ಮೇಕ್‌ಮೈಟ್ರಿಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
MakeMyTrip
ಸಂಸ್ಥೆಯ ಪ್ರಕಾರPublic (NASDAQMMYT)
ಸ್ಥಾಪನೆಏಪ್ರಿಲ್ 1, 2000 (2000-04-01)
ಸಂಸ್ಥಾಪಕ(ರು)Deep Kalra, Sachin Bhatia, Keyur Joshi, Rajesh Magow
ಮುಖ್ಯ ಕಾರ್ಯಾಲಯGurgaon, ಹರಿಯಾಣ, India
ಉದ್ಯಮTravel & Tourism
ಉತ್ಪನ್ನAirline Tickets, Indian Railway Tickets, Bus Tickets, Holidays, Hotels, MICE, Car Rentals
ಸೇವೆಗಳುVisa Services, B2B & Affiliate Services
ಜಾಲತಾಣMakeMyTrip

MakeMyTrip.com ಒಂದು ಭಾರತೀಯ ಆನ್‌ಲೈನ್ ಪ್ರಯಾಣ ಏಜೆನ್ಸಿಯಾಗಿದ್ದು, ಇದು ಪ್ರಮುಖ ಮಾರುಕಟ್ಟೆ ಷೇರನ್ನು ಹೊಂದಿದೆ. ಭಾರತದಲ್ಲಿ ಪ್ರತಿ ಹನ್ನೆರಡು ದೇಶೀಯ ವಿಮಾನಗಳಲ್ಲಿ ಒಂದಕ್ಕೆ ಈ ಏಜೆನ್ಸಿಯ ಮೂಲಕ ಟಿಕೆಟ್ ಮಾಡಲಾಗುತ್ತದೆ.[೧][೨] MakeMyTrip.com ಅದರ ಗ್ರಾಹಕರಿಗೆ ಹಲವಾರು ಪ್ರಯಾಣ ಸೇವೆಗಳನ್ನು ಮತ್ತು ಉತ್ಪನ್ನಗಳನ್ನು ಒದಗಿಸುತ್ತದೆ, ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನ ಟಿಕೆಟ್‌ಗಳು, ಭಾರತೀಯ ರೈಲು ಟಿಕೆಟ್‌ಗಳು, ದೇಶೀಯ ಬಸ್ ಟಿಕೆಟ್‌ಗಳು, ಅಂತಾರಾಷ್ಟ್ರೀಯ ಮತ್ತು ದೇಶೀಯ ಹೋಟೆಲ್ ಕಾಯ್ದಿರಿಸುವಿಕೆ, ಕಾರು ಬಾಡಿಗೆಗಳು, ಅಂತಾರಾಷ್ಟ್ರೀಯ ಮತ್ತು ದೇಶೀಯ ರಜಾದಿನದ ಪ್ಯಾಕೇಜುಗಳು, MICE (ಮೀಟಿಂಗ್ಸ್, ಇನ್ಸೆಂಟಿವ್ಸ್, ಕಾನ್ಫರೆನ್ಸಿಂಗ್, ಎಕ್ಸಿಬಿಶನ್ಸ್), ವೀಸಾ ಸೇವೆಗಳು, B2B ಸೇವೆಗಳು ಮತ್ತು ಇತ್ಯಾದಿ. 2000ರ ಎಪ್ರಿಲ್‌ನಲ್ಲಿ ಆರಂಭವಾದ MakeMyTrip.com ಇಂದು ಭಾರತದಾದ್ಯಂತ 20 ನಗರಗಳಲ್ಲಿ ಕಛೇರಿಗಳನ್ನು ಹೊಂದಿದೆ ಹಾಗೂ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ 2 ಅಂತಾರಾಷ್ಟ್ರೀಯ ಕಛೇರಿಗಳನ್ನು ಹೊಂದಿದೆ, ಇದಕ್ಕೆ ಹೆಚ್ಚುವರಿಯಾಗಿ ಇದು ಕೆಲವು ಫ್ರ್ಯಾಂಚೈಸ್(ಮಾರಾಟದ ಅಧಿಕಾರ ಪಡೆದ) ಪ್ರದೇಶಗಳಲ್ಲೂ ತನ್ನ ಕಛೇರಿಗಳನ್ನು ಆರಂಭಿಸಿದೆ.[೨]

ಇತಿಹಾಸ[ಬದಲಾಯಿಸಿ]

