ಯುಡಿಆರ್ಎಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅಂಪೈರ್ ನಿರ್ಧಾರಗಳ ಮರುಪರಿಶೀಲನೆ ವ್ಯವಸ್ಥೆ (ಸಂಕ್ಷಿಪ್ತವಾಗಿ ಯುಡಿಆರ್ಎಸ್ ಅಥವಾ ಡಿಆರ್ಎಸ್ ) ಎನ್ನುವುದು ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಾಗಿದ್ದು, ಪ್ರಸ್ತುತ ಇದನ್ನು ಕ್ರಿಕೆಟ್ ಆಟದಲ್ಲಿ ಪ್ರಾಯೋಗಿಕ ಆಧಾರದಲ್ಲಿ ಬಳಸಲಾಗುತ್ತಿದೆ. ಬ್ಯಾಟ್ಸ್‌ಮನ್ಗಳು ಔಟ್ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಸಂದರ್ಭದಲ್ಲಿ ಮೈದಾನದಲ್ಲಿರುವ ಅಂಪೈರ್ಗಳು ನೀಡುವ ವಿವಾದಾತ್ಮಕ ನಿರ್ಣಯಗಳನ್ನು ಮರುಪರಿಶೀಲಿಸುವ ಏಕೈಕ ಉದ್ದೇಶಕ್ಕಾಗಿ ಈ ವ್ಯವಸ್ಥೆಯನ್ನು ಮೊದಲನೆಯದಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಪರಿಚಯಿಸಲಾಯಿತು. ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಡುನೆಡಿನ್ನ ಯೂನಿವರ್ಸಟಿ ಓವಲ್ನಲ್ಲಿ ೨೦೦೯ ರ ನವೆಂಬರ್ ೨೪ ರಂದು ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ಮರುಪರಿಶೀಲನೆ ವ್ಯವಸ್ಥೆಯನ್ನು ಅಧಿಕೃತವಾಗಿಪ್ರಾರಂಭಿಸಲಾಯಿತು.[೧][೨] ಇದನ್ನು ಮೊದಲ ಬಾರಿಗೆ ಒಂದು ದಿನದ ಪಂದ್ಯಗಳಲ್ಲಿ ೨೦೧೧ ರ ಜನವರಿಯಲ್ಲಿ ಆಸ್ಟ್ರೇಲಿಯದ ವಿರುದ್ಧದ ಇಂಗ್ಲೆಂಡ್ನ ಸರಣಿಯಲ್ಲಿ ಬಳಸಲಾಯಿತು.[೩]

ವ್ಯವಸ್ಥೆ[ಬದಲಾಯಿಸಿ]

