ವಿಷಯಕ್ಕೆ ಹೋಗು

ಯಲಬರ್ಗಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮ್ಯಾದನೇರಿ

[ಬದಲಾಯಿಸಿ]

ಕರ್ನಾಟಕದ ವಿಶಿಷ್ಟ ಜಾನಪದ ಕಲೆಗಳಲ್ಲಿ ಒಂದಾಗಿರುವ ಕೋಲಾಟದ ಮಾಹಿತಿ :- ಮ್ಯಾದನೇರಿ

ಇದರ ವೇಷ ಭೂಷಣಗಳೆಂದರೆ :- ಬಯಲು ಸೀಮೆಯಲ್ಲಿ ಬಿಗಿದೆ ಕಟ್ಟಿದ ಕಚ್ಚೆ , ತಲೆಗೆ ಟೋಪಿ, ನಡುವಿಗೆ ವಸ್ತ್ರ, ಕಾಲಿಗೆ ಗೆಜ್ಜೆ, ಹಾಕಿರುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಕೋಲುಗಳ ಸಪ್ಪಳವೇ ಹಾಡಿಗೆ ಪೂರಕವಾದ ತಾಳವಾಗಿರುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಮದ್ದಲೆ, ಡೋಲು, ಡಪ್ಪು, ತಬಲಾ, ಡಕ್ಕೆ , ಕಂಚಿನ ತಾಳಗಳನ್ನು, ಈ ಕೋಲಾಟದಲ್ಲಿ ಬಳಸುವುದುಂಟು. "ಗೋಕುಲದಲ್ಲಿ ಶ್ರೀ ಕೃಷ್ಣನ ಜನನವಾದಾಗ ಯಾದವರು ಕೋಲಾಟ ಆಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸುದುದು", ಹಾಗೆಯೇ ಹಾಗೆಯೇ "ಶ್ರೀ ಕೃಷ್ಣನು ಗೋಪಿಕಾ ಸ್ತ್ರೀಯರೊಂದಿಗೆ ಕೋಲಾಟ ಮಾಡಿದುದು" ಕೋಲಾಟದ ಇತಿಹಾಸವನ್ನು ನಮಗೆ ತಿಳಿಸುತ್ತದೆ. ಕೋಲಾಟಕ್ಕೆ ಮಹತ್ವವು ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಲಭಿಸಿದೆ.ಎಲ್ಲಾ ವಯಸ್ಸಿನವರಿಗೂ ಕೂಡ ಇಷ್ಟವಾಗುವ ಈ ಕಲೆ "ಮಹಾರಂಜನೆಯ ಮಹಾ ಗಣಜವಾಗಿದೆ" ಎಂದು ತಿಳಿಯಬಹುದು. ಈ ಕೋಲಾಟದಲ್ಲಿ ನಾವು ಸರಿ ಸುಮಾರು ಐವತ್ತಕ್ಕಿಂತ ಹೆಚ್ಚು ವಿಧಗಳನ್ನು ಕಾಣಬಹುದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ

[ಬದಲಾಯಿಸಿ]
- ಸುತ್ತು ಕೋಲು, ದಾಟು ಕೋಲು, ತೂಗು ಕೋಲು, ಸಾಲು ಕೋಲು, ಮಲ್ಕಿನ ಕೋಲು, ಊರುವಯ್ಯನ ಕೋಲು, ರಂಗೋಲಿ ಕೋಲು, ವಸ್ತ್ರ ಕೋಲು, ಸೋಬಾನೆ ಕೋಲು, ಉಯ್ಯಾಲೆ ಕೋಲು, ಹರುಗೋಲು, ಚಕ್ಕೆ ಕೋಲು, ಇತ್ಯಾದಿ. ಕೋಲಾಟವು ಸಾಮಾನ್ಯವಾಗಿ "ಗಣೇಶನ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ" ನಂತರ "ಎಲ್ಲರೂಸುತ್ತಲೂ ನಿಂತು ಮತ್ತೆ ಕೋಲುಗಳನ್ನು ಮಧ್ಯದಲ್ಲಿ ಇಟ್ಟು ಕೋಲಾಟ ಕಲಿಸಿದ ಗುರುವಿಗೆ ನಮಸ್ಕಾರ ಮಾಡಿ" ಕೋಲನ್ನು ಮುಟ್ಟುತ್ತಾರೆ ಕೋಲುಗಳ ಸಪ್ಪಳವು ನಿಧಾನಗತಿಯಲ್ಲಿ ಆರಂಭವಾಗುತ್ತದೆ...
"https://kn.wikipedia.org/w/index.php?title=ಯಲಬರ್ಗಾ&oldid=1263780" ಇಂದ ಪಡೆಯಲ್ಪಟ್ಟಿದೆ