ವಿಷಯಕ್ಕೆ ಹೋಗು

ಯುಮ್‍ಥಾಂಗ್ ಪುಷ್ಪ ಕಣಿವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯುಮ್‍ಥಾಂಗ್ ಪುಷ್ಪ ಕಣಿವೆ ಅಭಯಾರಣ್ಯ
ಸಿಕ್ಕಿಂ ಪುಷ್ಪ ಕಣಿವೆ ಅಭಯಾರಣ್ಯ
ಯುಮ್‍ಥಾಂಗ್ ಪುಷ್ಪ ಕಣಿವೆ ಅಭಯಾರಣ್ಯದ ನೋಟ
ಯುಮ್‍ಥಾಂಗ್ ಪುಷ್ಪ ಕಣಿವೆ ಅಭಯಾರಣ್ಯದ ನೋಟ
Nickname(s): 
ಸಿಕ್ಕಿಂ ಪುಷ್ಪ ಕಣಿವೆ ಅಭಯಾರಣ್ಯ
ದೇಶ ಭಾರತ
ರಾಜ್ಯಸಿಕ್ಕಿಂ
Elevation
೩,೭೦೦ m (೧೨,೧೦೦ ft)
ಸಮಯ ವಲಯಯುಟಿಸಿ+5:30 (ಭಾರತೀಯ ಪ್ರಮಾಣಿತ ಸಮಯ)
ವಾಹನ ನೋಂದಣಿSK

ಯುಮ್‍ಥಾಂಗ್ ಕಣಿವೆ ಅಥವಾ ಸಿಕ್ಕಿಂ ಪುಷ್ಪ ಕಣಿವೆ ಅಭಯಾರಣ್ಯವು ನದಿ, ಬಿಸಿನೀರಿನ ಬುಗ್ಗೆಗಳು, ಚಮರೀಮೃಗಗಳು ಮತ್ತು ಸೌಮ್ಯ ಉಬ್ಬುತಗ್ಗುಗಳ ಹುಲ್ಲುಗಾವಲುಗಳ ಮೇಲೆ ಮೇವು ಇರುವ, ಸುತ್ತಲೂ ಹಿಮಾಲಯ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿರುವ ಒಂದು ಪ್ರಕೃತಿ ಅಭಯಾರಣ್ಯವಾಗಿದೆ. ಇದು ಭಾರತದ ಸಿಕ್ಕಿಂ ರಾಜ್ಯದ ಉತ್ತರ ಸಿಕ್ಕಿಂ ಜಿಲ್ಲೆಯಲ್ಲಿ ಸ್ಥಿತವಾಗಿದೆ.

ಇದು ಜನಪ್ರಿಯವಾಗಿ 'ಹೂಗಳ ಕಣಿವೆ'[೧] ಎಂದು ಕರೆಯಲ್ಪಡುತ್ತದೆ ಮತ್ತು ಇದು ಶಿಂಗ್ಬಾ ರೋಡೋಡೆಂಡ್ರಾನ್ ಅಭಯಾರಣ್ಯಕ್ಕೆ ನೆಲೆಯಾಗಿದೆ. ಇದು ರಾಜ್ಯ ಹೂವಾದ ರೋಡೋಡೆಂಡ್ರಾನ್‌ನ ಇಪ್ಪತ್ತನಾಲ್ಕಕ್ಕಿಂತ ಹೆಚ್ಚು ಪ್ರಜಾತಿಗಳನ್ನು ಹೊಂದಿದೆ. ಹೂಬಿಡುವ ಅವಧಿಯು ಫೆಬ್ರವರಿ ಅಂತ್ಯದಿಂದ ಮತ್ತು ಜೂನ್ ಮಧ್ಯದವರೆಗೆ ಇರುತ್ತದೆ. ಆಗ ಅಸಂಖ್ಯಾತ ಹೂವುಗಳು ಕಣಿವೆಯಲ್ಲಿ ಕಾಮನಬಿಲ್ಲಿನ ಬಹುವರ್ಣದ ವರ್ಣಗಳಲ್ಲಿ ಅರಳಿ ರತ್ನಗಂಬಳಿಯಂತೆ ನೆಲದ ಮೇಲೆ ಹರಡಿರುತ್ತವೆ.[೨] ಭಾರೀ ಹಿಮಪಾತದ ಕಾರಣ ಯುಮ್ಥಾಂಗ್ ಡಿಸೆಂಬರ್ ಮತ್ತು ಮಾರ್ಚ್ ನಡುವೆ ಮುಚ್ಚಲ್ಪಟ್ಟಿರುತ್ತದೆ. ಕಣಿವೆಯಲ್ಲಿ ಒಂದು ಬಿಸಿನೀರಿನ ಬುಗ್ಗೆ ಕೂಡ ಇದೆ.

ಅರಣ್ಯ ವಿಶ್ರಾಂತಿ ಗೃಹವು ಕಣಿವೆಯಲ್ಲಿರುವ ಏಕೈಕ ಶಾಶ್ವತ ನಿವಾಸವಾಗಿದೆ. ವಸಂತ ಋತುವಿನಲ್ಲಿ, ಈ ಪ್ರದೇಶವು ರೋಡೋಡೆಂಡ್ರಾನ್ಗಳು, ಪ್ರೈಮುಲಾಗಳು, ಗಸಗಸೆ ಹೂಗಳು, ಐರಿಸ್ ಮತ್ತು ಇತರ ಸಸ್ಯಗಳೊಂದಿಗೆ ಅರಳಿರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ, ಹಳ್ಳಿಗರು ತಮ್ಮ ಜಾನುವಾರುಗಳನ್ನು ಮೇಯಿಸಲು ಈ ಎತ್ತರ ಪ್ರದೇಶಕ್ಕೆ ಕೊಂಡೊಯ್ಯುತ್ತಾರೆ. ಕಣಿವೆಯಲ್ಲಿ ಸ್ಕೀಯಿಂಗ್ ನಡೆಸಲಾಗುತ್ತದೆ.[೩][೪]

ಯುಮ್‍ಥಾಂಗ್‌ನಲ್ಲಿರುವ ಕಡಿದಾದ ಹಿಮಾಲಯ ಶ್ರೇಣಿ

ಚಿತ್ರಸಂಪುಟ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 

  1. "Archived copy". Archived from the original on 10 January 2013. Retrieved 17 January 2013.{{cite web}}: CS1 maint: archived copy as title (link)
  2. Yumthang bloom season
  3. "Snow raises hopes of skiing in Sikkim - Yumthang turns white blanket". The Telegraph. India. 6 January 2011. Retrieved 30 August 2019.
  4. "Archived copy". Archived from the original on 27 November 2012. Retrieved 13 April 2013.{{cite web}}: CS1 maint: archived copy as title (link)