ಯುನೈಟೆಡ್‌ ಬ್ರೂವರೀಸ್‌ ಗ್ರೂಪ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
United Breweries Group
ಸಂಸ್ಥೆಯ ಪ್ರಕಾರPublic
ಸ್ಥಾಪನೆ1857
ಸಂಸ್ಥಾಪಕ(ರು)Thomas Leishman
ಮುಖ್ಯ ಕಾರ್ಯಾಲಯಬೆಂಗಳೂರು, India
ವ್ಯಾಪ್ತಿ ಪ್ರದೇಶIndia
ಪ್ರಮುಖ ವ್ಯಕ್ತಿ(ಗಳು)Dr. Vijay Mallya, Chairman
ಉದ್ಯಮConglomerate
ಉತ್ಪನ್ನBrewery
Alcoholic Beverage
Airline
Chemicals & Fertilizers
Engineering
Information Technology
Pharmaceuticals
ಮಾಲೀಕ(ರು)Dr. Vijay Mallya
ವಿಭಾಗಗಳುUnited Breweries Ltd (ಬಿಎಸ್‌ಇ: 532478)
United Spirits Ltd (ಬಿಎಸ್‌ಇ: 532432)
Kingfisher Airlines[೧]
Mangalore Chemicals & Fertilizers Ltd [೨]
UB Global (trading company)
UBICS, Inc.
ಜಾಲತಾಣwww.theubgroup.com
United Breweries (UB Group)
Locationಬೆಂಗಳೂರು, India
Opened1857
Owner(s)Dr. Vijay Mallya
Active beers
Name Type
Kingfisher Lager Lager
Kingfisher Light Lager Lager
Kingfisher Strong Lager Lager
Kingfisher Super Strong Lager Lager
Flying Horse Royal Lager Lager
Kalyani Black Label Strong Lager Lager
Premium Ice Beer Lager
Raj Cobra Lager
Taj Mahal Premium Lager Lager
ಚಿತ್ರ:1010 0972.jpg
ಗೋವಾದಲ್ಲಿರುವ ಕಿಂಗ್‌ಫಿಶರ್‌‌‌ ಬಿಯರ್‌ನ ಒಂದು ಜಾಹೀರಾತು
ಚಿತ್ರ:Kingfisher Premuim.JPG
ಕಿಂಗ್‌ಫಿಶರ್‌‌‌ ಪ್ರೀಮಿಯಂ‌ ಲಾಜರ್‌‌ ಬಿಯರ್‌‌ನ ಒಂ‌ದು ಬಾಟಲಿ

ಯುನೈಟೆಡ್‌ ಬ್ರೂವರೀಸ್‌ ಗ್ರೂಪ್‌ ಅಥವಾ UB ಗ್ರೂಪ್‌ ಎಂಬುದು ಬೆಂಗಳೂರು ಮೂಲದ, ವಿಭಿನ್ನ ಕಂಪನಿಗಳ ಒಂದು ವಾಣಿಜ್ಯಕೂಟವಾಗಿದ್ದು, ಬಟ್ಟಿಯಿಳಿಸುವ ನೆಲೆ (ಬಿಯರ್‌‌‌) ಹಾಗೂ ಮದ್ಯಸಾರದ ಪಾನೀಯಗಳ ಉದ್ಯಮ ಮೇಲೆ ಒಂದು ಪ್ರಮುಖ ಗಮನವನ್ನು ಅದು ಇರಿಸಿಕೊಂಡಿದೆ. ಕಿಂಗ್‌ಫಿಶರ್‌‌‌ ಬ್ರಾಂಡ್‌ ಅಡಿಯಲ್ಲಿ ಕಂಪನಿಯು ತನ್ನ ಬಿಯರ್‌ ಶ್ರೇಣಿಯ ಬಹುಪಾಲನ್ನು ಮಾರುಕಟ್ಟೆ ಮಾಡುತ್ತದೆ. ಅಷ್ಟೇ ಅಲ್ಲ, ಭಾರತದಲ್ಲಿ ಕಿಂಗ್‌ಫಿಶರ್‌‌‌ ಏರ್‌‌ಲೈನ್ಸ್‌‌ ಎಂಬ ಹೆಸರಿನ ಒಂದು ವಾಯುಯಾನ ಸೇವೆಯನ್ನೂ ಸಹ ಅದು ಆರಂಭಿಸಿದ್ದು, ಅದರ ಅಂತರರಾಷ್ಟ್ರೀಯ ಹಾರಾಟಗಳು ಇತ್ತೀಚೆಗಷ್ಟೇ ಶುರುವಾಗಿವೆ. ಯುನೈಟೆಡ್‌ ಬ್ರೂವರೀಸ್‌ ಕಂಪನಿಯು ಭಾರತದ ಅತಿದೊಡ್ಡ ಬಿಯರ್‌‌‌ ತಯಾರಕನಾಗಿದ್ದು, ಪ್ರಮಾಣದ ಅನುಸಾರ ಇದು ಸುಮಾರು 48%ನಷ್ಟಿರುವ ಒಂದು ಮಾರುಕಟ್ಟೆ ಪಾಲನ್ನು ಹೊಂದಿದೆ.[೧]

