ಯಕ್ಷಗಾನ ಕಲಾರಂಗ (ರಿ.) ಉಡುಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಕ್ಷಗಾನ ಕಲೆ[ಬದಲಾಯಿಸಿ]

೧೯೭೫ರಲ್ಲಿ ಸಮಾನಾಸಕ್ತ ಯಕ್ಷಗಾನ ಕಲಾಭಿಮಾನಿಗಳು ಡಾ. ಬಿ.ಬಿ. ಶೆಟ್ಟಿಯವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗವನ್ನು ಸ್ಥಾಪಿಸಿದರು. ರುಚಿಶುದ್ಧಿಯ ಯಕ್ಷಗಾನ ಸಂಯೋಜನೆ ಪ್ರಧಾನ ಉದ್ದೇಶವಾಗಿತ್ತು. ಸುಮಾರು ನಾಲ್ಕು ದಶಕಗಳ ಅವಧಿಯಲ್ಲಿ ಸಂಸ್ಥೆ ತನ್ನ ಕಾರ್ಯ ವ್ಯಾಪ್ತಿಯನ್ನು ಸಾಕಷ್ಟು ವಿಸ್ತರಿಸಿಕೊಂಡಿದೆ. ಸದಾ ಸಮಾಜಮುಖಿಯಾಗಿ ಸ್ಪಂದಿಸುತ್ತ ಕ್ರಿಯಾಶೀಲ ಯೋಜನೆಗಳಿಂದ ಈ ಎತ್ತರವನ್ನು ಸಾಡಿಸಿ ಇಂದು ಪ್ರತಿಷ್ಠಿತ ಸಂಸ್ಥೆಯಾಗಿ ರೂಪುಗೊಂಡಿದೆ.ನಿಯಮಾನುಸಾರ ನೋಂದಣಿಗೊಂಡು ತನ್ನ ಕಾರ್ಯ ಯೋಜನೆಗಳಿಗೆ ಮಾರ್ಗದರ್ಶಿ ನಡವಳಿಕೆ ರೂಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ತನ್ನ ಪಾರದರ್ಶಕ ವ್ಯವಹಾರದಿಂದ ಮಠಾಡಿಪತಿಗಳ, ಸಮಾಜದ ಆಢ್ಯರ ವಿಶ್ವಾಸಕ್ಕೆ ಪಾತ್ರವಾಗಿದೆ. ಸದಸ್ಯರ ಮತ್ತು ದಾನಿಗಳ ನೆರವಿನಿಂದ ಈಗ ವಾರ್ಷಿಕ ಸುಮಾರು ೬೦ಲಕ್ಷಕ್ಕೂ ಮಿಕ್ಕಿ ಅಧಿಕ ವ್ಯವಹಾರ ನಡೆಸುವ ಹಂತಕ್ಕೆ ಬೆಳೆದು ನಿಂತಿದೆ. ದಾನಿಗಳು ಸಂಸ್ಥೆಗೆ ನೀಡುವ ದಾನಶುಲ್ಕಕ್ಕೆ ಆದಾಯ ತೆರಿಗೆ ಇಲಾಖೆಯ ೮೦ಜಿ ಸೌಲಭ್ಯವಿದೆ. ಉಡುಪಿಯ ಹೃದಯ ಭಾಗವಾದ ರಥಬೀದಿಯ ಪಕ್ಕದ ಪೇಜಾವರ ಮಠದ ಕಟ್ಟಡದಲ್ಲಿ ಸಂಸ್ಥೆಯ ಕಛೇರಿಯಿದೆ. ರಜಾದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ ೯.೦೦ ಗಂಟೆಯಿಂದ ರಾತ್ರಿ ೯.೦೦ ಗಂಟೆಯವರೆಗೆ ಕಛೇರಿ ತೆರೆದಿರುತ್ತದೆ. ಒಬ್ಬ ಪೂರ್ಣಕಾಲಿಕ ಮತ್ತು ಒಬ್ಬ ಅರೆಕಾಲಿಕ ಉದ್ಯೋಗಿಯನ್ನು ಸಂಸ್ಥೆ ನಿಯೋಜಿಸಿಕೊಂಡಿದೆ. ನಿವೃತ್ತರಾದ ನಾಲ್ಕಾರು ಹಿರಿಯ ಕಾರ್ಯಕರ್ತರು ಇಲ್ಲಿ ದಿನದ ಹೆಚ್ಚಿನ ವೇಳೆಯಲ್ಲಿ ಸಿಗುತ್ತಾರೆ. ಬೇರೆ ಉದ್ಯೋಗದಲ್ಲಿರುವ ಕಾರ್ಯದರ್ಶಿ ಮತ್ತು ನಾಲ್ಕಾರು ಇತರ ಕಾರ್ಯಕರ್ತರು ಸಂಜೆ ೫.೦೦ ಗಂಟೆಯಿಂದ ೯.೦೦ ಗಂಟೆಯವರೆಗೆ ಸಂಸ್ಥೆಯ ಕಛೇರಿಯ ಕಾರ್ಯನಿರತರು.

