ವಿಷಯಕ್ಕೆ ಹೋಗು

ಮೈಸೂರು ವಿ. ಸುಬ್ರಹ್ಮಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:My.V.S.jpg
'ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯ'

'ಪ್ರೊ. ಮೈಸೂರು ವಿ. ಸುಬ್ರಹ್ಮಣ್ಯ' ಎಂದು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮನೆಮಾತಾಗಿರುವ ಸುಬ್ರಹ್ಮಣ್ಯರವರು, ಮೈಸೂರ್ ಆಸ್ಥಾನವಿದ್ವಾನ್ ಹಾಗೂ ಸಂಗೀತಮನೆತನಕ್ಕೆ ಸೇರಿದವರು. ರಾಷ್ಟ್ರದ ಮಹಾನ್ ವೀಣಾವಾದಕ, 'ವೀಣೆ ಶೇಷಣ್ಣ,ನವರು ಇವರ ಮುತ್ತಾತ,[] ಹಾಗೂ 'ಸ್ವರಮೂರ್ತಿ ವಿ.ಎನ್.ರಾವ್' ಇವರ ಪಿತಾಶ್ರೀಯವರು. ಹಾಡುಗಾರಿಕೆ ಹಾಗೂ ವೀಣಾವಾದ್ಯವನ್ನು ನುಡಿಸುವುದರಲ್ಲಿ ಅತ್ಯಂತ ಪ್ರೌಢಿಮೆಯನ್ನು ಹೊಂದಿದ್ದರೂ, ಅವರ ಹೃದಯಕ್ಕೆ ಹತ್ತಿರವಾದದ್ದು ಸಂಗೀತದ ಬಗ್ಗೆ ಆಳವಾದ ಅಧ್ಯಯನ, ಮತ್ತು ವಿಮರ್ಶೆಯ ವಲಯ. ಈ ಕಕ್ಷದಲ್ಲಿ ಅದ್ಭುತ ನೈಪುಣ್ಯತೆಯನ್ನು ಹೊಂದಿದ್ದಾರೆ. ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದಾರೆ. ಪುಸ್ತಕ ಪ್ರಕಟಣೆ, ಮತ್ತು ಸಂಗೀತ ಕಮ್ಮಟಗಳನ್ನು ದೇಶದಾದ್ಯಂತ ಆಯೋಜಿಸಿ ಅವನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಅವರಿಗೆ ಹೆಚ್ಚಿನ ತೃಪ್ತಿ ಸಿಕ್ಕಿದೆ. ಸುಬ್ಯಹ್ಮಣ್ಯರವರು, ಉತ್ತಮ ಕಲಾವಿದರು, ಸಮರ್ಥಗುರುಗಳು, ಅತ್ಯುತ್ತಮ ಸಂಘಟಕರು, ಹಾಗೂ ಒಬ್ಬ ನಿಷ್ಣಾತ ಸಂಗೀತ ವಿಮರ್ಶಕರು. ಬೆಂಗಳೂರು ನಗರದ ಯಾವುದೇ ಸಂಗೀತ ಸಮಾರಂಭದ ಕಾರ್ಯಕ್ರಮಗಳ ಬಗ್ಗೆ ಸಮೀಕ್ಷೆಯನ್ನು ನಗರದ ಹೆಸರಾಂತ ಪತ್ರಿಕೆಗಳಾದ 'ಡೆಕ್ಕನ್ ಹೆರಾಲ್ಡ್ ' ಮತ್ತು ಪ್ರಜಾವಾಣಿ ಪತ್ರಿಕೆಗಳಲ್ಲಿ ಬರೆಯುತ್ತಾ ಬಂದಿದ್ದಾರೆ. 'ಕರ್ನಾಟಕ ಗಾನಕಲಾ ಪರಿಷತ್' ನಲ್ಲಿ ಇವರ ಕಾರ್ಯಚಟುವಟಿಕೆಗಳು ಅತಿ ಹೆಚ್ಚು. ಅವರಲ್ಲಿದ್ದ ಕೌಶಲ್ಯವನ್ನು ಹೊರತರುವಲ್ಲಿ ಕರ್ನಾಟಕ ಗಾನ ಪರಿಷದ್ ಬಹಳ ಸಹಕಾರಿಯಾಯಿತು. ಸುಬ್ರಹ್ಮಣ್ಯರವರು ಈ ಸಂಸ್ಥೆಗೆ ಬಹಳ ಉಪಕೃತರಾಗಿದ್ದಾರೆ. 'ಸಂಗೀತ ಮತ್ತು ನೃತ್ಯ ಕಲೆಗಳನ್ನು ಬೆಳೆಸಲು ಅನೇಕ ಸಂಘ ಸಂಸ್ಥೆಗಳ ಜೊತೆ ಸೇರಿ ಕೆಲಸಮಾಡುತ್ತಿದ್ದಾರೆ. ತಂದೆಯವರ ಹೆಸರಿನಲ್ಲಿ ಒಂದು ಸಂಸ್ಥೆಯನ್ನು ಸ್ಥಾಪಿಸಿ, ಪ್ರತಿವರ್ಷವೂ ರಾಷ್ಟ್ರಮಟ್ಟದಲ್ಲಿ ಒಬ್ಬ ಹಿರಿಯ ಗಾಯಕನಿಗೆಪ್ರಶಸ್ತಿ'ಯನ್ನೂ ಮತ್ತು ಹಿರಿಯ ಪಕ್ಕವಾದ್ಯ ಕಾರನಿಗೆ 'ವೀಣೆ ಶೇಷಣ್ಣ ಪ್ರಶಸ್ತಿ'ಯನ್ನೂ ಪ್ರದಾನಮಾಡುತ್ತಾ ಬಂದಿದ್ದಾರೆ.[]