ಸಮೂಹದ ನೇತೃತ್ವವನ್ನು ಡಾ.ವಿಜಯ್‌ ಮಲ್ಯ ವಹಿಸಿಕೊಂಡಿದ್ದು, ಇವರು ಭಾರತದ ಲೋಕಸಭೆಯ ಓರ್ವ ಸದಸ್ಯರೂ ಆಗಿದ್ದಾರೆ. ವಿಶ್ವದಾದ್ಯಂತ 79 ಬಟ್ಟಿಗೃಹಗಳು ಹಾಗೂ ಬಾಟಲಿಗೆ ತುಂಬಿಸುವ ಘಟಕಗಳನ್ನು ಹೊಂದುವುದರೊಂದಿಗೆ, ಯುನೈಟೆಡ್‌ ಬ್ರೂವರೀಸ್‌ ಕಂಪನಿಯು ಭಾರತದ ಬಟ್ಟಿ ಇಳಿಸುವಿಕೆಯ ಮಾರುಕಟ್ಟೆಯ 40%ಗಿಂತಲೂ ಸಾಕಷ್ಟು ದೊಡ್ಡದಾಗಿರುವ ಒಂದು ಪಾಲನ್ನು ಈಗ ಹೊಂದಿದೆ. ತನ್ನ ಎದುರಾಳಿಯಾಗಿದ್ದ ಷಾ-ವಾಲೇಸ್‌ ಕಂಪನಿಯ ಮದ್ಯಸಾರಗಳ ವ್ಯವಹಾರದ ಸ್ವಾಧೀನವೊಂದಕ್ಕೆ UB ಕಂಪನಿಯು ಹಣವಿನಿಯೋಗಿಸಿದ್ದು, ಇದರಿಂದಾಗಿ ಭಾರತದ ಮದ್ಯಸಾರಗಳ ವ್ಯವಹಾರದ ಒಂದು ಅಧಿಕ ಪಾಲು ಅದಕ್ಕೆ ಸಿಕ್ಕಂತಾಗಿದೆ. UB ಸಮೂಹವು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮೆಂಡೊಸಿನೋ ಬ್ರೂವಿಂಗ್‌ ಕಂಪನಿಯ ಮಾಲೀಕತ್ವವನ್ನು ಹೊಂದಿದೆ.

ಇತಿಹಾಸ[ಬದಲಾಯಿಸಿ]

ಥಾಮಸ್‌ ಲೀಶ್‌ಮನ್‌ ಎಂಬ ಓರ್ವ ಸ್ಕಾಟ್ಲೆಂಡಿನ ನಿವಾಸಿಯಿಂದ 1857ರಲ್ಲಿ UB ಗ್ರೂಪ್‌ ಸಂಸ್ಥಾಪಿಸಲ್ಪಟ್ಟಿತು. ಬಿಯರ್‌‌‌ ತಯಾರಿಕೆಗೆ ಸಂಬಂಧಿಸಿದ ತನ್ನ ಆರಂಭಿಕ ಪಾಠಗಳನ್ನು ಸಮೂಹವು ದಕ್ಷಿಣ ಭಾರತದಲ್ಲಿ ನೆಲೆಗೊಂಡಿದ್ದ ಬ್ರಿಟಿಷ್‌ ಬಟ್ಟಿಗೃಹಗಳಿಂದ ಪಡೆಯಿತು. 1947ರಲ್ಲಿ, ತಮ್ಮ 22ನೇ ವಯಸ್ಸಿನಲ್ಲಿ ಕಂಪನಿಯ ಮೊಟ್ಟಮೊದಲ ಭಾರತೀಯ ನಿರ್ದೇಶಕರಾಗಿ ವಿಟ್ಟಲ್‌ ಮಲ್ಯ ಚುನಾಯಿತರಾದರು. ಒಂದು ವರ್ಷದ ನಂತರ, ಕಂಪನಿಯ ಸಭಾಪತಿಯಾಗಿ ಅವರು R G N ಪ್ರೈಸ್‌ ಸ್ಥಾನದಲ್ಲಿ ನೆಲೆಗೊಂಡರು.

