ಮೊಹಮ್ಮದ್ ಇರ್ಫಾನ್
Mohammad Irfan | ||||
ಚಿತ್ರ:Flag of Pakistani.svg [[ಕ್ರಿಕೆಟ್ ತಂಡ|]] | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | Mohammad Irfan | |||
ಹುಟ್ಟು | 06 06 1982 | |||
Gaggu Mandi, Punjab, ಪಾಕಿಸ್ತಾನ | ||||
ಪಾತ್ರ | Bowler | |||
ಬ್ಯಾಟಿಂಗ್ ಶೈಲಿ | Right-hand bat | |||
ಬೌಲಿಂಗ್ ಶೈಲಿ | Left-arm medium-fast | |||
ODI ಪಾದಾರ್ಪಣೆ (cap 178) | 10 September 2010: v England | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
2009/10–present | Khan Research Laboratories | |||
ವೃತ್ತಿಜೀವನದ ಅಂಕಿಅಂಶಗಳು | ||||
FC | ||||
ಪಂದ್ಯಗಳು | 10 | |||
ಒಟ್ಟು ರನ್ನುಗಳು | 1 | |||
ಬ್ಯಾಟಿಂಗ್ ಸರಾಸರಿ | – | |||
೧೦೦/೫೦ | 0/0 | |||
ಅತೀ ಹೆಚ್ಚು ರನ್ನುಗಳು | 8* | |||
ಬೌಲ್ ಮಾಡಿದ ಚೆಂಡುಗಳು | 2056 | |||
ವಿಕೆಟ್ಗಳು | 43 | |||
ಬೌಲಿಂಗ್ ಸರಾಸರಿ | 28.76 | |||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 4 | |||
೧೦ ವಿಕೆಟುಗಳು ಪಂದ್ಯದಲ್ಲಿ | 1 | |||
ಶ್ರೇಷ್ಠ ಬೌಲಿಂಗ್ | 7/113 | |||
ಕ್ಯಾಚುಗಳು /ಸ್ಟಂಪಿಂಗ್‍ಗಳು | 0/– | |||
ದಿನಾಂಕ 18 October, 2009 ವರೆಗೆ. |
ಮೊಹಮ್ಮದ್ ಇರ್ಫಾನ್ (ಜನನ ೬ ಜೂನ್ ೧೯೮೨) ಒಬ್ಬ ಪಾಕಿಸ್ತಾನದ ಎಡಗೈ ಮಧ್ಯಮವೇಗದ ಬೋಲರ್; ಇವರ ಜನ್ಮಸ್ಥಳ ಪಂಜಾಬ್. ಅವರ ಎತ್ತರ ೭ ಅಡಿ ೧ ಇಂಚ್ ಇದೆ ಎಂದು ಹೇಳಲಾಗಿದ್ದು, ಅದು ನಿಜವಾಗಿದ್ದಲ್ಲಿ ಇಂದಿನವರೆಗೆ ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿದವರಲ್ಲಿ ಅವರೇ ಅತಿ ಎತ್ತರದ ವ್ಯಕ್ತಿಯಾಗುತ್ತಾರೆ.[೧]
ಮರಳಿ ಕ್ರಿಕೆಟ್ ಗೆ
[ಬದಲಾಯಿಸಿ]ಅವರು ತಮ್ಮ ೨೭ ಬೆಯ ವಯಸ್ಸಿನಲ್ಲಿ, ತಡವಾಗಿಯಾದರೂ,ಕ್ರಿಕೆಟ್ ರಂಗಕ್ಕೆ ಮರುಪ್ರವೇಶ ಮಾಡಲು ಸಾಧ್ಯವಾಗಲು ಕಾರಣರಾದವರೆಂದರೆ ಪಾಕಿಸ್ತಾನದ ಮಾಜಿ ವೇಗದ ಬೋಲರ್ ಗಳಾದ ನದೀಮ್ ಇಕ್ಬಾಲ್, ಮತ್ತು ಅಕೀಬ್ ಜಾವೇದ್ ಹಾಗೂ ಪಾಕಿಸ್ತಾನಿ ಅಭಿಮಾನಿಗಳ ಜಾಲತಾಣ pakpassion.net. ಲಾಹೋರ್ ನ ಎನ್ ಸಿ ಎ ಯಲ್ಲಿ ಮೊಹಮ್ಮದ್ ಇರ್ಫಾನ್ ತರಬೇತಿ ಪಡೆಯುತ್ತಿದ್ದಾಗ ಅವರನ್ನು ಕೆಲವು ಕ್ರಿಕೆಟ್ ಅಭಿಮಾನಿಗಳು ಪ್ರಾಯೋಜಿಸಿದರು. ಈ ಅಭಿಮಾನಿಗಳು ಈಗ Pakpassion.net ಮತ್ತು Cricistan.com ಜಾಲತಾಣಗಳಲ್ಲಿದ್ದಾರೆ.
