ವಿಷಯಕ್ಕೆ ಹೋಗು

ಯಕ್ಷಗಾನದ ಪ್ರಸಂಗ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ

Mangalore yakshagana,poothini

ಯಕ್ಷಗಾನವು ಒಂದು ಜನಪದ ಕಲೆಯಾಗಿದೆ. ಇದರಲ್ಲಿ ಹಿಮ್ಮೇಳ ಮುಮ್ಮೇಳ ಕಲಾವಿದರೆಂಬ ೨ ವಿಧಗಳಿವೆ. ಹಿಮ್ಮೇಳದಲ್ಲಿ ಭಾಗವತರು, ಮದ್ದಳೆಗಾರ,ಚೆಂಡೆವಾದಕ,ಚಕ್ರತಾಳ ಮತ್ತು ಶೃತಿ ನುಡಿಸುವವ(ಹಾರ್ಮೋನಿಯಂ) ಕಲಾವಿದರಿದ್ದರೆ, ಮುಮ್ಮೇಳದಲ್ಲಿ ಪಕಡಿ ವೇಷ,ಬಣ್ಣದ ವೇಷ ಸ್ತ್ರೀವೇಷಗಳ ಪಾತ್ರಧಾರಿಗಳಿದ್ದಾರೆ.

ಯಕ್ಷಗಾನ4

ಯಕ್ಷಗಾನದ ಹಿಮ್ಮೇಳ ಕಲಾವಿದರು

[ಬದಲಾಯಿಸಿ]

ಭಾಗವತ(ರು)

[ಬದಲಾಯಿಸಿ]

ಪೋಷಾಕು: ಗರ್ಭಸುತ್ತಿ ಮುಂಡಾಸು, ಕಪ್ಪು ಡವರಂಗಿ(ಕೋಟು) ಮತ್ತು ಕೊರಳಿಗೆ ಗುಂಡುಸರ, ಹಣೆಯ ಮೇಲೆ ಗಂಧದಲ್ಲಿ ಉದ್ದನಾಮ ಮತ್ತು ಅದರ ಎರಡೂ ಬದಿಗಳಲ್ಲಿ ಅಡ್ಡಗೀರು. ಯಕ್ಷಗಾನ ಪ್ರದರ್ಶನದ ಪ್ರಮುಖ ವ್ಯಕ್ತಿ. ಸಾಂಪ್ರಾದಾಯಿಕವಾಗಿ ಮೇಳದ ಪ್ರಧಾನ ವ್ಯಕ್ತಿ ಮತ್ತು ಸಂಚಾಲಕ ಕೂಡ. ಆಟ ತಾಳಮದ್ದಳೆಗೆ ಪ್ರಸಂಗದ ಪದ್ಯಗಳನ್ನು ಹಾಡುವುದು ಇವನ ಮುಖ್ಯ ಕಾರ್ಯ. ರಂಗದ ಲಯ, ಗತಿಗಳ ನಿರ್ಣಯ, ಸಮಯ ಹೊಂದಾಣಿಕೆ, ರಂಗ ನಿರ್ದೇಶನಗಳು ಇವನಿಗೆ ಸೇರುತ್ತದೆ. ಪಾತ್ರಗಳ ವಿತರಣೆ, ಚೌಕಿಯಲ್ಲಿ ಕಲಾವಿದರ ಶಿಸ್ತು ಇವನ ವ್ಯಾಪ್ತಿಯ ಕೆಲಸಗಳು. ಹಿಂದೆ ಪ್ರಸಂಗ ನಿರ್ಣಯವೂ ಇವನದ್ದಾಗಿತ್ತು ಈಗ ವ್ಯವಸ್ಥಾಪನಿಗೆ ಅದರ ಹೊಣೆ ಸಂದಿದೆ. ಪ್ರದರ್ಶನದ ಮಧ್ಯೆ ಅಲ್ಲಲ್ಲಿ ಭಾಗವತನು ಮಾತಿಗೆ ಒತ್ತು ಕೊಟ್ಟು, ಜಾಗಟೆ ತಾಳಗಳ ಒತ್ತು ಕೊಟ್ಟು, ಮಾತು ಸೇರಿಸಿ, ವೇಷಧಾರಿಗಳಿಗೆ ನೆನಪಿಸಿಕೊಟ್ಟು ಎಚ್ಚರಿಕೆ ನೀಡಿ, ಸ್ವಾರಸ್ಯಕರವಾಗುವಂತೆ ಮಾಡುತ್ತಾನೆ. ಎಲ್ಲಾಪಾತ್ರಗಳೂ ಸ್ವಗತವನ್ನು ಭಾಗವತರಲ್ಲಿ ಮಾಡುತ್ತಾರೆ. ಆಗ ಈತನು ಹೂಂಗುಟ್ಟುತ್ತಾ, ಪ್ರಶ್ನೆ ಕೇಳುತ್ತಾ, ಮಾತಿಗೆ ಬಲ ಕೊಡುವನು. ಸಂದರ್ಭಕ್ಕೆ ಅನುಗುಣವಾಗಿ ಪದ್ಯಗಳನ್ನು ಹೆಚ್ಚುವರಿಯಾಗಿ ಮತ್ತು ಮೊಟಕುಗೊಳಿಸುತ್ತಾನೆ.