ಪಂದ್ಯದ ಸಂದರ್ಭದಲ್ಲಿ ಪ್ರತಿಯೊಂದು ತಂಡವು ಪ್ರತಿ ಇನ್ನಿಂಗ್ಸ್‌ನಲ್ಲಿ ಎರಡು ಯಶಸ್ವಿಯಾಗದ ಮರುಪರಿಶೀಲನೆ ವಿನಂತಿಗಳನ್ನು ಮಾಡಲು ಅನುಮತಿಸಲಾಗುತ್ತದೆ. ಫೀಲ್ಡ್ ಮಾಡುವ ತಂಡವು ಈ ವ್ಯವಸ್ಥೆಯನ್ನು "ನಾಟ್ ಔಟ್" ಅನ್ನು ಪ್ರಶ್ನಿಸಲು ಮತ್ತು ಬ್ಯಾಟ್ ಮಾಡುವ ತಂಡವು "ಔಟ್" ಎಂದು ತೀರ್ಪು ನೀಡಿರುವುದನ್ನು ಪ್ರಶ್ನಿಸಲು ಬಳಸಿಕೊಳ್ಳಬಹುದು. ಕೈಗಳಿಂದ "ಟಿ" ಸಂಕೇತವನ್ನು ತೋರಿಸುವ ಮೂಲಕ ಫೀಲ್ಡ್ ಮಾಡುವ ತಂಡದ ನಾಯಕ ಅಥವಾ ಔಟ್ ಆದ ಬ್ಯಾಟ್ಸ್‌ಮನ್ ತೀರ್ಪನ್ನು ಪ್ರಶ್ನಿಸಬಹುದು. ಒಮ್ಮೆ ತೀರ್ಪನ್ನು ಪ್ರಶ್ನಿಸಿದ ನಂತರ, ಸ್ವೀಕರಿಸಿ, ಒಪ್ಪಿಕೊಂಡ ನಂತರ, ತೀರ್ಪನ್ನು ಮೂರನೇ ಅಂಪೈರ್ ಮರು ಪರಿಶೀಲಿಸುತ್ತಾರೆ. ಅಂಪೈರ್‌ಗಳು ಕೆಲವು ಅತೀ ಸೂಕ್ಷ್ಮ ನಿರ್ಣಯಗಳನ್ನು (ರನ್ ಔಟ್ಗಳು ಮತ್ತು ಸ್ಟಂಪಿಂಗ್‌ಗಳನ್ನು ನಿರ್ಧರಿಸಲು) ಮತ್ತು ಬೌಂಡರಿಯ ಕುರಿತಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಮೂರನೇ ಅಂಪೈರ್‌ನ ನೆರವನ್ನು ಕೇಳಬಹುದಾದರೆ, ಔಟ್‌ಗೆ ಕಾರಣವಾಗುವ ಸಂದರ್ಭದಲ್ಲಿ ಅದನ್ನು ಪ್ರಶ್ನಿಸಲು ಇದನ್ನು ಬಳಸಿಕೊಳ್ಳಬಹುದು: ಉದಾಹರಣೆಗಾಗಿ, ಚೆಂಡು ನ್ಯಾಯಯುತವಾಗಿ ಕ್ಯಾಚ್ (ಬ್ಯಾಟ್ಸ್‌ಮನ್‌ನ ಬ್ಯಾಟು ಅಥವಾ ಗ್ಲೋವ್‌ನೊಂದಿಗೆ ಸಂಪರ್ಕವಾಗುವುದು ಅಥವಾ ಕ್ಷೇತ್ರರಕ್ಷಕನು ಚೆಂಡನ್ನು ಹಿಡಿಯುವ ಮೊದಲು ಅದು ಭೂಮಿಗೆ ತಾಗದೇ ಇರುವುದು) ಹಿಡಿಯಲ್ಪಟ್ಟಿದೆಯೇ ಅಥವಾ ಎಸೆದ ಚೆಂಡು ಲೆಗ್ ಬಿಫೋರ್ ವಿಕೆಟ್ ಆಗಿ ಔಟಾಗುವ ಮಾನದಂಡವನ್ನು ಹೊಂದಿದೆಯೇ (ಚೆಂಡು ವಿಕೆಟ್‌ಗೆ ತಾಗುವ ನೇರ ಹಾದಿಯಲ್ಲಿ ಭೂಮಿಗೆ ಅಥವಾ ಆಫ್ ಸೈಡ್‌ನಲ್ಲಿ ಅಥವಾ ಬ್ಯಾಟ್ಸ್‌ಮನ್‌ಗೆ ತಾಗುವುದು) ಎಂಬುದನ್ನು ನಿರ್ಧರಿಸಲು ಬಳಸಬಹುದು. ಆಗ ತನ್ನ ವಿಶ್ಲೇಷಣೆಯು ಮೂಲ ತೀರ್ಪನ್ನು ಬೆಂಬಲಿಸುತ್ತದೆಯೇ, ಅದಕ್ಕೆ ವಿರುದ್ಧವಾಗಿದೆಯೇ ಅಥವಾ ಅದು ಅಪೂರ್ಣವಾಗಿದೆಯೇ ಎಂಬ ಬಗ್ಗೆ ಮೂರನೇ ಅಂಪೈರ್ ತನ್ನ ನಿರ್ಧಾರವನ್ನು ಮೈದಾನದಲ್ಲಿರುವ ಅಂಪೈರ್‌ಗೆ ತಿಳಿಸುತ್ತಾನೆ. ತದನಂತರ ಮೈದಾನದಲ್ಲಿರುವ ಅಂಪೈರ್ ಅಂತಿಮ ನಿರ್ಧಾರವನ್ನು ತಿಳಿಸುತ್ತಾರೆ: ಒಂದೋ ಈಗಾಗಲೇ ತಿಳಿಸಿದ ತೀರ್ಪನ್ನು ಮತ್ತೆ ತಿಳಿಸುವುದು ಅಥವಾ ಈಗಾಗಲೇ ತೀರ್ಪು ನೀಡಿರುವುದರ ಪರಿಷ್ಕೃತ ತೀರ್ಪು ನೀಡುವುದು. ಪ್ರತಿ ತಂಡವು ತಮ್ಮ ಯಶಸ್ವಿಯಾಗದ ಪರಿಶೀಲನೆಗಳನ್ನು ಬಳಸಿಕೊಳ್ಳುವ ತನಕ ಮರು ಪರಿಶೀಲನೆಯನ್ನು ಆಯ್ದುಕೊಳ್ಳಬಹುದು. ಡಿಆರ್ಎಸ್ ನಿಯಮದಡಿಯಲ್ಲಿ ಕೇವಲ ತಪ್ಪಾದ ನಿರ್ಧಾರಗಳನ್ನು ಮಾತ್ರ ರದ್ದುಗೊಳಿಸಲಾಗುವುದು, ಒಂದು ವೇಳೆ ನಿರ್ಣಯವು ಯಾವ ಪ್ರಕಾರವಾಗಿಯೂ ನಿರ್ಧರಿಸಲಾಗದ ಮಧ್ಯಮ ಸ್ಥಿತಿಯಲ್ಲಿದ್ದರೆ (ಮೈದಾನದ ಅಂಪೈರ್‌ ನಿರ್ಧಾರ) ಮೂಲ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ.