2000ರಲ್ಲಿ ದೀಪ್ ಕಾಲ್ರರಿಂದ ಸ್ಥಾಪಿಸಲ್ಪಟ್ಟ MakeMyTrip.in ನವದೆಹಲಿಯ ಓಖ್ಲಾದಲ್ಲಿನ ಸಣ್ಣ ಕಛೇರಿಯೊಂದರಲ್ಲಿ ತನ್ನ ಕಾರ್ಯವನ್ನು ಆರಂಭಿಸಿತು. GE ಕ್ಯಾಪಿಟಲ್‌ನ ವ್ಯವಹಾರ ಅಭಿವೃದ್ಧಿಯ ಮಾಜಿ ಉಪಾಧ್ಯಕ್ಷರಾದ ದೀಪ್ ಕಾಲ್ರರಿಗೆ ಕಂಪನಿಯ ಗ್ರಾಹಕ ಆರ್ಥಿಕ ಉತ್ಪನ್ನಗಳಿಗಾಗಿ ಹೊಸ ಹಂಚಿಕೆ ಚಾನೆಲ್‌ಗಳನ್ನು ಜೊತೆಗೂಡಿಸುವುದು ಮತ್ತು ಅಭಿವೃದ್ಧಿಪಡಿಸುವುದು ಅಗತ್ಯವಾಗಿ ಕಂಡುಬಂದಿತು. ಆ ಸಂದರ್ಭದಲ್ಲಿ ಅಂತರಜಾಲವು ಪ್ರಬಲ ಆಸಕ್ತಿಯ ಆಯ್ಕೆಯಾಗಿ ಕಂಡುಬಂತು ಹಾಗೂ GE ಕ್ಯಾಪಿಟಲ್‌ನಲ್ಲಿನ ಅವರ ಪಾತ್ರವು ಭಾರತದಲ್ಲಿ ಆಗ ತಾನೆ ಆರಂಭವಾಗುತ್ತಿದ್ದ ಅಂತರಜಾಲ ಉದ್ಯಮದಲ್ಲಿ ತೊಡುಗುವ ಅವಕಾಶವನ್ನು ಒದಗಿಸಿತು. ಅನಂತರ ಸ್ವಲ್ಪದರಲ್ಲೇ ದೀಪ್ ತನ್ನ ವಾಣಿಜ್ಯೋದ್ಯಮ ಆಯ್ಕೆಗಳನ್ನು ಪರಿಗಣಿಸಿ, ಪ್ರಯಾಣ ಸೇವೆಯನ್ನೂ ಒಳಗೊಂಡಂತೆ ಭಾರತದ ಆರ್ಥಿಕತೆಯ ಕೆಲವು ಕ್ಷೇತ್ರಗಳಲ್ಲಿ ಆಸಕ್ತಿವಹಿಸಿದರು. ಪ್ರಯಾಣ ಉದ್ಯಮವು ಅಂತರಜಾಲಕ್ಕೆ ಅನುಕೂಲಕರವಾಗಿದೆ ಮತ್ತು ಇದು ಒಂದು ಉದ್ಯಮವಾಗಿ ಬೆಳೆಯುವ ಪ್ರಬಲ ಸಂಭಾವ್ಯತೆಯನ್ನು ಹೊಂದಿದೆ ಎಂಬುದನ್ನು ಕಂಡುಕೊಂಡ ಅವರು MakeMyTrip.com ಅನ್ನು ರೂಪಿಸಿದರು.[೩]

ಭಾರತೀಯ ಮಾರುಕಟ್ಟೆಯು ಆನ್‌ಲೈನ್ ಪ್ರಯಾಣ ಏಜೆನ್ಸಿಗೆ ಇನ್ನೂ ಸಜ್ಜಾಗಿರದಿದ್ದುದನ್ನು ಕಂಡುಕೊಂಡ MakeMyTrip.com US ಭಾರತ ಪ್ರಯಾಣ ಕ್ಷೇತ್ರವನ್ನು ಕೇಂದ್ರೀಕರಿಸಿತು. ಅಲ್ಪಾವಧಿಯಲ್ಲಿ MakeMyTrip.com USನಿಂದ ಭಾರತದ ಪ್ರಯಾಣ ಕ್ಷೇತ್ರದಲ್ಲಿ ಒಂದು ಪ್ರಮುಖ ಪ್ರಯಾಣ-ವೆಬ್‌ಸೈಟ್ ಆಗಿ ಬೆಳೆಯಿತು. ಇಂದು ಇದು NRI ಮಾರುಕಟ್ಟೆಯ ಸರಿಸುಮಾರು 4%ನಷ್ಟು ಷೇರನ್ನು ಹೊಂದಿದೆ, ಇದು 4500 ಕೋಟಿ (USD 1 ಶತಕೋಟಿ) ಮೌಲ್ಯದಲ್ಲಿ ಸ್ಥಗಿತಗೊಂಡಿದೆ.[೪] ದೇಶೀಯ ಕಡಿಮೆ ಖರ್ಚಿನ ಸಾಗಣೆಸಂಸ್ಥೆಗಳ ಬೆಳವಣಿಗೆಯಿಂದ ಭಾರತೀಯ ಪ್ರಯಾಣ ಉದ್ಯಮದಲ್ಲಿ ಉಂಟಾದ ಕ್ರಾಂತಿಯಿಂದಾಗಿ, ಮೇಕ್‌ಮೈಟ್ರಿಪ್ 2005ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಪ್ರಯಾಣ ಮಾರುಕಟ್ಟೆಗಾಗಿ ಅದರ ವೆಬ್‌ಸೈಟ್ಅನ್ನು ಆರಂಭಿಸಿತು.[೫] ಆರಂಭಗೊಂಡ ಮೊದಲ ವರ್ಷದಲ್ಲಿ ಇದು ಭಾರತದ ಅತ್ಯಂತ ದೊಡ್ಡ ಇ-ಕಾಮರ್ಸ್ ಕಂಪನಿಯಾಗಿತ್ತು.[೬] ಮೇಕ್‌ಮೈಟ್ರಿಪ್‌ನ ಕಂಪನಿ ಪ್ರೊಫೈಲ್‌ನ ಪ್ರಕಾರ - “ಈ ಕಂಪನಿಯು ಹಣಕಾಸಿನ ವರ್ಷದ ಕೊನೆಯಲ್ಲಿ 2010ರ ಮಾರ್ಚ್‌ನಲ್ಲಿ INR 2500 ಕೋಟಿ ರೂಪಾಯಿಗಳ (ಸರಿಸುಮಾರು US$ 500 ದಶಲಕ್ಷ) ಮಾರಾಟ ಸಾಧನೆಯನ್ನು ಸಾಧಿಸಿದೆ, ಈ ಸಾಧನೆಯು ಮೇಕ್‌ಮೈಟ್ರಿಪ್‌ಅನ್ನು ಭಾರತದ ಅತ್ಯಂತ ದೊಡ್ಡ ಪ್ರಯಾಣ ಕಂಪೆನಿಯಾಗಿ ಮಾಡಿದೆ.” [೨]