ಮೊದಲ ದರ್ಜೆ ಕ್ರಿಕೆಟ್
[ಬದಲಾಯಿಸಿ]ಎನ್ ಸಿ ಎ ಯಲ್ಲಿ ತನ್ನ ತರಬೇತುದಾರರನ್ನು ಮೆಚ್ಚಿಸಿದ ಇರ್ಫಾನ್ ಗೆ ಹಬೀಬ್ ಬ್ಯಾಂಕ್ ಮತ್ತು ZTBL ಒಳಗೊಂಡಂತೆ ಹಲವಾರು ಮೊದಲ ದರ್ಜೆ ತಂಡಗಳಿಂದ ತಮ್ಮ ತಂಡವನ್ನು ಸೇರಲು ಆಹ್ವಾನಗಳು ಬಂದವು. ಆದರೆ KRL ನ ಆರಂಭ ಆಟಗಾರರಾದ ಅಝಾರ್ ಆಲಿಯವರು KRL ನ ತರಬೇತುದಾರ ರಷೀದ್ ಇಕ್ಬಾಲ್ ರಿಗೆ ಇರ್ಫಾನ್ ರ ಸಾಮರ್ಥ್ಯದ ಬಗ್ಗೆ ಮನದಟ್ಟು ಮಾಡಿಸಿ ಇರ್ಫಾನ್ ಗೆ ಖಾನ್ ರಿಸರ್ಚ್ ಲೆಬಾರೇಟರೀಸ್ (KRL) ನಲ್ಲಿ ಒಂದು ಅವಕಾಶ ನೀಡಲು ಒಪ್ಪಿಸಿದರು. ಪಾಕಿಸ್ತಾನ್ A ತಂಡದ ವಿರುದ್ಧ ಇರ್ಫಾನ್ ೪ ವಿಕೆಟ್ ಪಡೆದದ್ದನ್ನು ಕಂಡಿದ್ದ ಅಝರ್ ಆ ಕೂಡಲೆ KRL ಗೆ ಫೋನಾಯಿಸಿ ಇರ್ಫಾನ್ ತಮ್ಮ ತಂಡಕ್ಕೆ ಒಳ್ಳೆಯ ಸೇರ್ಪಡೆ ಆಗುವರೆಂದು ತಿಳಿಸಿದರು. ಇರ್ಫಾನ್ ರ ಸಾಮರ್ಥ್ಯವನ್ನು ಪರಿಶೀಲಿಸಲ್ಪಟ್ಟು, ಅವರು ಆಯ್ಕೆಯಾದರು; ಅವರ ಕನಸಿನ ಮೊದಲ ಭಾಗ ನನಸಾಯಿತು.
ಅಕ್ಟೋಬರ್ ೨೦೦೯ ರಲ್ಲಿ ನಡೆದ QEA ಟ್ರೋಫಿಯಲ್ಲಿ ಖಾನ್ ರಿಸರ್ಚ್ ಲೆಬಾರೇಟರೀಸ್ ಅನ್ನು ಪ್ರತಿನಿಧಿಸುವುದರ ಮೂಲಕ ಇರ್ಫಾನ್ ಪ್ರಥಮ ದರ್ಜೆ ಕ್ರಿಕೆಟ್ ಗೆ ಪ್ರವೇಶ ಮಾಡಿದರು. ಬಹಳ ರನ್ ಗಳನ್ನು ಪೇರಿಸಲಾದ ಈ ಪಂದ್ಯದಲ್ಲಿ ಇರ್ಫಾನ್ ಮಿತವಾಗಿ ರನ್ ನೀಡಿದರಾದರೂ ಯಾವುದೇ ವಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾಗಲಿಲ್ಲ.