ಮೆಗಾನ್ ಫಾಕ್ಸ್
Megan Fox | |
---|---|
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
Megan Denise Fox ೧೬ ಮೇ ೧೯೮೬ Oak Ridge, Tennessee, United States |
ವೃತ್ತಿ | Actress |
ವರ್ಷಗಳು ಸಕ್ರಿಯ | 2001–present |
ಮೆಗಾನ್ ಡೇನಿಸ್ ಫಾಕ್ಸ್ (ಜನನ: 1986ರ ಮೇ 16) ಅಮೆರಿಕಾದ ನಟಿ ಮತ್ತು ರೂಪದರ್ಶಿಯಾಗಿದ್ದಾಳೆ. ಇವಳು ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುವ ಮೂಲಕ ತನ್ನ ನಟನಾವೃತ್ತಿಯನ್ನು 2001ರಲ್ಲಿ ಪ್ರಾರಂಭಿಸಿದಳು ಮತ್ತು ಹೋಪ್ ಆಂಡ್ ಫೆಯಿಥ್ ನಲ್ಲಿ ಸ್ಮರಣೀಯ ಪಾತ್ರದಲ್ಲಿ ಸಹ ನಟಿಸಿದ್ದಾಳೆ. 2004ರಲ್ಲಿ ಕನ್ಫೆಷನ್ಸ್ ಆಫ್ ಎ ಟೀನೇಜ್ ಡ್ರಾಮಾ ಕ್ವೀನ್ ನಲ್ಲಿ ಅಭಿನಯಿಸುವುದರೊಂದಿಗೆ ತನ್ನ ಚಲನಚಿತ್ರ ವೃತ್ತಿಯನ್ನು ಪ್ರಾರಂಭಿಸಿದಳು. 2007ರಲ್ಲಿ ಯಶಸ್ವಿ ಟ್ರಾನ್ಸ್‌ಫಾರ್ಮರ್ಸ್ ಚಿತ್ರದಲ್ಲಿ ಶಿಯಾ ಲಾಬೆಯೊಫ್‌ನನ್ನು ಪ್ರೀತಿಸುವ ಮೈಕೀಲಾ ಬೇನ್ಸ್‌ಳ ಪಾತ್ರದಲ್ಲಿ ಫಾಕ್ಸ್ ನಟಿಸಿದಳು. ಇದು ಅವಳಿಗೆ ಜನಪ್ರಿಯ ಪಾತ್ರ ವೆನಿಸಿತು ಮತ್ತು ಇದು ಹಲವು ಟೀನ್ ಚಾಯಿಸ್ ಪ್ರಶಸ್ತಿಗಳ ನಾಮನಿರ್ದೇಶನಗಳನ್ನು ಗಳಿಸಲು ನೆರವಾಯಿತು. 2009ರಲ್ಲಿ ಆ ಚಿತ್ರ ಸರಣಿಯ ಮುಂದಿನ ಚಿತ್ರಗಳಲ್ಲಿ ಫಾಕ್ಸ್ ತನ್ನ ಹಿಂದಿನ ಪಾತ್ರವನ್ನು ಪುನರಾವರ್ತಿಸಿದಳುTransformers: Revenge of the Fallen . ನಂತರ 2009ರಲ್ಲಿ, ಜನ್ನಿಫರ್'ಸ್ ಬಾಡಿ ಚಿತ್ರದಲ್ಲಿ ನಾಮಕಾವಸ್ತೆಯ ಪ್ರಮುಖ ಪಾತ್ರದಲ್ಲಿ ನಟಿಸಿದಳು.
ಫಾಕ್ಸ್‌ಳನ್ನು ಲೈಂಗಿಕ ಆಕರ್ಷಣೆಯ ಸಂಕೇತವೆಂದು ಪರಿಗಣಿಸಲಾಗಿದ್ದು, ಪದೆಪದೇ ಅವಳು ಪುರುಷರ ನಿಯತಕಾಲಿಕೆ "ಹಾಟ್" ಪಟ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅವಳು 2007, 2008 ಮತ್ತು 2009ರ ಮ್ಯಾಕ್ಸಿಮ್ ನಿಯತಕಾಲಿಕೆಯ ವಾರ್ಷಿಕ ಹಾಟ್ 100 ಪಟ್ಟಿಯಲ್ಲಿ ಅನುಕ್ರಮವಾಗಿ #18, #16, ಮತ್ತು #2ನೇ ಸ್ಥಾನವನ್ನು ಪಡೆದಿದ್ದಳು. 2008ರಲ್ಲಿ ಇವಳನ್ನು FHM ಓದುಗರು "ವಿಶ್ವದ ಅತ್ಯಂತ ಲೈಂಗಿಕ ಆಕರ್ಷಣೆಯ ಮಹಿಳೆ" ಎಂದು ಆಯ್ಕೆಮಾಡಿದ್ದರು.[೧] 2008ರಲ್ಲಿ ಅವಳು ಮೂವೀಫೋನ್‌ನ "25 ವರ್ಷದೊಳಗಿನ 25 ಲೈಂಗಿಕಾಕರ್ಷಕ ನಟಿಯರ" ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಗಳಿಸಿದ್ದಳು.[೨] 2004ರಲ್ಲಿ ಫಾಕ್ಸ್ ಬೆವರ್ಲಿ ಹಿಲ್ಸ್ 90210 ಖ್ಯಾತಿಯ ಬ್ರೈನ್ ಆಸ್ಟಿನ್ ಗ್ರೀನ್‌ನೊಂದಿಗೆ ವಿಹಾರ(ಡೇಟಿಂಗ್) ನಡೆಸತೊಡಗಿದಳು. ನಂತರ ಹೋಪ್ ಆಂಡ್ ಫೆಯಿಥ್ ನ ಚಿತ್ರೀಕರಣ ಸ್ಥಳದಲ್ಲಿ ಅವರಿಬ್ಬರು ಭೇಟಿಯಾಗಿದ್ದರು.[೩][೪] ಅವರಿಬ್ಬರು ತೆರೆಯ ಮೇಲೆ ಮತ್ತು ಹೊರಗೆ ಸಂಬಂಧವನ್ನು ಹೊಂದಿದ್ದರು.