ಜಾಗಟೆ

[ಬದಲಾಯಿಸಿ]

ಭಾಗವತರು ಹಾಡುಗಾರಿಕೆಗೆ ಬಳಸುವ ತಾಳವಾದ್ಯ: ಕಂಚಿನ ಗಂಟೆ, ಕಂಚು-ಬೆಳ್ಳಿ ಮಿಶ್ರಣ ಅಥವಾ ಕಬ್ಬಿಣದಿಂದ ತಯಾರಿಸಿರುತ್ತಾರೆ. ಇದು ವ್ಥತ್ತಾಕಾರದಲ್ಲಿದ್ದು ಬದಿಗೆ ಹಗ್ಗ ಸಿಕ್ಕಿಸಲು ಎರಡು ತೂತುಗಳಿವೆ.

ಜಾಗಟೆ ಕೋಲು

[ಬದಲಾಯಿಸಿ]

ಜಾಗಟೆ ಬಡಿಯಲು ಬಳಸುವ ಕೋಲು. ಜಿಂಕೆಯ ಕೊಂಬು ಅಥವಾ ಮರದ ತುಂಡಿನಲ್ಲಿ ತಯಾರಿಸಿರುತ್ತಾರೆ.

ಚೆಂಡೆ

[ಬದಲಾಯಿಸಿ]

ರಚನೆ: ಚೆಂಡೆಯ ಉದ್ದ 15 ರಿಂದ 17 ಇಂಚು ಮತ್ತು ಬಾಯಿಯ ಅಳತೆ 8ರಿಂದ 10 ಇಂಚು ವ್ಯಾಸದ್ದಾಗಿದೆ. ಇದಕ್ಕೆ ಅಡಿಭಾಗದಲ್ಲಿ ಏಳರಿಂದ ಹತ್ತು ಕವಳ(ಚರ್ಮ)ಗಳನ್ನೂ ಮೇಲ್ಬದಿಗೆ ಒಂದು ಚರ್ಮವನ್ನೂ ಮುಚ್ಚುವರು. ಈ ಚರ್ಮವು ದನದ ಕರುವಿನ ಅಥವಾ ಆಡಿದ್ದಾಗಿರುತ್ತದೆ. ಚೆಂಡೆಯ ಮುಚ್ಚಿಗೆಯ ಅಂಚಿಗೆ ಹನ್ನೆರಡು ಕಣ್ಣು(ತೂತು)ಗಳಿರುತ್ತದೆ. ಚೆಂಡೆಯ ಚರ್ಮವನ್ನು ಬಿಗಿಯುವ ಹಗ್ಗಗಳು ಊರ ಸೆಣಬು ಅಥವಾ ಕೋಲು ನಾರಿನವು.ಈಗ ಫೈಬರ್ ಹಗ್ಗಗಳನ್ನು ಬಳಸುತ್ತಾರೆ. ಚೆಂಡೆಯು ಹಿಮ್ಮೇಳ ವಾದ್ಯವಾಗಿದ್ದು, ನಿಂತುಕೊಂಡು ಹೆಗಳಿಗೆ ತೂಗುಹಾಕಿ ಮೊಣಕಾಲಿನ ಬಳಿ ಬಾರಿಸುವ ಬದಿ ಬರುವಂತೆ ಮಾಡಿ ಬಾರಿಸುತ್ತಾರೆ. ಭಾಗವತನ ಎಡಭಾಗದಲ್ಲಿ ನಿಂತಿರುತ್ತಾನೆ. ಹಿಂದೆ ಒಂದು ಕೋಲು ಮತ್ತು ಒಂದು ಕೈಯನ್ನು ಬಳಸಿ ಬಾರಿಸುತ್ತಿದ್ದರು. ಕ್ರಮೇಣ ಎರಡು ಕೋಲುಗಳಿಂದ ಬಾರಿಸುವ ಕ್ರಮ ಬಳಕೆಗೆ ಬಂತು. ಚಂಡೆ ಒಂದು ವೀರವಾದ್ಯವಾಗಿದ್ದು ಸೌಮ್ಯ ಪದಗಳಿಗೆ ಬಾರಿಸುವುದು ವಿರಳ.

