ಮೆಥಿಲ್ ದೇವಿಕಾ
This biographical article is written like a résumé. (June 2021) |
ಮೆಥಿಲ್ ದೇವಿಕಾ | |
---|---|
ಜನನ | ದುಬೈ,ಯುನೈಟೆಡ್ ಅರಬ್ ಎಮಿರೇಟ್ಸ್(ದಿನಾಂಕ:೫ ಏಪ್ರಿಲ್ ೧೯೭೬) |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನೃತ್ಯ ಪ್ರದರ್ಶನ ಕಲಾವಿದೆ ಮತ್ತು ಸಂಶೋದಕಿ |
ಗಮನಾರ್ಹ ಕೆಲಸಗಳು | ಭಾರತೀಯ ಶಾಸ್ತ್ರೀಯ ನೃತ್ಯ ಮೋಹಿನಿನಾಟ್ಯಂ |
ಸಂಗಾತಿ | ರಾಜೀವ್ ನಯ್ಯರ್ (m. ೨೦೦೨-೨೦೦೪)
Mukesh
(m. ೨೦೧೩; div. ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".) |
ಪೋಷಕರು |
|
ಸಂಬಂಧಿಕರು | ರಾಧಿಕ ಪಿಳ್ಳೈ ಇವರು ಮೆಥಿಲ್ ರಾಧಿಕ ನಾಯರ್ ಎಂದೇ ಪ್ರಸಿದ್ದರು(ಸಹೋದರಿ) |
ಮೆಥಿಲ್ ದೇವಿಕಾ (ಜನನ ೧೯೭೬ ) ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ಮತ್ತು ಸಂಶೋಧನಾ ಮೇಲ್ವಿಚಾರಕಿ. [೩] ಇವರು ಪ್ರಸ್ತುತ ಇಸ್ರೋದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸಸ್ ಅಂಡ್ ಟೆಕ್ನಾಲಜೀಸ್‌ನಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿದ್ದು, ತಮ್ಮ ಕಲ್ಪನೆಯ ಆರ್ಟ್ಸ್-ಇಂಟಿಗ್ರೇಟೆಡ್-ಅಡ್ವಾನ್ಸ್-ಸೈನ್ಸ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. [೪] 'ಟೆಂಪಲ್ ಟೆರೈನ್ ಆಸ್ ಎ ನ್ಯೂ ಪರ್ಫಾರ್ಮೆನ್ಸ್ ಸ್ಪೇಸ್ ಫಾರ್ ದಿ ವುಮನ್ ಡ್ಯಾನ್ಸರ್: ಎ ಸ್ಟಡಿ ಆನ್ ದಿ ಮಾಡರ್ನ್ ವುಮನ್ ಇನ್‌ವೆಂಟ್ಸ್ ಇನ್ ಎಸೊಟೆರಿಕ್ ಸ್ಪೇಸಸ್' ಕುರಿತು ಸಂಶೋಧನೆ ನಡೆಸಿದ್ದಕ್ಕಾಗಿ ಕೇರಳ ಮುಖ್ಯಮಂತ್ರಿಯವರ ನವ ಕೇರಳ ಪೋಸ್ಟ್ ಡಾಕ್ಟರಲ್ ಫೆಲೋಶಿಪ್, ೨೦೨೩ ಅನ್ನು ಸಹ ಪಡೆದುಕೊಂಡಿದ್ದಾರೆ. [೫]
೨೦೨೩ ರಲ್ಲಿ ತಿರುವನಂತಪುರಂನಲ್ಲಿ ನಡೆದ ಇಂಡಿಯಾ ಟುಡೆ ಕಾನ್ಕ್ಲೇವ್ (ದಕ್ಷಿಣ)ನಲ್ಲಿ ದೇವಿಕಾ ಅವರು ಭಾಷಣಕಾರರಾಗಿದ್ದರು. [೪]
ಶಿಕ್ಷಣ