ಚಿತ್ರ:Small.jpeg
'ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವಾರ್ಥ ಪ್ರೊಫೆಸರ್ ಪದವಿ ಪ್ರದಾನ ಸಮಾರಂಭದಲ್ಲಿ'

೨೦೦೬ ರ ಸಂಗೀತ ಗೋಷ್ಠಿ ಕಾರ್ಯಕ್ರಮ

[ಬದಲಾಯಿಸಿ]

'ಬೆಂಗಳೂರು ಗಾಯನ ಸಮಾಜದ ೩೮ ನೆಯ ಸಂಗೀತ ಗೋಷ್ಟಿ'ಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಹೆಗ್ಗಳಿಕೆ ಪ್ರೊ.ಸುಬ್ರಹ್ಮಣ್ಯರವರದು. 'ಕರ್ನಾಟಕ ವಾಗ್ಗೆಯ ವೈಭವ,' ಎನ್ನುವ ಸುಂದರ ಹಾಗೂ ಅರ್ಥಪೂರ್ಣ ತಥ್ಯವನ್ನು ಹೊಂದಿದ ಸಂಗೀತ ಗೋಷ್ಠಿ ಸಮಾರಂಭ ಸನ್ ೨೦೦೬ ಆಗಸ್ಟ್, ೧೪ ರ, ಸೋಮವಾರ ಬೆಳಿಗ್ಯೆ ಆರಂಭವಾಗಿ, ಸನ್. ೨೦೦೬ ರ, ೧೯ ರ ಶನಿವಾರ, ಮುಕ್ತಾಯವಾಯಿತು. ಆಗ ಅವರು ಎಲ್ಲ ಕಕ್ಷಗಳಲ್ಲೂ ತಪ್ಪದೆ ಉಪಸ್ಥಿತರಿದ್ದು, ವಿಶೇಷಜ್ಞರಾಗಿ ಸಂಗೀತಾಭ್ಯರ್ಥಿಗಳ ಗಾಯನದ ಗುಣಮಟ್ಟವನ್ನು ಅವಲೋಕಿಸಿ, ಕೆಲವು ತೃಟಿಗಳನ್ನು ಹೇಗೆ ಉತ್ತಮಪಡಿಸಬಹುದೆಂಬ ವಿಷಯಗಳ ಬಗ್ಗೆ, ಅವಲೋಕಿಸಿ, ತಿದ್ದಿ, ಸಭೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಛಾಯಾ ಚಿತ್ರಗಳ ಸಂಗ್ರಹ

[ಬದಲಾಯಿಸಿ]

