ವಿಷಯಕ್ಕೆ ಹೋಗು

ಮೈತ್ರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಲ್ಲಭಿಯ ಮೈತ್ರಕ ರಾಜವಂಶವು ಪಶ್ಚಿಮ ಭಾರತದಲ್ಲಿ ಗುಜರಾತನ್ನು ಸು. ಕ್ರಿ.ಶ. ೪೭೫ ರಿಂದ ೭೭೬ರ ವರೆಗೆ ಆಳಿತು.

ಮೈತ್ರಕರು ವಿದೇಶದ ಬುಡಕಟ್ಟುಗಳೆಂದು ಕೆಲವು ವಿದ್ವಾಂಸರು ಹೇಳುತ್ತಾರೆ ಮತ್ತು ಮೈತ್ರಕರು ವಿದೇಶಿಯರಾದರೂ ಭಟಾರ್ಕನು ಸ್ಥಳಿಯನು ಎಂದು ಇನ್ನಿತರ ವಿದ್ವಾಂಸರು ಹೇಳುತ್ತಾರೆ. ಆದರೆ ಭಟಾರ್ಕನು ಸ್ವತಃ ಒಬ್ಬ ಮೈತ್ರಕನಾಗಿದ್ದು ಅನೇಕ ಯುದ್ಧಗಳಲ್ಲಿ ಜಯಗಳಿಸಿದ್ದನು ಎಂದು ನಂತರದ ವಾಚನ ಸಾಮಗ್ರಿಗಳು ಸರಿಪಡಿಸುತ್ತವೆ. ಮೈತ್ರಕ ಹೆಸರು ಸೂರ್ಯನ ಒಂದು ಹೆಸರಾದ ಮಿತ್ರಾ ಅಥವಾ ಸೂರ್ಯ ದೇವತೆಯಿಂದ ಹುಟ್ಟಿಕೊಂಡಿದೆ ಮತ್ತು ಮೈತ್ರಕರು ಸೂರ್ಯನ ಆರಾಧನೆಯತ್ತ ಒಲವುಳ್ಳವರಾಗಿದ್ದರು ಎಂದು ಒಬ್ಬ ವಿದ್ವಾಂಸನು ಸೂಚಿಸಿದನು.[೧][೨][೩] ಆದರೆ ಸಂಸ್ಕೃತ ಸಾಹಿತ್ಯದಲ್ಲಿ ಮಿತ್ರಾ ಮತ್ತು ಮಿಹಿರ ಶಬ್ದಗಳನ್ನು ಸೂರ್ಯ ಆರಾಧಕರು ಎಂಬ ಅರ್ಥದಲ್ಲಿ ಬಳಸಲಾಗಿಲ್ಲ. ಮೈತ್ರಕ ರಾಜರಲ್ಲಿ ಐದನೆಯವನಾದ ಧರಪಟ್ಟನು ಸೂರ್ಯ ಆರಾಧನೆಗೆ ಸಂಬಂಧಿಸಿದ ಏಕೈಕ ರಾಜನಾಗಿದ್ದನು. ಉಳಿದ ಎಲ್ಲ ರಾಜರು ಶೈವ ಪಂಥದ ಅನುಯಾಯಿಗಳಾಗಿದ್ದರು.

ಮೈತ್ರಕರು ಚಂದ್ರವಂಶದ ಕ್ಷತ್ರಿಯರಾಗಿದ್ದರು ಮತ್ತು ಅವರ ಮೂಲ ಬಹುಶಃ ಒಂದು ಕಾಲದಲ್ಲಿ ಮಥುರಾದ ಸುತ್ತಲಿನ ಪ್ರದೇಶವನ್ನು ಆಳುತ್ತಿದ್ದ ಮಿತ್ರ ರಾಜವಂಶದಿಂದಾಗಿತ್ತು ಎಂದು ಒಬ್ಬ ವಿದ್ವಾಂಸೆ ತೀರ್ಮಾನಿಸುತ್ತಾಳೆ. ಹಲವು ವಿದ್ವಾಂಸರು ಇದನ್ನು ಒಪ್ಪುತ್ತಾರೆ.

ಮೈತ್ರಕರು ತಮ್ಮ ರಾಜಧಾನಿ ವಲ್ಲಭಿಯಿಂದ ರಾಜ್ಯವಾಳುತ್ತಿದ್ದರು. ೭ನೇ ಶತಮಾನದ ಮಧ್ಯದಲ್ಲಿ ಅವರು ಹರ್ಷನ ಆಳ್ವಿಕೆಗೆ ಒಳಪಟ್ಟರು, ಆದರೆ ಹರ್ಷನ ಮರಣದ ನಂತರ ತಮ್ಮ ಸ್ವಾತಂತ್ರ್ಯವನ್ನು ಮತ್ತೆ ಗಳಿಸಿ ಸ್ಥಳೀಯ ಸ್ವಾಯತ್ತತೆಯನ್ನು ಮರಳಿಪಡೆದರು. ಚೀನಾದ ಪ್ರಯಾಣಿಕ ಐ ಟ್ಸಿಂಗ್ ವಲ್ಲಭಿಗೆ ೭ನೇ ಶತಮಾನದ ಕೊನೆಯ ಪಾದದಲ್ಲಿ ಭೇಟಿನೀಡಿದನು. ವಲ್ಲಭಿ ಬೌದ್ಧ ಧರ್ಮ ಸೇರಿದಂತೆ ಕಲಿಕೆಯ ಮಹಾನ್ ಕೇಂದ್ರವಾಗಿತ್ತು ಎಂದು ಅವನು ಕಂಡುಕೊಂಡನು. ೭ನೇ ಶತಮಾನದ ಮಧ್ಯದಲ್ಲಿ ಗುಣಮತಿ ಮತ್ತು ಸ್ಥಿರಮತಿ ವಲ್ಲಭಿಯ ಇಬ್ಬರು ಪ್ರಸಿದ್ಧ ಬೌದ್ಧ ವಿದ್ವಾಂಸರಾಗಿದ್ದರು. ವಲ್ಲಭಿ ತನ್ನ ಹೃದಯವೈಶಾಲ್ಯಕ್ಕೆ ಪ್ರಸಿದ್ಧವಾಗಿತ್ತು ಮತ್ತು ದೇಶದ ಎಲ್ಲ ಕಡೆಗಳಿಂದ ಬ್ರಾಹ್ಮಣರು ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇಲ್ಲಿಗೆ ಜಾತ್ಯತೀತ ಮತ್ತು ಧಾರ್ಮಿಕ ವಿಷಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಬರುತ್ತಿದ್ದರು.

ಉಲ್ಲೇಖಗಳು[ಬದಲಾಯಿಸಿ]

  1. Journal of the Asiatic Society of Bombay, p 245, Bhau Daji (by Asiatic Society of Bombay, Royal Asiatic Society of Great Britain and Ireland, Bombay Branch).
  2. Gazetteer of the Bombay Presidency, 1904, p 142, 476, by Bombay (India : State); A Concise History of the Indian People, 1950, p 106, H. G. (Hugh George) Rawlinson.
  3. Advanced History of India, 1971, p 198, G. Srinivasachari; History of India, 1952, p 140.
"https://kn.wikipedia.org/w/index.php?title=ಮೈತ್ರಕ&oldid=790294" ಇಂದ ಪಡೆಯಲ್ಪಟ್ಟಿದೆ