[೨] ತಮ್ಮ ಎರಡನೆಯ ಪಂದ್ಯದ ಎರಡನೆಯ ಇನಿಂಗ್ಸ್ ನಲ್ಲಿ ಇರ್ಫಾನ್ ೧೧೩ ರನ್ ಇತ್ತು ೭ ವಿಕೆಟ್ ಪಡೆದರು ಹಾಗೂ ಪಂದ್ಯದಲ್ಲಿ ಒಟ್ಟಾರೆ ೯ ವಿಕೆಟ್ ಪಡೆದರು. ವೃತ್ತಿಪರ ಕ್ರಿಕೆಟ್ ನಲ್ಲಿ ಅವರು ಪಡೆದ ಮೊದಲ ವಿಕೆಟ್ ಕಿರಿಯ ಪಾಕಿಸ್ತಾನಿ ಅಂತರರಾಷ್ಟ್ರೀಯ ಬ್ಯಾಟ್ಸ್ ಮನ್ ಆದ ಅಹ್ಮದ್ ಷೆಹ್ಝಾದ್ ರದ್ದಾಗಿತ್ತು. ಅವರು ಇಮ್ರಾನ್ ಫರ್ಹಾತ್ ರ ವಿಕೆಟ್ ಅನ್ನೂ ಪಡೆದರಲ್ಲದೆ ಹಸನ್ ರಾಝಾರಿಗೆ ಬೌನ್ಸರ್ ಹಾಕುವ ಮೂಲಕ ಪೆಟ್ಟು ನೀಡಿ, ನಂತರ ಅವರು ವಿಕೆಟ್ ಅನ್ನೂ ಪಡೆದರು.[೩]
ತಮ್ಮ ಮೊದಲ ದರ್ಜೆಯ ಕ್ರಿಕೆಟ್ ನ ಆರಂಭದಲ್ಲಿ ಇರ್ಫಾನ್ ವಿಶ್ವಾಸಾರ್ಹವಾಗಿ ಆಡುವುದನ್ನು ಮುಂದುವರಿಸಿದರು. ತಮ್ಮ ಮೂರನೆಯ ಪಂದ್ಯದಲ್ಲಿ ೧೧ ವಿಕೆಟ್ ಕಬಳಿಸುವುದರ ಮೂಲಕ ತಮ್ಮ ತಂಡವು ಚಾಂಪಿಯನ್ ಶಿಪ್ ನ ಮೊದಲ ಗೆಲುವನ್ನು ಕಾಣಲು ನೆರವಾದರು. ಅವರು ಮೊದಲ ಇನಿಂಗ್ಸ್ ನಲ್ಲಿ ೫/೨೭ ಮತ್ತು ಎರಡನೆಯ ಇನಿಂಗ್ಸ್ ನಲ್ಲಿ ೬/೯೬ ಬೋಲಿಂಗ್ ವಿಕ್ರಮವನ್ನು ಸಾಧಿಸಿದರು.[೪]
ಮೊದಲ ದರ್ಜೆ ಕ್ರಿಕೆಟ್ ಆಡಲು ಆಕರ್ಷಕವಾದ ಥೈಲಿಯನ್ನು ನೀಡುವುದಕ್ಕೆ ಮುನ್ನ ಅವರು ಈ ಕ್ರೀಡೆಯನ್ನೇ ತೊರೆಯುವ ಯೋಚನೆಮಾಡಿದ್ದರು ಹಾಗೂ ಒಂದು ಪ್ಲಾಸ್ಟಿಕ್ ಪೈಪ್ ಕಂಪನಿಯಲ್ಲಿ ಉದ್ಯೋಗದಲ್ಲಿ ತೊಡಗಿದ್ದರು. ಅವರ ಎತ್ತರವು ಸುಮಾರು ೬'೧೦ ಎಂದಿದ್ದರೂ ಅವರ ನಿರ್ದಿಷ್ಟ ಎತ್ತರ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಕ್ರಿಕೆಟ್ ಜಗತ್ತಿನ ಸರ್ವಕಾಲಿಕ ಆಟಗಾರರ ಪೈಕಿ ಇವರಷ್ಟು ಎತ್ತರ ಇರುವ ಮತ್ತೊಬ್ಬ ಏಕೈಕ ಆಟಗಾರರೆಂದರೆ ವಿನ್ ಜೆಫರ್ಸನ್.
ಇರ್ಫಾನ್ ನಡೆದುಬಂದ ದಾರಿಯನ್ನು ಸವಿವರವಾಗಿ ಹೊಂದಿರುವಂತಹ ಜಾಲತಾಣವೇ pakpassion.net blog Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ.