ಉತ್ಪನ್ನಗಳು[ಬದಲಾಯಿಸಿ]

ಭಾರತದಲ್ಲೇ ಅತ್ಯಂತ ಹೆಚ್ಚು ವ್ಯಾಪಕವಾಗಿ ಹರಡಿರುವ ಆನ್‌ಲೈನ್ ಪ್ರಯಾಣ ಏಜೆನ್ಸಿ ಮತ್ತು ಒನ್-ಸ್ಟಾಪ್ ಟ್ರಾವೆಲ್ ಶಾಪ್ ಎಂಬ ಹೆಸರು ಪಡೆದಿರುವ MakeMyTrip.com[೭] ಈ ಕೆಳಗಿನ ಸೇವೆಗಳನ್ನು ಒದಗಿಸುತ್ತದೆ:

ಅಂತಾರಾಷ್ಟ್ರೀಯ ಮತ್ತು ದೇಶೀಯ - ವಿಮಾನ ಟಿಕೆಟ್‌ಗಳು, ರಜಾದಿನದ ಪ್ಯಾಕೇಜುಗಳು ಮತ್ತು ಹೋಟೆಲ್‌ಗಳು

ದೇಶೀಯ - ಬಸ್ ಮತ್ತು ರೈಲು ಟಿಕೆಟ್‌ಗಳು

ಖಾಸಗಿ ಕಾರು ಮತ್ತು ಟ್ಯಾಕ್ಸಿ ಬಾಡಿಗೆಗಳು

MICE (ಮೀಟಿಂಗ್ಸ್, ಇನ್ಸೆಂಟಿವ್ಸ್, ಕಾನ್ಫರೆನ್ಸಸ್ ಆಂಡ್ ಎಕ್ಸಿಬಿಶನ್ಸ್)

B2B ಮತ್ತು ಸಹಾಯಕ ಸೇವೆಗಳು

ಈ ಸೇವೆಗಳನ್ನು MakeMyTrip.com ವೆಬ್‌ಸೈಟ್‌ನ ಮೂಲಕ ಮಾತ್ರವಲ್ಲದೆ ಭಾರತದಲ್ಲಿರುವ ಈ ಕಂಪನಿಗೆ ಒಳಪಟ್ಟ 20 ಪ್ರಯಾಣ ಕೇಂದ್ರಗಳಿಂದಲೂ ಒದಗಿಸಲಾಗುತ್ತದೆ. ಅಷ್ಟೇ ಅಲ್ಲದೆ ಈಗ ಭಾರತದಾದ್ಯಂತ ಆಯ್ದ ನಗರಗಳಲ್ಲಿ ಆರಂಭವಾದ ಹೊಸ ಫ್ರ್ಯಾಂಚೈಸ್(ಮಾರಾಟದ ಅಧಿಕಾರ ಪಡೆದ) ಕೇಂದ್ರಗಳಲ್ಲೂ ಈ ಸೇವೆಯನ್ನು ನೀಡಲಾಗುತ್ತದೆ. MakeMyTrip.com ನ ಎಲ್ಲಾ ಸೇವೆಗಳಿಗೆ 24x7 ಕಾಲ್ ಸೆಂಟರ್‌ಗಳು ಬೆಂಬಲವನ್ನು ಒದಗಿಸುತ್ತವೆ.