ಬ್ರಿಟಿಷ್‌ ಪಡೆಗಳಿಗಾಗಿ ಸಗಟು ಪ್ರಮಾಣದಲ್ಲಿ ಬಿಯರ್‌ ತಯಾರಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ, ಯುನೈಟೆಡ್‌ ಬ್ರೂವರೀಸ್‌ ತನ್ನ ಆರಂಭಿಕ ಪ್ರಭಾವವನ್ನು ಉಂಟುಮಾಡಿತು; ಬೃಹತ್‌‌ ಬ್ಯಾರಲ್ಲುಗಳು ಅಥವಾ "ದೊಡ್ಡ ಪೀಪಾಯಿಗಳಲ್ಲಿ" ಈ ಬಿಯರ್‌ ಸಾಗಿಸಲ್ಪಡುತ್ತಿತ್ತು. ಸಮೂಹದ ಅತ್ಯಂತ ಎದ್ದುಕಾಣುವಂಥ ಹಾಗೂ ಲಾಭದಾಯಕ ಬ್ರಾಂಡ್ ಎನಿಸಿಕೊಂಡಿರುವ ಕಿಂಗ್‌ಫಿಶರ್, ಅರವತ್ತರ ದಶಕದಲ್ಲಿ ಒಂದು ಆಡಂಬರವಿಲ್ಲದ ಪ್ರವೇಶವನ್ನು ಮಾಡಿತು. 1950ರ ದಶಕ ಮತ್ತು 60ರ ದಶಕಗಳ ಅವಧಿಯಲ್ಲಿ, ಇತರ ಬಟ್ಟಿಗೃಹಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಮೂಲಕ ಕಂಪನಿಯು ಮಹತ್ತರವಾಗಿ ವಿಸ್ತರಣೆಗೊಂಡಿತು. ಸಮೂಹದ ಅಂಗಸಂಸ್ಥೆಗಳಲ್ಲಿ ಒಂದಾಗಿ ಮೆಕ್‌ಡೊವೆಲ್‌ನ ಸೇರ್ಪಡೆಯು ಇಂಥ ಸ್ವಾಧೀನಗಳ ಪೈಕಿ ಮೊಟ್ಟಮೊದಲನೆಯದು ಎನಿಸಿಕೊಂಡಿತು; ಈ ಕ್ರಮದಿಂದಾಗಿ ಯುನೈಟೆಡ್‌ ಬ್ರೂವರೀಸ್‌ ತನ್ನ ವ್ಯವಹಾರ ಕ್ಷೇತ್ರವನ್ನು ಮದ್ಯಗಳು ಹಾಗೂ ಮದ್ಯಸಾರಗಳ ವ್ಯವಹಾರದೆಡೆಗೂ ವಿಸ್ತರಿಸಲು ಸಾಧ್ಯವಾಯಿತು. ವ್ಯವಹಾರ ತಂತ್ರದ ಒಂದು ಭಾಗವಾಗಿ, ಕೃಷಿ-ಆಧಾರಿತ ಉದ್ಯಮಗಳು ಹಾಗೂ ಔಷಧಿಗಳ ವಲಯಕ್ಕೂ ಸಮೂಹವು ಪಾದಾರ್ಪಣೆ ಮಾಡಿತು; ಕಿಸಾನ್‌ ಪ್ರಾಡಕ್ಟ್ಸ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಮಲ್ಯ, ಜರ್ಮನಿಹೆಕ್ಸ್ಟ್‌ AG ಕಂಪನಿಯೊಂದಿಗೆ ಒಂದು ದೀರ್ಘಾವಧಿ ಬಾಂಧವ್ಯವನ್ನು ರೂಪಿಸಿದರು. ಇದರ ಪರಿಣಾಮವಾಗಿ ಜಾಗತಿಕ ಮಟ್ಟದ ಔಷಧ ತಯಾರಿಕಾ ವಲಯದಲ್ಲಿನ ಪ್ರಮುಖ ಕಂಪನಿಯಾದ ಸನೋಫಿ-ಅವೆಂಟಿಸ್‌‌ನ ಭಾರತದ ಅಂಗಸಂಸ್ಥೆಯಾಗಿ ಅವೆಂಟಿಸ್‌ ಫಾರ್ಮಾ ಎಂದು ಈಗ ಹೆಸರಾಗಿರುವ ಭಾರತೀಯ ಔಷಧದ ಕಂಪನಿಯು ಸೃಷ್ಟಿಯಾಯಿತು.