ಜನಪ್ರಿಯ ಸಾಮಾಜಿಕ ಅಂತರ್ಜಾಲವಾದ ಫೇಸ್ ಬುಕ್ ನಲ್ಲಿ ಇರ್ಫಾನ್ ರ 'ಅಭಿಮಾನಿಗಳ ಪುಟ' ಇದೆ ಹಾಗೂ cricistan.com Archived 2011-07-08 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಅಭಿಮಾನಿಗಳ ಒಂದು ಬ್ಲಾಗ್ ಇದ್ದು ಅದರಲ್ಲಿ ಇರ್ಫಾನ್ ರ ಕ್ರಿಕೆಟ್ ಸಾಧನೆಗಳ ವಿವರಗಳನ್ನು ಕಾಲಕಾಲಕ್ಕೆ ನೀಡಲಾಗುತ್ತದೆ.[೫]
ಐಪಿಎಲ್ - ಕೋಲ್ಕತ್ತಾ ನೈಟ್ ರೈಡರ್ಸ್ (೨೦೧೧-)
[ಬದಲಾಯಿಸಿ]೨೦೧೧ ಐಪಿಎಲ್ ಅವಧಿಯಲ್ಲಿ ತಾನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರವಾಗಿ ಆಡಲು ಒಂದು ಒಪ್ಪಂದದ ಕರಾರಿಗೆ ರುಜು ಹಾಕಿರುವುದಾಗಿ ಇರ್ಫಾನ್ ಘೋಷಿಸಿದರು. PCB ಮತ್ತು BCCI ತಮ್ಮ ಒಪ್ಪಿಗೆ ನೀಡಿದರೆ ಮಾತ್ರ ಈ ಒಪ್ಪಂದವು ಊರ್ಜಿತವಾಗುತ್ತದೆ. KKR ತಂಡದೊಡನೆ ಇರ್ಫಾನ್ ಆಡಲು ಒಂದು ಅವಕಾಶ ನೀಡಲು ಪ್ರಮುಖ ಕಾರಣವೆಂದರೆ ಪಾಕಿಸ್ತಾನದ ಮಾಜಿ ವೇಗದ ಬೋಲರ್ ಆದ ವಸೀಮ್ ಅಕ್ರಂ KKR ವ್ಯವಸ್ಥಾಪಕರೊಡನೆ ಇವರ ಬಗ್ಗೆ ಆಡಿದ ಭರವಸೆಯ ಮಾತುಗಳು. ಈ ಕರಾರಿನ ಪ್ರಕಾರ ಇರ್ಫಾನ್ ತಾವು ಆಡುವ ಪ್ರತಿ ಪಂದ್ಯಕ್ಕೆ $೭೫,೦೦೦ ಗಳು ಹಾಗೂ ಹೆಚ್ಚುವರಿ $೨,೦೦೦ ಗಳಿಸುತ್ತಾರೆ. ಆದರೆ ಈ ಒಪ್ಪಂದವನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯ [೬][೭][೮][೯] ಅಂಗೀಕರಿಸಬೇಕು. ಇರ್ಫಾನ್ ರ ಈ ಒಪ್ಪಂದದ ಕರಾರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ [೧೦] ನ ಅನುಮೋದನೆಯೂ ಅವಶ್ಯವಾಗಿದೆ.
ಅಂತರರಾಷ್ಟ್ರೀಯ ಮಟ್ಟಕ್ಕೆ ಪ್ರವೇಶ (೨೦೧೦)
[ಬದಲಾಯಿಸಿ]ಪಾಕಿಸ್ತಾನದ ತಂಡವು ೨೦೧೦ ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಬೆಟ್ಟಿಂಗ್ ಹಗರಣಕ್ಕೆ ಸಿಲುಕಿದ ಇಬ್ಬರು ಬೋಲರ್ ಗಳಾದ ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ಆಸಿಫ್ ರ ಬದಲಾಗಿ ಇರ್ಫಾನ್ ಆಡುವುದೆಂದು ಘೋಷಿಸಲಾಯಿತು.[೧೧]. ಇರ್ಫಾನ್ ಇಂಗ್ಲೆಂಡ್ ವಿರುದ್ಧ ೨೦೧೦ ರಲ್ಲಿ ಇಂಗ್ಲೆಂಡ್ ನಲ್ಲಿ ತಮ್ಮ ಮೊದಲ ಓಡಿಐ ಪಂದ್ಯವನ್ನು ಆಡಿದರು, ಆದರೆ ಮಳೆಯ ಕಾರಣ ಆ ಪಂದ್ಯವನ್ನು ೪೧ ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅವರು ೫.೩ ಓವರ್ ಗಳನ್ನು ಬೋಲ್ ಮಾಡಿ ೩೭ ರನ್ ಇತ್ತು, ಯಾವುದೇ ವಿಕೆಟ್ ಪಡೆಯಲಿಲ್ಲ ಹಾಗೂ ಝೋಮು ಹಿಡಿದ ಕಾರಣ ಕ್ರೀಡಾಂಗಣದಿಂದ ಹೊರತೆರಳಿದರು. ಅವರು ನೀಡಿದ ೩೭ ರನ್ ಗಳ ಪೈಕಿ ೧೫ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಮೊದಲ ಓವರ್ ನಲ್ಲೇ ಇತ್ತರು. ನಂತರ ಇಂಗ್ಲೆಂಡ್ ಆ ಪಂದ್ಯವನ್ನು ೨೪ ರನ್ ಗಳ ಅಂತರದಿಂದ ಗೆದ್ದಿತು.
