ವಿಷಯಕ್ಕೆ ಹೋಗು

ಮೇಘನಾದ ಸಾಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಘನಾದ ಸಾಹ ಭಾರತದ ಖ್ಯಾತ ವಿಜ್ಞಾನಿಗಳಲ್ಲಿ ಒಬ್ಬರು.

ಹಿನ್ನೆಲೆ[ಬದಲಾಯಿಸಿ]

ಅಕ್ಟೋಬರ್ ೬,೧೮೯೩ರಲ್ಲಿ ಬಂಗಾಲದ ಢಾಕಾಜಿಲ್ಲೆಯ ಶಿಯೋರಟೋಲಿ ಎಂಬ ಹಳ್ಳಿಯಲ್ಲಿ ಜನಿಸಿದರು.ಬಡ ಕುಟುಂಬದಲ್ಲಿ ಜನಿಸಿದ, ಅಸಾಧಾರಣ ಬುದ್ಧಿವಂತರಾದ ಅವರಿಗೆ ಮಾಧ್ಯಮಿಕ ಶಾಲೆಯಲ್ಲೇ ವಿದ್ಯಾರ್ಥಿ ವೇತನವೂ ದೊರೆತು,೧೯೦೯ರಲ್ಲಿ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ,ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಭೌತವಿಜ್ಞಾನದ ಅಧ್ಯಾಪಕರಾದರು.

ಸಾಧನೆ[ಬದಲಾಯಿಸಿ]

ಮೇಘನಾದ ಸಾಹ ಬೆಳಕಿನ ಒತ್ತಡವನ್ನು ಅಳೆಯುವ ಸೂಕ್ಷ್ಮ ಉಪಕರಣವನ್ನು ಸೃಷ್ಟಿಸಿದರು.ವಿಜ್ಞಾನಿ ಐನ್ ಸ್ಟೀನ್ ರವರ 'ಬೆಳಕಿಗೂ ಭಾರವಿದೆ'ಎಂಬ ವಿಷಯವನ್ನು ಪ್ರಯೋಗಗಳಿಂದ ದೃಢೀಕರಿಸಿದರು.ನಕ್ಷತ್ರಗಳಲ್ಲಿರುವ ವಸ್ತುವನ್ನು ಪತ್ತೆ ಹಚ್ಚಲು 'ಸೂರ್ಯನ ಶಾಖಕ್ಕೆ ಪರಮಾಣುಗಳು ಒಡೆಯುತ್ತವೆ'ಎಂಬ ತತ್ವವನ್ನು ತಮ್ಮ ೨೭ನೇ ವಯಸ್ಸಿನಲ್ಲೇ ಪ್ರಯೋಗ ಮಾಡಿ ತೋರಿಸಿದರು.

ತಮ್ಮ ಸಾಧನೆಗಳಿಂದಾಗಿ ಯೂರೋಪು,ಜರ್ಮನಿಗೆ ಹೋಗಿ ಬಂದರು.ಅಲಹಾಬಾದಿನಲ್ಲಿ ರೇಡಿಯೋ ತರಂಗಗಳ ಬಗ್ಗೆ ಅಧ್ಯಯನ ನಡೆಸಿದರು.ನ್ಯೂಕ್ಲಿಯರ್ ಭೌತವಿಜ್ಞಾನ ಹಾಗೂ ಜೀವ ಭೌತವಿಜ್ಞಾನದಲ್ಲಿ ಸಂಶೋಧನೆ ನಡೆಸಲು ೧೯೫೦ರಲ್ಲಿ ಕಲ್ಕತ್ತಾದಲ್ಲಿ 'ಸಾಹ ಇನ್ ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್'ಎಂಬ ಸಂಸ್ಥೆ ಸ್ಥಾಪನೆಯಾಯಿತು.ವೈಜ್ಞಾನಿಕ ವಿಷಯಗಳ ತಿಳಿವಳಿಕೆಗಾಗಿ 'ಸೈನ್ಸ್ ಅಂಡ್ ಕಲ್ಚರ್'ಎಂಬ ಪತ್ರಿಕೆಯನ್ನು ನಡೆಸಿದರು.

ಮೇಘನಾದ ಸಾಹ ಅವರಿಗೆ ವಿಜ್ಞಾನವಲ್ಲದೆ ಹಿಂದೂಧರ್ಮ,ಇತಿಹಾಸ,ಸಂಸ್ಕೃತಿಗಳಲ್ಲಿ ಅಪಾರವಾದ ಆಸಕ್ತಿ ಇತ್ತು.೧೯೫೧ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.೧೯೫೬ರ ಫೆಬ್ರುವರಿ ೬ರಂದು ದೆಹಲಿಯ ಸಂಸತ್ ಭವನಕ್ಕೆ ನಡೆದು ಬರುತ್ತಿದ್ದಾಗಲೇ ಕುಸಿದು ಬಿದ್ದು ತೀರಿಕೊಂಡರು.