ಸಂಸ್ಥೆಯ ಮೈಲುಗಲ್ಲುಗಳು[ಬದಲಾಯಿಸಿ]

ದಶಮಾನ, ವಿಂಶತಿ, ಬೆಳ್ಳಿಹಬ್ಬ, ತ್ರಿಂಶತಿ ವರ್ಷಾಚರಣೆ,. ಈ ಸಂದರ್ಭದಲ್ಲಿ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣ ಸ್ಮರಣ ಸಂಚಿಕೆ ಪ್ರಕಟಿಸಲಾಗಿದೆ.

ಯಕ್ಷಗಾನಕ್ಕೆ ಕಾಯಕಲ್ಪ ನೀಡುವ ಕಮ್ಮಟ-ವಿಚಾರ ಸಂಕಿರಣ[ಬದಲಾಯಿಸಿ]

ಸ್ತ್ರೀ ವೇಷ ಕಮ್ಮಟ, ಯುವ ಭಾಗವತರ ಶಿಬಿರ, ಯಕ್ಷನೃತ್ಯ ಪ್ರಾತ್ಯಕ್ಷಿಕತೆ, ಒಡ್ಡೋಲಗ ಪ್ರಾತ್ಯಕ್ಷಿಕತೆ, ಮಕ್ಕಳ ಯಕ್ಷಗಾನ ಸ್ಪರ್ಧೆ, ತಾಳಮದ್ದಲೆ ಸ್ಪರ್ಧೆ, ದೊಂದಿ ಬೆಳಕಿನ ಯಕ್ಷಗಾನ, ಅಷ್ಠಾವಧಾನ, ಗಾನ ವೈವಿಧ್ಯ, ಏಕವ್ಯಕ್ತಿ ಯಕ್ಷಗಾನ, ಏಕವ್ಯಕ್ತಿ ತಾಳಮದ್ದಳೆ, ವೇಷಗಾರಿಕೆ ಬಣ್ಣಗಾರಿಕೆ ಶಿಬಿರ, ವಿಶೇಷ ಉಪನ್ಯಾಸಗಳು, ಸಾಧಕರಿಗೆ ಅಭಿನಂದನೆ, ಚಿಂತನ ಸರಣಿ, ಸಂವಾದ ಕಾರ್ಯಕ್ರಮ ಇತ್ಯಾದಿ.

ವ್ಯಕ್ತಿ ಪರಿಚಯಕ್ಕೆ ಸಂಬಂಧಿಸಿ ಪ್ರಕಟಿಸಿದ ಪುಸ್ತಕಗಳು[ಬದಲಾಯಿಸಿ]

ಡಾ. ಬಿ. ಬಿ. ಶೆಟ್ಟಿ ಆಶು ವೈಭವ(ಶೇಣಿ ಮತ್ತು ಸಾಮಗರ ಕುರಿತು) ಹಾರಾಡಿ ನಾರಾಯಣ ಗಾಣಿಗ, ಮಲ್ಪೆ ರಾಮದಾಸ ಸಾಮಗ, ಕೆರೆಮನೆ ಮಹಾಬಲ ಹೆಗಡೆ.