ಲಾಂಛನ[ಬದಲಾಯಿಸಿ]

ಯುನೈಟೆಡ್‌ ಬ್ರೂವರೀಸ್‌ನ ಸಂಕೇತವಾಗಿರುವ ರೆಕ್ಕೆಕುದುರೆಯು, 1940ರಲ್ಲಿ ಸಮೂಹದ ಲಾಂಛನವಾಗಿ ತನ್ನ ಸ್ಥಾನವನ್ನು ಮೊದಲಬಾರಿಗೆ ಕಂಡುಕೊಂಡಿತು. ಆಗ, ಗ್ರೀಕ್‌ ಪುರಾಣದಲ್ಲಿ ಬಿಯರ್‌‌‌ ಹಾಗೂ ಅಮೃತದೊಂದಿಗೆ ತಳುಕು ಹಾಕಿಕೊಂಡಿದ್ದ ಹೆಲ್ಯಾಡಿಕ್‌ ಕುದುರೆಯು, ತನ್ನ ರೆಕ್ಕೆಗಳ ನಡುವೆ ಮೇಲೆ ಕಾಣಿಸುವಂತೆ ಒಂದು ಬಿಯರ್‌‌‌ ಪೀಪಾಯಿಯನ್ನು ಹೊತ್ತುಕೊಂಡಿತ್ತು; ಏಕೆಂದರೆ ಬಿಯರ್‌‌‌, ಸಮೂಹದ ವ್ಯವಹಾರ ಕಾರ್ಯಾಚರಣೆಗಳ ತಿರುಳಾಗಿತ್ತು.

ನಂತರದಲ್ಲಿ, ಸಮೂಹದ ಬಹುಮುಖೀಯ ಕಾರ್ಯಾಚರಣೆಗಳನ್ನು ಪ್ರತಿನಿಧಿಸುವ ಉದ್ದೇಶದಿಂದ ಬಿಯರ್‌‌‌ ಪೀಪಾಯಿಯನ್ನು ತೆಗೆದುಹಾಕಲಾಯಿತು. ಈಗ, ಇದು ಕೇವಲ ಒಂದು ರೆಕ್ಕೆಕುದುರೆಯಾಗಿದೆ.

ವರ್ತಮಾನದ ಇತಿಹಾಸ[ಬದಲಾಯಿಸಿ]

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ [೩] Archived 2013-07-27 ವೇಬ್ಯಾಕ್ ಮೆಷಿನ್ ನಲ್ಲಿ. ಉತ್ಪನ್ನಗಳ ಮಾರಾಟಗಳು 2005–06ರ ಹಣಕಾಸು ವರ್ಷದಲ್ಲಿ 60 ದಶಲಕ್ಷ ಪೆಟ್ಟಿಗೆಗಳನ್ನು ಮೀರಿಸುತ್ತವೆ ಎಂದು ನಿರೀಕ್ಷಿಸಲಾಗಿದ್ದು, ಇದು ವಿಶ್ವದಲ್ಲಿನ[೨] ಮದ್ಯಸಾರಗಳ ಉತ್ಪನ್ನಗಳ ಮೂರನೇ-ಅತಿದೊಡ್ಡ ತಯಾರಕನಾಗಿ ಸಮೂಹವು ಹೊರಹೊಮ್ಮಲು ಕಾರಣವಾಗಿದೆ; ಡಿಯಾಜಿಯೋ PLC ಹಾಗೂ ಪೆರ್ನಾಡ್‌ ರಿಕಾರ್ಡ್‌ ಕಂಪನಿಗಳು ಮೊದಲ ಎರಡು ಸ್ಥಾನಗಳಲ್ಲಿವೆ. ಇದರ ಜೊತೆಗೆ, ಏಳು ಭಾರೀ ಐಶ್ವರ್ಯವಂತ ಬ್ರಾಂಡ್‌ಗಳನ್ನು ಹೊಂದುವಲ್ಲಿ ವಿಶ್ವದಲ್ಲಿನ ಕೇವಲ ಮೂರು ಕಂಪನಿಗಳ ಪೈಕಿ USL ಒಂದೆನಿಸಿಕೊಂಡಿದೆ. ಅಷ್ಟೇ ಅಲ್ಲ, UKಯ ಡ್ರಿಂಕ್ಸ್‌ ಇಂಟರ್‌‌ನ್ಯಾಷನಲ್‌ ನಿಯತಕಾಲಿಕದಿಂದ ಶ್ರೇಣೀಕರಿಸಲ್ಪಟ್ಟಿರುವಂತೆ ತಮ್ಮ ಸಂಬಂಧಪಟ್ಟ ವರ್ಗಗಳಲ್ಲಿ ವಿಶ್ವದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಹತ್ತು ಬ್ರಾಂಡ್‌ಗಳ ಪೈಕಿಯ ಕನಿಷ್ಟಪಕ್ಷ ಐದು ಬ್ರಾಂಡ್‌ಗಳನ್ನು ಹೊಂದಿರುವ ಕಂಪನಿ ಎನಿಸಿಕೊಂಡಿದೆ. ಭಾರತದಲ್ಲಿನ ಮದ್ಯಸಾರಗಳ ವಿಭಾಗದ ಮಾರುಕಟ್ಟೆ ಪಾಲು ಸದ್ಯಕ್ಕೆ 60%ನಷ್ಟಿದ್ದು, ಮಧ್ಯಪ್ರಾಚ್ಯ, ಆಫ್ರಿಕಾ ಹಾಗೂ ಏಷ್ಯಾದ ದೇಶಗಳಿಗೆ ನಡೆಯುತ್ತಿರುವ ರಫ್ತು ಕ್ಷಿಪ್ರವಾಗಿ ಬೆಳೆಯುತ್ತಿವೆ.

