ವಿಷಯಕ್ಕೆ ಹೋಗು

ಮ್ಯಾಕರೋನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನೆಯಲ್ಲಿ ತಯಾರಿಸಿದ ಮ್ಯಾಕರೋನಿ ಮತ್ತು ಗಿಣ್ಣು. ಒಣಗಿದ ಮೂಲಿಕೆಗಳು ಮತ್ತು ಪುಡಿಮಾಡಿದ ಮೆಣಸನ್ನು ಸೇರಿಸಲಾಗಿದೆ

ಮ್ಯಾಕರೋನಿ ಕಿರಿದಾದ ನಳಿಕೆಗಳಂತೆ ಆಕಾರ ಹೊಂದಿರುವ ಒಣ ಪಾಸ್ತಾ ಆಗಿದೆ. ಡ್ಯೂರಮ್ ಗೋಧಿಯಿಂದ ತಯಾರಿಸಲ್ಪಡುವ ಮ್ಯಾಕರೋನಿಯನ್ನು ಸಾಮಾನ್ಯವಾಗಿ ಸಣ್ಣದಾದ ಉದ್ದದ್ದಾಗಿ ಕತ್ತರಿಸಲಾಗುತ್ತದೆ; ಬಾಗಿದ ಮ್ಯಾಕರೋನಿಯನ್ನು ಎಲ್ಬೊ ಮ್ಯಾಕರೋನಿ ಎಂದು ಕರೆಯಬಹುದು. ಕೆಲವು ಮನೆ ಯಂತ್ರಗಳು ಮ್ಯಾಕರೋನಿ ಆಕಾರಗಳನ್ನು ಮಾಡಬಲ್ಲವಾದರೂ, ಬಹುತೇಕ ಪಾಸ್ತಾದಂತೆ ಮ್ಯಾಕರೋನಿಯನ್ನು ಸಾಮಾನ್ಯವಾಗಿ ವಾಣಿಜ್ಯಿಕವಾಗಿ ಬೃಹತ್ ಪ್ರಮಾಣದ ನಿಸ್ಸರಣದ ಮೂಲಕ ತಯಾರಿಸಲಾಗುತ್ತದೆ. ಪಾಸ್ತಾ ಯಂತ್ರದಿಂದ ಹೊರಬರುತ್ತಿದ್ದಂತೆ ಪಾಸ್ತಾ ನಳಿಕೆಯ ತದ್ವಿರುದ್ಧ ತುದಿಗಳಲ್ಲಿ ನಿಸ್ಸರಣದ ಭಿನ್ನ ವೇಗದ ಮೂಲಕ ಡೊಂಕು ಆಕಾರವನ್ನು ಸೃಷ್ಟಿಸಲಾಗುತ್ತದೆ.

ಇತರ ಬಗೆಯ ಪಾಸ್ತಾದಿಂದ ತಯಾರಿಸಲ್ಪಡುವ ಖಾದ್ಯಗಳಂತೆ, ಮ್ಯಾಕರೋನಿ ಮತ್ತು ಗಿಣ್ಣು ಉತ್ತರ ಅಮೇರಿಕಾದಲ್ಲಿ ಒಂದು ಜನಪ್ರಿಯ ಖಾದ್ಯವಾಗಿದೆ, ಮತ್ತು ಇದನ್ನು ಹಲವುವೇಳೆ ಎಲ್ಬೊ ಮ್ಯಾಕರೋನಿಯಿಂದ (ಮೊಣಕೈ ಆಕಾರದ ಮ್ಯಾಕರೋನಿ) ತಯಾರಿಸಲಾಗುತ್ತದೆ. ಇದೇ ಖಾದ್ಯವು ಗ್ರೇಟ್ ಬ್ರಿಟನ್‍ನಲ್ಲೂ ಜನಪ್ರಿಯವಾಗಿದೆ, ಮತ್ತು ಅಲ್ಲಿಂದ ಹುಟ್ಟಿಕೊಂಡಿದೆ.[][] ಕ್ರೀಮ್ಡ್ ಮ್ಯಾಕರೋನಿ ಎಂಬ ಹೆಸರಿನ ಒಂದು ಸಿಹಿಯಾದ ಮ್ಯಾಕರೋನಿ ಭಕ್ಷ್ಯವು ಹಾಲು ಮತ್ತು ಸಕ್ಕರೆಯನ್ನು ಹೊಂದಿರುತ್ತದೆ. ಇದು ಕೂಡ ಬ್ರಿಟಿಷರಲ್ಲಿ ವಿಕ್ಟೋರಿಯನ್ ಯುಗದ ಅವಧಿಯಲ್ಲಿ ಜನಪ್ರಿಯವಾಗಿತ್ತು.[]

ಉಲ್ಲೇಖಗಳು

[ಬದಲಾಯಿಸಿ]
  1. Beeton, Isabella; Mary), Mrs Beeton (Isabella (27 January 2018). "Mrs Beeton's Household Management". Wordsworth Editions.
  2. "Macaroni cheese". BBC Food.
  3. Beeton, Isabella; Humble, Nicola (2008-06-12). Mrs Beeton's Book of Household Management: Abridged Edition (in ಇಂಗ್ಲಿಷ್). Oxford University Press. ISBN 9780199536337.