[ಬದಲಾಯಿಸಿ]ದೇವಿಕಾ ಅವರು ೨೦೧೪ ರಲ್ಲಿ ತಮಿಳುನಾಡಿನ ಭಾರತಿದಾಸನ್ ವಿಶ್ವವಿದ್ಯಾನಿಲಯದಿಂದ ಮೋಹಿನಿಯಾಟ್ಟಂ ವಿಷಯದಲ್ಲಿ ತಮ್ಮ ಪಿಹೆಚ್‌ಡಿ ಅನ್ನು ಪೂರ್ಣಗೊಳಿಸಿದರು. [೬] ಅವರು ಪಶ್ಚಿಮ ಬಂಗಾಳದ ಕೋಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ಪ್ರದರ್ಶನ ಕಲೆಯಲ್ಲಿ ಎಂಎ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂಬಿಎ (ಪ್ರಥಮ ಶ್ರೇಣಿ) ಪಡೆದಿದ್ದಾರೆ. [೭]
ಇವರು ಖಜುರಾಹೊ ಅಂತರಾಷ್ಟ್ರೀಯ ಉತ್ಸವ ಸೇರಿದಂತೆ ಭಾರತದ ಅನೇಕ ನೃತ್ಯ ಉತ್ಸವಗಳಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ನೀಡಿದ್ದಾರೆ. [೮]
ಇವರು ಮದ್ರಾಸ್ ಮ್ಯೂಸಿಕ್ ಅಕಾಡೆಮಿ, [೯] ಮುದ್ರಾ ಉತ್ಸವ [೧೦] ಮತ್ತು ನಿಶಾಗಂಧಿ ನೃತ್ಯ ಉತ್ಸವದಲ್ಲಿ ಪ್ರದರ್ಶನ ನೀಡಿದ್ದಾರೆ. [೧೧] ಇಷ್ಟು ಮಾತ್ರವಲ್ಲದೆ ಬೋಸ್ಟನ್, [೧೨] ನ್ಯೂಯಾರ್ಕ್, ಟೆಕ್ಸಾಸ್, ಫಿಲಡೆಲ್ಫಿಯಾ, ಲಾವೋಸ್, [೧೩] ಚಿಯಾಂಗ್ ಮಾಯ್, [೧೪] ಸಿಡ್ನಿ ಮತ್ತು ಮೆಲ್ಬೋರ್ನ್‌ಗಳಲ್ಲಿ ಪ್ರದರ್ಶನ ನೀಡಿದ್ದಾರೆ. [೧೫]
ದಾಖಲೀಕರಣ
[ಬದಲಾಯಿಸಿ]೨೦೧೮ ರಲ್ಲಿ, ದೇವಿಕಾ ಅವರು ಸರ್ಪತತ್ವಂ ಅಥವಾ ದಿ ಸರ್ಪೆಂಟ್ ವಿಸ್ಡಮ್ ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಿದರು. ಇವರು ಸಂಗೀತಕ್ಕೆ ಸಾಹಿತ್ಯವನ್ನು ಹೊಂದಿಸಿ , ಅದಕ್ಕೆ ನೃತ್ಯ ಸಂಯೋಜಿಸಿ ಮತ್ತು ನೃತ್ಯವನ್ನು ಪ್ರದರ್ಶಿಸಿದರು. ಇದರ ಸಹ-ನಿರ್ದೇಶಕಿ ಮತ್ತು ಸಹ-ನಿರ್ಮಾಪಕರಾಗಿ ಸಹ ಸೇವೆ ಸಲ್ಲಿಸಿದ್ದರು. [೧೬] ಈ ಚಲನಚಿತ್ರವು ೨೦೧೮ರಲ್ಲಿ ಆಸ್ಕರ್‌ನ ವಿವಾದಗಳ ಪಟ್ಟಿಗೆ ಮತ ಹಾಕಲಾಯಿತು [೧೭] ಇದು ಪ್ರೆಸ್ಟೀಜ್ ಥಿಯೇಟರ್ಸ್, ಎಲ್‌ಎ ನಲ್ಲಿ ಪ್ರಥಮ ಪ್ರದರ್ಶನಗೊಂಡಿತು ಮತ್ತು ವಿವಿಧ ಅಂತಾರಾಷ್ಟ್ರೀಯ ಚಿತ್ರಮಂದಿರಗಳಲ್ಲಿಯೂ ಸಹ ಪ್ರದರ್ಶಿಸಲಾಯಿತು. ಪುಣೆಯ ಎನ್‌ಎಫ್‌ಎಐನಲ್ಲಿ ಇದು ಆರಂಭಿಕ ಚಿತ್ರವೂ ಆಗಿತ್ತು. ಸಂಪ್ರದಾಯ ಡ್ಯಾನ್ಸ್ ಕಂಪನಿಯಿಂದ ನಿಯೋಜಿಸಲ್ಪಟ್ಟ ಅವರ ಇತ್ತೀಚಿನ ಕೃತಿ ಅಹಲ್ಯಾ ಮೇ ೨೦೨೧ ರಲ್ಲಿ ವಿಶ್ವ ಪ್ರಥಮ ಪ್ರದರ್ಶನ ಮಾಡಲಾಯಿತು. ಇದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಮಾಡಿದ ಏಕಾಂತತೆಯಲ್ಲಿನ ಪ್ರತಿಬಿಂಬಗಳನ್ನು ಆಧರಿಸಿದೆ ಮತ್ತು ಸ್ವತಃ ಸಂಯೋಜಿಸಿದ ಸಂಗೀತ ಮತ್ತು ನೃತ್ಯವನ್ನು ಆಧರಿಸಿದೆ. [೧೮]
ಪ್ರಶಸ್ತಿಗಳು
[ಬದಲಾಯಿಸಿ]ದೇವಿಕಾ ಅವರ ಆರ್ಕೈವಲ್ ಚಲನಚಿತ್ರವು ೨೦೧೮ ರ ಆಸ್ಕರ್ ಪ್ರಶಸ್ತಿ ವಿವಾದಗಳ ಪಟ್ಟಿಗೆ ಮತ ಹಾಕಲಾಯಿತು. [೧೯] [೨೦] ಇವರು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ (ಮೋಹಿನಿಯಾಟ್ಟಂ ೨೦೦೭ [೨೧] ಗಾಗಿ ಉಸ್ತಾದ್ ಬಿಸ್ಮಿಲ್ಲಾ ಯುವ ಪುರಸ್ಕಾರ ಮತ್ತು ೨೦೧೦ ರಲ್ಲಿ ಒರಿಸ್ಸಾ ಸಚಿವರಿಂದ ದೇವದಾಸಿ ಪ್ರಶಸ್ತಿ [೨೨] ). ಇವರು ರಾಜ್ಯ ಗೌರವ ಕ್ಷೇತ್ರಕಲಾ ಅಕಾಡೆಮಿ ಪ್ರಶಸ್ತಿ ೨೦೨೦ [೨೩] ಮತ್ತು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೧೧ [೨೪] [೨೫] ಪಡೆದರು.
ಇವರು ೨೦೧೬ ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಮಿಡ್-ಇಯರ್ ಫೆಸ್ಟ್‌ನ ಅತ್ಯುತ್ತಮ ನೃತ್ಯಗಾರ್ತಿ ಪ್ರಶಸ್ತಿಯನ್ನು ಪಡೆದರು [೨೬] ಅವರು ೨೦೧೦ರಲ್ಲಿ SPIC-MACAY (ಯುವಕರಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯ ಪ್ರಚಾರಕ್ಕಾಗಿ ಸೊಸೈಟಿ) ಗೆ ಸೇರ್ಪಡೆಗೊಂಡರು. [೨೭] [೨೮] ಇವರು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ದೆಹಲಿ [೨೯]ಯಲ್ಲಿ ಮೋಹಿನಿಯಾಟ್ಟಂಗಾಗಿ ಎಂಪಾನೆಲ್ ಕಲಾವಿದರಾಗಿದ್ದಾರೆ.ಇವರು ೨೦೨೨ ರಲ್ಲಿ ದಕ್ಷಿಣಾಮೂರ್ತಿ ಪುರಸ್ಕಾರವನ್ನು, ಪಂಡಿತ್ ಶ್ರೀ ಹರಿಪ್ರಸಾದ್ ಚೌರಾಸಿಯಾ ಮತ್ತು ಶ್ರೀ ಶಿವಮಣಿ ಅವರೊಂದಿಗೆ ಪಡೆದರು. [೩೦]
ಉಲ್ಲೇಖಗಳು
[ಬದಲಾಯಿಸಿ]- ↑ "ഇത് ഞങ്ങള് കാത്തിരുന്ന വിവാഹം - articles,infocus_interview". Mathrubhumi.com. Archived from the original on 18 ಮಾರ್ಚ್ 2014. Retrieved 19 ಮಾರ್ಚ್ 2014.