ನಿರ್ದೇಶಕರ ಮಂಡಳಿ[ಬದಲಾಯಿಸಿ]

ಮೇಕ್‌ಮೈಟ್ರಿಪ್‌ನ ನಿರ್ದೇಶಕರ ಮಂಡಳಿಯು ಬಂಡವಾಳ ಹೂಡುಗರು ಮತ್ತು ಸ್ವತಂತ್ರ ಮಂಡಳಿ ಸದಸ್ಯರನ್ನು ಒಳಗೊಳ್ಳುತ್ತದೆ. ಬಂಡವಾಳ ಹೂಡುಗರಲ್ಲಿ SAIF ಪಾಲುದಾರರು, ಹೆಲಿಯನ್ ವೆಂಚರ್ ಪಾಲುದಾರರು ಮತ್ತು ಸೈರ ವೆಂಚರ್ಸ್ ಮೊದಲಾದವರು ಬರುತ್ತಾರೆ.[೮] ಸ್ವತಂತ್ರ ಸದಸ್ಯರು ಫಿಲಿಪ್ ಸಿ ಪೋಲ್ಫ್ (ಫೋಕಸ್‌ವ್ರೈಟ್ ಇಂಕ್‌ನ ಅಧ್ಯಕ್ಷ ಮತ್ತು CEO) ಮತ್ತು ಫ್ರೆಡೆರಿಕ್ ಲಲೋಂಡ್ (Openplaces.orgನ ಸ್ಥಾಪಕ ಮತ್ತು CEO) ಮೊದಲಾದ ಪ್ರಯಾಣ ವೃತ್ತಿಪರರು ಹಾಗೂ ಹೆಸರಾಂತ ವಾಣಿಜ್ಯೋದ್ಯಮಿಗಳನ್ನು ಒಳಗೊಳ್ಳುತ್ತಾರೆ.[೯]

ಪ್ರಶಸ್ತಿಗಳು ಮತ್ತು ಮನ್ನಣೆಗಳು[ಬದಲಾಯಿಸಿ]

2000ರಿಂದ ಮೇಕ್‌ಮೈಟ್ರಿಪ್ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದೆ:[೧೦]

ಪ್ರಯಾಣ ಮತ್ತು ವ್ಯವಹಾರ

ಗ್ರೇಟ್ ಪ್ಲೇಸಸ್ ಟು ವರ್ಕ್‌ನಲ್ಲಿ ಮೊದಲನೇ ಸ್ಥಾನ – 2010 (ಉದ್ಯಮ - ವೃತ್ತಿಪರ ಸೇವೆಗಳು)[೧೧]

ಗ್ರೇಟ್ ಪ್ಲೇಸಸ್ ಟು ವರ್ಕ್‌ನಲ್ಲಿ ಎರಡನೇ ಸ್ಥಾನ – 2010 (ಭಾರತ) [೧೨]

ಸೂಪರ್‌ಬ್ರ್ಯಾಂಡ್ ಇಂಡಿಯಾ – 2009-10[೧೩]

ಗ್ರೇಟೇ ಪ್ಲೇಸಸ್ ಟು ವರ್ಕ್ – 2009 (ಉದ್ಯಮ – ವೃತ್ತಿಪರ ಸೇವೆಗಳು)[೧೪]

ಹೆಚ್ಚು ಆದ್ಯತೆಯ/ಅತ್ತುತ್ತಮ ಪ್ರಯಾಣ ಪೋರ್ಟಲ್ – CNBC ಆವಾಜ್ 2009 [೧೫]

ಹೆಚ್ಚು ಭೇಟಿನೀಡಿದ ಪ್ರಯಾಣ ವೆಬ್‌ಸೈಟ್ – ಕಾಮ್‌ಸ್ಕೋರ್ – 2005-09 [ಸೂಕ್ತ ಉಲ್ಲೇಖನ ಬೇಕು] [೧೬]

ಹೆಚ್ಚು ಆದ್ಯತೆಯ ಆನ್‌ಲೈನ್ ಪ್ರಯಾಣ ಏಜೆನ್ಸಿ – ಟ್ರಾವೆಲ್ ಬಿಜ್ ಮಾನಿಟರ್ ಸರ್ವೆ – 2008 [ಸೂಕ್ತ ಉಲ್ಲೇಖನ ಬೇಕು] [೧೬]

ಅಗ್ರಸ್ಥಾನದಲ್ಲಿರುವ ಆನ್‌ಲೈನ್ ಪ್ರಯಾಣ ಏಜೆನ್ಸಿ – ಜಕ್ಸ್ಟ್‌ಕನ್ಸಲ್ಟ್ – 2008 [ಸೂಕ್ತ ಉಲ್ಲೇಖನ ಬೇಕು] [೧೬]

ರೆಡ್ ಹೆರಿಂಗ್ 100 ಏಷ್ಯಾ 2007 - [೧೭]

ಚಿನ್ನ ಮತ್ತು ಬೆಳ್ಳಿ – ಅಬ್ಬಿ ಪ್ರಶಸ್ತಿ – 2006-07 [೧೮] [೧೯]

ಭಾರತೀಯರು ಭೇಟಿನೀಡಿದ ಪ್ರಮುಖ ಹತ್ತು ವೆಬ್‌ಸೈಟ್‌ಗಳಲ್ಲಿ ಒಂದು – ಕಾಮ್‌ಸ್ಕೋರ್ – 2007 [ಸೂಕ್ತ ಉಲ್ಲೇಖನ ಬೇಕು] [೧೬]

ವರ್ಲ್ಡ್ ಟ್ರಾವೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು – ಏಷ್ಯಾದ ಪ್ರಮುಖ ಪ್ರಯಾಣ ಏಜೆನ್ಸಿ – 2007 [೨೦]

