ಯುರೇಲಿಕ್ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಯುರೇಲಿಕ್
ಭೌಗೋಳಿಕ
ವ್ಯಾಪಕತೆ:
ಪೂರ್ವ ಮತ್ತು ಉತ್ತರ ಯುರೋಪ್, ಉತ್ತರ ಏಷ್ಯಾ
ವಂಶವೃಕ್ಷ ಸ್ಥಾನ: ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು
ವಿಭಾಗಗಳು:

 

ಯುರೇಲಿಕ್ ಭಾಷೆಗಳ ವಿಸ್ತಾರ:

ಯುರೇಲಿಕ್ ಭಾಷೆಗಳು ಸುಮಾರು ೨೦ ಮಿಲಿಯನ್ ಜನ ಮಾತನಾಡುವ ಸುಮಾರು ೩೦ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು. ಎಸ್ಟೊನಿಯನ್, ಫಿನ್ನಿಶ್, ಮತ್ತು ಹಂಗೇರಿಯನ್ ಭಾಷೆಗಳು ಇವುಗಳಲ್ಲಿ ಹೆಚ್ಚು ಪ್ರಚಲಿತವಾದವುಗಳು. ಎಸ್ಟೊನಿಯ, ಫಿನ್‍ಲ್ಯಾಂಡ್, ಹಂಗೆರಿ, ರೊಮೇನಿಯ, ರಷ್ಯಾ, ಸೆರ್ಬಿಯ ಮತ್ತು ಸ್ಲೊವಾಕಿಯಗಳಲ್ಲಿ ಈ ಭಾಷೆಗಳನ್ನು ಮಾತನಾಡುವವರು ಹೆಚ್ಚಿನ ಪ್ರಮಾಣಗಳಲ್ಲಿ ಇದ್ದಾರೆ. "ಯುರೇಲಿಕ್" ಎಂಬ ಹೆಸರು ಈ ಭಾಷೆಗಳ ಪ್ರಸ್ತಾಪಿತ ಮೂಲವಾದ ಯುರೇಲ್ ಬೆಟ್ಟಗಳಿಂದ ಬಂದಿದೆ.