ಸ್ಮರಣ ಸಂಚಿಕೆಗಳು[ಬದಲಾಯಿಸಿ]

  • ಒಡ್ಡೋಲಗ, ರಜತ ಮುಕುಟ, ವಾಗ್ಝರಿ, ಕಲಾರಂಗ ೨೦೧೨, ಕಲಾರಂಗ ೨೦೧೩
  • ಯಕ್ಷಗಾನ ಕಲಾರಂಗದ ಕಾರ್ಯಚಟುವಟಿಕೆಗಳ ಪರಿಚಯ: ಯಕ್ಶಗಾನ ಕಲಾರಂಗ, ಯಕ್ಷ ಸುರಕ್ಷ
  • ತಾಲ ಮದ್ದಳೆ ಸಂಬಂಡಿಸಿದ ಲೇಖನಗಳ ಸಂಗ್ರಹ: ವಾಚಿಕ
  • ಸಾಕ್ಷ್ಯ ಚಿತ್ರ ಧ್ವನಿ ಸುರಳಿ
  • ಕೆರೆಮನೆ ಮಹಾಬಲ ಹೆಗಡೆ
  • ನೆಬ್ಬೂರು ನಾರಾಯಣ ಭಾಗವತ

ಪುಸ್ತಕ ಭಂಡಾರ[ಬದಲಾಯಿಸಿ]

ಸಂಸ್ಥೆಯಲ್ಲಿ ಯಕ್ಷಗಾನಕ್ಕೆ ಸಂಬಂಧಪಟ್ಟ ಪುಸ್ತಕ ಭಂಡಾರವಿದ್ದು, ಈ ವರ್ಷ ಯಕ್ಷಗಾನ ಕಲಾವಿದ ಉದ್ಯಾವರ ಜಯಕುಮಾರ್ ತಮ್ಮಲ್ಲಿದ್ದ ಯಕ್ಷಗಾನ ಪ್ರಸಂಗ ಪುಸ್ತಕಗಳ ಸಹಿತ ಸುಮಾರು ಇನ್ನೂರು ಪುಸ್ತಕಗಳನ್ನು ಈ ಗ್ರಂಥ ಭಂಡಾರಕ್ಕೆ ದಾನ ನೀಡಿರುತ್ತಾರೆ. ಯಕ್ಷಗಾನ ಆಸಕ್ತರು ಈ ಪುಸ್ತಕ ಭಂಡಾರದ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ಗ್ರಹ ನಿರ್ಮಾಣ[ಬದಲಾಯಿಸಿ]

ಉಡ್ಪಿಯ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಷಕ್, ಕಾರ್ಕಳ ತಾಲೂಕು ಹಿರ್ಗಾನದ ಪ್ರಭಾಕರ್ ಶೆಟ್ಟಿ ಮತ್ತು ಶ್ರೀಮತಿ ಸುನಿತ್ ಇವರ ಪುತ್ರಿ, ದ್ವಿತಿಯ ಪಿ. ಯು. ಸಿ ವಿದ್ಯಾರ್ಥಿನಿ ಪ್ರಜ್ನಾ ಶೆಟ್ಟಿ ಇವಳಿಗೆ ಸಂಸ್ಥೆ ಹೊಸ ಮನೆ ಕಟ್ಟಿಸಿಕೊಟ್ಟಿದೆ. ಸಂಸ್ಥೆ ಕಳೆದ ಎಂಟು ವರ್ಷಗಳಿಂದ ವಿದ್ಯಾಪೋಷಕ್ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ನೆರವಿನ ಹಸ್ತ ಚಾಚಿದೆ. ಇದು ಸಂಸ್ಥೆ ವಿದ್ಯಾಪೋಷಕ್ ಕಟ್ಟಿಸಿಕೊಟ್ಟ ಎರಡನೆಯ ಮನೆಯಾಗಿದೆ. ಕಳೆದ ವರ್ಷ ಅಂದರೆ ೨೦೧೨ರಲ್ಲಿ ಯಕ್ಷನಿಧಿಯ ಸದಸ್ಯ ಮಂದಾರ್ತಿ ಮೇಳದ ಹಾಸ್ಯ ಕಲಾವಿದ ಭೋಜ ಮರಕಾಲ ಮತ್ತು ಅವರ ಮಗಳು, ವಿದ್ಯಾಪೋಷಕ್ ವಿದ್ಯಾರ್ಥಿನಿ ಪಲ್ಲವಿ ಇವರಿಗೆ ಸುಮಾರು ಮೂರುವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆಯನ್ನು ದಾನಿಗಳ್ ನೆರವಿನಿಂದ ಕಟ್ಟಿಸಿಕೊಡಲಾಗಿತ್ತು.