- ↑ Radhika C. Pillai (9 ನವೆಂಬರ್ 2013). "My marriage with Mukesh is an arranged one: Methil Devika". The Times of India. Archived from the original on 14 ನವೆಂಬರ್ 2013. Retrieved 25 ಜನವರಿ 2014.
- ↑ "methil devika". eShe (in ಇಂಗ್ಲಿಷ್). Retrieved 24 ಮೇ 2021.
- ↑ ೪.೦ ೪.೧ "Women have come a long way, but a little more improvement won't do harm: Kerala Minister Mridula Ramesh". India Today (in ಇಂಗ್ಲಿಷ್). Retrieved 21 ಜುಲೈ 2023.
- ↑ "GOVERNMENT OF KERALA" (PDF). Archived from the original (PDF) on 29 ಮೇ 2023.
- ↑ "Dancing to the tunes of life". Deccan Chronicle (in ಇಂಗ್ಲಿಷ್). 16 ಫೆಬ್ರವರಿ 2017. Retrieved 12 ಜುಲೈ 2018.
- ↑ "Dancing to the tunes of life". Retrieved 21 ಜುಲೈ 2023.
- ↑ "So much divine energy in Khajuraho: Methil Devika". INDIA New England News (in ಇಂಗ್ಲಿಷ್). 7 ಮಾರ್ಚ್ 2016. Archived from the original on 28 ಜುಲೈ 2021. Retrieved 24 ಮೇ 2021.
- ↑ Kochi, RITZ (22 ಜನವರಿ 2019). "Redefining Dance : A Chat With Dr.Methil Devika! | RITZ" (in ಅಮೆರಿಕನ್ ಇಂಗ್ಲಿಷ್). Retrieved 24 ಮೇ 2021.
- ↑ Nisha (17 ಸೆಪ್ಟೆಂಬರ್ 2010). "Exquisite recitals". The Hindu (in Indian English). ISSN 0971-751X. Retrieved 24 ಮೇ 2021.
- ↑ Nampoothiri, Hareesh N. (5 ಫೆಬ್ರವರಿ 2015). "Potpourri of dance". The Hindu (in Indian English). ISSN 0971-751X. Retrieved 24 ಮೇ 2021.
- ↑ "Mohiniyattam recital by Methil Devika in Boston!! at Chinmaya Mission Auditorium, Andover, MA | Indian Event". events.sulekha.com (in ಇಂಗ್ಲಿಷ್). Retrieved 24 ಮೇ 2021.
- ↑ "First Indian Classical Dance Show Debuts in Vientiane Capital – Lao Tribune" (in ಅಮೆರಿಕನ್ ಇಂಗ್ಲಿಷ್). 26 ಜನವರಿ 2017. Archived from the original on 9 ಏಪ್ರಿಲ್ 2023. Retrieved 24 ಮೇ 2021.
- ↑ "Indian Dance and Fashion Show at Central festival". Chiang Mai Citylife (in ಅಮೆರಿಕನ್ ಇಂಗ್ಲಿಷ್). Retrieved 24 ಮೇ 2021.
- ↑ admin. "Methil Devika Dance workshop in Melbourne". Indian Events | Movies | Australian (in ಅಮೆರಿಕನ್ ಇಂಗ್ಲಿಷ್). Archived from the original on 24 ಮೇ 2021. Retrieved 24 ಮೇ 2021.