ಯುನೈಟೆಡ್‌ ಬ್ರೂವರೀಸ್‌ ಲಿಮಿಟೆಡ್‌ (UBL) ಎಂದು ಕರೆಯಲ್ಪಡುವ UB ಗ್ರೂಪ್‌ನ ಬಟ್ಟಿ ಇಳಿಸುವಿಕೆಯ ಘಟಕವು ಕೂಡಾ, 50%ಗೂ ಮೀರಿದ ಒಂದು ರಾಷ್ಟ್ರೀಯ ಮಾರುಕಟ್ಟೆ ಪಾಲನ್ನು ಹೊಂದುವುದರೊಂದಿಗೆ, ಮಾರುಕಟ್ಟೆಯ ನಿರ್ವಿವಾದವಾದ ಅಗ್ರಗಣ್ಯ ಪಟ್ಟವನ್ನು ಅಲಂಕರಿಸಿದೆ. ಆಕ್ರಮಣಕಾರಿ ಶೈಲಿಯಲ್ಲಿರುವ ಸ್ವಾಧೀನಕಾರ್ಯ ಹಾಗೂ ಮಾರುಕಟ್ಟೆಗೆ ನುಗ್ಗುವ ಒಂದು ಪ್ರಕ್ರಿಯೆಯ ಮೂಲಕ, ಬಿಯರ್‌ಗೆ ಸಂಬಂಧಿಸಿದಂತೆ ಭಾರತದಲ್ಲಿನ ಒಟ್ಟು ತಯಾರಿಕೆ ಸಾಮರ್ಥ್ಯದ 60%ನಷ್ಟು ಭಾಗವನ್ನು UB ಗ್ರೂಪ್‌ ಇಂದು ನಿಯಂತ್ರಿಸುತ್ತಿದೆ. ಮುಂಚೂಣಿಯಲ್ಲಿರುವ ಬ್ರಾಂಡ್‌ ಆಗಿರುವ ಕಿಂಗ್‌ಫಿಶರ್‌‌‌, ವಿಶ್ವಾದ್ಯಂತದ 52ಕ್ಕೂ ಹೆಚ್ಚಿನ ದೇಶಗಳಲ್ಲಿ ಈಗ ಮಾರಾಟವಾಗುತ್ತಿದ್ದು, ತನ್ನ ಗುಣಮಟ್ಟಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಅದು ಸ್ವೀಕರಿಸಿದೆ.

