ್ಕೆ ಬೇಟಿ ಕೊಟ್ಟು ಮರಾಠಿ ನೆಲದಲ್ಲಿ ಕನ್ನಡ ನಾಟಕಗಳನ್ನಾಡಿದ ಕೀರ್ತಿ ಗರುಡಸದಾಶಿವರಾಯರದ್ದು.
  • ೧೯೨೦ ರಲ್ಲಿ ರಾಮಣ್ಣ ಶೆಲ್ಲಿಕೇರಿಯವರ "ಶೆಲ್ಲಿಕೇರಿ ನಾಟಕ ಮಂಡಳಿ".
  • ೧೯೨೫ ರಲ್ಲಿ "ಭಾರತ ಸೇವಾ ಸಂಗೀತ ನಾಟಕ ಮಂಡಳಿ"ಹುಬ್ಬಳ್ಳಿ.
  • ೧೯೨೬ರಲ್ಲಿ ಗಂಗೂ ಬಾಯಿ ಗುಳೆದ ಗುಡ್ಡ ಅವರ "ಶ್ರೀ ಕೃಷ್ಣ ಸಂಗೀತ ನಾಟಕ ಮಂಡಳಿ" ಗುಳೆದ ಗುಡ್ಡ.
  • ೧೯೨೭ರಲ್ಲಿ ಹುಕ್ಕೇರಿ ಬಸವ ಪ್ರಭು ನಾಯಕರ"ಮೌಲಾಲಿ ಪ್ರಸಾದಿತ ನಾಟಕ ಕಂಪನಿ".
  • ೧೯೨೭ ರಲ್ಲಿ ಹುಸೇನ ಸಾಹೇಬ ಅಣ್ಣಿಗೇರಿ ಅವರ "ಖುದಾವಂದ ನನ್ಗೀತ ನಾಟಕ ಮಂಡಳಿ" ಅಣ್ಣಿಗೇರಿ.
  • ೧೯೨೮ ರಲ್ಲಿ ಬಸನ ಗೌಡ ಅಬ್ಬಿಗೆರಿಯವರ "ಅಬ್ಬಿಗೇರಿ ಕಂಪನಿ",
  • ಶಿವಯೋಗಪ್ಪ ವಾಲಿಯವರ "ಬಸವೇಶ್ವರ ಸಂಗೀತ ನಾಟಕ ಮಂಡಳಿ",
  • ಲೋಕಸೇವಾ ಸಂಗೀತ ನಾಟಕ ಮಂಡಳಿ"ಸಂಪಗಾವಿ,
  • ಶಾಂತವೀರಪ್ಪ ಚಿಂದೋಡಿ ಅವರ "ಶ್ರೀ ಗುರು ಕೆ,ಬಿ,ಆರ್,ಡ್ರಾಮಾ ಕಂಪನಿ" ದಾವಣಗೆರೆ ,
  • ೧೯೨೯ ರೆಅಲ್ಲಿ ಯಲಬುರ್ಗಿ ತಾಲೂಕಿನ ಬನ್ನಿ ಕೊಪ್ಪದ ಯರಾಸಿ ಭ್ರಮಪ್ಪನವರ "ಶ್ರೀ ವಾಣಿ ವಿಲಾಸ ಸಂಗೀತ ನಾಟಕ ಮಂಡಳಿ" ಗದಗ,
  • ೧೯೨೯ ರಲ್ಲಿ ಕೆ,ಜಗನ್ನಾಥ ರಾಯರ "ಗುರು ಸಮರ್ಥ ನಾಟಕ ಮಂಡಳಿ".
  • ೧೯೩೦ ರಲ್ಲಿ ಸ್ವಾಮಿ ರಾವ್ ದೇಸಾಯಿ ಅವರ "ಶ್ರೀ ವಿದ್ಯಾರಣ್ಯ ಸಂಗೀತ ನಾಟಕ ಮಂಡಳಿ"ಮೆಣದಾಲ.
  • ೧೯೩೦ ರಲ್ಲಿ ಲಕ್ಷ್ಮಣ್ ರಾವ್ ಅಸುಂಡಿ ಅವರ "ಶಿವಾನಂದ ನಾಟಕ ಸಂಗೀತ ನಾಟಕ ಮಂಡಳಿ" ಅಸುಂಡಿ.
  • ೧೯೩೧ ರಲ್ಲಿ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು "ಶ್ರೀ ಮಾರಿಕಾಂಬಾ ಪ್ರಸಾದಿತ ಮಂಡಳಿ"
  • ೧೯೩೨ರಲ್ಲಿ ನಾಲ್ವಡಿ ಶ್ರೀ ಕಂಠಶಾಸ್ರಿಗಳ "ಶ್ರೀ ರಂಗ ಸೇವಾ ನಾಟಕ ಮಂಡಳಿ'.
  • ೧೯೩೩ ರಲ್ಲಿ ಕಂದಗಲ್ಲ ಹನುಮಂತ ರಾಯರ "ಲಲಿತ ಕಲೋದ್ದರಕ ಮಂಡಳಿ", ಅಲ್ಲದೆ ೧೯೪೦ ರಲ್ಲಿ "ಅರವಿದ ನಾಟಕ ಮಂಡಳಿ", ೧೯೪೨ರಲ್ಲಿ "ಜಯ ಅರವಿಂದ ನಾಟಕ ಮಂಡಳಿ "ಗಳನ್ನೂ ಸಂಸ್ಥಾಪಿಸಿ ಕನ್ನಡ ನಾಟಕ ರಂಗದ 'ಕರ್ನಾಟಕ ಶೇಕ್ಸ್ ಪೀಯರ್ ", "ಕವಿ ಕೇಸರಿ", ಬಿರುದು ಗಳನ್ನೂ ಪಡೆದರು. ಇವರ ಸಾಹಿತ್ಯಗಳಂತೂ"ಕಬ್ಬಿಣದ ಕಡಲೆ "ಎಂದೇ ಖ್ಯಾತಿ ಪಡೆದಿತ್ತು.

ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ ರಂಗಭೂಮಿಯಲ್ಲಿ ಮಹಿಳೆಯರು ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ"

ರಂಗಭೂಮಿಯಲ್ಲಿ ಮಹಿಳೆಯರು

[ಬದಲಾಯಿಸಿ]

ರಂಗಭೂಮಿ ಯಲ್ಲಿ ಮಹಿಳೆ ಪುರುಷನಿಗೆ ಸರಿಸಾಟಿ ಎಂದು ಹೇಳಿದರೆ ಹಲವರಿಗೆ ಅಚ್ಹರಿಯಾಗಬಹುದು.ಪುರುಷ ಪ್ರಧಾನ ಸಮಾಜದಲ್ಲಿ ಇದು ಹೇಗೆ ಸಾದ್ಯ?ಎಂದೇ ಶಿಕ್ಷಿತ ಸಮುದಾಯದ ಕೆಲವರಾದರೂ ಕೇಳಬಹುದು.ಆದರೆ ಪುರುಷರಿಗಿಂತ ನಾವೇನು ಕಮ್ಮಿ ಎಂದು ಸವಾಲೆಸೆದು ಪುರುಷರಿಗಿಂತ ಮಿಗಿಲಾದ ಸಾದನೆಗೈದದ್ದು ವಿಚಿತ್ರವಾದರೂ ಸತ್ಯ.