ಆರಂಭಿಕ ಜೀವನ
[ಬದಲಾಯಿಸಿ]ಪಾಕ್ಸ್ ಐರಿಷ್, ಫ್ರೆಂಚ್ ಮತ್ತು ಸ್ಥಳೀಯ ಅಮೆರಿಕಾದ ಮನೆತನಕ್ಕೆ ಸೇರಿದವಳು[೫] ಮತ್ತು ಟೆನ್ನೆಸ್ಸೀಯ ಓಕ್ ರಿಡ್ಜ್‌ನಲ್ಲಿ ಡೆರ್ಲೆನ್ ಟೊನಾಚಿಯೊ ಮತ್ತು ಫ್ರ್ಯಾಂಕ್ಲಿನ್ ಫಾಕ್ಸ್‌ರ ಮಗಳಾಗಿ ಜನಿಸಿದಳು. ಆದರೆ ಫಾಕ್ಸ್ ತನ್ನ ಉಪನಾಮದಿಂದ ಒಂದು "x" ಅನ್ನು ತೆಗೆದುಹಾಕಿದಳು.[೬] ಫಾಕ್ಸ್‌ಳಿಗೆ ಒಬ್ಬಳು ಅಕ್ಕ ಇದ್ದಳು.[೬] ಫಾಕ್ಸ್ ಬಾಲ್ಯದಲ್ಲಿರುವಾಗಲೇ, ಅವಳ ಪೋಷಕರು ವಿಚ್ಫೇದನವನ್ನು ತೆಗೆದುಕೊಂಡಿದ್ದರು. ಅವಳ ತಾಯಿ ಮತ್ತು ಮಲತಂದೆ ಫಾಕ್ಸ್ ಮತ್ತು ಅವಳ ಅಕ್ಕನನ್ನು ಬೆಳೆಸಿದರು.[೬][೭][೮] ಅವರಿಬ್ಬರು "ತುಂಬಾ ಕಠಿಣ"[೭] ರಾಗಿದ್ದು, ಗೆಳೆಯನನ್ನು ಹೊಂದಲು ಅವಕಾಶ ನೀಡುತ್ತಿರಲಿಲ್ಲ ಎಂದು ಫಾಕ್ಸ್ ಹೇಳುತ್ತಿದ್ದಳು.[೬][೭] ಅವಳು ಸಾಕಷ್ಟು ಹಣ ಗಳಿಸಿ ತನ್ನ ಕಾಲ ಮೇಲೆ ನಿಂತುಕೊಳ್ಳುವವರೆಗೆ, ತಾಯಿಯೊಂದಿಗೆ ವಾಸವಾಗಿದ್ದಳು.[೭]
ಫಾಕ್ಸ್ ತನ್ನ ಐದನೇ ವಯಸ್ಸಿನಲ್ಲಿಯೇ ಟೆನ್ನೆಸ್ಸೀನ ಕಿಂಗಸ್ಟನ್‌ನಲ್ಲಿ ನಾಟಕ ಮತ್ತು ನೃತ್ಯದ ತರಬೇತಿಯನ್ನು ಆರಂಭಿಸಿದ್ದಳು.[೯] ಅಲ್ಲಿ ಅವಳು ಸಮುದಾಯ ಕೇಂದ್ರದಲ್ಲಿರುವ ನೃತ್ಯ ತರಗತಿಯಲ್ಲಿ ಭಾಗವಹಿಸಿದಳು ಮತ್ತು ಕಿಂಗಸ್ಟನ್ ಪ್ರಾಥಮಿಕ ಶಾಲೆಯ ಗಾಯಕ ತಂಡ ಮತ್ತು ವೇಗದ ಈಜು ತಂಡದ ಸದಸ್ಯಳಾಗಿದ್ದಳು. ಫಾಕ್ಸ್ ತನ್ನ 10ನೇ ವಯಸ್ಸಿನಲ್ಲಿ, ಫ್ಲೋರಿಡಾದ ಸೈಂಟ್ ಪೀಟರ್ಸ್‍ಬರ್ಗ್‌ಗೆ ತೆರಳಿದ ನಂತರ ಅಲ್ಲಿ ತನ್ನ ತರಬೇತಿಯನ್ನು ಮುಂದುವರಿಸಿದಳು.[೧೦][೧೧] ಸೌಥ್ ಕ್ಯಾಲಿಪೋರ್ನಿಯಾದ ಹಿಲ್ಟನ್ ಹೆಡ್‌ನಲ್ಲಿ 1999 ಅಮೆರಿಕಾದ ರೂಪದರ್ಶಿಸ್ಪರ್ಧೆ ಮತ್ತು ಪ್ರತಿಭಾನ್ವೇಷಣೆಯಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದ ನಂತರ, ಫಾಕ್ಸ್ ತನ್ನ 13ನೇ ವಯಸ್ಸಿನಲ್ಲಿ ಮಾಡಲಿಂಗ್ ಅನ್ನು ಪ್ರಾರಂಭಿಸಿದಳು.