ಜಾಗತಿಕ ಮಟ್ಟದ ಓರ್ವ ಅಗ್ರಗಣ್ಯನಾಗುವ ನಿಟ್ಟಿನಲ್ಲಿನ ಯೋಜನೆಗಳೊಂದಿಗೆ, UB ಗ್ರೂಪ್‌ನ ಒಂದು ಮುಂಚೂಣಿಯಲ್ಲಿರುವ ಅಂಗವಾದ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ (USL), ಒಂದು ಖರೀದಿಯನ್ನು ಮಾಡಿದೆ. 2007ರ ಮೇ ತಿಂಗಳಲ್ಲಿ, ವೈಟ್‌ ಅಂಡ್‌ ಮೆಕೆ ಎಂಬ ಸ್ಕಾಟ್ಲೆಂಡಿನ ಬಟ್ಟಿ ಇಳಿಸುವ ಕಂಪನಿಯನ್ನು 595 ದಶಲಕ್ಷ £ನಷ್ಟು (4,800 ಕೋಟಿ ರೂ.ಗಳಿಗೆ)[೪] Archived 2011-09-29 ವೇಬ್ಯಾಕ್ ಮೆಷಿನ್ ನಲ್ಲಿ. ಮೊತ್ತಕ್ಕೆ ಅದು ಖರೀದಿಸಿದೆ. ಈ ಖರೀದಿಯಿಂದಾಗಿ W&M ಕಂಪನಿಯ ಬ್ರಾಂಡ್‌ಗಳಾದ ದಿ ಡಾಲ್ಮೋರ್‌‌, ಐಲ್‌ ಆಫ್‌ ಜುರಾ, ಗ್ಲೇಯ್ವಾ, ಫೆಟ್ಟರ್‌ಕೈರ್ನ್‌‌, ವ್ಲಾದಿಮಿರ್‌ ವೋಡ್ಕಾ, ಹಾಗೂ ವೈಟ್‌ & ಮೆಕೆ ಸ್ಕಾಚ್‌ ಮೊದಲಾದವು ಯುನೈಟೆಡ್‌ ಸ್ಪಿರಿಟ್ಸ್‌ನ ವ್ಯವಹಾರ ಕ್ಷೇತ್ರದ ಅಡಿಯಲ್ಲಿ ಸೇರುತ್ತವೆ.

ರಸಗೊಬ್ಬರಗಳ ತಯಾರಿಕಾ ವಲಯಕ್ಕೂ UB ಗ್ರೂಪ್‌ ಪ್ರವೇಶಿಸಿದೆ. ಸಮೂಹದ ಕಂಪನಿಯಾದ ಮಂಗಳೂರು ಕೆಮಿಕಲ್ಸ್‌ ಅಂಡ್‌ ಫರ್ಟಿಲೈಜರ್ಸ್‌‌ (MCF), ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪಣಂಬೂರು ಎಂಬಲ್ಲಿ ಒಂದು ಕಾರ್ಖಾನೆಯನ್ನು ಹೊಂದಿದೆ.

UB ಎಂಜಿನಿಯರಿಂಗ್‌ ಲಿಮಿಟೆಡ್‌ ಎಂಬುದು ಸಮೂಹದ ಎಂಜಿನಿಯರಿಂಗ್‌ ವ್ಯವಹಾರದ ಅಂಗವಾಗಿದೆ. ವಿದ್ಯುತ್ತು, ಸಂಸ್ಕರಣಾಗಾರಗಳು, ಉಕ್ಕು, ಸಿಮೆಂಟು, ರಸಗೊಬ್ಬರ, ಪೆಟ್ರೋರಾಸಾಯನಿಕ ಹಾಗೂ ಉಪ್ಪುನಿವಾರಣೆ ಯೋಜನೆಗಳಂಥ ಬೃಹತ್‌‌ ಔದ್ಯಮಿಕ ಯೋಜನೆಗಳಿಗೆ ಸಂಬಂಧಿಸಿದ EPC ಯೋಜನೆಗಳು, ಮೂಲಭೂತ ಸೌಕರ್ಯ, ತಾಣದಲ್ಲೇ ರಚನೆಗಳ ರೂಪಿಸುವಿಕೆ, ವಿದ್ಯುತ್ತಿನ ಮತ್ತು ಯಾಂತ್ರಿಕ ಉಪಕರಣಗಳ ಅಳವಡಿಕೆ, ಪರೀಕ್ಷೆ ಹಾಗೂ ನಿಯೋಜನೆ, ಕೊಳವೆ ಅಳವಡಿಸುವಿಕೆ ಇತ್ಯಾದಿ ಕಾರ್ಯಗಳನ್ನು ಇದು ಕೈಗೆತ್ತಿಕೊಳ್ಳುತ್ತದೆ. ಈ ಕಂಪನಿಯು ಆರಂಭದಲ್ಲಿ ವೆಸ್ಟರ್ನ್‌ ಇಂಡಿಯಾ ಎರೆಕ್ಟರ್ಸ್‌‌ ಎಂಬ ಹೆಸರಿನಲ್ಲಿ 1963ರಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು 1988ರಲ್ಲಿ UB ಗ್ರೂಪ್‌ನ ತೆಕ್ಕೆಗೆ ಸೇರಿಕೊಂಡಿತು.

