ವಿಷಯಕ್ಕೆ ಹೋಗು

ಮಡಂತ್ಯಾರ್ ಚರ್ಚ್

ನಿರ್ದೇಶಾಂಕಗಳು: 12°56′53.2″N 75°11′29.0″E / 12.948111°N 75.191389°E / 12.948111; 75.191389
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

12°56′53.2″N 75°11′29.0″E / 12.948111°N 75.191389°E / 12.948111; 75.191389

Church Of Sacred Heart Of Jesus, Madanthyar
Church Of Sacred Heart Of Jesus, Madanthyar is located in Karnataka
Church Of Sacred Heart Of Jesus, Madanthyar
Church Of Sacred Heart Of Jesus, Madanthyar
12°56′53″N 75°11′29″E / 12.948126°N 75.191391°E / 12.948126; 75.191391
Denominationರೋಮನ್ ಕಥೋಲಿಕ (Latin rite)
Websitemadanthyarchurch.com
History
Founded೨೯ ಜನವರಿ ೧೮೯೩[]
Founder(s)ವಂ ಜೇಕಬ್ ಸಿಕ್ವೇರ[]
Administration
Deaneryಬೆಳ್ತಂಗಡಿ ವಾರಾಡೊ
Archdioceseರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು
Dioceseರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರು
Provinceರೋಮನ್ ಕಥೋಲಿಕ ಮಹಾಧರ್ಮಪ್ರಾಂತ್ಯ ಬೆಂಗಳೂರು
Districtದಕ್ಷಿಣ ಕನ್ನಡ
Clergy
Archbishopಅತಿ ವಂ. ಬರ್ನಾಡ್ ಬ್ಲೇಸಿಯಸ್ ಮೊರಾಸ್
Bishop(s)ವಂ. ಅಲೋಷಿಯಸ್ ಪೌಲ್ ಡಿ'ಸೋಜಾ
Vicar(s)ವಂ. ಲಾರೆನ್ಸ್ ಮಸ್ಕರೇನ್ಹಸ್
Assistant priestವಂ. ಕ್ಲಿಫರ್ಡ್ ಪಿಂಟೊ

The ಯೇಸುವಿನ ಪವಿತ್ರ ಹೃದಯದ ಚರ್ಚು ಐತಿಹಾಸಿಕ ರೋಮನ್ ಕಥೋಲಿಕ ಚರ್ಚ್ ಆಗಿದ್ದು ಬೆಳ್ತಂಗಡಿಯಲ್ಲಿನ ಮಡಂತ್ಯಾರ್ ನಲ್ಲಿದೆ. ಇದರ ಚರ್ಚ್ ವನ್ನು ೧೮೯೩ ಜನವರಿ ೨೯ರಂದು ನಿರ್ಮಿಸಲಾಯ್ತು.[] ಇದು ಬೆಳ್ತಂಗಡಿ ನಿಕಾಯರೋಮನ್ ಕಥೋಲಿಕ ಧರ್ಮಪ್ರಾಂತ್ಯ, ಮಂಗಳೂರುಇದರ ಅಧೀನದಲ್ಲಿದೆ. ಈ ಚರ್ಚನ್ನು ಯೇಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲಾಗಿದೆ.

ಇತಿಹಾಸ

[ಬದಲಾಯಿಸಿ]