ಮದ್ದಳೆ

[ಬದಲಾಯಿಸಿ]

ರಚನೆ: ಮರದ ಟೊಳ್ಳು ಕಳಸಿಗೆ ಎರಡೂ ಕಡೆ ಚರ್ಮ ಮಚ್ಚಿರರತ್ತದೆ. ಅಳತೆ: 20ರಿಂದ 25ಇಂಚು. ಸುತ್ತಳತೆ ಮಧ್ಯದ ಡೊಳ್ಳಿನಲ್ಲಿ 30-32 ಇಂಚು. ಎಡಬದಿ ಬಾಯಿ ಅಳತೆ ಸುಮಾರು 7ಇಂಚು.ಇದು ಶುೃತಿಗನುಸಾರವಾಗಿ ಎಂದರೆ ಹಾರ್ಮೋನಿಯಂನ ಬಿಳಿಮೂರು, ಬಿಳಿನಾಲ್ಕು, ಕಪ್ಪುಮೂರು, ಕಪ್ಪುಐದು ಹೀಗೆ ಐದು ಮನೆಗಳ ಶುೃತಿಗೆ ಉದ್ದ 22ಇಂಚು. ಡೊಳ್ಳಿನ ಅಳತೆ 29ಇಂಚು. ಬಲಬಾಯಿ 5¾ಇಂಚು. ಎಡಬಾಯಿ6ಳಿಇಂಚು. ಮದ್ದಳೆಯೆಂಬುದು ಯಕ್ಷಗಾನದ ಸ್ಥಾಯಿ ಹಿಮ್ಮೇಳ ವಾದ್ಯ. ಹಿಂದೆ ರಂಗದಲ್ಲಿ ಮೇಜು ಅಥವಾ ಮಂಚ ಬರುವ ಮೊದಲು ಮದ್ದಳೆಯನ್ನು ಸೊಂಟಕ್ಕೆ ಕಟ್ಟಿಕೊಂಡು ವಾದಕನು ನಿಂತುಕೊಂಡು ಬಾರಿಸುವ ಕ್ರಮವಿತ್ತು. ಹಿಂದೆ ಎಲ್ಲಾ ತಿಟ್ಟುಗಳಲ್ಲೂ ಬಾರಿಸುವ ಕ್ರಮ ಒಂದೇ ರೀತಿಯಾಗಿತ್ತು. ಆದರೆ ಈಗ ಶುೃತಿಗಳನ್ನು ಏರಿಸುವ ದೃಷ್ಟಿಯಿಂದ 12 ಇಂಚಿನಿಂದ 18 ಇಂಚಿ ಉದ್ದದ, 5ರಿಂದ 3ಳಿ ಇಂಚಿನವರೆಗಿನ ಮದ್ದಳೆಗಳೂ ಬಳಕೆಯಲ್ಲಿವೆ.

ಚಕ್ರತಾಳ

[ಬದಲಾಯಿಸಿ]

ಕಂಚಿನ ದೊಡ್ಡ ತಾಳ. ಸುಮಾರು 3-4ಇಂಚು ವ್ಯಾಸದ ಎರಡು ಚಕ್ರಗಳಂತಿರುವ ವಾದ್ಯ. ಇದನ್ನು ಚೆಂಡೆಗೆ ಹಿಮ್ಮೇಳವಾಗಿ ಬಳಸುತ್ತಾರೆ. ಮದ್ದಳೆ ಮಾತ್ರ ಬಾರಿಸುವಾಗ ಚಕ್ರತಾಳವನ್ನು ಬಾರಿಸುವುದಿಲ್ಲ.


ಹಾರ್ಮೋನಿಯಂ:

ಶುೃತಿಗಾಗಿ ಬಳಸುವ ವಾದ್ಯ. ಭಾಗವತನಿಗೆ ಮತ್ತು ವಾದ್ಯಗಾರರಿಗೆ ಆಧಾರವಾಗಿರುತ್ತದೆ.