ಸ್ವಂತ ನಿವೇಶನ[ಬದಲಾಯಿಸಿ]

ಮಣಿಪಾಲದ ಮಾನ್ಯ ರಮೇಶ್ಚಂದ್ರ ಹೆಗ್ಡೆಯವರು ಪರ್ಕಳದಲ್ಲಿ ಸಂಸ್ಥೆಗೆ ಐದು ಸೆಂಟ್ಸ್ ಸ್ಥಳವನ್ನು ದಾನವಾಗಿ ಕೊಟ್ಟಿರುವುದು ಸಂಸ್ಥೆ ಗಳಿಸಿದ ವಿಶ್ವಾಸಾರ್ಹತೆಗೆ ಇನ್ನೊಆಂದು ಉದಾಹರಣೆಯಾಗಿದೆ.

ಮಳೆಗಾಲದ ಯಕ್ಷಗಾನ[ಬದಲಾಯಿಸಿ]

ಕಲಾ ರಸಿಕರಿಗೆ ರುಚಿಶುದ್ಧಿಯ ಯಕ್ಷಗಾನ ಪ್ರದರ್ಶನ ನೀಡುವ ಉದ್ದೇಶದಿಂದ ಸಂಸ್ಥೆ ಸಂಯೋಜನೆಗೊಳಪಟ್ಟ ಕಾಲಮಿತಿಯ ಹಗಲು ಯ್ಕ್ಷಗಾನವನ್ನು ಆರಂಭಿಸಿತು. ಯಕ್ಷಗಾನ ಪೌರಾಣಿಕದಿಂದ ಕಾಲ್ಪನಿಕ ಕಥೆಗಳತ್ತ ಸಾಗಿದ ೭೦-೮೦ರ ದಶಕಗಳಲ್ಲಿ ಇಂತಹ ಪ್ರಯತ್ನಕ್ಕೆ ಕೈಹಾಕಿತು. ಇಡೀ ರಾತ್ರಿಯ ಯಕ್ಷಗಾನ ಉದ್ಯೋಗಸ್ಥ ಪಟ್ಟಣಿಗರಿಗೆ ತೊಡಕಾದಾಗ ಸಭಾಭವನದಲ್ಲಿ ಹಗಲು ಯಕ್ಷಗಾನ ನಡೆಸಿ ಪ್ರೇಕ್ಷಕರ ಯಕ್ಷಗಾನಾಸ್ಕ್ತಿಯನ್ನು ಉಳಿಸಿ ಬೆಳೆಸಲು ಇದು ಅಗತ್ಯವೂ ಆಗಿತ್ತು.ಸಂಸ್ಥೆ ಈಗಲೂ ತನ್ನ ಸದಸ್ಯರಿಗೆ ಜುಲೈ ತಿಂಗಳಲ್ಲಿ ಒಂದು ಬಡಗು ಮತ್ತು ಒಂದು ತೆಂಕು ಯಕ್ಷಗಾನವನ್ನು ಉಚಿತವಾಗಿ ನೀಡುತ್ತಿದೆ. ಮಕ್ಕಳಲ್ಲಿ ಯಕ್ಷಗಾನಾಭಿರುಚಿಯನ್ನು ಬೆಳೆಸುವ ದೃಷ್ಟಿಯಿಂದ ಸದಸ್ಯರ ಮಕ್ಕಳಿಗೆಉಚಿತವಾಗಿ ಪ್ರವೇಶ ನೀಡುತ್ತಿದೆ. ಒಬ್ಬ ಪ್ರಡಾನ ಅವಲೋಕನಕಾರರಿಂದ ಅದನ್ನು ವಿಮರ್ಶೆಗೆ ಒಳಪಡಿಸಿ ಸಭೆಯಲ್ಲಿ ಭಾಗವಹಿಸಿದವರ ಅಭಿಪ್ರಾಯಕ್ಕೂ ಅವಕಾಶ ನೀಡಿ ಪ್ರದರ್ಶನದ ಗುಣದೋಷಗಳನ್ನು ಚರ್ಚಿಸಲಾಗುತ್ತದೆ. ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ಇದನ್ನು ಕಲಾವಿದರಿಗೆ, ಕಲಾಸಕ್ತರಿಗೆ ತಲುಪಿಸಲಾಗುತ್ತದೆ.