IT ವಲಯಕ್ಕೆ ಆದ ಸಮೂಹದ ಪ್ರವೇಶವು UBICS, ಇಂಕ್‌ ಎಂಬ ಕಂಪನಿಯ ರೂಪುಗೊಳ್ಳುವಿಕೆಯಿಂದ ಗುರುತಿಸಲ್ಪಟ್ಟಿತು. ಈ ಕಂಪನಿಯು ವ್ಯವಹಾರ ಕಂಪನಿಗಳಿಗೆ IT ಸಮಾಲೋಚನೆ, ಸೇವೆಗಳು ಮತ್ತು ವೃತ್ತಿಪರ IT ಉತ್ಪನ್ನಗಳನ್ನು ಒದಗಿಸುತ್ತದೆ.

2007ರ ಆಗಸ್ಟ್‌ನಲ್ಲಿ, NDTVಯಿಂದ ನಡೆಸಲ್ಪಡುವ ಒಂದು ಜೀವನಶೈಲಿಯ ದೂರದರ್ಶನ ವಾಹಿನಿಯಾದ NDTV ಗುಡ್‌ ಟೈಮ್ಸ್‌ನ ಪ್ರಚಾರಕ್ಕೆ ಸಂಬಂಧಿಸಿದಂತೆ ಸಮೂಹವು ಆ ವರ್ಗದಲ್ಲೇ ಮೊದಲನೆಯ ನಿದರ್ಶನ ಎನ್ನಬಹುದಾದ ಮಾಧ್ಯಮ ಮೈತ್ರಿಯೊಂದನ್ನು ಮಾಡಿಕೊಂಡಿತು.

ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಕಂಪನಿಯು ತನ್ನ ಆಶ್ರಯದಲ್ಲಿ 144 ಬ್ರಾಂಡ್‌ಗಳನ್ನು ಹೊಂದಿದ್ದು, ಭಾರತದಲ್ಲಿನ ಅಗ್ರಗಣ್ಯ ಬ್ರಾಂಡ್‌ ಎನಿಸಿಕೊಂಡಿರುವ ವೈಟ್‌ ಮಿಸ್ಚೀಫ್‌ ವೋಡ್ಕಾ ಅದರಲ್ಲಿ ಸೇರಿದೆ.

ಉದ್ಯಮ ವಹಿವಾಟುಗಳು[ಬದಲಾಯಿಸಿ]

  • ರಸಗೊಬ್ಬರ
  • ಎಂಜಿನಿಯರಿಂಗ್‌ ಕ್ಷೇತ್ರ
  • ಮದ್ಯಸಾರ ಪಾನೀಯ

ಬಿಯರ್‌[ಬದಲಾಯಿಸಿ]

  • ಕಿಂಗ್‌ಫಿಶರ್‌‌‌ ಬ್ಲೂ
  • ಕಿಂಗ್‌ಫಿಶರ್‌‌‌ ರೆಡ್‌
  • ಕಿಂಗ್‌ಫಿಶರ್‌‌‌ ಸ್ಟ್ರಾಂಗ್‌‌
  • ಕಿಂಗ್‌ಫಿಶರ್‌‌‌ ಪ್ರೀಮಿಯಂ‌
  • ಕಿಂಗ್‌ಫಿಶರ್‌‌‌ ಅಲ್ಟ್ರಾ
  • ಕಿಂಗ್‌ಫಿಶರ್‌‌‌ ಡ್ರಾಟ್‌
  • ಲಂಡನ್‌ ಪಿಲ್ಸ್‌ನರ್‌‌
  • ಝಿಂಗಾರೊ
  • ಸ್ಯಾಂಡ್‌ ಪೈಪರ್‌
  • UB ಪ್ರೀಮಿಯಂ ಐಸ್‌
  • ಕಲ್ಯಾಣಿ ಬ್ಲ್ಯಾಕ್‌ ಲೇಬಲ್‌ ಪ್ರೀಮಿಯಂ
  • ಕಲ್ಯಾಣಿ ಬ್ಲ್ಯಾಕ್‌ ಲೇಬಲ್‌ ಸ್ಟ್ರಾಂಗ್‌

ಯುನೈಟೆಡ್‌ ಸ್ಪಿರಿಟ್ಸ್‌[ಬದಲಾಯಿಸಿ]

ವಿಸ್ಕಿ[ಬದಲಾಯಿಸಿ]

