ಮೈಕೆಲ್ ಫೆಲ್ಪ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೈಕೆಲ್ ಫೆಲ್ಪ್ಸ್

ಮೈಕೆಲ್ ಫೆಲ್ಪ್ಸ್ (ಹುಟ್ಟು: ಜೂನ್ ೩೦, ೧೯೮೫) ಇವರು ಅಮೇರಿಕಾ ಸಂಯುಕ್ತ ಸಂಸ್ಥಾನದ ವೃತ್ತೀಯ ಈಜುಗಾರರು. ಇವರು ಒಲಿಂಪಿಕ್ ಕ್ರೀಡೆಗಳಲ್ಲಿ ಅತೀ ಹೆಚ್ಚಿನ ೧೪ ಸ್ವರ್ಣ ಪದಕಗಳನ್ನು ಪಡೆದಿದ್ದು ಸರ್ವಕಾಲಿಕ ಶ್ರೇಷ್ಠ ಒಲಿಂಪಿಯನ್ ಎನಿಸಿಕೊಂಡಿದ್ದಾರೆ. ಇವರ ಎಲ್ಲ ಪದಕಗಳೂ ಈಜು ಸ್ಪರ್ಧೆಯಲ್ಲಿ ಗಳಿಸಿದ್ದಾಗಿವೆ. ಇವರು ೨೦೦೪ಅಥೆನ್ಸ್ ಒಲಿಂಪಿಕ್ ಕ್ರೀಡೆಗಳಲ್ಲಿ ೬ ಸ್ವರ್ಣ, ೧ ರಜತ ಮತ್ತು ೨ ಕಂಚಿನ ಪದಕಗಳನ್ನು ಪಡೆದಿದ್ದರು. ೨೦೦೮ರ ಬೀಜಿಂಗ್ ಒಲಿಂಪಿಕ್ಸನಲ್ಲಿ ೮ ಸ್ವರ್ಣಗಳನ್ನು ಗೆದ್ದು ೧೯೭೨ಮ್ಯುನಿಕ್ ಒಲಿಂಪಿಕ್ಸನಲ್ಲಿ ತಮ್ಮ ದೇಶದವರೇ ಆದ್ ಮಾರ್ಕ್ ಸ್ಪಿಟ್ಜ್ ಗೆದ್ದಿದ್ದ ೭ ಸ್ವರ್ಣಗಳ ದಾಖಲೆಯನ್ನು ಮುರಿದರು.