ಸಂಘ ಸಂಸ್ಥೆಗಳು, ಹವ್ಯಾಸಿ ರಂಗ ತಂಡಗಳು ನಾಟಕ ಮಾಡಲೆಂದು ಸಿದ್ದವಾಗುವ ಸಂದರ್ಭದಲ್ಲಿ ಎದುರಾಗುವ ಹಲವು ತೊಡಕುಗಳಲ್ಲಿ ಕಲಾವಿದೆಯರು ಸಿಗುವುದಿಲ್ಲ ಎಂಬ ಸಮಸ್ಯೆ ಇದ್ದ ಕಾಲದಲ್ಲಿ ಮಹಿಳೆಯರ ಪಾತ್ರವನ್ನು ಅದ್ಭುತವಾಗಿ ಅಭಿನಯಿಸಿದ ಪುರುಷರ ದೊಡ್ಡ ಪಟ್ಟಿಯೇ ಇದೆ, ಕೆಲವು ನಾಟಕಕಾರರು ಮಹಿಳೆಯರ ಪಾತ್ರವೇ ಇಲ್ಲದ ನಾಟಕಗಳನ್ನು ಬರೆದಿದ್ದಾರೆ. ೧೪೦ ವರ್ಷಗಳ ಇತಿಹಾಸವಿರುವ ವೃತ್ತಿ ರಂಗಭೂಮಿಯಲ್ಲಿ ಮಹಿಳೆಯರು ಆರಂಭದ ಒಂದೆರಡು ದಶಕಗಳಲ್ಲಿ ರಂಗ ಪ್ರವೆಶಿಸಿರಲಿಲ್ಲ. ಸ್ರೀಯರ ನಯ, ನಾಜೂಕಿನ ಹಾವ ಭಾವಗಳಿಗೆ ಸಹಜತೆ ಬರಬೇಕಾದರೆ ಸ್ರೀಯೇ ಅಭಿನಯಿಸಬೇಕು ಎಂಬ ತೀರ್ಮಾನಕ್ಕೆ ಬಂದ ಕೋಣ್ಣೂರು ನಾಟಕ ಕಂಪನಿಯ ಶಿವಮೂರ್ತಿ ಸ್ವಾಮಿಗಳು ೧೯೦೧ ರಲ್ಲಿಯೇ ಗುಳೇದಗುಡ್ಡದಿಂದ "ಯಲ್ಲೂ ಬಾಯಿ "ಎಂಬ ಮಹಿಳೆಯನ್ನು ಕರೆಸಿ ಆಕೆಯಿಂದ ಮಹಿಳೆಯ ಪಾತ್ರ ಮಾಡಿಸುತ್ತಾರೆ. ಗಾಯನ ಮತ್ತು ಅಭಿನಯದಲ್ಲಿ ತನ್ನ ಅದ್ವಿತೀಯ ಪಾತ್ರ ತೋರಿದ "ಯಲ್ಲೂಬಾಯಿ"ಯನ್ನೇ ವ್ರತ್ತಿ ರಂಗ ಭೂಮಿಯ ಮೊದಲ ನಟಿ ಎಂದು ವಿದ್ವಾಂಸರು ಹೇಳುತ್ತಾ ಬಂದಿದ್ದರೂ ೧೮೯೮ರಲ್ಲಿ ಪಾಪಸಾನಿ ಎಂಬಾಕೆ ಸ್ಥಾಪಿಸಿದ ಸ್ರೀ ನಾಟಕ ಮಂಡಳಿ "ಪ್ರಭಾವತಿ ದರ್ಬಾರು "ಹರಿಶ್ಚಂದ್ರ'ಮುಂತಾದ ನಾಟಕ ಪ್ರದರ್ಶಿಸುತ್ತಿತ್ತೆಂದೂ ಹಾಗಾಗಿ ಇದೇ ಮೊದಲ ನಾಟಕ ಮಂಡಳಿ ಎಂದೂ ಹೇಳಲಾಗುತ್ತದೆ, ೧೯೦೮ರಲ್ಲಿ ಲಕ್ಹ್ಷ್ಮಿಮೇಶ್ವರದ ಬಚ್ಚಸಾನಿ ಸ್ಥಾಪಿಸಿದ ಮಹಿಳಾ ನಾಟಕ ಮಂಡಳಿಯಲ್ಲಿ ಪುರುಷ ಪಾತ್ರ ಸೇರಿದಂತೆ ಎಲ್ಲಾ ಪಾತ್ರಗಳನ್ನೂ ಮಹಿಳೆಯರೇ ಅಭಿನಯಿಸುತ್ತಿದ್ದರು.ಇದು ಬರೀ ಮಹಿಳೆಯರೇ ಅಭಿನಯಿಸುವ ಇಂತಹ ಸಂಪ್ರದಾಯ ಹಾಕಿಕೊಟ್ಟ ಮೊದಲ ಮಹಿಳಾ ನಾಟಕ ತಂಡ.

"https://kn.wikipedia.org/w/index.php?title=ರಂಗಭೂಮಿ&oldid=1102540" ಇಂದ ಪಡೆಯಲ್ಪಟ್ಟಿದೆ