ವಿಷಯಕ್ಕೆ ಹೋಗು

ಮೈಸೂರು ಗಂಜೀಫಾ ಎಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಜೀಫಾ ಎಲೆಗಳ ಆಟ ಇಸ್ಪೀಟ್ ಆಟವನ್ನು ಹೋಲುವ ಭಾರತದ ಒಂದು ಪ್ರಾಚೀನ ಆಟ. ಮೂಲತಃ ಇದು ಪರ್ಷಿಯಾದಿಂದ ಬಂದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆದುದಾಗಿದೆ.

ಭಾರತದಲ್ಲಿ ಮುಖ್ಯವಾಗಿ ಎರಡು ಬಗೆಯ ಗಂಜೀಫಾ ಎಲೆಗಳಿದ್ದು, ಅವುಗಳೆಂದರೆ ಮೊಘಲ್ ಗಂಜೀಫಾ ಮತ್ತು ದಶಾವತಾರ ಗಂಜೀಫಾ. ಭಾರತದಲ್ಲಿ ಆಂಧ್ರ, ಒಡಿಶಾ, ವಿಷ್ಣುಪುರ (ಬಂಗಾಳ), ಸಾವಂತವಾಡಿ (ಮಹಾರಷ್ಟ್ರ)ಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ಇವು ಕೈಯಲ್ಲಿ ಬರೆದ ಅಥವಾ ಬಣ್ಣಹಾಕಿದ ಕಲೆಗಳನ್ನೊಳಗೊಂಡಿರುತ್ತವೆ.

ಇವೆಲ್ಲುವುಗಳಿಗಿಂತ ಭಿನ್ನವಾದುದೆಂದರೆ ಮೈಸೂರಿನ ಗಂಜೀಫಾ ಎಲೆಗಳು. ಇವುಗಳನ್ನು Mysore Chad Ganjifa ಎನ್ನುತ್ತಾರೆ. ಇವು ತಮ್ಮ ವಿಶಿಷ್ಟ ರೀತಿಯ ರಚನೆಗಳಿಂದ ಬೇರೆ ಗಂಜೀಫಾಗಳಿಗಿಂತ ಭಿನ್ನವಾಗಿವೆ. ಹತ್ತೊಂಬತ್ತನೇ ಶತಮಾನದ ಮೊದಲಲ್ಲಿ ಇವು ಮೈಸೂರಲ್ಲಿ ಅಭಿವೃದ್ಧಿಯಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರು ಇದನ್ನು ರಚಿಸಿ, ಪೋಷಿಸಿದರು. ಮೈಸೂರು ಗಂಜೀಫಾ ಎಲೆಗಳ ತಯಾರಿಕೆಯ ಕೇಂದ್ರವಾಗಿತ್ತು. ಅವರು ಅನೇಕ ರೀತಿಯ ಸಂಕೀರ್ಣ ಗಂಜೀಫಾ ಆಟಗಳನ್ನು ಅಭಿವೃದ್ಧಿಗೊಳಿಸಿದರು.[೧] ಒಂದು ಪಟ್ಟಿನಲ್ಲಿ 360 ಕಾರ್ಡ್‍ಗಳಿರುತ್ತಿದ್ದವು. ರಾಜರಿಂದ ರಚಿಸಲ್ಪಟ್ಟ 'ಶ್ರೀತತ್ವನಿಧಿ' ಕೃತಿಯ 'ಕೌತುಕನಿಧಿ' ವಿಭಾಗದಲ್ಲಿ ಈ ಆಟಗಳು ವಿವರಿಸಲ್ಪಟ್ಟಿವೆ ಹಾಗೂ ಈ ಕಾರ್ಡುಗಳ ಬಣ್ಣಗಳು ಸೂಚಿಸುವ ವಿನ್ಯಾಸಗಳು ತೋರಿಸಲ್ಪಟ್ಟಿವೆ. ೧೩ ಬಗೆಯ ಆಟಗಳು ಅದರಲ್ಲಿವೆ. ಹೆಚ್ಚಾಗಿ ಇದು ಅರಮನೆಗೆ ಸೀಮಿತವಾದ ಆಟವಾಗಿದ್ದರಿಂದ ಜನಸಾಮಾನ್ಯರಲ್ಲಿ ಈ ಆಟ ಜನಪ್ರಿಯವಾಗಲಿಲ್ಲ.

ಹದಿಮೂರು Mysore Chadಗಳು ಹೀಗಿವೆ.

 1. ಚಾಮುಂಡೇಶ್ವರಿ Chamundeshwari Chad
 2. ಜಗನ್ಮೋಹನ Jagad Mohan Chad
 3. ನವೀನ ದಶಾವತಾರ Navin Dashavatara
 4. ನವಗ್ರಹ Nav Grah
 5. ಪಂಚಪಾಂಡವ Panch Pandava Chad
 6. ದೇವಿ ದಶಾವತಾರಿ Devi Dasavatari Chad
 7. ದಿಕ್ಪಾಲ Dikpala Chad
 8. ಮನೋಹರ Manohar Chad
 9. ಸರ್ವಮಂಗಳ Sarva Mangala Chad
 10. ನವರತ್ನ Nav Ratna Chad
 11. ಸದ್ಯೋಜ್ಯಾತಾದಿ Sadye Jyatadi Chad
 12. ಕೃಷ್ಣರಾಜ Krishnaraj Chad
 13. ನವೀನ Navin Chad

ಈ ಮೈಸೂರು ಗಂಜೀಫಾ ಎಲೆಗಳು ತಮ್ಮ ವಿಶಿಷ್ಟತೆಯಿಂದ ಭಾರತದ ಭೌಗೋಳಿಕ ಸಂಕೇತಗಳಲ್ಲೊಂದಾಗಿ ನೋಂದಾಯಿಸಲ್ಪಟ್ಟಿದೆ.[೨]

ಉಲ್ಲೇಖಗಳು[ಬದಲಾಯಿಸಿ]

 1. Mysore Palace Paying Cards Archived 2016-11-22 ವೇಬ್ಯಾಕ್ ಮೆಷಿನ್ ನಲ್ಲಿ., Asia InCH Encyclopedia
 2. "ಆರ್ಕೈವ್ ನಕಲು". Archived from the original on 2013-08-26. Retrieved 2016-02-06.

ಹೊರಕೊಂಡಿಗಳು[ಬದಲಾಯಿಸಿ]