ಪ್ರಶಸ್ತಿಗಳು[ಬದಲಾಯಿಸಿ]

ಸಂಸ್ಥೆಯ ಸ್ಥಾಪನಾಧ್ಯಕ್ಷ ಡಾ. ಬಿ. ಬಿ. ಶೆಟ್ಟಿಯವರ ಹೆಸರಿನಲ್ಲಿ ವಿ.ಜೆ.ಯು. ಕ್ಲಬ್, ಉಡುಪಿ ಇದರ ನೆರವಿನೊಂದಿಗೆ ೧೯೯೩ರಲ್ಲಿ ಸಂಸ್ಥೆ ತನ್ನ ಮೊದಲ ಪ್ರ್ಶ್ಸ್ತಿಯನ್ನು ಆರಂಭಿಸಿತು. ಸಂಸ್ಥೆಯ ಕಾರ್ಯಕಾರಿ ಸ್ದಮಿತಿ ಸದಸ್ಯರಾಗಿದ್ದ ಯು. ದಾಮೋದರ್ ಅವರ ಆಸಕ್ತಿಯಿಂದ ರೂ. ೧,೦೦೦ ನಗದು ಪುರಸ್ಕಾರ ಒಳಗೊಂಡಿತು. ಅನಂತರದ ವರ್ಷಗಳಲ್ಲಿ ಬೇರೆ, ಬೇರೆ ಕಲಾವಿದರ, ದಾನಿಗಳ ಹೆಸರಿನಲ್ಲಿ ಪ್ರಶ್ಸ್ತಿಗಳನ್ನು ಸ್ಥಾಪಿಸಲಾಗಿದೆ. ಈಗ ಒಟ್ಟಿಗೆ ತಲಾ ಹತ್ತು ಸಾವಿರ ನಗದು ಪುರಸ್ಕಾರ ಒಳ್ಗೊಂಡಿರುವ ಹದಿನಾಲ್ಕು ಪ್ರಶ್ಸ್ತಿಗಳನ್ನು ನೀಡಲಾಗುತ್ತಿದೆ. ಯಕ್ಶಗಾನದ ಕುರಿತು ಕೆಲಸ ಮಾಡುವ ಸಂಘಟನೆಗಳಿಗೆ ರೂಪಾಯಿ ಇಪ್ಪತ್ತೈದು ಸಾವಿರ ನಗದು ಪುರಸ್ಕಾರ ಒಳ್ಗೊಂಡಿರುವ `ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ೨೦೦೧ರಲ್ಲಿ ಪ್ರಾರಂಭಿಸಿದೆ. ಸಂಸ್ಥೆಯ ಹಿತೈಷಿ, ವಿಜಯ ಕುಮಾರ ಮುದ್ರಾಡಿಯವರ ಅಪೇಕ್ಷೆಯಂತೆ ಅವರ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಹಿರಿಯ ಕಾರ್ಯಕರ್ತರಿಗೆ `ಯಕ್ಷಚೇತನ' ಪ್ರಶಸ್ತಿಯನ್ನು ಸ್ಥಾಪಿಸಿ ಗೌರವಿಸಲಾಗುತ್ತಿದೆ. ತಾಳಮದ್ದಳೆಯ ಹಿರಿಯ ಅರ್ಥಧಾರಿಗಳನ್ನು ಗುರುತಿಸಿ ಗೌವರಿಸುವ `ಮಟ್ಟಿ ಮುರಲೀಡರ ರಾವ್'ಪ್ರಶ್ಸ್ತಿಯನ್ನು ಸ್ಥಾಪಿಸಲಾಗಿದೆ. ಇದು ಸಂಸಥೆಯ ಮಹತ್ವದ ಕೆಲಸಗಳಲ್ಲಿ ಒಂದಾಗಿರುತ್ತದೆ. ಯಕ್ಷಗಾನ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಾಡಕ ಕಲಾವಿದರನ್ನು ಗೌವರಿಸುವ ಅಪೂರ್ವ ಅವಕಾಶ ಇದಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದೆ. ೨೦೧೩ರಲ್ಲಿ ರೂ. ಇಪ್ಪತ್ತು ಸಾವಿರ ನಗದು ಪುರಸ್ಕಾರದ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು ಹಾಗೂ ತಲಾ ಹತ್ತು ಸಾವಿರನಗದು ಪುರಸ್ಕಾರವನ್ನು ಒಳ್ಗೊಂಡಿರುವ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ ಮತ್ತು ಪೆರ್ಲ ಕೃಷ್ಣ ಭಟ್ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಈ ಕೆಳಗೆ ನಮೂದಿಸಿದ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗ ನೀಡುತ್ತಿದೆ. ಶ್ರೀ ವಿಶ್ವೇಶ ತೀರ್ಥ ಪ್ರಶಸ್ತಿ, ಡಾ. ಬಿ ಬಿ ಶೆಟ್ಟಿ ಪ್ರಶಸ್ತಿ, ನಿಟ್ಟೂರ್ ಸುಂದರ ಶೆಟ್ಟಿ ಪ್ರಶಸ್ತಿ, ಪ್ರೊ. ಬಿ. ವಿ. ಆಆಚಾರ್ಯ ಪ್ರಶಸ್ತಿ, ಭಾಗವತ ನಾರಾಣಪ್ಪ ಉಪ್ಪೂರು ಪ್ರಶಸ್ತಿ, ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ -ಭಾಗವತ ವಾದಿರಾಜ್ ಹೆಬ್ಬಾರ್ ಪ್ರಶಸ್ತಿ, ಐರೋಡಿ ರಾಮ ಗಾಣಿಗ ಪ್ರಶಸ್ತಿ, ಪದರು ನರಸಿಂಹ ಶಾಸ್ತ್ರಿ ಪ್ರಶಸ್ತಿ, ಶ್ರೀಮತಿ ಪ್ರಭಾವತಿ ಶೆಣೊಯ್ ಮತ್ತು ಯು. ವಿಶ್ವನಾಥ್ ಶೆಣೊಯ್ ಪ್ರಶಸ್ತಿ, ಬಿ ಜಗಜ್ಜೀವನದಾಸ್ ಶೆಟ್ಟಿ ಪ್ರಶಸ್ತಿ, ಶಿರಿಯಾರ ಮಂಜು ನಾಯಕ ಪ್ರಶಸ್ತಿ, ಕೋಟ ವೈಕುಂಠ ಪ್ರಶಸ್ತಿ, ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿ, ತಲ್ಲೂರ್ ಕನಕಾ -ಅಣ್ಣಯ್ಯ ಪ್ರಶಸ್ತಿ, ಮಟ್ಟಿ ಮುರಲೀಧರ ರಾವ್ ಪ್ರಶಸ್ತಿ, ಪ್ಂಡಿತ ಪೆರ್ಲ ಕೃಷ್ಣ ಭಟ್ ಪ್ರಶಸ್ತಿ, ಯಕ್ಶಚೇತನ ಪ್ರಸ್ಶಸ್ತಿ ಈ ಮುಂತಾದವು. ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿ ಹಲವಾರು ನಿರ್ಣಯಗಳನ್ನು ಕೈಕೊಂಡಿತು. ಅವುಗಳಲ್ಲಿ ಪ್ರೊ. ಬಿ.ವಿ. ಆಚಾರ್ಯ ದತ್ತಿ`ಯಕ್ಷ ನಿಧಿ'ಸ್ಥಾಪನೆ ಅತ್ಯಂತ ಮಹತ್ವದ್ದು. ಇದು ಸಂಸ್ಥೆಯ ಚರಿತ್ರೆಯಲ್ಲಿ ಮುಖ್ಯವಾದ ತಿರುವು. ಇಲ್ಲಿಯವರೆಗೆ ಯಕ್ಷಗಾನ ಕಲೆಗಾಗಿ ತೊಡಗಿಸಿಕೊಂಡ ಸಂಸ್ಥೆ ಕಲಾವಿದರ ಕ್ಷೇಮ ಚಿಂತನೆಗೆ ಕಟಿಬದ್ಧವಾಯಿತು. ಕಲೆಯನ್ನೇ ವೃತ್ತಿಯಾಗಿ ಸ್ವೀಕರಿಸಿ ವೃತ್ತಿ ಮೇಳದಲ್ಲಿ ದುಡಿಯುತ್ತಿರುವ ಕಲಾವಿದರಿಗೆ ಒಂದಿಷ್ಟು ಆರ್ಥಿಕ ಭದ್ರತೆ, ಅವರ ಆರೋಗ್ಯ, ಅರಿವಿನ ಬಗ್ಗೆ ಕಾಳಜಿ ಅಗತ್ಯಕ್ಕೆ ಸ್ಪಂದಿಸುವುದೇ ಇದರ ಉದ್ದೇಶ. ಯಕ್ಷನಿಡಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾಗಿದ್ದು ವೃತ್ತಿ ಮೇಳದ ಕಲಾವಿದರು ಅವರ ಸದಸ್ಯರು. ಕನಿಷ್ಠ ಮೂರು ವರ್ಷ ವೃತ್ತಿ ಮೇಳಗಳಲ್ಲಿ ಸೇವೆ ಮಾಡಿದ ಕಲಾವಿದ ವೃತ್ತಿ ಮೇಳದಲ್ಲಿ ದುಡಿಯುತ್ತಿರುವಾಗ ರೂಪಾಯಿ ನೂರು ಪಾವತಿಸಿದರೆ ಯಕ್ಷನಿಧಿಯ ಅಜೀವ ಸದಸ್ಯನಾಗುತ್ತಾನೆ. ವೃತ್ತಿ ಮೇಳದಲ್ಲಿ ದುಡಿಯುತ್ತಿರುವವರೆಗೂ ಎಲ್ಲಾ ರೀತಿಯ ಸವಲತ್ತುಗಳಿಗೆ ಬಾಧ್ಯನಾಗುತ್ತಾನೆ. ಈಗ ಸುಮಾರು ಮೂವತ್ತು ವೃತ್ತಿ ಮೇಳಗಳ ಒಂದು ಸಾವಿರಕ್ಕೂ ಅಧಿಕ ಕಲಾವಿದರು ಇದರ ಸದಸ್ಯರು.