ಯೇಸುವಿನ ಪವಿತ್ರ ಹೃದಯದ ಚರ್ಚ್ ಅಗ್ರಾರ್ ಚರ್ಚ್ ಇದರ ಅಂಗ ಚರ್ಚ ೧೮೯೬ರವರೆಗೆ ಆಗಿದ್ದು, ಅಲ್ಲಿಯ ತನಕ ಅಗ್ರಾರ್ ಚರ್ಚ್ ನ ಧರ್,ಗುರುಗಳು ಇಲ್ಲಿನ ಹಳ್ಳಿಗಳನ್ನು ವರ್ಷಕ್ಕೊಂದು ಬಾರಿ ಭೇಟಿ ಮಾಡಿ ಇಲ್ಲಿ ಸ್ಥಳಿಯರು ನಿರ್ಮಿಸಿದ ಸ್ಮಶಾನವನ್ನು ಆಶೀರ್ವದಿಸಿ, ಇವರ ಮನೆಗಳನ್ನು ಆಶೀರ್ವದಿಸಿ ಬಲಿಪೂಜೆಗಳನ್ನು ನೆರವೇರಿಸಲು ಬರುತ್ತಿದ್ದರು. ಮುಂದೆ, ಸ್ಥಳೀಯ ಕ್ರೈಸ್ರರುಮಹಾಧರ್ಮಧ್ಯಕ್ಷರು ಗೋವಾ ಇವರಿಂದ ಚಾಪೆಲ್ ನಿರ್ಮಿಸಲು ಪರವಾನಿಗೆಯನ್ನು ಪಡೆದು, ಇದು ಅಗ್ರಾರ್ ಚರ್ಚ್ಇಲ್ಲಿಂದ ತನ್ನ ಸೇವೆಯನ್ನು ಪಡೆಯಲಾರಂಭಿಸಿತು. ವಂ. ಎಮಿಲಿಯನ್ ಅಲೆಕ್ಸಾಂಡರ್ ಡಿ'ಸೋಜಾ ಅಗ್ರಾರ್ ಚರ್ಚ್ನ ಧರ್ಮಗುರುಗಳು ಚಾಪೆಲ್ ಕಟ್ಟಲು ಸ್ಥಳವನ್ನು ಆಯ್ಕೆ ಮಾಡಿದರು. ಇದು ೧೮೮೬ರಲ್ಲಿ ಕಾರ್ಯರೂಪಕ್ಕೆ ಬಂದು ಅಗ್ರಾರ್ ಚರ್ಚ್ ನ ಮುಕಾಂತರ ಮಂಗಳೂರು ಧರ್ಮಪ್ರಾಂತ್ಯಕ್ಕೆ ಸೇರಿಸಲ್ಪಟ್ಟಿತು. ಹೀಗಾಗಿ ಧರ್ಮೀಯರು ಬಿಷಪ್ ನಿಕೊಲಸ್ ಪಗನಿ ಯೆ. ಸ. ಅವರನ್ನು ಆಗ್ರಹಿಸಿ ಅಗ್ರಾರ್ ಚರ್ಚ್ನಿಂದ ಇದನ್ನು ಸ್ವತಂತ್ರಗೊಳಿಸದರು ಅಲ್ಲದೇ ವಂ ಪಾಸ್ಕಲ್ ಮಸ್ಕರೇನ್ಹಸ್, ಧರ್ಮಗುರುಗಳು ಗಡ್ಡಾಯಿ (ಬೆಳ್ತಂಗಡಿ)ಇವರ ರಕ್ಷಣೆಗೆ ಒಳಪಡಿಸಿದರು. ೧೮೮೭ರವರೆಗೆ ವಂ ಪಾಸ್ಕಲ್ ಮಸ್ಕರೇನ್ಹಸ್ ಆಗಾಗ ಮಡಂತ್ಯಾರಿಗೆ ಬಂದು ಬಲಿಪೂಜೆಗಳನ್ನು ನೆರವೇರಿಸುತ್ತಿದ್ದರು. ಆದರೆ ಜನರಿಗೆ ಸ್ವತಂತ್ರ ಚರ್ಚ್ ಬೇಕಿತ್ತು.[]

ಕೊಳ್ಕೆಬೈಲಿನ ಶ್ರೀ ಫ‍್ರಾನ್ಸಿಸ್ ಡಿ'ಸೋಜಾ ಫ್ರಭು (ಪರ್ಸೊ ಪೊರಬ್) ಇವರು ತಮ್ಮ ವಿಶಾಲವಾದ ಜಮೀನನ್ನು ಚರ್ಚ್-ಗೆ ದಾನವಾಗಿ ನೀಡಿದರು. ೧೬ ಮಾರ್ಚ್ ೧೮೮೯ರಂದು, ವಂ ರೊಸಾರಿಯೊ ಡಿ'ಸೋಜಾ ಅವರು ಈ ಚರ್ಚಿನ ಮೊದಲ ಧರ್ಮಗುರುಗಳಾಗಿ ನಿಯುಕ್ತಿಗೊಂಡರು.[]

ವಂ ಜೇಕಬ್ ಸಿಕ್ವೇರ (೧೮೯೦-೧೯೦೦) ಚರ್ಚ್ ಕಟ್ಟಡವನ್ನು ನಿರ್ಮಿಸಿದ್ದು ಬಿಷಪ್ ಪಗನಿ ಯೆ ಸ ಅವರು ಜನವರಿ ೨೯, ೧೮೯೩ರಲ್ಲಿ ಆಶೀರ್ವದಿಸಿದರು. ೫೦ ಎಕರೆ ಜಮೀನನ್ನು ಚರ್ಚಿನ ಹೆಸರಲ್ಲಿ ನೊಂದಾಯಿಸಿದ ಮಹನೀಯರಿವರು. ಇಲ್ಲಿ ಕೊಂಕಣಿ ಮತ್ತು ತುಳು ಭಾಷಿಕ ಕಥೋಲಿಕರು ಇದ್ದರು.[]

