ವಿಷಯಕ್ಕೆ ಹೋಗು

ಮೆಸೊಮರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಸೊಮರಿಕೆ ಎಂದರೆ ಸಂಯುಕ್ತವೊಂದು ಅದರಲ್ಲಿಯ ಎಲೆಕ್ಟ್ರಾನುಗಳ ಸ್ಥಾನಗಳನ್ನು ಆಧರಿಸಿಕೊಂಡು ಒಂದು ಇಲ್ಲವೆ ಹೆಚ್ಚು ರಾಚನಿಕ ರೂಪಗಳಲ್ಲಿ ಇರಬಹುದಾದ ವಿದ್ಯಮಾನ (ಮೆಸೊಮರಿಸಮ್).[] ಉದಾಹರಣೆಗೆ R−C(=O)−R' ಅಸಂತೃಪ್ತ ಕೀಟೋನಿನ ಸಂದರ್ಭದಲ್ಲಿ ಹೇಳುವುದಾದರೆ ಆಕ್ಸಿಜನ್ ಪರಮಾಣುವಿನ ಸಾಪೇಕ್ಷ ವಿದ್ಯುತ್ ಋಣಾತ್ಮಕತೆ (ನೆಗೆಟಿವಿಟಿ) ಒಂದು ಎಲೆಕ್ಟ್ರಾನ್ ಜೋಡಿಯನ್ನು ಭಾಗಶಃ ಸ್ಥಳಾಂತರಿಸುತ್ತದೆ. ತತ್ಪರಿಣಾಮವಾಗಿ ಆವೇಶ ಬೇರ್ಪಡಿಕೆ (ಚಾರ್ಚ್ ಸೆಪರೇಷನ್) ಉಂಟಾಗುತ್ತದೆ:

    	                        +	 -
C = C – C = O			C – C =  - O

ಹೈಡ್ರಾಕ್ಸಿಲ್ ಗುಂಪು (--H), ಅಮೈನೊ ಗುಂಪು (--NH2) ಇಲ್ಲವೆ ಹ್ಯಾಲೊಜಿನ್ ಪರಮಾಣು (--Cl) ಮುಂತಾದವುಗಳ ಸನ್ನಿವೇಶಗಳಲ್ಲಿ ಎಲೆಕ್ಟ್ರಾನಿಕ್ ವಿಸ್ಥಾಪನೆಯಾದರೂ ಜೊತೆಗೂಡದ ಎಲೆಕ್ಟ್ರಾನುಗಳಲ್ಲಿ ಉಂಟಾಗುವುದು ಸಾಧ್ಯ. ಹೀಗೆ ವಿನೈಲ್ ಕ್ಲೋರೈಡ್ ಅಣು ಸಂಪೂರ್ಣವಾಗಿ (a) ಕೋವಲಿಂಟ್ ಸೂತ್ರದಿಂದಾಗಲಿ (c) ಸಂಪೂರ್ಣವಾಗಿ ಅಯಾನಿಕ್ ರಚನೆಯಿಂದಾಗಲಿ ಸ್ಪಷ್ಟವಾಗಿ ನಮೂದನೆಗೊಳ್ಳದೆ ಮೆಸೊಮರಿಕ್ ಸ್ಥಿತಿ (b) ಎಂಬುದರಿಂದ ಮಾತ್ರ ನಮೂದಾಗುತ್ತದೆ.

                        8-                      8+
CH2=CH-Cl2		CH2=CH-Cl		CH2-CH=Cl
   (a)			   (b)			  (c)

ಇದರಲ್ಲಿ ಕ್ಲೋರೀನ್ ಪರಮಾಣುವಿನಿಂದ ಎಲೆಕ್ಟ್ರಾನ್ ಜೋಡಿಯ ಸ್ಥಳಾಂತರದ ಪರಿಣಾಮವಾಗಿ ಕ್ಲೋರೀನ್ ಭಾಗಶಃ ಧನಾವೇಶವನ್ನೂ (+) ಅಂತ್ಯದ ಕಾರ್ಬನ್ ಪರಮಾಣು ಭಾಗಶಃ ಋಣಾವೇಶವನ್ನೂ (-) ಹೊಂದಿರುತ್ತದೆ. ಎಲೆಕ್ಟ್ರಾನ್ ರಚನೆಗಳ ಸಂಲಯನ (ಆರಂಭದಲ್ಲಿ ಇದನ್ನು ಅಂತರ್ಬೋಧೆಯಿಂದ ಗ್ರಹಿಸಲಾಗಿತ್ತು) ಅನುರಣನ ಪರಿಕಲ್ಪನೆಗೆ ಎಡೆಮಾಡಿಕೊಟ್ಟಿದೆ. ಈ ಸಂಲಯನದಲ್ಲಿ ಅಣುವಿನ ಶಕ್ತಿ ರಾಸಾಯನಿಕ ಸೂತ್ರಗಳ ಪೈಕಿ ಯಾವುದೇ ಒಂದರಿಂದ ನಿರೀಕ್ಷಿಸಬಹುದಾದ ನಿಮ್ನತಮ ಶಕ್ತಿ ಮಟ್ಟಕ್ಕಿಂತಲೂ ಕೆಳಗಿನದಕ್ಕೆ ಇಳಿದಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. IUPAC, Compendium of Chemical Terminology, 2nd ed. (the "Gold Book") (1997). Online corrected version: (2006–) "Resonance". doi:10.1351/goldbook.R05326


ಹೊರಗಿನ ಕೊಂಡಿಗಳು

[ಬದಲಾಯಿಸಿ]
  • Goudard, N.; Carissan, Y.; Hagebaum-Reignier, D.; Humbel, S. (2008). "HuLiS : Java Applet − Simple Hückel Theory and Mesomery − program logiciel software" (in ಫ್ರೆಂಚ್). Retrieved 29 October 2010.