ಉಲ್ಲೇಖಗಳು
[ಬದಲಾಯಿಸಿ]- ↑ ಮೊಹಮ್ಮದ್ ಇರ್ಫಾನ್ ಕ್ರಿಕಿನ್ಫೋ, ಪುನಶ್ಚೇತನ ೧೨ ಸೆಪ್ಟೆಂಬರ್ ೨೦೧೦.
- ↑ ಮೊಹಮ್ಮದ್ ಇರ್ಫಾನ್ ರ ಪಾದಾರ್ಪಣೆ : KRL v PIA ಸ್ಕೋರ್ ಪಟ್ಟಿ
- ↑ "ಇರ್ಫಾನ್ ಬಗ್ಗೆ ಡಾನ್ ನಲ್ಲಿ ಬಂದ ಲೇಖನ". Archived from the original on 2010-01-10. Retrieved 2011-04-13.
- ↑ "11 ವಿಕೆಟ್ ಉರುಳಿಸಿದ ಇರ್ಫಾನ್". Archived from the original on 2009-12-27. Retrieved 2011-04-13.
- ↑ ಇರ್ಫಾನ್ ರ ಫೇಸ್ ಬುಕ್ ಅಭಿಮಾನಿಗಳ ಪುಟ
- ↑ http://www.cricinfo.com/ಪಾಕಿಸ್ತಾನ/ಪರಿವಿಡಿ/ಕಥೆ/471812.html
- ↑ http://tribune.com.pk/ಕಥೆ/೩೭೬೯೯/ipl-ಕರಾರಿಗೆ[ಶಾಶ್ವತವಾಗಿ ಮಡಿದ ಕೊಂಡಿ] ಸಹಿ ಹಾಕಿದ ಮೊಹಮ್ಮದ್ ಇರ್ಫಾನ್/
- ↑ http://sify.com/ಕ್ರೀಡೆ/ಕೋಲ್ಕತ್ತಾ-ನೈಟ್-ರೈಡರ್ಸ್-೬-೧೦-ದೈತ್ಯ-ಪಾಕ್-ವೇಗದ ಬೋಲರ್ ಅನ್ನು-ಅಕ್ರಮ್ ರ ಶಿಫಾರಸಿನ ಮೇಲೆ ಕರಾರಿನ ಮೇಲೆ ತೆಗೆದುಕೊಂಡರು-ಸುದ್ದಿ-news-kikmklcajdh.html
- ↑ http://www.espnstar.com/ಕ್ರಿಕೆಟ್/ಇಂಡಿಯನ್-ಪ್ರೀಮಿಯರ್-ಲೀಗ್/ಸುದ್ದಿ/ವಿವರ/ಸಂಖ್ಯೆ೪೮೧೧೫೨/KKR-ಡೀಲ್-ಒಪ್ಪಿದ-ಇರ್ಫಾನ್/[ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.cricinfo.com/ಕ್ರಿಕೆಟ್/ಇಂಡಿಯನ್-ಪ್ರೀಮಿಯರ್-ಲೀಗ್-೨೦೧೧/ಪರಿವಿಡಿ/ಕಥೆ/೪೭೬೩೯೧.html
- ↑ http://news.bbc.co.uk/ಕ್ರೀಡೆ೧/hi/ಕ್ರಿಕೆಟ್/ಇತರೆ_ಅಂತರರಾಷ್ಟ್ರೀಯ/ಪಾಕಿಸ್ತಾನ/೮೯೬೪೮೭೩.stm[ಶಾಶ್ವತವಾಗಿ ಮಡಿದ ಕೊಂಡಿ]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Persondata templates without name parameter
- Persondata templates without short description parameter
- 1982 ರಲ್ಲಿ ಜನಿಸಿದವರು
- ಪ್ರಸ್ತುತದಲ್ಲಿ ಇರುವ ಜನರು
- ಪಾಕಿಸ್ತಾನಿ ಕ್ರಿಕೆಟಿಗರು
- ಪಾಕಿಸ್ತಾನದ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ಆಟಗಾರರು
- ಪಂಜಾಬಿಗಳು (ಪಾಕಿಸ್ತಾನ)
- ಕ್ರಿಕೆಟ್