ಯಕ್ಷಗಾನದಲ್ಲಿನ ರಾಗಗಳು,ತಾಳಗಳು,ಅಕ್ಷರಕಾಲ,

[ಬದಲಾಯಿಸಿ]

ರಾಗಗಳು

[ಬದಲಾಯಿಸಿ]
 1. ನಾಟಿ,
 2. ಮಧ್ಯಮಾವತಿ,
 3. ಸೌರಾಷ್ಟ್ರ,
 4. ಬೈರವಿ
 5. ಬಿಲಹರಿ,
 6. ಮೋಹನ,
 7. ಸಾವೇರಿ
 8. ಶಂಕರಾಭರಣ,
 9. ಬೇಗಡೆ,
 10. ಕಲ್ಯಾಣಿ,
 11. ಅರಭಿ,
 12. ಕಾಂಬೋದಿ,
 13. ಮುಖಾರಿ,
 14. ತೋಡಿ,
 15. ತುಜಾವಂತು,
 16. ಅಠಾಣ,
 17. ದೇವಗಾಂಧಾರಿ,
 18. ಕಾಫಿ,
 19. ಹಿಂದೋಳ,
 20. ಖರಹರಪ್ರಿಯ,
 21. ಸುರುಟಿ,
 22. ನವರೋಜು,
 23. ಪಂತುವರಾಲಿ,
 24. ಹಂಸಾನಂದಿ,
 25. ದೇಶ್,
 26. ಪುರ್ವಿಕಲ್ಯಾಣಿ,
 27. ಬಹುದಾರಿ,
 28. ಚಾರುಕೇಶಿ,
 29. ಸಾರಂಗ,
 30. ಕೇದಾರ,
 31. ವಾಸಂತಿ,
 32. ಕಲಾವತಿ,
 33. ವೃಂದಾವ£ಲ್ಲಿ ಸಾರಂಗ,
 34. ಭೂಪಾಲಿ,
 35. ಚಾಂದ್,
 36. ಭೇಹಾಗ್,
 37. ಕಾನಡ


ತಾಳಗಳು

[ಬದಲಾಯಿಸಿ]
 1. ತ್ರಿವುಡೆತಾಳ (ನಿಧಾನ ಮತ್ತು ತ್ವರಿತ)
 2. ಝಂಪೆತಾಳ (ನಿಧಾನ ಮತ್ತು ತ್ವರಿತ)
 3. ಆದಿತಾಳ
 4. ಏಕತಾಳ (ನಿಧಾನ ಮತ್ತು ತ್ವರಿತ)
 5. ರೂಪಕತಾಳ
 6. ಅಷ್ಟತಾಳ (ನಿಧಾನ ಮತ್ತು ತ್ವರಿತ)
 7. ಚೌತಾಳ
 8. ತೈತ ತಕಿಟ
 9. ತಿತ್ತಿತ್ತೈತಾಳಗಳ ಅಕ್ಷರ ಕಾಲದ ವಿಭಜನೆ

[ಬದಲಾಯಿಸಿ]
 • ಮಟ್ಟಿತಾಳ =6ಅಕ್ಷರ ಕಾಲ
 • ರೂಪಕತಾಳ =6ಅಕ್ಷರ ಕಾಲ
 • ಝಂಪೆತಾಳ =5ಅಕ್ಷರ ಕಾಲ
 • ತ್ರಿವುಡೆತಾಳ =7ಅಕ್ಷರ ಕಾಲ
 • ಅಷ್ಟತಾಳ=14ಅಕ್ಷರ ಕಾಲ
 • ಏಕತಾಳ =4ಅಕ್ಷರ ಕಾಲ
 • ಆದಿತಾಳ =8ಅಕ್ಷರ ಕಾಲ

ಕುಣಿತಗಳಲ್ಲಿ ತಾಳದ ನಡೆ

[ಬದಲಾಯಿಸಿ]
 • ತ್ರಿವುಡೆತಾಳ - ತಕಿಟ ತಕದಿಮಿ
 • ಝಂಪೆತಾಳ - ತಕತಕಿಟ
 • ರೂಪಕತಾಳ - ತಕತಕಧಿಮಿತಕ
 • ಅಟತಾಳ(ಅಷ್ಟ) – ತಕಿಟತಕಧಿಮಿ
 • ಏಕತಾಳ - ತಾಕಾಧೀಮೀ
 • ಆದಿತಾಳ - ತಕಧಿಮಿ ತಕಜಣು
 • ಮಟ್ಟೆತಾಳ - ದೀ ತದ್ದಿನ್ನಾ