100 IT ಹೊಸತನದ-ಪ್ರವರ್ತಕರಲ್ಲಿ ಒಂದು – NASSCOM – 2007 [೨೧]

ಅತ್ಯುತ್ತಮ ಆನ್‌ಲೈನ್ ಪ್ರಯಾಣ ಕಂಪನಿ - ಗೆಲಿಲಿಯೊ ಎಕ್ಸ್‌ಪ್ರೆಸ್ ಟ್ರಾವೆಲ್ ವರ್ಲ್ಡ್ – 2007.[೨೨][೨೩][೨೪]

ಎಮರ್ಜಿಂಗ್ ಇಂಡಿಯಾ ಪ್ರಶಸ್ತಿ – ICICI ಬ್ಯಾಂಕ್ ಮತ್ತು CNBC TV18 – 2006[೨೫]

ಏಷ್ಯಾಸ್ ಹಾಟೆಸ್ಟ್ ಟೆಕ್ನಾಲಜಿ ಸ್ಟಾರ್ಟಪ್ – ರೆಡ್ ಹೆರಿಂಗ್ - 2006 [೨೬]

[೨೭]

ಏರ್‌ಲೈನ್ ಪ್ರಶಸ್ತಿಗಳು [೧೬]

ಏರ್ ಕೆನಡಾ – ಅತ್ಯದ್ಭುತ ನಿರ್ವಹಣೆ – 2008

ಸಿಂಗಾಪೂರ್ ಏರ್‌ಲೈನ್ಸ್ – ಟಾಪ್ ಪ್ಯಾಸೆಂಜರ್ ಏಜೆಂಟ್ – 2007-08

ಬ್ರಿಟಿಷ್ ಏರ್‌ವೇಸ್ - ಔಟ್‌ಸ್ಟ್ಯಾಂಡಿಂಗ್ ರೆವೆನ್ಯೂ ಕಾಂಟ್ರಿಬ್ಯೂಷನ್ – 2007-08

ಏರ್ ಮಾರಿಟಿಯಸ್ – ಆಲ್ ಇಂಡಿಯಾ ಟಾಪ್ ಟೆನ್ ಏಜೆಂಟ್//ಟಾಪ್ ನಾರ್ತ್ ಇಂಡಿಯಾ ಸೇಲ್ಸ್ ಪ್ರಶಸ್ತಿ – 2006-07//2007-08

ಕ್ಯಾಥೆ ಪೆಸಿಫಿಕ್ - ಅತ್ಯದ್ಭುತ ನಿರ್ವಹಣೆ – 2007

ಮಲೇಷಿಯಾ ಏರ್‌ಲೈನ್ಸ್ – ಟಾಪ್ ಏಜೆಂಟ್ ಪ್ರಶಸ್ತಿ – 2007

ಲುಫ್ತಾನ್ಸ – ಅತ್ಯದ್ಭುತ ನಿರ್ವಹಣೆ – 2006-07

ಕಿಂಗ್‌ಫಿಶರ್ ಏರ್‌ಲೈನ್ಸ್ - ಅತ್ಯದ್ಭುತ ನಿರ್ವಹಣೆ – 2006-07

ಇಂಡಿಯನ್ ಏರ್‌ಲೈನ್ಸ್ - ಅಚೀವಿಂಗ್ ಹೈಯೆಸ್ಟ್ ಡೊಮೆಸ್ಟಿಕ್ ಪ್ಯಾಸೆಂಜರ್ ಸೇಲ್ಸ್ – 2006-07

ಏರ್ ಇಂಡಿಯಾ - ಔಟ್‌ಸ್ಟ್ಯಾಂಡಿಂಗ್ ಕಾಂಟ್ರಿಬ್ಯೂಷನ್ ಟು ಪ್ಯಾಸೆಂಜರ್ ಸೇಲ್ಸ್ – 2005-06

ಜೆಟ್ ಏರ್‌ವೇಸ್ - ಅವಾರ್ಡ್ ಆಫ್ ಎಕ್ಸಲೆನ್ಸ್ – 2005-06

ಗಲ್ಫ್ ಏರ್ - ಕಂಟ್ಯೂನುವಸ್ ಸಪೋರ್ಟ್

ಇತ್ತೀಚಿನ ಬೆಳವಣಿಗೆಗಳು[ಬದಲಾಯಿಸಿ]

MakeMyTrip.com ಒಂದು ಹೈಬ್ರಿಡ್ OTA ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಭಾರತದಲ್ಲಿನ ತನ್ನ ಸಾಧನೆಯನ್ನು ಇನ್ನಷ್ಟು ವಿಸ್ತರಿಸಿದೆ. ಇದು ಕೆಲವು ಫ್ರ್ಯಾಂಚೈಸ್(ಮಾರಾಟದ ಅಧಿಕಾರ ಪಡೆದ) ಕಛೇರಿಗಳನ್ನು ಹೊರತುಪಡಿಸಿ ರಾಷ್ಟ್ರದಾದ್ಯಂತ 20 ಪ್ರಾದೇಶಿಕ ಕಛೇರಿಗಳನ್ನು ಆರಂಭಿಸಿದೆ. ತಮ್ಮ ಪ್ರಯಾಣ ಮತ್ತು ರಜಾದಿನಗಳ ಯೋಜನೆಗಳನ್ನು ಮಾಡುವ ಬಗ್ಗೆ ಕಂಪನಿಯು ಒದಗಿಸುವ ದೂರವಾಣಿ, ನಿಜಕಾಲ-ಚಾಟ್ ಅಥವಾ ಇ-ಮೇಲ್ ವಾಹಕಗಳ ಬದಲಿಗೆ ನೇರವಾಗಿ ಖುದ್ದಾಗಿ ಪ್ರಯಾಣ-ಪರಿಣಿತರಲ್ಲಿ ಕೇಳಲು ಬಯಸುವ ಗ್ರಾಹಕರಿಗೆ ಕಂಪನಿಯು ಸಹಾಯ ಮಾಡುವುದಕ್ಕಾಗಿ ಇಂತಹ ಕಛೇರಿಗಳನ್ನು ತೆರೆಯಲಾಯಿತು.[೨೮]

