ವಿಷಯಕ್ಕೆ ಹೋಗು

ಯಹೂದಿ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಯಹೂದಿ ಧರ್ಮ ಯಹೂದಿ ಜನರ ಧರ್ಮ. ಪ್ರಪಂಚದ ಮೊದಲ ದಾಖಲಿತ ಏಕದೇವವಾದವನ್ನು ಅನುಸರಿಸುವ ಧರ್ಮ. ಈ ಧರ್ಮದ ತತ್ವಗಳು ಹಾಗು ಪರಂಪರೆಗಳು ಮುಂದೆ ಉಗಮಿಸಿದ ಕ್ರೈಸ್ತ ಧರ್ಮ ಹಾಗು ಇಸ್ಲಾಂ ಧರ್ಮಗಳೆರಡಕ್ಕೂ ಬುನಾದಿಯಾಗಿವೆ. ಅಬ್ರಹಮ್ನನ್ನು ಪ್ರಮುಖನನ್ನಾಗಿ ಕಾಣುವ ಈ ಮೂರು ಧರ್ಮಗಳನ್ನು ಅಬ್ರಹಮೀಯ ಧರ್ಮಗಳೆಂದು ವರ್ಗೀಕರಸುತ್ತಾರೆ. ೨೦೦೬ರ ಅಂದಾಜಿನಂತೆ ಪ್ರಪಂಚದಲ್ಲಿ ಸುಮಾರು ೧೪ ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಪ್ರಪಂಚದ ಧರ್ಮಗಳ ಪಟ್ಟಿ ಯಾಗಿದೆ.