ಯಸುಜಿರೋ ಓಜ಼ು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Yasujirō Ozu
小津 安二郎
Ozu in the early 1950s
ಜನನ(೧೯೦೩-೧೨-೧೨)೧೨ ಡಿಸೆಂಬರ್ ೧೯೦೩
ಟೋಕಿಯೊ, ಜಪಾನ್
ಮರಣ12 December 1963(1963-12-12) (aged 60)
ಟೋಕಿಯೊ, ಜಪಾನ್
ಮರಣಕ್ಕೆ ಕಾರಣಕ್ಯಾನ್ಸರ್
Resting placeಎಂಗಕು-ಜಿ
ಇತರೆ ಹೆಸರುಗಳುಜೇಮ್ಸ್ ಮಾಕಿ
ಉದ್ಯೋಗFilm director, screenwriter
ಸಕ್ರಿಯ ವರ್ಷಗಳು1929–1963

(೧೯೦೩-೧೯೬೩)

ಟೋಕಿಯೋ ಬಿಳಿಯ ಮಾತ್ಸುಜಾಕಾದಲ್ಲಿ ಮಧ್ಯಮ ವರ್ಗದ ಕುಟು೦ಬದಲ್ಲಿ ಹುಟ್ಟಿದ ಯಾಸುಜಿರೋ ಚಿಕ್ಕ೦ದಿನಿ೦ದಲೂ ಸಾ೦ಪ್ರದಾಯಿಕ ವಿದ್ಯಾಭ್ಯಾಸದಲ್ಲಿ ಆಸಕ್ತಿ ಇರಲ್ಲಿಲ್ಲ.ಅವನಿಗೆ ಯಾವಾಗಲೂ ಚಲನಚಿತ್ರದ ಗೀಳು.ಪ್ರೌಢ ತರಗತಿಯ ಪರೀಕ್ಷೆಗೆ ಹೋಗುವ ಬದಲು ಮೆಚ್ಚಿನ ಸಿನಿಮಾ ನೋಡಲು ಹೋಗಿದ್ದ.ಇಪ್ಪತ್ತನ್ನೇ ವಯಸ್ಸಿನಲ್ಲಿ ಓಕುಬಾನ ಚಲನಚಿತ್ರಕ್ಕೆ ಸಹಾಯಕನಾಗಿ ದುಡಿಯುವ ಅವಕಾಶ ಸಿಕ್ಕ ಅವನು ತನ್ನ ಇಡ್ಡೀ ಜೀವನಮಾನವನ್ನು ದೃಶ್ಯ ಮಾಧ್ಯಮದಲ್ಲಿ ಗ೦ಭೀರವಾಗಿ ತೊಡಗಿಸಿಕೊ೦ಡ.

ವೃತ್ತಿಜೀವನ[ಬದಲಾಯಿಸಿ]

೧೯೨೭ರಲ್ಲಿ ಮೊದಲ ಚಿತ್ರ ನಿರ್ಮಿಸಿದ ಅವನು ನ೦ತರದ ನಾಲ್ಕು ವರ್ಷಗಳಲ್ಲಿ ೨೧ ಚಲನಚತ್ರಗಳನ್ನು ನಿರ್ದೇಶಿಸಿದ.ಅವನು ಚಿತ್ರವೊ೦ದಕ್ಕೆ ಮನ್ನಣೆ ಹಾಗೂ ಪ್ರಶಸ್ತಿ ಪಡೆದ್ದದು ೧೯೩೨ರಲ್ಲಿ.ಓಜ಼ು ತನ್ನ ಚಿತ್ರಗಳಲ್ಲಿ ಮುಖ್ಯವಾಗಿ ಕುಟು೦ಬದ ಸ೦ಬ೦ಧಗಳಲ್ಲಿ ತಲೆದೋರುವ ಮನಸ್ತಾಪ,ತಲೆಮಾರುಗಳಲ್ಲಿ ಉ೦ಟಾಗುವ ಬಿರುಕು ಮತ್ತು ಸಂಸಾರಗಳ ಮೇಲೆ ಯುದ್ದಗಳಿಂದ ಆಗುವ ಪರಿಣಾಮ ಮುಂತಾದ ವಸ್ತುಗಳನ್ನು ಅನೇಕ ರೀತಿಗಳಲ್ಲಿ ಪ್ರಸ್ತುತಪಡಿಸುತ್ತಾನೆ.ಅವನ ಚಿತ್ರಗಳಲ್ಲಿ'ಫ್ಲೇವರ್ ಆಫ್ ಗ್ರೀನ್ ಟೀ ಓವರ್ ರೈಸ್' ೧೯೫೨,'ಅರ್ಲಿ ಸ್ಪ್ರಂಗ್'೧೯೫೬,'ಫ್ಲೋಟಿಂಗ್ ವೀಡ್ಸ್'೧೯೫೯ ಮತ್ತು 'ಆಟಮ್ ಆಫ್ಟರ್‌ನೂನ್'೧೯೬೨ ಪ್ರಮುಖವಾದವು.