2007ರ ಫೆಬ್ರವರಿಯಲ್ಲಿ ಮೇಕ್‌ಮೈಟ್ರಿಪ್ ಅಮಾಡ್ಯುವಸ್ಅನ್ನು ತಾಂತ್ರಿಕ ಪೂರೈಕೆದಾರವಾಗಿ ಆರಿಸಿಕೊಂಡಿದೆಯೆಂದು ಅಮಾಡ್ಯುವಸ್ ಐಟಿ ಗ್ರೂಪ್ ಘೋಷಿಸಿತು.[೨೯] 2007ರ ಆಗಸ್ಟ್‌ನಲ್ಲಿ, ಈ ಕಂಪನಿಯು ಗ್ರಾಹಕರಿಗೆ ತಮ್ಮ ಮೊಬೈಲ್ ಫೋನ್‌‌ಗಳಿಂದಲೇ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗುವಂತೆ ಮಾಡುವುದಕ್ಕಾಗಿ ನೋಕಿಯಾದೊಂದಿಗೆ ಜತೆಗೂಡಿತು.[೩೦]

ಟೀಕೆಗಳು[ಬದಲಾಯಿಸಿ]

ಮೇಕ್‌ಮೈಟ್ರಿಪ್ ಟಿಕೆಟ್ಅನ್ನು ಕಾಯ್ದಿರಿಸುವುದಕ್ಕಿಂತ ಮೊದಲು ಟಿಕೆಟ್‌ನ ಸಂಪೂರ್ಣ ನಿಬಂಧನೆಗಳನ್ನು (ಸಾಮಾನು ಸರಂಜಾಮುಗಳಿಗೆ ಅವಕಾಶವಿದೆಯೇ, ಪ್ರಯಾಣದ ದಿನಾಂಕವನ್ನು ಬದಲಾಯಿಸಬಹುದೇ ಅಥವಾ ಟಿಕೆಟ್ಅನ್ನು ರದ್ದುಗೊಳಿಸಬಹುದೇ ಎನ್ನುವ ಬಗ್ಗೆ) ನೀಡುವುದಿಲ್ಲವೆಂದು ಕೆಲವು ಗ್ರಾಹಕರು ದೂರುತ್ತಾರೆ. ಇದು ಟಿಕೆಟ್ ಕಾಯ್ದಿರಿಸುವುದಕ್ಕಿಂತ ಮೊದಲು ಸುಳ್ಳು ಭರವಸೆಗಳನ್ನು ನೀಡುತ್ತದೆಂದೂ ಕೆಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಕೆಲವರು ಗ್ರಾಹಕರಿಗೆ ಟಿಕೆಟ್ಅನ್ನು ಫೋನ್‌ನಲ್ಲಿ ಕಾಯ್ದಿರಿಸುವುದಕ್ಕಿಂತ ಮೊದಲು ಟಿಕೆಟ್‌ನ ನಿಬಂಧನೆಗಳನ್ನು ಬರವಣಿಗೆಯಲ್ಲಿ ಅಥವಾ ಇಮೇಲ್‌ನಲ್ಲಿ ಪಡೆಯಬೇಕೆಂಬ ಎಚ್ಚರಿಕೆಯನ್ನು ನೀಡುತ್ತಾರೆ. ಕ್ರಿಡಿಟ್ ಕಾರ್ಡ್‌ಗಳಿಗೆ ವಾಪಸಾಗುವ ಹಣವು ಕೆಲವೊಮ್ಮೆ ವಿಳಂಬವಾಗುತ್ತದೆ. ಗ್ರಾಹಕ ಸೇವಾಕೇಂದ್ರಕ್ಕೆ ಮಾಡುವ ಕರೆಗಳ ಸಾಲಿನಲ್ಲಿ ಟಿಕೆಟ್ ಕಾಯ್ದಿರಿಸಿದ ನಂತರ ಮಾಡುವ ಕರೆಗಳು ಟಿಕೆಟ್‌ಗಳನ್ನು ಖರೀದಿಸಲು ಮಾಡುವ ಕರೆಗಳಿಗಿಂತ ಕಡಿಮೆ ಆದ್ಯತೆಯನ್ನು ಹೊಂದಿರುತ್ತವೆಯೆಂದು ನಂಬಲಾಗುತ್ತದೆ. ಅದಾಗಲೇ ಕಾಯ್ದಿರಿಸಿದ ಟಿಕೆಟ್‌ನ ಬಗ್ಗೆ ಮಾಹಿತಿ ಪಡೆಯುವ ಸೇವೆಯಲ್ಲಿ ವಿಪರೀತ ವಿಳಂಬವಾಗುತ್ತದೆ. ದೂರುಗಳನ್ನು ನಿರ್ವಹಿಸುವ ಕಾರ್ಯಗಳನ್ನು ತೀವ್ರಗೊಳಿಸುವ ಬಗ್ಗೆ ಅದರ ವೆಬ್‌ಸೈಟ್‌ನಲ್ಲಿ ಪ್ರಕಟಗೊಳಿಸಿಲ್ಲ. ಕರೆಯ ಸಾಲಿನಲ್ಲಿನ ಸ್ಥಾನ ಅಥವಾ ಕಾಯುವ ಅಂದಾಜು ಸಮಯವನ್ನೂ ಸಹ ಬಹಿರಂಗಗೊಳಿಸಿಲ್ಲ. ವೆಬ್‌ಸೈಟ್‌ನ "ಬಿಲೀವ್ ಇಟ್ ಆರ್ ನಾಟ್" ಜಾಹೀರಾತು ನಿಜಕ್ಕೂ ತುಂಬಾ ಉತ್ತಮವಾಗಿದೆಯೆಂದು ಕೆಲವು ಗ್ರಾಹಕರು ಜಾಗೃತಿ ಮೂಡಿಸುತ್ತಾರೆ. ಬಾರತಕ್ಕೆ ಬಂದ ನಂತರ ನಿಮಗೆ ಉಚಿತ ದೇಶೀಯ ವಿಮಾನ ಪ್ರಯಾಣವಿದೆಯೆಂದು ಮೇಕ್‌ಮೈಟ್ರಿಪ್ ಸೂಚಿಸಿದ್ದರೆ, ಅಂತಹ ವಿಮಾನ ಯಾನವನ್ನು ಪ್ರಯಾಣಕ್ಕಿಂತ 21 ದಿನಗಳ ಮುಂಚಿತವಾಗಿ ಕಾಯ್ದಿರಿಸಬೇಕು. ನೀವು ಇದನ್ನು ತುಂಬಾ ಮುಂಚಿತವಾಗಿಯೇ ಕಾಯ್ದಿರಿಸಲು ಪ್ರಯತ್ನಿಸಿದರೂ, ಒಂದು ವೇಳೆ ಸಾಧ್ಯವಾಗದಿದ್ದರೆ ಮೇಕ್‌ಮೈಟ್ರಿಪ್ Archived 2018-08-09 ವೇಬ್ಯಾಕ್ ಮೆಷಿನ್ ನಲ್ಲಿ. ಇದನ್ನು ತುಂಬಾ ಕಷ್ಟಕರವಾಗಿಸುತ್ತದೆ. ನೀವು ರಾತ್ರಿ ವಿಮಾನಗಳನ್ನು ಕಾಯ್ದಿರಿಸಿದ್ದರೆ, ಮೂರು ಗಂಟೆಗಳ ಪ್ರಯಾಣವು ಎರಡು ದಿನಗಳನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ನೀವು "ತೆರಿಗೆಗಳು ಮತ್ತು ದಂಡ"ಗಳನ್ನು ಪಾವತಿಸಬೇಕಾಗುತ್ತದೆ, ಇದು ಟಿಕೆಟ್‌ನ ನಿಜವಾದ ದರವನ್ನು ಮೀರಿಸುತ್ತದೆ. ಇಟಿಕೆಟ್ ಮತ್ತು ಇನ್‌ವಾಯ್ಸಸ್ ಜನರೇಶನ್ ವ್ಯವಸ್ಥೆಗಳಲ್ಲಿ ದೋಷವಿರುತ್ತದೆ, ಅವು ತಪ್ಪು ಹೆಸರುಗಳನ್ನು, ಟಿಕೆಟ್‌ಗಳನ್ನು ತಪ್ಪು ಗ್ರಾಹಕರಿಗೆ ನೀಡುತ್ತವೆ. ಕಾಯ್ದಿರಿಸಿದ ಟಿಕೆಟ್‌ಗಳ ಬಗೆಗಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಪ್ರತಿಕ್ರಿಯಿಸುವಲ್ಲಿ ಗ್ರಾಹಕ ಸೇವೆಯು ತುಂಬಾ ಕಳಪೆ ಮಟ್ಟದ್ದಾಗಿರುತ್ತದೆ. [೩೧][೩೨]

ಸ್ವಾಧೀನ ಕಾರ್ಯಗಳು[ಬದಲಾಯಿಸಿ]

ಮೇಕ್‌ಮೈಟ್ರಿಪ್ ಟಿಕೆಟ್‌ವಾಲದಿಂದ ವೆಬ್‌ಸೈಟ್, URL, ತಾಂತ್ರಿಕ ಆಧಾರದ ಏಜೆಂಟ್ ಜಾಲ ಮತ್ತು ಬಸ್ ವಿವರಗಳ ಪಟ್ಟಿಯನ್ನೂ ಒಳಗೊಂಡಂತೆ ಹಲವಾರು ಸಹಾಯಕ ಅಂಶಗಳನ್ನು ಖರೀದಿಸಿತು.[೩೩]