ಒಂದು ವೇಳೆ ನಾಟ್-ಔಟ್ ಎಲ್‌ಬಿಡಬ್ಲ್ಯೂ ನಿರ್ಧಾರಗಳನ್ನು ಮೌಲ್ಯಮಾಪನ ಮಾಡುವಾಗ, ಮತ್ತು ವಿಕೆಟ್‌ಗಳಿಗಿಂತ ೨.೫ ಮೀಗಿಂತ ಹೆಚ್ಚು ದೂರದಲ್ಲಿ ಚೆಂಡು ಅಪ್ಪಳಿಸಿದೆಯೆಂದು ಟಿವಿ ಮರುಪ್ರಸಾರವು ಖಚಿತಪಡಿಸುತ್ತಿದ್ದರೆ, ಅಂಪೈರ್‌ಗಳು ಇನ್ನೊಂದು ವಿಷಯವನ್ನು ಪರಿಗಣಿಸಬೇಕಾಗುತ್ತದೆ ಮತ್ತು ಅದು ಚೆಂಡು ನೆಲಕ್ಕೆ ಅಪ್ಪಳಿಸಿದ ಮತ್ತು ಪ್ಯಾಡ್‌ಗೆ ತಗುಲಿದ ಅಂತರವಾಗಿರುತ್ತದೆ. ಒಂದು ವೇಳೆ ಆ ಅಂತರವು ೪೦ ಸೆಂಮೀಗಿಂತ ಕಡಿಮೆಯಾಗಿದ್ದರೆ, ಸ್ಟಂಪ್‌ಗಳನ್ನು ತಲುಪಲು ಚೆಂಡೂ ಇನ್ನೂ ೨.೫ ಮೀಗಿಂತ ಹೆಚ್ಚು ದೂರ ಚಲಿಸಬೇಕಾಗುತ್ತದೆ, ಆಗ, ಅದು ನಿರ್ಣಾಯಕವಾಗಿರುತ್ತದೆ, ಮೈದಾನದಲ್ಲಿರುವ ಅಂಪೈರ್ ನೀಡುವ ಯಾವುದೇ ನಾಟ್-ಔಟ್ ತೀರ್ಮಾನವು ನಾಟ್-ಔಟ್ ಆಗಿಯೇ ಇರುತ್ತದೆ. ಒಂದು ವೇಳೆ ಬ್ಯಾಟ್ಸ್‌ಮನ್ ವಿಕೆಟ್‌‌ನಿಂದ ೩.೫ ಮೀ ಗೂ ಹೆಚ್ಚು ದೂರದಲ್ಲಿದ್ದರೆ, ನಾಟ್-ಔಟ್ ನಿರ್ಣಯವನ್ನು ಹಿಂಪಡೆಯಲಾಗುವುದಿಲ್ಲ ಎಂದೂ ಸಹ ನಿರ್ಧರಿಸಲಾಗಿದೆ. ಒಂದು ವೇಳೆ ಬ್ಯಾಟ್ಸ್‌ಮನ್ ವಿಕೆಟ್‌ನಿಂದ ೨.೫ ಮೀ ಗಳಿಗಿಂತಲೂ ಹೆಚ್ಚು ದೂರದಲ್ಲಿದ್ದರೆ, ಒಂದು ವೇಳೆ ಅಂತರವು ೩.೫ ಮೀ ಗಳಿಗಿಂತ ಕಡಿಮೆ ಇದ್ದರೆ ಮತ್ತು ಚೆಂಡು ಬಿದ್ದ ಮತ್ತು ಅಪ್ಪಳಿಸಿದ ಸ್ಥಳವು ೪೦ ಸೆಂಮೀಗಳಿಗಿಂತ ಹೆಚ್ಚಿದ್ದರೆ ಮಾತ್ರ ಬೌಲರ್ ಪರವಾಗಿ ಎಲ್‌ಬಿಡಬ್ಲ್ಯೂ ನಿರ್ಣಯವನ್ನು ಹಿಂಪಡೆಯಲಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ, ಚೆಂಡಿನ ಕೆಲವು ಭಾಗವು ಸ್ಟಂಪ್‌ನ ಮಧ್ಯಭಾಗಕ್ಕೆ ಅಪ್ಪಳಿಸುತ್ತಿರಬಹುದು ಮತ್ತು ಪೂರ್ಣ ಚೆಂಡಿನ ಭಾಗವು ಬೇಲ್ಸ್ ಕೆಳಗಡೆ ಸ್ಟಂಪ್‌ಗಳಿಗೆ ಅಪ್ಪಳಿಸುತ್ತಿರಬಹುದು. ಮೂಲ ನಿರ್ಧಾರವು ಔಟ್ ಎಂಬ ಸಂದರ್ಭಗಳಲ್ಲಿ, ೨.೫ಮೀ ಅಥವಾ ೪೦ ಸೆಂಮೀ ಅಂತರಗಳು ಅನ್ವಯಿಸುವುದಿಲ್ಲ, ಅಂತಹ ಸಂದರ್ಭದಲ್ಲಿ ಅಂಪೈರ್‌ಗಳು ತಮ್ಮ ನಿರ್ಧಾರವನ್ನು ರದ್ದುಗೊಳಿಸಲಾಗುವಂತೆ ಚೆಂಡು ಸ್ಟಂಪ್‌ಗಳಿಂದ ಸಂಪೂರ್ಣವಾಗಿ ಹೊರಗಿದೆ ಎಂದು ಹಾಕ್ ಐ ತೋರಿಸಬೇಕು.

