ಮೇಜರ್ ಸಂದೀಪ್ ಉನ್ನಿಕೃಷ್ಣನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

೨೦೦೮ ರ ನವೆಂಬರ್ ೨೬ ರಂದು ಪಾಕೀಸ್ತಾನದ ೧೦ ಭಯೋತ್ಪಾದಕರು ಸಮುದ್ರದ ಮೂಲಕ ಭಾರತದ ಮುಂಬೈನಲ್ಲಿ ನುಸುಳಿ ೧೬೬ ಜನ ಅಮಾಯಕರನ್ನು ಹತ್ಯೆಗೈದಿದ್ದರು. ಮುಂಬೈನ ಪ್ರತಿಷ್ಠಿತ ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಸಿಕ್ಕಿಹಾಕಿಕೊಂಡಿದ್ದ ಜನರನ್ನು ಪಾರುಮಾಡಲು ನ್ಯಾಷನಲ್ ಸೆಕ್ಯೂರಿಟೀ ಗಾರ್ಡ್ ಕಮಾಂಡೋ ಆಗಿದ್ದ ಸಂದೀಪ್ ಹೋರಾಡುತ್ತಲೇ ಮಡಿದಿದ್ದರು. ಗುಂಡು ಅವರ ಎದೆಗೆ ನಾಟಿದಾಗಲೂ, " ದಯವಿಟ್ಟು ಮೇಲೆಹತ್ತಿಬರಬೇಡಿ; ನಾನೊಬ್ಬನೇ ಅವರನ್ನು ಎದುರಿಸುತ್ತೇನೆ", ಎಂದು ಹೇಳಿ ನುಗ್ಗಿದ ವೀರ ಯೋಧ ಸಂದೀಪ್ ನನ್ನು, ಎನ್.ಎಸ್.ಜಿ.ಅಧಿಕಾರಿಗಳು ನೆನೆಯುತ್ತಾರೆ.

ಪರಿವಾರ[ಬದಲಾಯಿಸಿ]

ತಂದೆ, ಉನ್ನಿಕೃಷ್ಣನ್, ನಿವೃತ್ತ ಇಸ್ರೋ ಅಧಿಕಾರಿ, ತಾಯಿ ಧನಲಕ್ಷ್ಮಿ,.

ಅಪ್ರತಿಮ ದೇಶ ಭಕ್ತ, ಕೊಡುಗೈ ದಾನಿ[ಬದಲಾಯಿಸಿ]

ಅಪ್ರತಿಮದೇಶಭಕ್ತ ಹಾಗೂ ಕೊಡುಗೈ ದಾನಿ. ಉನ್ನತ ಹುದ್ದೆಯಲ್ಲಿಅ ೨ ವರ್ಷಗಳಕಾಲದಲ್ಲಿ ತನ್ನ ವೇತನದ ಬಹುಭಾಗವನ್ನು ದೀನದಲಿತರಿಗೆ ಹಂಚಿಬಿಡುತ್ತಿದ್ದ.

ಬೆಂಗಳೂರಿನಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರ, ಪ್ರತಿಮೆಯ ಅನಾವರಣ[ಬದಲಾಯಿಸಿ]

ಸನ್. ೨೦೦೮ ರ ನವೆಂಬರ್, ೨೬ ರಂದು, ಮುಂಬೈನ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಬೆಂಗಳೂರು ಮೂಲದ ಭಾರತದ ಹೆಮ್ಮೆಯ ಪುತ್ರರಲ್ಲೊಬ್ಬ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷಣನ್ ಹುತಾತ್ಮರಾದ ದಿನ. 'ಯತೀಶ್ ಪ್ರಸಾದ್ ಚಾರಿಟಬಲ್ ಟ್ರಸ್ಟ್ ,' ಬೆಂಗಳೂರು ನಗರದ ಹೊರವರ್ತುಲ ರಸ್ತೆಗೆ ಹೊಂದಿಕೊಂಡ 'ರಾಮಮೂರ್ತಿನಗರದ ಸಿಗ್ನಲ್ ಸಮೀಪ' ೨೬/೧೧ ರಂದು, ಎನ್.ಎಸ್.ಜಿ. ಕಮಾಂಡೋ ಪ್ರತಿಮೆ ಸ್ಥಾಪಿಸಲಾಗಿದೆ. 'ಮೇಜರ್ ಸಂದೀಪ್ ಉನ್ನಿಕೃಷ್ಣನ್', ತಾಜ್ ಮಹಲ್ ಹೋಟೆಲ್ ಬಳಿ ಉಗ್ರರು ನಡೆಸಿದ್ದ ದಾಳಿಯನ್ನು ಹತ್ತಿಕ್ಕಲು ತನ್ನ ಜೀವದ ಹಂಗನ್ನೂ ತೊರೆದು ಪ್ರಯತ್ನಿಸಿ ಹೋರಾಡಿ ಮಡಿದಿದ್ದರು.

ಪ್ರಶಸ್ತಿ[ಬದಲಾಯಿಸಿ]

  • ಸನ್ ೨೦೦೯ ರ ಜನವರಿ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಿಗೆ, 'ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ', ನೀಡಿ ಗೌರವಿಸಲಾಯಿತು. ಇದು ವೀರಯೋಧರ ಸಾಹಸ, ಶೌರ್ಯ, ತ್ಯಾಗಕ್ಕೆ ಸಲ್ಲುವ ಪ್ರಶಸ್ತಿ.

ಮರಣೋತ್ತರ ಪ್ರಶಸ್ತಿವಿಜೇತರ ಸಾಲಿನಲ್ಲಿ[ಬದಲಾಯಿಸಿ]

  • ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ,
  • ಅಶೋಕ್ ಕಾಮ್ಟೆ,,
  • ವಿಜಯ್ ಸಾಲಸ್ಕರ್,
  • ತುಕಾರಾಂ ಓಂಬ್ಳೆ,,
  • ಗಜೇಂದರ್ ಸಿಂಗ್,

ಕಸಬ್ ಗೆ ಜೈಲು ಶಿಕ್ಷೆ[ಬದಲಾಯಿಸಿ]

ಏಕೈಕ ಉಗ್ರ, ಅಜ್ಮಲ್ ಕಸಬ್, ವಿನಃ ಎಲ್ಲಾ ಉಗ್ರರೂ ಅಂದೇ ಮೃತಪಟ್ಟರು. ಬಂಧಿತನಾಗಿದ್ದ ಕಸಬ್, ನವೆಂಬರ್, ೨೧ ರಂದು, ಪುಣೆಯ ಯರವಾಡ ಜೈಲಿನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ವೀರ ಮಾತಾ-ಪಿತರು[ಬದಲಾಯಿಸಿ]

ಪುತ್ರನನ್ನು ಕಳೆದುಕೊಂಡ ದುಖಃಕ್ಕಿಂತ, "ಒಬ್ಬ ವೀರ ಯೋಧನನ್ನು ನಾಡಿಗೆ ನೀಡಿದ ಹೆಮ್ಮೆ,", ಎನ್ನುವ ಮಾತನ್ನು ಹೇಳಿದ ಸಂದೀಪ್ ಉನ್ನಿಕೃಷ್ಣನ್ ಮಾತಾಪಿತೃಗಳು ವಂದನೀಯರು.


.