ಚರ್ಚಿನ ಹೊಸ ಕಟ್ಟಡ ಹಾಗೂ ಚರ್ಚ್ ನಿವಾಸಕ್ಕೆ ವಂ. ಡೆನ್ನಿಸ್ ಡಿ'ಸೋಜಾ (೧೯೨೫-೧೯೪೨) ಅವರು ಸ್ಥಳವನ್ನು ಖರೀದಿಸಿ ನಿರ್ಮಿಸಲು ಪ್ರಾರಂಭಿಸಿದರು. ಅಪೂರ್ಣಗೊಂಡ ಚರ್ಚ್ ಹಾಗೂ ಚರ್ಚ್ ನಿವಾಸವನ್ನು ಬಿಷಪ್ ವಿಕ್ಟರ್ ಫೆರ್ನಾಂಡಿಸ್ ಅವರು ಮೇ ೭, ೧೯೪೦ರಲ್ಲಿ ನೆರವೇರಿಸದರು. ವಂ ಗಾಸ್ಪರ್ ಬ್ಯಾಪ್ಟಿಸ್ಟ್ ಪಿಂಟೊ (೧೯೪೨-೧೯೫೯) ಚರ್ಚ್ ನಿವಾಸದ ಕೆಲಸವನ್ನು ಪೂರ್ಣಗೊಳಿಸಿ ಹೊಸ ಚರ್ಚಿನ ನೆಲದ ಕಾರ್ಯಗಳನ್ನು ಮುಗಿಸಿದರು. ಪ್ರಸ್ತುತ ಹೊಸ ಚರ್ಚ್ ನಿವಾಸವನ್ನು ವಂ ಚಾರ್ಲ್ಸ್ ನೊರೊನ್ಹಾನ್ನು ಕಟ್ಟದ್ದಾರೆ.[]

ಜನಸ್ಂಖ್ಯೆ

[ಬದಲಾಯಿಸಿ]

ಚರ್ಚ್ ೯೭೩ ಕುಟುಂಬಗಳನ್ನು ಹೊಂದಿದ್ದು, ಪ್ರಸ್ತುತ ೩೫೦೦ ಸದಸ್ಯರನ್ನು ಒಳಗೊಂಡಿದೆ.[] ಚರ್ಚ್ ೨೩ ವಾರ್ಡ್ ಹೊಂದಿದೆ.[]

ಮಹತ್ವ

[ಬದಲಾಯಿಸಿ]

ವಂ. ಜೇಕಬ್ ಸಿಕ್ವೇರ ಅವರು ಗಾರ್ಡಿಯನ್ ಏಂಜೆಲ್ಸ್ ಪ್ರಾಥಮಿಕ ಶಾಲೆಯನ್ನು ೧೮೯೮ರಲ್ಲಿ ಸಣ್ಣ ಗುಡಿಸಲಿನಲ್ಲಿ ಪ್ರಾರಂಭಿಸಿದರು. ವಂ. ಡೆನ್ನಿಸ್ ಡಿ'ಸೋಜಾರವರು ಇದನ್ನು ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಅಭಿವೃದ್ಧಿಪಡಿಸಿದರಲ್ಲದೇ ಗರಡಿಯಲ್ಲನ ಸಂ. ಅಂತೋಣಿ ಶಾಲೆಯನ್ನು ೧೯೨೦ರಲ್ಲಿ ಸನಡೆಸಿದರು. ೧೯೨೭ರಲ್ಲಿ ವಂ. ಡೆನ್ನಿಸ್ ಡಿ'ಸೋಜಾ ಅವರು ಸಂ.ಜೋಸೆಫ್ ಪ್ರಾಥಮಿಕ ಶಾಲೆಯನ್ನು ನಾಯ್ನಾಡುವಿನಲ್ಲಿ ಪ್ರಾರಂಭಿಸಿದರು. ಜನವರಿ ೨೫, ೧೯೮೦ರಂದು, ಗಾರ್ಡಿಯನ್ ಏಂಜೆಲ್ಸ್ ಶಾಲೆಯ ಹೊಸ ಕಟ್ಟಡವನ್ನು ವಂ. ಲಿಗೊರಿ ಡಿ'ಸೋಜಾ (೧೯೭೭-೧೯೮೩) ಅವರ ಮೇಲ್ವಿಚಾರಣೆಯಲ್ಲಿ ಉದ್ಘಾಟಿಸಲಾಯಿತು. ಸಂ. ಜೋಸೆಫ್ ಮತ್ತು ಸಂ. ಅಂತೋಣಿ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳನ್ನಾಗಿ ಜುಲೈ ೪, ೧೯೮೧ರಲ್ಲಿ ಪುನರುಜ್ಜೀವನಗೊಳಿಸಲಾಯಿತು. ವಂ. ಲಿಗೊರಿ ಡಿ'ಸೋಜಾ ಅವರ ಕಾಲದಲ್ಲಿ ಪವಿತ್ರ ಯೇಸುವಿನ ಹೃದಯ ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜಿಗಳಿಗೆ ಅನುಮತಿಯನ್ನು ಪಡೆಯಲಾಗಿತ್ತು. ಎರಡೂ ಕಾಲೇಜಿನ ಕಟ್ಟಡ ಕಾಮಗಾರಿಯನ್ನು ಧರ್ಮಗುರು ಹಾಗೂ ಈ ಸಂಸ್ಥೆಗಳ ಪೋಚಕರಾಗಿ ಸೇವೆ ಸಲ್ಲಿಸಿದ್ದ ವಂ. ಫ್ರೆಢ್ ವಿ ಪಿರೇರಾ (೧೯೮೩–೧೯೯೨)ಅವರ ಮೇಲ್ವಿಚಾರಣೆಯಲ್ಲಿ ಮಾಡಲಾಗಿದೆ.[]