ಪ್ರತಿಕ್ರಿಯೆ[ಬದಲಾಯಿಸಿ]

ಈ ವ್ಯವಸ್ಥೆಯು ಪ್ರಾರಂಭವಾದಾಗಿನಿಂದ ಆಟಗಾರರು ಮತ್ತು ತರಬೇತುದಾರರಿಂದ ಸಾಮಾನ್ಯವಾಗಿ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ, ಆದರೆ ಈ ಕುರಿತು ಟೀಕೆಗಳೂ ಸಹ ಕಂಡುಬಂದಿವೆ . ವೆಸ್ಟ್ ಇಂಡೀಸ್‌ನ ಕ್ರಿಕೆಟ್ ದಂತಕಥೆಯಾದ ಜೋಯ್ ಗಾರ್ನರ್ ಅವರು ವ್ಯವಸ್ಥೆಯನ್ನು 'ಗಿಮಿಕ್' ಎಂದು ಕರೆದರು.[೪] ತಾನು ಈ ಪ್ರಾಯೋಗಿಕ ಮರುಪರಿಶೀಲನೆ ವ್ಯವಸ್ಥೆಯ ಬೆಂಬಲಿಗನಲ್ಲ ಎಂದು ಮತ್ತೊಬ್ಬ ವೆಸ್ಟ್ ಇಂಡೀಸ್ ಆಟಗಾರ ರಾಮನರೇಶ್ ಸರವಣ್ ಹೇಳುತ್ತಾರೆ.[೫] ಮಾಜಿ ಅಂಪೈರ್ ಆದ ಡಿಕಿ ಬರ್ಡ್ ಅವರೂ ಸಹ ಈ ವ್ಯವಸ್ಥೆಯನ್ನು ಟೀಕಿಸುತ್ತಾ, ಇದು ಮೈದಾನದಲ್ಲಿರುವ ಅಂಪೈರ್‌ಗಳ ಅಧಿಕಾರವನ್ನು ಮೊಟಕುಗಳಿಸುತ್ತದೆ ಎನ್ನುತ್ತಾರೆ.[೬] ಭಾರತದ ಕ್ರಿಕೆಟ್ ಬೋರ್ಡ್ (ಬಿಸಿಸಿಐ) ಸಹ ಈ ವ್ಯವಸ್ಥೆಯನ್ನು ಬಳಸುವುದರ ಪರವಾಗಿಲ್ಲ.[೭]