[೧೨] ಫಾಕ್ಸ್ ತನ್ನ ಮಾಧ್ಯಮಿಕ ಶಿಕ್ಷಣಕ್ಕಾಗಿ ಖಾಸಗಿ ಕ್ರೈಸ್ತ ಶಾಲೆಯಾದ ಮಾರ್ನಿಂಗ್‌ಸೈಡ್ ಅಕಾಡಮಿಯನ್ನು[೧೩] ಸೇರಿದಳು ಮತ್ತು 17ರ ವಯಸ್ಸಿನಲ್ಲಿ ದೂರ ಶಿಕ್ಷಣದ ಮೂಲಕ ಶಾಲೆಯ ಹೊರಗೆ ಕಲಿತರೂ, ಪ್ರೌಢ ಶಾಲಾ ಶಿಕ್ಷಣವನ್ನು ಸೈಂಟ್ ಲುಸೀ ವೆಸ್ಟ್ ಸೆಂಟೆನೀಯಲ್ ಹೈ ಸ್ಕೂಲ್‌ನಲ್ಲಿ ಮುಗಿಸಿದಳು.[೧೦]
ಫಾಕ್ಸ್ ತನ್ನ ಶಾಲಾಜೀವನದ ಬಗ್ಗೆ ವ್ಯಾಪಕವಾಗಿ ಹೇಳಿಕೊಂಡಿದ್ದಾಳೆ. ಮಾಧ್ಯಮಿಕ ಶಾಲೆಯಲ್ಲಿರುವ ಸಮಯದಲ್ಲಿ ಅವಳು ಪೀಡನೆ, ಕಿರುಕುಳಕ್ಕೆ ಗುರಿಯಾಗಿದ್ದಳು ಮತ್ತು ಅವಳು " ಕೆಚಪ್ ಪೊಟ್ಟಣಗಳ ಪೆಟ್ಟಿನಿಂದ" ತಪ್ಪಿಸಿಕೊಳ್ಳಲು ಸ್ನಾನದ ಕೋಣೆಯಲ್ಲಿ ಊಟವನ್ನು ತಿನ್ನುತ್ತಿದ್ದಳು. ಅವಳೇ ಹೇಳುವಂತೆ, ಅವಳ ಸೌಂದರ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ "ಯಾವಾಗಲೂ ಹುಡುಗರ ಜತೆ ಉತ್ತಮವಾಗಿ ಹೊಂದಿಕೊಂಡು ಹೋಗುತ್ತಿದ್ದಳು" ಮತ್ತು ಅದರಿಂದ"ಕೆಲವರು ತಪ್ಪು ಹಾದಿಯನ್ನು ಹಿಡಿದರು".[೧೪] ಫಾಕ್ಸ್ ತನ್ನ ಪ್ರೌಢ ಶಾಲೆ ಜೀವನ ಬಗ್ಗೆ ಕೂಡಾ ಹೇಳುತ್ತಾ, ತಾನು ಜನಪ್ರಿಯಳಾಗಿರಲಿಲ್ಲ ಮತ್ತು "ಎಲ್ಲರೂ ನನ್ನನ್ನು ದ್ವೇಷಿಸುತ್ತಿದ್ದರು ಮತ್ತು ನಾನು ಸಂಪೂರ್ಣ ಬಹಿಷ್ಕೃತಳಾಗಿದ್ದೆ, ಯಾವಾಗಲೂ ನನ್ನ ಸ್ನೇಹಿತರು ಹುಡುಗರಾಗಿರುತ್ತಿದ್ದರು. ನಾನು ಆಕ್ರಮಣಶೀಲ ವ್ಯಕ್ತಿತ್ವವನ್ನು ಹೊಂದಿದ್ದರಿಂದ ಹುಡುಗಿಯರಿಗೆ ಇಷ್ಟವಾಗುತ್ತಿರಲಿಲ್ಲ. ನನ್ನ ಸಂಪೂರ್ಣ ಜೀವನದಲ್ಲಿ ಒಬ್ಬಳೇ ಮಹಾನ್ ಗೆಳತಿಯನ್ನು ಹೊಂದಿದ್ದೆ" ಎಂದು ಹೇಳಿದ್ದಳು.[೧೪] ಅದೇ ಸಂದರ್ಶನದಲ್ಲಿ, ಅವಳು ಶಾಲೆಯನ್ನು ದ್ವೇಷಿಸುತ್ತಿದ್ದುದಾಗಿ ಮತ್ತು "ಔಪಚಾರಿಕ ಶಿಕ್ಷಣದಲ್ಲಿ ಪೂರ್ಣ ನಂಬಿಕೆಯಿಲ್ಲ" ಮತ್ತು "ನಾನು ಪಡೆಯುತ್ತಿದ್ದ ಶಿಕ್ಷಣ ಅಪ್ರಸ್ತುತವೆಂಬಂತೆ ಕಂಡಿತು" ಎಂದು ಹೇಳಿದ್ದಾಳೆ. ಹಾಗಾಗಿ, ನಾನು ಆ ಭಾಗದಿಂದ ಒಂದು ರೀತಿಯಲ್ಲಿ ಹೊರಗಿದ್ದೆ" ಎಂದು ಹೇಳಿಕೊಂಡಿದ್ದಾಳೆ.[೧೪]
ವೃತ್ತಿಜೀವನ
