ಮೈತ್ರಿ ಬಾಗ್
ಮೈತ್ರಿ ಬಾಗ್ ಮೃಗಾಲಯವು (ಸಣ್ಣ ಮೃಗಾಲಯ ಉದ್ಯಾನ) ಭಾರತದ ಭಿಲಾಯಿಯಲ್ಲಿ ಸ್ಥಿತವಾಗಿದೆ. ಇದು ಈ ಪ್ರದೇಶದಲ್ಲಿನ ಅತಿ ದೊಡ್ಡ ಮೃಗಾಲಯವಾಗಿದೆ. ಈ ಮೃಗಾಲಯವು ೧೧೧ ಎಕರೆಗಳಷ್ಟು ಉದ್ಯಾನ ಪ್ರದೇಶವನ್ನು ಹೊಂದಿದೆ. ಭಾರತೀಯ ಉಕ್ಕು ಪ್ರಾಧಿಕಾರದ ಸಾರ್ವಜನಿಕ ಕ್ಷೇತ್ರ ಉದ್ಯಮವು ಇದನ್ನು ನಡೆಸುತ್ತಿದೆ.
ಇದನ್ನು ಸೇಲ್‍ನ ಭಿಲಾಯಿ ಉಕ್ಕಿನ ಕಾರ್ಖಾನೆಯು ಅಭಿವೃದ್ಧಿಪಡಿಸಿ ನಿರ್ವಹಿಸುತ್ತಿತ್ತು.[೧] ಇದನ್ನು ೧೯೭೨ನೇ ವರ್ಷದಲ್ಲಿ ಸ್ಥಾಪಿಸಲಾಯಿತು.
ಆಕರ್ಷಣೆಗಳು
[ಬದಲಾಯಿಸಿ]ಉಕ್ಕು ನಗರಿಯ ನಿವಾಸಿಗಳು ತಮ್ಮ ಕುಟುಂಬದವರೊಂದಿಗೆ ಉಕ್ಕು ತಯಾರಿಕೆಯ ತೀವ್ರತೆಯಿಂದ ಸಮಯ ಪಡೆದುಕೊಂಡಾಗ, ಮೈತ್ರಿ ಬಾಗ್ ಮನೋರಂಜನೆಗೆ ಶ್ರೇಷ್ಠ ಹಿನ್ನೆಲೆಯನ್ನು ಒದಗಿಸುತ್ತದೆ. ದೇಶದಲ್ಲಿನ ಅತಿ ದೊಡ್ಡ ಸಂಗೀತ ಕಾರಂಜಿಯು ಮೈತ್ರಿ ಬಾಗ್‍ನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಮೈತ್ರಿ ಬಾಗ್‍ನಲ್ಲಿ ಉತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಸೊಂಪಾದ ಹುಲ್ಲಿನ ಮೈದಾನಗಳಿವೆ. ಕೃತಕ ಸರೋವರದಲ್ಲಿನ ದೋಣಿವಿಹಾರ ಸೌಕರ್ಯಗಳು, ಆಟಿಕೆ ರೈಲು ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿಹಂಗಮ ನೋಟವನ್ನು ಒದಗಿಸುವ ಪ್ರಗತಿ ಮಿನಾರ್ ಇವೆ.
ಮುಖ್ಯ ಆಕರ್ಷಣೆಗಳೆಂದರೆ
- ಹುಲಿ
- ಸಿಂಹ (ಸಂಕರ)
- ಚಿರತೆ
- ಚುಕ್ಕೆಯುಳ್ಳ ಜಿಂಕೆ
- ಸಾಂಭಾರ್
- ಗುಲಾಬಿ ನೀರುಹಕ್ಕಿ
- ಪ್ಯಾರಕೀಟ್
- ಸಿಂಹದ ಬಾಲದ ಕೋತಿ
ಪಾವತಿಸಲ್ಪಟ್ಟ ಆಕರ್ಷಣೆಗಳು
[ಬದಲಾಯಿಸಿ]- ಕೃತಕ ಸರೋವರದಲ್ಲಿ ದೋಣಿವಿಹಾರ
- ಆಟಿಕೆ ರೈಲು
ಛಾಯಾಂಕಣ
[ಬದಲಾಯಿಸಿ]-
ಮೈತ್ರಿ ಬಾಗ್ ಸರೋವರದಲ್ಲಿ ಬಂಗಾಳ ಹುಲಿ
-
ಉದ್ಯಾನವನದಲ್ಲಿ ಸಾಂಭಾರ್ ಜಿಂಕೆ
-
ಮೈತ್ರಿ ಬಾಗ್‍ನ ಪ್ರವೇಶದ್ವಾರದ ವಿಗ್ರಹಗಳು
-
ಮೈತ್ರಿ ಬಾಗ್‍ನಲ್ಲಿ ಅಶೋಕ ಚಕ್ರ
-
ಸೋವಿಯಟ್ ಒಕ್ಕೂಟದ ಮೊದಲ ಉಪ ಪ್ರದಾನಿ ಕೊಸಿಗಿನ್ ೧೯೬೧ರಲ್ಲಿ ಭಿಲಾಯಿಗೆ ಭೇಟಿನೀಡಿದ ಸಂದರ್ಭದಲ್ಲಿ ಸಸಿಗಳನ್ನು ನೆಟ್ಟ ಸ್ಥಳದಲ್ಲಿ ಸ್ಮರಣಾರ್ಥ ಗುರುತು
-
ಮೈತ್ರಿ ಬಾಗ್‍ನ ಪ್ರವೇಶದ್ವಾರ
ಉಲ್ಲೇಖಗಳು
[ಬದಲಾಯಿಸಿ]- ↑ "Beef row: Bhilai Steel Plant cancels tender for zoo-animals' food". ದಿ ಟೈಮ್ಸ್ ಆಫ್ ಇಂಡಿಯಾ. 31 October 2015. Retrieved 3 February 2016.