ಐಸಿಸಿ ವಿಶ್ವ ಕಪ್ ೨೦೧೧[ಬದಲಾಯಿಸಿ]

ವಿಶ್ವಕಪ್‌ನಲ್ಲಿ ಎರಡನೆಯ ಇನ್ನಿಂಗ್ಸ್‌ನ ನಾಲ್ಕನೇ ಚೆಂಡನ್ನು ಎಸೆದ ನಂತರ ಮೊದಲನೇ ಮರುಪರಿಶೀಲನೆಯು ಸಂಭವಿಸಿತು. ಭಾರತದ ಶಾಂತಕುಮಾರ್ ಶ್ರೀಶಾಂತ್ ಅವರು ಯಾರ್ಕರ್ ಒಂದನ್ನು ಎಸೆದರು ಮತ್ತು ಅಂಪೈರ್ ಅದನ್ನು ನಾಟೌಟ್ ಎಂದು ತೀರ್ಪಿತ್ತರು. ಧೋನಿಯವರು ಇದನ್ನು ಟಿವಿ ಅಂಪೈರ್ ಮರುಪರಿಶೀಲನೆಗೆ ಕೋರಿದರು ಮತ್ತು ಟಿವಿ ಮರುಪ್ರಸಾರದಲ್ಲಿ ಅದು ಎಡ ಸ್ಟಂಪಿನ ಹೊರ ಹೋದಂತೆ ಕಂಡುಬಂದಿತು ಮತ್ತು ಈ ಕಾರಣದಿಂದ ಮೂಲ ತೀರ್ಪನ್ನು ಎತ್ತಿ ಹಿಡಿಯಲಾಯಿತು. ಈ ಪಂದ್ಯದ ಮೂಲಕ ವಿವಾದಾತ್ಮಕ ಮರುಪರಿಶೀಲನೆ ವ್ಯವಸ್ಥೆಯು ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿತು. ಯುಡಿಆರ್ಎಸ್ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ರೋಮಾಂಚಕ ಪಂದ್ಯದಲ್ಲಿ ಬಳಸಲಾಯಿತು ಮತ್ತು ಈ ವ್ಯವಸ್ಥೆಯ ಬಗ್ಗೆ ಕಿರಿಕಿರಿಗೊಂಡ ಎಂಎಸ್ ಧೋನಿಯವರು ಇದು ಮನುಷ್ಯನ ನಿರ್ಧಾರ ಮತ್ತು ತಂತ್ರಜ್ಞಾನದ ಕಲಬೆರೆಕೆಯೆಂದು ಬಣ್ಣಿಸಿದರು, ಆದರೆ ಆಟಗಾರರು ತಂತ್ರಜ್ಞಾನದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕೆಂದು ಐಸಿಸಿಯು ಪ್ರತಿಕ್ರಿಯೆ ನೀಡಿತು[೮] ಅಂಪೈರ್‌ಗಳು ೨.೫ ಮೀ ನಿಯಮದ ಬಗ್ಗೆ ಪ್ರಮುಖ ಅಂಶಗಳನ್ನು ಪರಿಣಿಸಬೇಕೆಂದು ಹೇಳಿ ಐಸಿಸಿಯು ಇದರ ಬಗ್ಗೆ ಮಾರ್ಗದರ್ಶಿಗಳನ್ನು ಪರಿಷ್ಕರಿಸಿತು.[೯] ಪಾಕಿಸ್ತಾನ ತಂಡವು ಆಸ್ಟ್ರೇಲಿಯ ವಿರುದ್ಧದ ತನ್ನ ಎ ಗುಂಪಿನ ಪಂದ್ಯದಲ್ಲಿ ಡಿಆರ್ಎಸ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸಿತು. ಮೊಹಮ್ಮದ್ ಹಫೀಜ್ ಅವರ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯದ ನಾಯಕರಾದ ರಿಕಿ ಪಾಂಟಿಂಗ್ ಅವರ ಬ್ಯಾಟಿನಿಂದ ಚೆಂಡು ಸವರಿಕೊಂಡು ಫೀಲ್ಡರ್ ಕೈ ಸೇರಿತು ಮತ್ತು ಅದನ್ನು ಅಂಪೈರ್ ನಾಟ್-ಔಟ್ ಎಂದು ತೀರ್ಪಿತ್ತರು. ಡಿಆರ್ಎಸ್ ಪದ್ಧತಿಯ ಮೂಲಕ ಈ ನಿರ್ಧಾರವನ್ನು ವಾಪಸು ತೆಗೆದುಕೊಳ್ಳಲಾಯಿತು. ಇದು ಆ ಪಂದ್ಯದಲ್ಲಿ ಪ್ರಮುಖ ತಿರುವಾಯಿತು. ನಿಜವಾಗಿಯೂ ಚೆಂಡು ತನ್ನ ಬ್ಯಾಟಿಗೆ ತಾಗಿತ್ತು ಮತ್ತು ಯಾವತ್ತೂ ತೀರ್ಪನ್ನು ಪ್ರಕಟಿಸಿದ ನಂತರವೇ ತಾನು ವಾಪಸ್ ತೆರಳುವುದ ಕಾರಣದಿಂದ ತಾನು ಮೈದಾನದಲ್ಲೇ ಇದ್ದೆ ಎಂದು ಆಸ್ಟ್ರೇಲಿಯದ ನಾಯಕರಾದ ರಿಕಿ ಪಾಂಟಿಂಗ್ ನುಡಿದಿದ್ದರು. "ಚೆಂಡು ಬ್ಯಾಟಿಗೆ ತಾಕಿದ ಬಗ್ಗೆ ಯಾವುದೇ ಶಂಕೆ ಇರಲಿಲ್ಲ- ಅದು ನನಗೆ ಗೊತ್ತಿತ್ತು". "ಆದರೆ ಯಾವಾಗಲೂ, ಅಂಪೈರ್ ಅದನ್ನು ಔಟ್ ಎಂದು ನಿರ್ಧರಿಸುವವರೆಗೆ ನಾನು ಕಾಯುತ್ತೇನೆ. ನಾನು ಈ ರೀತಿಯಾಗಿಯೇ ಯಾವತ್ತೂ ಆಟವನ್ನು ಆಡಿದ್ದೇನೆ." ಎಂದು ಪಾಂಟಿಂಗ್ ಹೇಳಿದರು ಈ ನಿರ್ಣಯದ ಕುರಿತಂತೆ ಮತ್ತು ಅವರ ಕಳಪೆ ಕ್ರೀಡಾ ಮನೋಭಾವದ ಬಗ್ಗೆ ರಿಕಿ ಪಾಂಟಿಂಗ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದವು.