[ಬದಲಾಯಿಸಿ]ಫಾಕ್ಸ್ ತನ್ನ 16ನೇ ವಯಸ್ಸಿನಲ್ಲಿ, ಅಂದರೆ 2001ರಲ್ಲಿ ಹಾಲಿಡೇ ಇನ್ ದಿ ಸನ್ ಚಲನಚಿತ್ರದಲ್ಲಿ ತನ್ನ ಚೊಚ್ಚಲ ನಟನೆಯನ್ನು ಪ್ರಾರಂಭಿಸಿದಳು. ಅವಳು ಕೆಟ್ಟದಾರಿ ಹಿಡಿದ ಆಸ್ತಿಯ ವಾರಸುದಾರಿಣಿ ಬ್ರಯಾನ ವಲ್ಲೇಸ್ ಮತ್ತು ಅಲೆಕ್ಸ್ ಸ್ಟೆವರ್ಟ್ (ಆಶ್ಲೆ ಒಲ್ಸೆನ್) ಎದುರಾಳಿಯ ಪಾತ್ರದಲ್ಲಿ ನಟಿಸಿದ್ದಳು. ಚಲನಚಿತ್ರವು 2001ರ ನವೆಂಬರ್ 20ರಂದು ನೇರ DVD ರೂಪದಲ್ಲಿ ಬಿಡುಗಡೆಯಾಯಿತು. ಅದರ ನಂತರದ ವರ್ಷದಲ್ಲಿ, ಫಾಕ್ಸ್ ಒಷನ್ ಏವ್ ನ ಕಿರುತೆರೆ ಸರಣಿಯಲ್ಲಿ ಲೋನ್ ಸ್ಟಾರ್‌ನ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಳು. 2002ರಿಂದ 2003ವರೆಗಿನ ಭಾಗದಲ್ಲಿ ಎರಡು ಋತುಮಾನ ಅದು ಚಾಲ್ತಿಯಲ್ಲಿತ್ತು. ಇದರಲ್ಲಿ ಫಾಕ್ಸ್ ಒಂದು ಗಂಟೆ ಅವಧಿಯ 122 ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದಳು. 2002ರಲ್ಲಿ ಸಹ, ವಾಟ್ ಐ ಲೈಕ್ ಎಬೌಟ್ ಯೂ ಸರಣಿಯಲ್ಲಿ "ಲೈಕ್ ಎ ವರ್ಜಿನ್ (ಕಿಂಡಾ)" ಸಂಚಿಕೆಯಲ್ಲಿ ಅತಿಥಿ ನಟಿಯಾಗಿ ಕಾಣಿಸಿಕೊಂಡಳು. 2003ರಲ್ಲಿ ಫಾಕ್ಸ್ ಬ್ಯಾಡ್ ಬಾಯ್ಸ್ II ನಲ್ಲಿ ಹೆಸರುಪಡೆಯದ ಸಹನಟಿ ಪಾತ್ರದಲ್ಲಿ ನಟಿಸಿದ್ದಳು. 2004ರಲ್ಲಿ ಟು ಆಂಡ್ ಎ ಹಾಫ್ ಮೆನ್ ದ "ಕ್ಯಾಮಲ್ ಫಿಲ್ಟರ್ಸ್ ಆಂಡ್ ಫೆರೊಮನಸ್" ಸಂಚಿಕೆಯಲ್ಲಿ ಫಾಕ್ಸ್ ಅತಿಥಿ ಪಾತ್ರದಲ್ಲಿ ನಟಿಸಿದಳು. ಕೆಲವು ವರ್ಷಗಳಲ್ಲಿ, ಫಾಕ್ಸ್ ತನ್ನ ಚೊಚ್ಚಲ ಚಿತ್ರ ಕನ್ಫೆಷನ್ಸ್ ಆಫ್ ಎ ಟೀನೇಜ್ ಡ್ರಾಮಾ ಕ್ವೀನ್ ನಲ್ಲಿ ಲಿಂಡ್ಸೆ ಲೋಹನ್‌ಳ ಎದುರು ಸಹನಟಿಯಾಗಿ ನಟಿಸಿದಳು. ಅದರಲ್ಲಿ ಲೋಲಾ (ಲಿಂಡ್ಸೆ ಲೋಹನ್)ಎದುರಾಳಿ ಕರ್ಲಾ ಸಾಂತಿಯ ಪೋಷಕ ಪಾತ್ರದಲ್ಲಿ ನಟಿಸಿದಳು. 2004ರಲ್ಲಿ ಮತ್ತೆ, ಫಾಕ್ಸ್ ABC ಸಿಟ್ಕಾಮ್‌ನ ಹೋಪ್ ಆಂಡ್ ಫೆಯಿಥ್ ನಲ್ಲಿ ನಿಯಮಿತ ಪಾತ್ರದಲ್ಲಿ ನಟಿಸಿದರು.ಅದರಲ್ಲಿ ನಿಕೋಲ್ ಪಗ್ಗಿ ಬದಲಿಗೆ ಸಿಡ್ನಿ ಶನೋವ್‌ಸ್ಕಿ ಪಾತ್ರದಲ್ಲಿ ಚಿತ್ರಿತವಾದಳು. 2006ರಲ್ಲಿ ಈ ಪ್ರದರ್ಶನವು ರದ್ದಾಗುವವರೆಗೆ, ಇದರ 2 ಮತ್ತು 3 ಋತುವಿನಲ್ಲಿ 36 ಸಂಚಿಕೆಗಳಲ್ಲಿ ಫಾಕ್ಸ್ ಕಾಣಿಸಿಕೊಂಡಿದ್ದಳು.[೧೫]
ಅವಳು 2007ರಲ್ಲಿ ಸ್ವತಃ ಸಾಹಸದೃಶ್ಯಗಳ ಟ್ರಾನ್ಸ್‌ಫಾರ್ಮರ್ಸ್ ಚಿತ್ರದಲ್ಲಿ ಮೈಕೆಲಾ ಬೇನ್ಸ್‌ಳ ಪ್ರಮುಖ ಸ್ತ್ರೀಪಾತ್ರದಲ್ಲಿ ನಟನೆಗೆ ಅವಕಾಶ ಸಿಕ್ಕಿತು.ಇದೇ ಹೆಸರಿನ ಆಟಿಕೆ ಮತ್ತು ಕಾರ್ಟೂನ್ ಕಥೆಯನ್ನು ಈ ಚಿತ್ರ ಆಧರಿಸಿದೆ. ಶಿಯಾ ಲಾಬೆಯೊಫ್‌ನ ಸ್ಯಾಮ್ ವಿಟ್‌ವಿಕ್ಕಿ ಪಾತ್ರದ ಪ್ರೇಮಾಕರ್ಷಣೆಯಾಗಿ ಅವಳು ನಟಿಸಿದಳು. ಫಾಕ್ಸ್ MTV ಮೂವೀ ಪ್ರಶಸ್ತಿಯ "ಶ್ರೇಷ್ಠ ಅಭಿನಯ" ವರ್ಗದಲ್ಲಿ ನಾಮನಿರ್ದೇಶನಗೊಂಡಿದ್ದಳು ಮತ್ತು "ಚಾಯಿಸ್ ಮೂವೀ ಆಕ್ಟ್ರೆಸ್: ಆಕ್ಷನ್ ಅಡ್ವೆಂಚರ್ಸ್", "ಚಾಯಿಸ್ ಮೂವೀ: ಬ್ರೇಕ್‌ಔಟ್ ಫೀಮೇಲ್" ಮತ್ತು "ಚಾಯಿಸ್ ಮೂವೀ: ಲಿಪ್‌ಲಾಕ್" ವರ್ಗಗಳಲ್ಲಿ ಮೂರು ಟೀನ್ ಚಾಯಿಸ್ ಅವಾರ್ಡ್‌ಗಳಿಗೆ ನಾಮನಿರ್ದೇಶನಗೊಂಡಿದ್ದಳು.[೧೬] ಫಾಕ್ಸ್ ಟ್ರಾನ್ಸ್‌ಫಾರ್ಮರ್ಸ್ ನ ಇನ್ನೆರಡು ಮುಂದುವರಿದ ಭಾಗಗಳಿಗೆ ಅಭಿನಯಿಸುವುದಾಗಿ ಒಪ್ಪಂದಕ್ಕೆ ಸಹಿಹಾಕಿದಳು.[೧೫][೧೭] 2007ರ ಜೂನ್‌ನಲ್ಲಿ, ಫಾಕ್ಸ್ ಜೆಫ್ ಬ್ರಿಡ್ಜ್, ಸೈಮನ್ ಪೆಗ್ ಮತ್ತು ಕಿರ್ಸ್ಟನ್ ಡಂಸ್ಟ್‌ರೊಂದಿಗೆ ಹೌ ಟು ಲೂಸ್ ಫ್ರೆಂಡ್ಸ್ ಆಂಡ್ ಏಲೀನೇಟ್ ಪೀಪಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಳು. ಇದರಲ್ಲಿ ಫಾಕ್ಸ್ ಸಿಡ್ನಿ ಯಂಗ್‌ನನ್ನು (ಸೈಮನ್ ಪೆಗ್) ಪ್ರೀತಿಸುವ ಸೋಫಿ ಮೇಸ್ ಪಾತ್ರದಲ್ಲಿ ನಟಿಸಿದ್ದಳು. 2008ರ ಅಕ್ಟೋಬರ್ 3ರಂದು ಚಲನಚಿತ್ರವು ಪ್ರಥಮ ಬಾರಿ ಪ್ರದರ್ಶನಗೊಂಡಿತು. ಆದರೆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ವಿಫಲ ಎಂದು ಪರಿಗಣಿತವಾಯಿತು.[೧೮][೧೯] 2008ರಲ್ಲಿ ಲಾಸ್ಟ್ ಇನ್ ವೋರ್ ಪಾತ್ರವಾಗಿ ರ‌್ಯೂಮರ್ ವಿಲ್ಲಿಸ್ ಜತೆ ಕಾಣಿಸಿಕೊಂಡಳು. ನಟನಾ ವೃತ್ತಿಯ ಆಸೆಯಿಂದ ಹಾಲಿವುಡ್‌ಗೆ ಆಗಮಿಸಿದ ಆಶಾವಾದಿ ಹದಿಹರೆಯದವರ ಗುಂಪಿನ ಸುತ್ತ ಚಿತ್ರವು ಕೇಂದ್ರೀಕೃತವಾಗಿದ್ದು, ಇಲ್ಲಿ ವ್ಯವಹರಿಸುವುದು ತಾವು ಎಣಿಸಿದ್ದಕ್ಕಿಂತ ಕಠಿಣ ಎಂದು ಅರಿವಾಗುತ್ತದೆ. 2008ರ ಅಕ್ಟೋಬರ್ 20ರಂದು ಚಿತ್ರವು ಬಿಡುಗಡೆಯಾಯಿತು.[೨೦]
ಫಾಕ್ಸ್ ಟ್ರಾನ್ಸ್‌ಫಾರ್ಮರ್ ಮುಂದಿನ ಭಾಗದಲ್ಲಿTransformers: Revenge of the Fallen ಸಹ ಮೈಕೀಲಾ ಬೇನ್ಸ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಳು. ಟ್ರಾನ್ಸ್‌ಫಾರ್ಮರ್ಸ್ ಮುಂದುವರಿದ ಭಾಗದ ಚಿತ್ರೀಕರಣದ ವೇಳೆ, ನಿರ್ದೇಶಕ ಮೈಕಲ್ ಬೇ, ಫಾಕ್ಸ್‌ಳಿಗೆ 10 ಪೌಂಡ್‌ಗಳಷ್ಟು ತೂಕವನ್ನು ಹೆಚ್ಚಿಸಿಕೊಳ್ಳಲು ಆದೇಶಿದ್ದರಿಂದ ಫಾಕ್ಸ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸುತ್ತ ವಿವಾದಗಳು ಹುಟ್ಟಿಕೊಂಡಿದ್ದವು.[೨೧] ಜಪಾನಿನ ಟೊಕಿಯೊದಲ್ಲಿ 2009 ಜೂನ್ 8ರಂದು ಟ್ರಾನ್ಸ್‌ಫಾರ್ಮರ್ಸ್: ರಿವೆಂಜ್ ಆಫ್ ದಿ ಫಾಲನ್ ಚಿತ್ರದ ಪ್ರಥಮ ಪ್ರದರ್ಶನ ನಡೆಯಿತು. 2009 ಜೂನ್ 24ರಂದು ಚಿತ್ರವು ವಿಶ್ವದಾದ್ಯಂತ ಬಿಡುಗಡೆಗೊಂಡಿತು.[೨೨] ಅಕಾಡಮಿ ಪ್ರಶಸ್ತಿ ವಿಜೇತರಾದ, ಚಿತ್ರಕಥೆಗಾರ ಡಿಯಾಬ್ಲೊ ಕೋಡಿ ಬರೆದಿರುವ ಜನ್ನಿಫರ್'ಸ್ ಬಾಡಿ ಚಿತ್ರದಲ್ಲಿ ಫಾಕ್ಸ್ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದಳು.[೨೩] ಇದರಲ್ಲಿ ಅವಳು ಕೃಷಿ ಆಧಾರಿತ ಪಟ್ಟಣಮಿನ್ನೆಸೋಟಾದಲ್ಲಿ ನಾಚಿಕೆಯ ಸ್ವಭಾವದ,ಚಿಯರ್‌ಲೀಡರ್(ಆಟಕ್ಕೆ ಉತ್ತೇಜಿಸುವ ಮುಂದಾಳು) ಹುಡುಗರನ್ನು ತಿನ್ನುವ ಪ್ರೇತವೊಂದರಿಂದ ಪೀಡಿತಳಾದ ಜೆನ್ನಿಫರ್ ಚೆಕ್ ಪಾತ್ರವನ್ನು ವಹಿಸಿದಳು.[೨೪] 2009 ಸಪ್ಟೆಂಬರ್ 18ರಂದು ಚಲನಚಿತ್ರವು ಬಿಡುಗಡೆಯಾಯಿತು[೨೫] ಮತ್ತು ಆ ಚಿತ್ರದಲ್ಲಿ ಅವಳೊಂದಿಗೆ ಅಮಂದ ಸೇಫ್ರೈಡ್ ಮತ್ತು ಆಡಮ್ ಬ್ರೊಡಿಸಹನಟರಾಗಿದ್ದರು.
