ವಿಷಯಕ್ಕೆ ಹೋಗು

ಯುದ್ಧಸಾಮಗ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುದ್ಧಸಾಮಗ್ರಿ (ಮದ್ದುಗುಂಡು) ಎಂದರೆ ಯಾವುದೇ ಆಯುಧದಿಂದ ಸಿಡಿಸಲಾದ, ಚದರಿಸಲಾದ, ಕೆಳಬೀಳಿಸಲಾದ ಅಥವಾ ಆಸ್ಫೋಟಿಸಲಾದ ಸಾಮಗ್ರಿ. ಯುದ್ಧಸಾಮಗ್ರಿ ಎಂದರೆ ಬಳಸಿ ಎಸೆಯಬಹುದಾದ ಆಯುಧಗಳು (ಉದಾ. ಬಾಂಬ್‍ಗಳು, ಕ್ಷಿಪಣಿಗಳು, ಗ್ರೆನೇಡುಗಳು, ಭೂ ಸ್ಫೋಟಕಗಳು) ಮತ್ತು ಒಂದು ಗುರಿಯ ಮೇಲೆ ಪರಿಣಾಮವನ್ನು ಸೃಷ್ಟಿಸುವ ಇತರ ಆಯುಧಗಳ ಘಟಕ ಭಾಗಗಳು (ಉದಾ. ಗುಂಡುಗಳು ಹಾಗೂ ಸಿಡಿತಲೆಗಳು) ಎರಡೂ ಆಗಿದೆ.[೧] ಕಾರ್ಯನಿರ್ವಹಿಸಲು ಬಹುತೇಕ ಎಲ್ಲ ಯಾಂತ್ರಿಕ ಆಯುಧಗಳಿಗೆ ಯಾವುದೋ ರೂಪದ ಯುದ್ಧಸಾಮಗ್ರಿ ಬೇಕಾಗುತ್ತದೆ.

ಯುದ್ಧಸಾಮಗ್ರಿಯ ಉದ್ದೇಶವೆಂದರೆ ಒಂದು ಆಯ್ದ ಗುರಿಗೆ (ಸಾಮಾನ್ಯವಾಗಿ ಘಾತಕ, ಆದರೆ ಯಾವಾಗಲೂ ಅಲ್ಲ) ಪರಿಣಾಮವಾಗುವಂತೆ, ತಗಲುವಂತೆ ಬಲವನ್ನು ಪ್ರಕ್ಷೇಪಿಸುವುದು. ಯುದ್ಧಸಾಮಗ್ರಿಯ ಅತ್ಯಂತ ಪ್ರಾತಿನಿಧಿಕ ಉದಾಹರಣೆಯೆಂದರೆ ಆಗ್ನೇಯಾಸ್ತ್ರ ತೋಟಾ. ಇದು ಒಂಟಿ ಪ್ಯಾಕೇಜ್‍ನಲ್ಲಿ ಆಯುಧದ ಪರಿಣಾಮವನ್ನು ಉಂಟುಮಾಡಲು ಬೇಕಾದ ಎಲ್ಲ ಘಟಕಗಳನ್ನು ಒಳಗೊಂಡಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "the definition of ammunition". Dictionary.com. Retrieved 2017-03-06.