ಚರ್ಚ್ ಸಂಸ್ಥೆಗಳು

[ಬದಲಾಯಿಸಿ]

The parish community are engaged in social service, helping the poor and other services which helps the needy. The list of associations in this parish is below.[]

ಮಾಜಿ ಧರ್ಮಗುರುಗಳು

[ಬದಲಾಯಿಸಿ]
  • ವಂ. ರೊಸಾರಿಯೊ ಡಿ'ಸೋಜಾ ೧೮೯–೧೮೯೦
  • ವಂ. ಜೇಕಬ್ ಸಿಕ್ವೇರ ೧೮೯೦–೧೯೦೧
  • ವಂ.ರೊಸಾರಿಯೊ ಲುವಿಸ್ ೧೯೦೧–೧೯೦೩
  • ವಂ. ಜೋಸೆಫ್ ಪಿ ಫೆರ್ನಾಂಡಿಸ್ ೧೯೦೩–೧೯೦೬
  • ವಂ. ಅಲೋಷಿಯಸ್ ಇ ಮಿನೇಜಸ್ ೧೯೦೬–೧೯೨೩
  • ವಂ. ಡೆನ್ನಿಸ್ ಜೆ ಡಿ'ಸೋಜಾ ೧೯೨೩–೧೯೪೨
  • ವಂ. ಗಾಸ್ಪರ್ ಬ್ಯಾಪ್ಟಿಸ್ಟ್ ಪಿಂಟೊ ೨೫-೧-೧೯೪೨ – ೧೦-೫-೧೯೫೯
  • ವಂ. ವಿಲ್ಲಿಯಂ ಇ ವೇಗಸ್ ೧೦-೫-೧೯೫೯ – ೧೦-೫-೧೯೭೨
  • ವಂ. ಲಿಗೊರಿ ಡಿ'ಸೋಜಾ ೧೦-೫-೧೯೭೨ – ೨೫-೭-೧೯೮೩
  • ವಂ. ಫ್ರೆಢ್ ವಿ ಪಿರೇರಾ ೩-೬-೧೯೮೩ – ೨೫-೫-೧೯೯೨
  • ವಂ. ಅಲೆಕ್ಸಾಂಡರ್ ಲೋಬೊ ೨೫-೫-೧೯೯೨ – ೧೩-೬-೧೯೯೪
  • ವಂ. ಚಾರ್ಲ್ಸ್ ನೊರೊನ್ಹಾ 4-7-1994 – 1-6-2001
  • ವಂ. ಹೆರಾಲ್ಡ್ ಮಸ್ಕರೇನ್ಹಸ್ ೧-೬-೨೦೦೧ - ೧೪-೫-೨೦೦೫
  • ವಂ. ವಲೇರಿಯನ್ ಫ್ರಾಂಕ್ ೧೫-೫-೨೦೦೫ – ೨೯-೫-೨೦೧೦
  • ವಂ. ಲಾರೆನ್ಸ್ ಮಸ್ಕರೇನ್ಹಸ್ ಪ್ರಸತುತ ಧರ್ಮಗುರುಗಳು.

ಮುಂದೆ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ "Parish History". http://madanthyarchurch.com/. Archived from the original on 2015-08-04. Retrieved 2016-10-18. {{cite web}}: External link in |publisher= (help)
  2. ೨.೦ ೨.೧ ೨.೨ ೨.೩ ೨.೪ ೨.೫ "Sacred Heart of Jesus, Madanthyar". http://dioceseofmangalore.com/. Archived from the original on 2017-04-08. Retrieved 2016-10-18. {{cite web}}: External link in |publisher= (help)
  3. "Parish Wards". http://madanthyarchurch.com. Archived from the original on 2016-02-14. Retrieved 2016-10-18. {{cite web}}: External link in |publisher= (help)
  4. "Parish Associations". http://madanthyarchurch.com/. Archived from the original on 2016-02-14. Retrieved 2016-10-18. {{cite web}}: External link in |publisher= (help)