2009ರ ಎಪ್ರಿಲ್‌ನಲ್ಲಿ ಪ್ರಾರಂಭವಾದ ಜೋನ್ನಾ ಹೆಕ್ಸ್ ಚಿತ್ರದ ಚಿತ್ರೀಕರಣದಲ್ಲಿ ಫಾಕ್ಸ್ ಬಂದೂಕನ್ನು ಝುಳುಪಿಸುವ ಸುಂದರಿ ಮತ್ತು ಜೋನ್ನಾ ಹೆಕ್ಸ್‌ನ (ಜೋಶ್ ಬ್ರೋಲಿನ್) ಪ್ರೀತ್ಯಾಸಕ್ತಿಯ ಲೈಲಾಳ ಪಾತ್ರದಲ್ಲಿ ನಟಿಸಿದಳು. ಈ ಚಲನಚಿತ್ರವು ನಿರ್ಮಾಣ ಹಂತದಲ್ಲಿದ್ದು, ಇದು 2010ರ ಜೂನ್ 18ರಂದು ಬಿಡುಗಡೆಗೊಳ್ಳಲಿದೆ. ಚಿತ್ರದಲ್ಲಿ ಜೋಶ್ ಬ್ರೋಲಿನ್ ಮತ್ತು ವಿಲ್ ಆರ್ನೆಟ್[೨೬] ನಟನೆಯಿದ್ದು ಕಿರುಪಾತ್ರ(ಕ್ಯಾಮಿಯೊ)ವೆಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.[೨೭] 2009ರ ಎಪ್ರಿಲ್‌ನ ಮೊದಲ ಭಾಗದಲ್ಲಿ, 2011ರಲ್ಲಿ ಬಿಡುಗಡೆಗೊಳ್ಳುವ ದಿ ಕ್ರಾಸಿಂಗ್ ಚಿತ್ರದಲ್ಲಿ ಪ್ರಮುಖ ಸ್ತ್ರೀ ಪಾತ್ರದಲ್ಲಿ ನಟಿಸುವುದಕ್ಕಾಗಿ ಸಹಿ ಹಾಕಿದ್ದಾಳೆ.ಈ ಚಿತ್ರವು ಯುವ ದಂಪತಿಗಳು ಮೆಕ್ಸಿಕೊದಲ್ಲಿ ರಜಾದಿನಗಳನ್ನು ಕಳೆಯುವಾಗ ಮಾದಕ ವಸ್ತು ಸಾಗಣೆ ಜಾಲದೊಂದಿಗೆ ಸಿಕ್ಕಿಹಾಕಿಕೊಳ್ಳುವ ಕಥೆಯನ್ನು ಹೊಂದಿದ ಚಿತ್ರವಾಗಿದೆ.[೨೮] ಫಾಕ್ಸ್ ಕಾಮಿಕ್ ಪುಸ್ತಕಗಳ ರೂಪಾಂತರ ಚಿತ್ರಫ್ಯಾಥಮ್ ನಲ್ಲಿ ಆಸ್ಪೆನ್ ಮ್ಯಾಥೀವ್ಸ್ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದಾಗಿ 2009ರ ಮಾರ್ಚ್‌ನಲ್ಲಿ ವೆರೈಟಿ ಯಲ್ಲಿ ವರದಿಯಾಗಿದೆ. ಈ ಚಿತ್ರವನ್ನು ಅವಳು ಬ್ರೈನ್ ಆಸ್ಟಿನ್ ಗ್ರೀನ್‌ನೊಂದಿಗೆ ಸಹನಿರ್ಮಾಣ ಮಾಡುತ್ತಿದ್ದಾಳೆ.[೨೯] ಪ್ರಸ್ತುತ ಫ್ಯಾಥಮ್ ನಿರ್ಮಾಣ ಪೂರ್ವ ಹಂತದಲ್ಲಿದೆ.[೩೦]
ಸಾರ್ವಜನಿಕ ಪ್ರಖ್ಯಾತಿ
[ಬದಲಾಯಿಸಿ]ದಿ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಆದರ್ಶ ವ್ಯಕ್ತಿಯಾಗುವ ವಿಷಯದ ಮೇಲೆ ಫಾಕ್ಸ್ ಹೀಗೆ ಹೇಳಿದಳು: "ಆದರ್ಶ ವ್ಯಕ್ತಿಯ ಬಗ್ಗೆ ನಿಮ್ಮ ಕಲ್ಪನೆಯನ್ನು ಅದು ಅವಲಂಬಿಸಿದೆ" ಮುಂದುವರಿಸಿದ ಫಾಕ್ಸ್, "ವಿವಾಹಪೂರ್ವ ಲೈಂಗಿಕತೆ ತಪ್ಪು ಮತ್ತು ನಿಂದಿಸುವುದು ತಪ್ಪು ಮತ್ತು ಮಹಿಳೆಯರು ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ನಿಮ್ಮ ಮಕ್ಕಳಿಗೆ ಬೋಧಿಸುವ ವ್ಯಕ್ತಿ ನಿಮ್ಮ ಕಲ್ಪನೆಯ ಆದರ್ಶವ್ಯಕ್ತಿಯಾಗಿದ್ದರೆ, ನಾನು ಅಂತಹ ಆದರ್ಶ ವ್ಯಕ್ತಿ ಅಲ್ಲ. ಆದರೆ ನೀವು ನಿಮ್ಮ ಮಗಳು ದೃಢ ಮನೋಭಾವ ಮತ್ತು ಬುದ್ಧಿವಂತಳಾಗಲು ಬಯಸಿದ್ದರೆ, ಮುಚ್ಚುಮರೆಯಿಲ್ಲದೇ ಮಾತನಾಡುವ,ಯಾವುದು ಸರಿ ಎಂದು ಭಾವಿಸುತ್ತಾಳೋ ಅದಕ್ಕಾಗಿ ಹೋರಾಡಬೇಕೆಂದು ಬಯಸಿದ್ದರೆ, ಆಗ ನಾನು ಆ ರೀತಿಯ ಜನರಿಗೆ ಆದರ್ಶವ್ಯಕ್ತಿಯಾಗಲು ಬಯಸುತ್ತೇನೆ,."