ಉಲ್ಲೇಖಗಳು[ಬದಲಾಯಿಸಿ]

  1. "MakeMyTrip.com: Is eCommerce in India Finally Happening?". TechCrunch. Nov 13, 2009. Retrieved 2009-12-31.
  2. ೨.೦ ೨.೧ ೨.೨ "Company Profile". MakeMyTrip. Retrieved 2009-12-31.
  3. "Interview > Deep Kalra, Founder and CEO, MakeMyTrip.com". AlooTechie. 17 March 2009. Retrieved 2009-12-31.
  4. "WIPO Domain Name Decision: D2009-0646". WIPO. 11 August 2009. Retrieved 2009-12-31.
  5. "MakeMyTrip.com launches new website". The Hindu. Sep 09, 2005. Archived from the original on 2012-01-14. Retrieved 2008-02-05. {{cite web}}: Check date values in: |date= (help)
  6. "About us". MakeMyTrip. Retrieved 2008-02-05.
  7. "Products". MakeMyTrip. Retrieved 2009-12-30.
  8. "Financial Investors". MakeMyTrip. Archived from the original on 2011-02-17. Retrieved 2009-12-30.
  9. "Financial Investors". MakeMyTrip. Retrieved 2009-12-30.
  10. "Awards & Recognition". MakeMyTrip. Retrieved 2009-12-30.
  11. "Best Workplaces in India Special Categories and Industries". Great Places to Work. Archived from the original on 2010-06-22. Retrieved 2010-06-21.
  12. "India's Best Companies to Work For". Great Places to Work. Archived from the original on 2010-07-24. Retrieved 2010-06-21.
  13. "Superbrands Honours India's Strongest Consumer Brands". Indiantelevision.com. Archived from the original on 2011-06-04. Retrieved 2009-12-30.
  14. "Best Workplaces in India Special Categories and Industries". Great Places to Work. Archived from the original on 2010-10-24. Retrieved 2009-12-30.
  15. "The Best in Travel & Tourism". My Bangalore. Archived from the original on 2011-07-14. Retrieved 2009-12-30.
  16. ೧೬.೦ ೧೬.೧ ೧೬.೨ ೧೬.೩ ೧೬.೪ "MakeMyTrip Awards and Recognition". MakeMyTrip. Retrieved 2009-12-30.
  17. "Red Herring 100 Asia 2007". Red Herring. Archived from the original on 2007-05-01. Retrieved 2009-12-30.
  18. "ABBYs 2006 Results". Ad Club Bombay. Archived from the original on 2011-03-23. Retrieved 2009-12-30.
  19. "ABBYs 2007 Results". Ad Club Bombay. Archived from the original on 2011-03-23. Retrieved 2009-12-30.
  20. "World Travel Awards – Asia 2007". World Travel Awards. Retrieved 2009-12-30.
  21. "IT Innovators 2007". NASSCOM. Archived from the original on 2007-12-07. Retrieved 2009-12-30.
  22. "Makemytrip.com adjudged best online travel agency". Zee News. Dec 04, 2007. Retrieved 2008-02-05. {{cite web}}: Check date values in: |date= (help)
  23. "Makemytrip wins award". The Business Edition. December 4, 2007. Retrieved 2008-02-05.
  24. "Makemytrip adjudged best online travel agency in India by Galileo Express TravelWorld". exchange4media. December 8, 2007. Archived from the original on 2011-07-10. Retrieved 2008-02-05.
  25. "Emerging India Awards". Money Control. Archived from the original on 2010-12-18. Retrieved 2009-12-30.
  26. "Red Herring Asia Hottest Technology Startup Nominees" (PDF). Red Herring. Archived from the original (PDF) on 2006-08-15. Retrieved 2009-12-30.
  27. "Red Herring Asia Hottest Technology Startup". Red Herring. Archived from the original on 2011-06-07. Retrieved 2009-12-30.
  28. "Interview > Deep Kalra, Founder and CEO, MakeMyTrip.in". AlooTechie. 17 March 2009. Retrieved 2009-12-31.
  29. "Amadeus chosen by 5 Indian online travel agents in rapidly growing market". Amadeus. 2 February 2007. Archived from the original on 2008-01-13. Retrieved 2008-02-05.
  30. "Travel portals click on telecom cos to woo customers". The Economic Times. 28 Aug, 2007. Retrieved 2008-02-05. {{cite web}}: Check date values in: |date= (help)
  31. "Search results: 156 matching Makemytrip". Indian Consumer Complaints Forum. Retrieved 2009-09-30.
  32. "PublishaletterDotcom". Publishaletter.com. Archived from the original on 2011-07-15. Retrieved 2009-09-30.
  33. "MakeMyTrip acquires Ticketvala.com". MakemyTrip. 2010-02-12. Archived from the original on 2012-09-29. Retrieved 2010-02-12.

ಬಾಹ್ಯ ಕೊಂಡಿಗಳು[ಬದಲಾಯಿಸಿ]