ಹೆಸರಾಂತ ಸಂಗೀತಕಲಾವಿದರ ಛಾಯಾ ಚಿತ್ರಗಳನ್ನು ಸಂಗ್ರಹಿಸುವ ಗೀಳನ್ನು ಹೊಂದಿದ ಸುಬ್ರಹ್ಮಣ್ಯರು ದೇಶದಾದ್ಯಂತ ಹಲವಾರು ಸ್ಥಳಗಳಲ್ಲಿ ಪ್ರದರ್ಶಗಳನ್ನೂ ಏರ್ಪಡಿಸುತ್ತಾ ಬಂದಿರುವುದು ಇವರ ವಿಶೇಷತೆಗಳಲ್ಲೊಂದು. ಸನ್. ೨೦೦೧ ರಲ್ಲಿ ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಜೊತೆ ಮೈಸೂರ್ ಅಸೋಸಿಯೇಷನ್, ಮುಂಬಯಿ ನಲ್ಲಿ ನಡೆಸಿಕೊಟ್ಟ 'ಹರಿದಾಸ ನಾದಂಜಲಿ ಕಾರ್ಯಕ್ರಮ' ಬಹಳ ಜನರಿಗೆ ಪ್ರಿಯವಾಯಿತು. 'ದೂರದರ್ಶನ,' 'ಆಕಾಶವಾಣಿ', ಮೊದಲಾದ ಸಂಸ್ಥೆಗಳಿಗೆ ಕಾರ್ಯಕ್ರಮಗಳನ್ನು ರಚಿಸಿ ಕೊಟ್ಟು ಸಹಕರಿಸಿದ್ದಾರೆ. ಮತ್ತು ನಿರ್ದೇಶಿಸಿದ್ದಾರೆ ಸಹಿತ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯದಬಗ್ಗೆ ಆಳವಾಗಿ ಅಭ್ಯಾಸಮಾಡಿ ವಿಶೇಷ ಜ್ಞಾನವನ್ನು ಸಂಪಾದಿಸಿದ್ದಾರೆ. ಆಕಾಶವಾಣಿ, ದೂರದರ್ಶನ ಆಡಿಶನ್ ಸಮಿತಿ, ಮತ್ತು ಹಲವಾರು ತಜ್ಞರ ಸಮಿತಿಗಳು, ಪ್ರಶಸ್ತಿ ಪುರಸ್ಕಾರ ಸಮಿತಿಗಳು, 'ಮೈಸೂರ್ ಅರಮನೆಯ ಟ್ರಸ್ಟ್,', ಇತ್ಯಾದಿಗಳ ಜೊತೆ ಸಂಪರ್ಕವಿಟ್ಟುಕೊಂಡಿದ್ದಾರೆ.

ಸಂಗೀತ ಮತ್ತು ಶೃಂಗಾರ

[ಬದಲಾಯಿಸಿ]

'ಕರ್ನಾಟಕ ಗಾನ ಕಲಾ ಪರಿಷದ್, ಬೆಂಗಳೂರು, ಮತ್ತು ಮೈಸೂರ್ ಅಸೋಸಿಯೇಷನ್, ಮುಂಬಯಿ ಜೊತೆಗೂಡಿ ನಡೆಸಿಕೊಟ್ಟ 'ಯುವ ಸಮ್ಮೇಳನ', ಮತ್ತು ಮೈಸೂರ್ ಅಸೋಸಿಯೇಷನ್ ಏರ್ಪಡಿಸಿದ'ಸಂಗೀತ ಮತ್ತು ಶೃಂಗಾರ'ವೆಂಬ ಸಂಗೀತ ಸಮ್ಮೇಳನ ಬಹಳ ಮಂದಿ ಸಂಗೀತಾಸಕ್ತರಿಗೆ ಮತ್ತು ಸಂಗೀತ-ನೃತ್ಯಪಟುಗಳಿಗೆ ಬಹಳ ಉಪಯೋಗಕಾರಿಯಾಯಿತು.

ಗೌರವ, ಪ್ರಶಸ್ತಿಗಳು

[ಬದಲಾಯಿಸಿ]
  • ಸಂಗೀತ ಕಲಾರತ್ನ,
  • ಸಂಗೀತ ಕಲಾ ಭೂಷಣ
  • ಕರ್ನಾಟಕ ಕಲಾಶ್ರಿ
  • ಸಾಹಿತ್ಯ ಕಲಾಶ್ರೀ
  • ವಿಮರ್ಶಕರ ಪ್ರಶಸ್ತಿ
  • ಜ್ಞಾನ ಸರಸ್ವತಿ ಪೀಠ ಪುರಸ್ಕಾರ್,
  • ಆರ್ಟಿಸ್ಟ್ ಆಫ್ ದ ಯಿಯರ್, ಬೆಂಗಳೂರು ಗಾಯನ ಸಮಾಜ
  • ತುಮಕೂರು ವಿಶ್ವವಿದ್ಯಾಲಯ 'ಗೌರವಾರ್ಥ ಪ್ರೊಫೆಸರ್ ಪದವಿ' ಕೊಟ್ಟು ಸನ್ಮಾನಿಸಿದೆ.
  • ,’ಕಲಾವಲೋಕನ’-ಇವರ ಲೇಖನಗಳ ಸಂಗ್ರಹ, ಸದ್ಯದಲ್ಲೇ ಲೋಕಾರ್ಪಣೆಯಾಗಲಿದೆ.

ಕೃತಿ ಸಂಪಾದನೆ

[ಬದಲಾಯಿಸಿ]
  • ಮುರಳಿವಾಣಿ,
  • ಗಾನ ಕಲಾ ಮಂಜರಿ

ಉಲ್ಲೇಖಗಳು

[ಬದಲಾಯಿಸಿ]
  1. Veeneya Bedagu – Life & Music of Veena Seshanna Lec-Dem by Prof. Mysore V Subramanya @ Essae Music Foundation, 17 Mar 2012
  2. Veena Wonders, Vol. 3 M S Sheela, Prof. Mysore V. Subramanya & R. Rangarajan

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]