ದತ್ತಿನಿಧಿಯ ಮೂಲಕ ಕಲಾವಿದರಿಗೆ ಒದಗಿಸುವ ಸೌಲಭ್ಯ[ಬದಲಾಯಿಸಿ]

ಕಲಾವಿದರ ಗೃಹನಿರ್ಮಾಣಕ್ಕೆ ಪ್ರೋತ್ಸಾಹ,ಕಲಾವಿದರ ಅಧ್ಯಯನಕ್ಕೆ ಅನುಕೂಲವಾಗುವ ಪೌರಾಣಿಕ ಪುಸ್ತಕ ಭ್ಂಡಾರ, ಅಶಕ್ತ ಕಲಾವಿದರಿಗೆ ವಿಶೇಷ ಆರ್ಥಿಕ ನೆರವು, ಕಲಾವಿದರ ಆರೋಗ್ಯ ತಪಾಸಣೆ, ಕಣ್ಣಿನ ಪರೀಕ್ಷೆ, ಉಚಿತ ಕನ್ನಡಕ ವಿತರಣೆ, ಮತ್ತು ದಂತ ತಪಾಸಣೆ, ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ಕಲಾವಿದರಿಗೆ ರಿಯಾಯಿತಿ ದರದ ಬಸ್ ಪಾಸ್, ವೃತ್ತಿ ಕಲಾವಿದರಿಗೆ ಪುನಶ್ಛೇತನ ಶಿಬಿರ, ಪ್ರತಿ ವರ್ಷ ೧೦೦೦ ಯಕ್ಷನಿಡಿ ಸದಸ್ಯರಿಗೆ ಸದಸ್ಯ ಕಲಾವಿದರ ವಿಳಾಸವನ್ನೊಳಗೊಂಡ ಡೈರಿ ಪ್ರಕಟಣೆ. ಇದನ್ನು ಉಚಿತವಾಗಿ ಸದಸ್ಯರಿಗೆ ನೀಡಲಾಗುವುದು. ಸಂಸ್ಥೆಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟರ ಪ್ರಾಯೋಜಕತ್ವದಲ್ಲಿ ಯಕ್ಷನಿಧಿಯ ಸದಸ್ಯರಿಗೆ ಉಚಿತವಾಗಿ ಕ್ಯಾಲೆಂಡರ್ ವಿತರಣೆ, ಪ್ರತಿ ವರ್ಷ ಮೇ ೩೧ರಂದು ಮಹಾಸಭೆ ಕರೆದು ಅವರ ವೃತ್ತಿ ಬದುಕಿಗೆ ಉಪಯುಕ್ತವಾಗುವ ಕಾರ್ಯಕ್ರಮ.