೧೯೫೩ರಲ್ಲಿ ಜಪಾನಿನ ಯಸುಜಿಯೋ ಓಜ಼ುನ ಕಲ್ಪನೆಯಲ್ಲಿ ರೂಪುಗೊಂಡ ಚಿತ್ರ 'ಟೋಕಿಯೋ ಸ್ಟೋರಿ'.ಈ ಚಿತ್ರ ಸಮಕಾಲೀನ ವಸ್ತುವನ್ನು ಹೊಂದಿದ್ದರೂ ಸಾರ್ವಕಾಲಿಕ ಅಂಶಗಳನ್ನು ಒಳಗೊಂಡಿದೆ.ಹಾಗಿರುವುದರಿಂದಲೇ ಈ ಚಿತ್ರ ಕೇವಲ ಒಂದೇ ಒಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯನ್ನು ಪಡೆದಿದ್ದರೂ ಕಳೆದ ಐವತ್ತು ವರ್ಷಗಳಿಂದ ಲೆಕ್ಕವಿಲ್ಲದಷ್ಟು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಶೈಲಿ ಮತ್ತು ತಂತ್ರಗಳು[ಬದಲಾಯಿಸಿ]

ಓಜ಼ು 'ಟೋಕಿಯೋ ಸ್ಟೋರಿ' ಚಿತ್ರದಲ್ಲಿ ದೃಶ್ಯಗಳನ್ನು ಚಿತ್ರೀಕರಿಸುವುದರಲ್ಲಿ ಕ್ಯಾಮೆರಾ ಚಲನೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಆ ವೇಳೆಗಾಗಲೇ ಅನೇಕ ರೀತಿಯ ಬೆಳವಣಿಗೆಗಳಾಗಿದ್ದರೂ ಅವುಗಳನ್ನು ಹೆಚ್ಚಾಗಿ ಗಮನಿಸದೆ ಸರಳ ಹಾಗೂ ನೇರ ವಿಧಾನಗಳಿಂದ ದೃಶ್ಯಗಳ ಶಾಟ್ ಬ್ರೇಕ್ ಡೌನ್ ಮಾಡಿದ್ದಾನೆ.ಜಪಾನಿನ ಜನರ ಸಂಸ್ಕ್ರತಿಯಂತೆ ಮಂಡಿಯೂರಿ ಕುಳಿತು ಪಾತ್ರಗಳು ಮಾತನಾಡುವಾಗ ಕ್ಯಾಮೆರಾವನ್ನು ಅಗತ್ಯವಾದ ಕಡಿಮೆ ಎತ್ತರದಲ್ಲಿಟ್ಟು ಚಿತ್ರೀಕರಿಸಿದ್ದಾನೆ.ಜೊತೆಗೆ ಇಡೀ ಚಿತ್ರದಲ್ಲಿ ಸಾಂದರ್ಭಿಕ ಶಬ್ದಗಳನ್ನು ಬಿಟ್ಟರೆ ಪ್ರತ್ಯೇಕ ಹಿನ್ನೆಲೆ ಸಂಗೀತವಿಲ್ಲ.ಇದರಿಂದಾಗಿ ಇಂದಿನ ಚಿತ್ರಗಳಿಗೆ ಹೋಲಿಸಿದರೆ ಓಜ಼ು ಎಣಿಕೆಗೂ ಸಿಗಲಾರದಂಥ ನೈಜ ವಾತಾವರಣ ಸೃಷ್ಟಿಸುತ್ತಾನೆ.ಇದು ಸನ್ನಿವೇಶಗಳಲ್ಲಿ ಪಾತ್ರಗಳು ಮಾತನಾಡುವಾಗ ಉಂಟಾಗುವ ಮೌನದ ಕ್ಷಣಗಳು ವಿಶೇಷವೆನಿಸಿ ಅವನ ಉದ್ದೇಶಿತ ಪರಿಣಾಮವನ್ನು ಉಂಟುಮಾಡುತ್ತವೆ.ಪಾತ್ರಗಳು ಆಡುವ ಮಾತುಗಳೂ ಅಷ್ಟೆ,ಧ್ವನಿಯ ಹೆಚ್ಚಿನ ಏರಿಳಿತವಿಲ್ಲದ ಕೆಲವೇ ಪದಗಳಿರುವ ವಾಕ್ಯಗಳು.ಓಜ಼ು ಪಾತ್ರಧಾರಿಗಳನ್ನು ಆರಿಸಿಕೊಳ್ಳುವುದರಲ್ಲಿಯೂ ತನ್ನ ಮೂಲ ಧೋರಣೆಯಾದ ಸಹಜತೆಗೆ ಹತ್ತಿರವಾಗಿದ್ದಾನೆ.ವಯಸ್ಸಾದ ದಂಪತಿಗಳೂ ಸೇರಿದಂತೆ ಎಲ್ಲ ಪಾತ್ರಗಳಿಗೆ ಅಗತ್ಯದ ವಯಸ್ಸಿನವರನ್ನು ಆರಿಸಿರುವುದರಿಂದ ಓಜ಼ುಗೆ ಮೇಕಪ್‌ಮ್ಯಾನ್‌ನ ಅವಶ್ಯಕತೆಯೇ ಕಂಡಿರುವ ಸಂಭವವಿಲ್ಲ.ಚಿತ್ರದ ಮತ್ತೊಂದು ಮುಖ್ಯವಾದ ಅಂಶವೆಂದರೆ ಅದರ ನಿಧಾನ ಗತಿ ಮತ್ತು ಚಿತ್ರೀಕರಣದಲ್ಲಿ ಪಾತ್ರಗಳಿಗೆ ಒದಗಿಸಲಾಗಿರುವ ಚಟುವಟಿಕೆ ಅಂದರೆ ಬಿಸಿನೆಸ್.ಓಜ಼ು ಇಲ್ಲಿಯೂ ವಾಸ್ತವಕ್ಕೆ ಹತ್ತಿರವೆನಿಸುವ ಹಾಗೆ ಎಲ್ಲ ವಿವರಗಳನ್ನು ಬಳಸಿಕೊಳ್ಳುತ್ತಾನೆ.

ಉಲ್ಲೇಖಗಳು[ಬದಲಾಯಿಸಿ]

೧.ಮಯೂರ,ಫೆಬ್ರವರಿ ೨೦೦೬

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Portal