ಯಲಬರ್ಗಾ

ವಿಕಿಪೀಡಿಯ ಇಂದ
Jump to navigation Jump to search

ಯಲಬುರ್ಗಾ ಕೊಪ್ಪಳ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಯಲಬುರ್ಗಾ ನಿಜಾಮರ ಕಾಲದ ತಾಲೂಕು ಕೇಂದ್ರವಾಗಿತ್ತು. ಆಗ ಯಲಬುರ್ಗಾ ವನ್ನು "ಯಲಂಬುರ್ಗಾ" ಎಂದು ಕರೆಯುತ್ತಿದ್ದರು. ಈಗ ಯಲಬುರ್ಗಾ ಅಭಿವೃದ್ದಿ ಹೊಂದುತ್ತಿರುವ ನಗರ ಪ್ರದೇಶ. ಯಲಬುರ್ಗಾ ತಾಲೂಕು ನೈಸರ್ಗಿಕ ಸಂಪತ್ತಿನಿಂದ ಹೆಸರು ವಾಸಿ. ತಾಲೂಕಿನ ಕುಕನೂರು "ಗ್ರಾನೈಟ್"ಗೆ ಹೆಸರುವಾಸಿ. ದೇಶದ ವಿವಿಧ ಭಾಗಗಳಿಂದ ಇಲ್ಲಿ ವ್ಯವಹಾರ ನಿತ್ಯಾ ನಡೆಯುತ್ತದೆ. ಯಲಬುರ್ಗಾ ರಾಜ್ಯದಲ್ಲಿಯೇ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿದ ತಾಲೂಕಾಗಿದೆ. ಕುದರಿಮೂತಿ ಗ್ರಾಮ ಗಣೇಶನ ಮೂರ್ತಿಗೆ ಪ್ರಸಿದ್ದಿ. ತಾಲುಕಿನ ಮುರುಡಿ ಗ್ರಾಮ ಹಣ್ಣುಗಳನ್ನು ಬೆಳೆಯಲು ಹೆಸರುವಾಸಿ.

"https://kn.wikipedia.org/w/index.php?title=ಯಲಬರ್ಗಾ&oldid=222332" ಇಂದ ಪಡೆಯಲ್ಪಟ್ಟಿದೆ