- ↑ Nagarajan, Saraswathy (20 ಸೆಪ್ಟೆಂಬರ್ 2018). "In tune with the dance of the serpent". The Hindu (in Indian English). ISSN 0971-751X. Retrieved 14 ಅಕ್ಟೋಬರ್ 2018.
- ↑ name="auto1">Slayton, Jeff (26 ಸೆಪ್ಟೆಂಬರ್ 2018). "Sarpathathwa -The Serpent Wisdom: A Beautiful Short Film by Indian Classical Dancer Methil Devika". L.A. Dance Chronicle (in ಅಮೆರಿಕನ್ ಇಂಗ್ಲಿಷ್). Retrieved 24 ಮೇ 2021.
- ↑ Kumar, P. k Ajith (6 ಮೇ 2021). "When life imitates art during pandemic". The Hindu (in Indian English). ISSN 0971-751X. Retrieved 24 ಮೇ 2021.
- ↑ "Review - Sarpatatwam - Padma Jayaraj". narthaki.com. Retrieved 24 ಮೇ 2021.
- ↑ Slayton, Jeff (26 ಸೆಪ್ಟೆಂಬರ್ 2018). "Sarpathathwa -The Serpent Wisdom: A Beautiful Short Film by Indian Classical Dancer Methil Devika". L.A. Dance Chronicle (in ಅಮೆರಿಕನ್ ಇಂಗ್ಲಿಷ್). Retrieved 24 ಮೇ 2021.Slayton, Jeff (26 September 2018).
- ↑ "Methil Devika interacts with students in the city - Times of India". The Times of India. 19 ಏಪ್ರಿಲ್ 2013. Retrieved 24 ಮೇ 2021.
- ↑ "Keeping a tradition alive". The New Indian Express. Retrieved 24 ಮೇ 2021.
- ↑ "Thiraseela.com". thiraseela.com. Retrieved 24 ಮೇ 2021.
- ↑ "Kerala Sangeetha Nataka Akademi Award: Dance". Department of Cultural Affairs, Government of Kerala. Retrieved 26 ಫೆಬ್ರವರಿ 2023.
- ↑ "Methil Devika". Mathrubhumi (in ಇಂಗ್ಲಿಷ್). 14 ಜನವರಿ 2019. Retrieved 24 ಮೇ 2021.
- ↑ Srikanth, Rupa (8 ಜುಲೈ 2016). "Dance of grace". The Hindu (in Indian English). ISSN 0971-751X. Retrieved 24 ಮೇ 2021.
- ↑ "Samskriti: Collaborations With SPIC MACAY Amrita Vishwa Vidyapeetham". www.amrita.edu. Retrieved 24 ಮೇ 2021.
- ↑ "Forgotten moves". Hindustan Times (in ಇಂಗ್ಲಿಷ್). 10 ಏಪ್ರಿಲ್ 2013. Retrieved 24 ಮೇ 2021.
- ↑ "Dr. Methil Devika | Indian Council for Cultural Relations". www.iccr.gov.in. Retrieved 24 ಮೇ 2021.
- ↑ "Singer Nanchamma, 3 others to receive awards". The Times of India. 13 ಡಿಸೆಂಬರ್ 2022. ISSN 0971-8257. Retrieved 21 ಜುಲೈ 2023.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಮೆಥಿಲ್ ದೇವಿಕಾ ಅವರ ಮೋಹಿನಿಯಾಟ್ಟಂ ಕುರಿತು ಲೇಖನ
- Media related to Methil Devika at Wikimedia Commons</img>
- CS1 ಇಂಗ್ಲಿಷ್-language sources (en)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- CS1 Indian English-language sources (en-in)
- Short description matches Wikidata
- Use dmy dates from July 2018
- Articles with invalid date parameter in template
- Articles with a promotional tone from June 2021
- All articles with a promotional tone
- Articles with hCards
- ವಿಕಿಪೀಡಿಯ ಅನುವಾದ ಶಿಬಿರ ಲೇಖನ
- ನೃತ್ಯ ಕಲಾವಿದರು