  • ರಾಯಲ್‌ ಚಾಲೆಂಜ್‌
  • ಡಾಲ್ಮೋರ್‌‌
  • ಜುರಾ
  • ವೈಟ್‌ & ಮೆಕೆ
  • ಬ್ಲ್ಯಾಕ್‌ ಡಾಗ್‌ ವಿಸ್ಕಿ
  • ಆಂಟಿಕ್ವಿಟಿ ರೇರ್‌‌
  • ಆಂಟಿಕ್ವಿಟಿ ಬ್ಲೂ
  • ಸಿಗ್ನೇಚರ್‌
  • ಮೆಕ್‌ಡೊವೆಲ್‌'ಸ್‌ ನಂ.1
  • ಮೆಕ್‌ಡೊವೆಲ್‌'ಸ್‌ ನಂ.1 ಪ್ಲಾಟಿನಂ
  • ಬ್ಯಾಗ್‌ಪೈಪರ್‌‌
  • ಬ್ಯಾಗ್‌ಪೈಪರ್‌‌ ಗೋಲ್ಡ್‌
  • ಡೈರೆಕ್ಟರ್‌'ಸ್‌ ಸ್ಪೆಷಲ್‌
  • ಓಲ್ಡ್‌ ಟ್ಯಾವರ್ನ್‌
  • ಹೇವರ್ಡ್ಸ್‌
  • ಮೆಕ್‌ಡೊವೆಲ್‌’ಸ್‌ ಗ್ರೀನ್‌ ಲೇಬಲ್‌
  • ಗೋಲ್ಡ್‌ ರೈಬ್ಯಾಂಡ್‌
  • DSP ಬ್ಲ್ಯಾಕ್‌

ಬ್ರಾಂಡಿ[ಬದಲಾಯಿಸಿ]

  • ಮೆಕ್‌ಡೊವೆಲ್‌’ಸ್‌ ನಂ.1
  • ಹನಿ ಬೀ
  • ಜಾನ್‌ ಎಕ್ಸ್‌-ಷಾ

ಮದ್ಯ[ಬದಲಾಯಿಸಿ]

  • ಗ್ಲೇವ್ಯಾ

ರಮ್‌[ಬದಲಾಯಿಸಿ]

  • ಸೆಲೆಬ್ರೇಷನ್‌ ರಮ್‌
  • ಓಲ್ಡ್‌ ಕ್ಯಾಸ್ಕ್‌ ರಮ್‌
  • ಓಲ್ಡ್‌ ಅಡ್ವೆಂಚರ್‌‌ ರಮ್‌

ಜಿನ್‌[ಬದಲಾಯಿಸಿ]

  • ಬ್ಲೂ ರೈಬ್ಯಾಂಡ್‌

ವೋಡ್ಕಾ[ಬದಲಾಯಿಸಿ]

  • ರೊಮಾನೊವ್‌
  • ವೈಟ್‌ ಮಿಸ್ಚೀಫ್‌
  • ಪಿಂಕಿ

ಕಿಂಗ್‌ಫಿಶರ್‌‌‌ ವೈನ್ಸ್‌‌[ಬದಲಾಯಿಸಿ]

ಕಿಂಗ್‌ಫಿಶರ್‌‌‌ ವೈನ್ಸ್‌‌ ಎಂಬುದು ಒಂದು ಬ್ರಾಂಡ್‌ ಆಗಿದ್ದು, ಅದು ಮದ್ಯಗಳ ಕುರಿತಾದ ವ್ಯವಹಾರವನ್ನು ನಿರ್ವಹಿಸುತ್ತದೆ.

  • ಬೌವೆಟ್‌ ಲ್ಯಾಡಬೇ
  • ಫೋರ್‌ ಸೀಸನ್ಸ್‌
  • ಬೊಹೆಮಿಯಾ

ಆಯವ್ಯಯಗಳು[ಬದಲಾಯಿಸಿ]

ಹಿಂದಿನ ವರ್ಷಕ್ಕೆ ಹೋಲಿಸಿದಾಗ, ಯುನೈಟೆಡ್‌ ಬ್ರೂವರೀಸ್‌ ಲಿಮಿಟೆಡ್‌ 2007ರ ಜುಲೈನಲ್ಲಿ, 16.3%ನಷ್ಟು ಪ್ರಮಾಣದ ಬೆಳವಣಿಗೆಯನ್ನು ದಾಖಲಿಸಿದೆ.

ಇವನ್ನೂ ನೋಡಿ[ಬದಲಾಯಿಸಿ]

ವಿಕಿಇನ್ವೆಸ್ಟ್‌ನಲ್ಲಿನ ಯುನೈಟೆಡ್‌ ಬ್ರೂವರೀಸ್‌

ಆಕರಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]