ಟಿಪ್ಪಣಿಗಳು[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  8. "UDRS, ICC World Cup 2011".  Text " Cricket News " ignored (help)
  9. "Revised guidelines of 2.5m rule".  Text "Cricket Archives" ignored (help)

ಯುಡಿಆರ್ಎಸ್ ವ್ಯವಸ್ಥೆಯ ತಿದ್ದುಪಡಿಯ ಪ್ರಕಾರ, ಬ್ಯಾಟ್ಸ್‌ಮನ್ ತೀರಾ ಮುಂದಕ್ಕೆ ಬಂದಿದ್ದರೂ ಸಹ (೨.೫ ಮೀಗಿಂತ ಹೆಚ್ಚು) ಔಟ್ ನೀಡಬಹುದಾಗಿದೆ, ಆದರೆ ಟಿವಿ ಮರುಪ್ರಸಾರದಂತೆ ಚೆಂಡಿನ ಕೆಲವು ಭಾಗವು ಮಧ್ಯದ ಸ್ಟಂಪ್‌ಗೆ ತಾಗಬೇಕಾಗುತ್ತದೆ (ಇತರ ಎಲ್ಲಾ ಎಲ್‌ಬಿಡಬ್ಲ್ಯೂ ನಿಯಮಗಳು ಅನ್ವಯಿಸಬೇಕಾಗುತ್ತದೆ)

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

  • www.icc-cricket.com – ಅಂಪೈರ್ ನಿರ್ಣಯ ಮರುಪರಿಶೀಲನೆ ವ್ಯವಸ್ಥೆಯ ಜಾರಿಗೆ ಸಂಬಂಧಿಸಿದಂತೆ ಆಟದ ನಿಯಮಾವಳಿಗಳ ಪೂರ್ಣ ಪಟ್ಟಿಯು ವೆಬ್‌ಸೈಟ್‌ನಲ್ಲಿ ಲಭ್ಯವಿದೆ.