ಕಲಾವಿದರಿಂದ ಯಕ್ಷನಿಧಿಗೆ ಆರ್ಥಿಕ ಸಹಾಯ[ಬದಲಾಯಿಸಿ]

ಮಲ್ಪೆ ವಾಸುದೇವ ಸಾಮಗರು ಸಂಯಮಂ ತಿರುಗಾಟದ ಅನಂತರ ಪ್ರತಿ ವರ್ಷ ನಿರ್ದಿಷ್ಟ ಮೊತ್ತವನ್ನು ನೀಡಿ ಯಕ್ಷನಿಧಿಯನ್ನು ಬೆಳೆಸುತ್ತಿದಾರೆ. ಪ್ರಸ್ತುತ ವರ್ಷದಲ್ಲಿ ೫೦೦೦ರೂಪಾಯಿಗಳನ್ನು ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ನಡೆದ ರಘುರಾಮಾಭಿನಂದನಂ ಸಮಾರಂಭದಲ್ಲಿ ಸಂಸ್ಥೆಗೆ ೧೦,೦೦೦ ರೂಪಾಯಿಗಳ ನಿಧಿಯನ್ನು ನೀಡಿದ್ದು, ರಘುರಾಮಾಭಿನಂದನಂ ಸಮೀತಿಯ ನೆರವನ್ನು ಸಂಸ್ಥೆ ಸ್ಮರಿಸಿದೆ.

ತಾಳಮದ್ದಳೆ ಸಪ್ತಾಹ[ಬದಲಾಯಿಸಿ]

ಯಕ್ಷಗಾನ ವಾಚಿಕದ ಶ್ರೀಮಂತ ರೂಪವಾದ ತಾಳಮದ್ದಳೆ ಪ್ರಕಾರಕ್ಕೆ ಸಂಸ್ಥೆ ತನ್ನದೇ ಕೊಡುಗೆ ನೀಡುತ್ತಿದೆ.೨೦೦ನೇ ಇಸವಿಯಿಂದ ಪ್ರತಿ ವರ್ಷ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿಯೇ ಮೇ ತಿಂಗಳ ಕೊನೆಯ ವಾರ ತಾಮದ್ದಳೆ ಸಪ್ತಾಹವನ್ನು ಆಯೋಜಿಸುತ್ತ ಬಂದಿದೆ. ಮೊದಲ ಎರಡು ವರ್ಷ ತಾಲಮದ್ದಳೆ ಸ್ಪರ್ಧೆ ನಡೆಸಿ ಅದರ ಮಿತಿಯನ್ನು ಮನಗಂಡು ೨೦೦೧ರಿಂದ ಸಪ್ತಾಹ ರೂಪದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ಕಾಲಮಿತಿಯೊಂದಿಗೆ ನಿರ್ದಿಷ್ಟ ಉದ್ದೇಶ ಕಥಾ ಚೌಕಟ್ಟಿನೊಂದಿಗೆ ಇದನ್ನು ಸಂಯೋಜಿಸಲಾಗುತ್ತಿದೆ.ಪ್ರಸಂಗದ ಆಶಯ ಪಾತ್ರ ಪದ್ಯ ಸೂಚಿ ಬೇರೆ ಬೇರೆ ಭಾಗಕ್ಕೆ ಸಮಯ ವಿಂಗಡಣೆ ಇತ್ಯಾದಿಗಳನ್ನು ಮೊದಲೇ ಕಲಾವಿದರಿಗೆ ತಿಳಿಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಕಲಾತ್ಮಕವಾಗಿ ರೂಪಗೊಳ್ಳುವ ಎಲ್ಲ ಪೂರ್ವಭಾವಿ ಸಿದ್ಧತೆಯನ್ನು ಮಾಡಲಾಗುತ್ತದೆ. ತಾಳಮದ್ದಳೆಯ ಕ್ಷೇತ್ರದಲ್ಲಿ ಪರಿಣಿತರಾದ ಹಿರಿಯ ವಿದ್ವಾಂಸರಿಂದ ಅವಲೋಕನ ನಡೆಸಿ ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ. ಸಮಾರೋಪ ಸಮಾರಂಭದಂದು ಹಿರಿಯ ಅರ್ಥಧಾರಿಗಳಿಗೆ ಮಟ್ಟಿ ಮುರಲೀಧರ ರಾವ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.