[೩೧] ಅದೇ ಸಂದರ್ಶನದಲ್ಲಿ ಫಾಕ್ಸ್ ಒಂದು ಮಾದರಿಯ ಪಾತ್ರದಲ್ಲಿ ಗುರುತಿಸಿಕೊಳ್ಳುವ ವಿಷಯದ ಬಗ್ಗೆ ಮಾತನಾಡುತ್ತಾ, "ಯಾವ ಮಾದರಿಯಲ್ಲಿ? ಆಕರ್ಷಣೆಯೇ? ಅದು ಹೇಗೆ ಕೆಟ್ಟದ್ದಾಗುತ್ತದೆ?" ಈ ರೀತಿಯಾಗಿ ಪಾತ್ರಗಳಲ್ಲಿ ಗುರುತಿಸಿಕೊಳ್ಳುವುದು ಕೆಟ್ಟದ್ದಲ್ಲ ಮತ್ತು ಅದು ಹೆಮ್ಮೆಯೆನಿಸುತ್ತದೆಂದು ಅವಳು ಭಾವಿಸುತ್ತಾಳೆ. ಅದು ತನಗೆ ಅನುಕೂಲವಾಗಿ ಪರಿಣಮಿಸುತ್ತದೆಂದು ಅವಳು ನಂಬಿದ್ದಾಳೆ.ಜನರು ಕೇವಲ ಆಕರ್ಷಣೆಗಿಂತ ಹೆಚ್ಚಾಗಿ ಅವಳಿಂದ ಬೇರೆನನ್ನೂ ನಿರೀಕ್ಷಿಸುವುದಿಲ್ಲ. ಅವಳು ಉತ್ತಮ ಅಭಿನಯ ನೀಡಿದಾಗ, ಜನರು ಆಶ್ಚರ್ಯಚಕಿತರಾಗುತ್ತಾರೆಂದು ಅವಳು ನಂಬಿದ್ದಾಳೆ.[೩೧] ಫಾಕ್ಸ್ ಟ್ರಾನ್ಸ್‌ಫಾರ್ಮರ್ಸ್ ಚಲನಚಿತ್ರ ಸರಣಿಯಲ್ಲಿ ಅಭಿನಯಿಸಿದ ಮೈಕೀಲಾ ಬೇನ್ಸ್ ಪಾತ್ರಕಿಂತ ಕಡಿಮೆ ಲೈಂಗಿಕ ಆಕರ್ಷಣೆ ಇರುವ ಪಾತ್ರಗಳಲ್ಲಿ ಅಭಿನಯಿಸಲು ಆಸಕ್ತಿಯನ್ನು ತೋರಿಸಿದ್ದಾಳೆ.[೩೨]
ಫಾಕ್ಸ್ ಜನಪ್ರಿಯ ಮಾಧ್ಯಮ ವಿಷಯವಾಗುವ ಬಗ್ಗೆ ಮಾತನಾಡುತ್ತಾ,ತಾನು ಜನ್ನಿಫರ್ ಅನಿಸ್ಟನ್, ಬ್ರಿಟ್ನಿ ಸ್ಪೀಯರ್, ಅಥವಾ ಲಿಂಡ್ಸೆ ಲೋಹನ್‌ರ ಮಟ್ಟದಲ್ಲಿ ಇಲ್ಲದಿದ್ದರೂ, ಅದು ಕಷ್ಟವೆಂದು ತಿಳಿದಿದ್ದರೂ,ತನ್ನ ಸುತ್ತಮುತ್ತ ಸುಳಿಯದೇ ಜನರು ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭಗಳೂ ಇದ್ದವು. ಏಕೆಂದರೆ ಮಾಧ್ಯಮದ ದೃಷ್ಟಿ ತಮ್ಮ ಮೇಲೆ ಬೀಳುವುದು ಅವರಿಗೆ ಇಷ್ಟವಿರಲಿಲ್ಲ. "ಜನರು ನನ್ನನ್ನು ಗಂಭೀರವಾಗಿ ತೆಗೆದುಕೊಳ್ಳುವ ರೀತಿಯಲ್ಲಿ ನಾನು ನಡವಳಿಕೆ ತೋರಿಸಬೇಕು ಮತ್ತು ನನ್ನನ್ನು ಸ್ವಯಂ ನಿಭಾಯಿಸಬೇಕು" ಎಂದು ಹೇಳಿದಳು. ಮುಂದುವರಿಸುತ್ತಾ, "[ಮತ್ತು] ನೀವು ಲೈಂಗಿಕಾರ್ಷಕ ಮತ್ತು ಬುದ್ದಿವಂತರಾಗಿ ಇದ್ದು ಜನರು ನಿಮ್ಮನ್ನು ಗಂಭೀರವಾಗಿ ಪರಿಗಣಿಸಿರಬಹುದು, ಅಥವಾ ನೀವು ಲೈಂಗಿಕಾರ್ಷಕವಾಗಿದ್ದು, ಪ್ರತಿ ರಾತ್ರಿ ಕ್ಲಬ್ಬ್‌ಗಳಿಗೆ ಹೋಗುವುದಾದರೆ ಪರಿಗಣಿಸುವುದಿಲ್ಲ (ಗಂಭೀರವಾಗಿ)"ಆದರೆ ತಾನು ಸಂಪೂರ್ಣ ಬುದ್ಧಿವಿಕಲ್ಪಳಾಗಿಲ್ಲ" ಎಂದು ಹೇಳಿದಳು.[೩೨] ಫಾಕ್ಸ್ ಪ್ರಸ್ತುತ ಪ್ರಸಿದ್ಧಿಯ ಸ್ಥಾನಮಾನಕ್ಕೆ "ಸಂಬಂಧಿಸಿ ಅಜ್ಞಾತವಾಗಿ"ಉಳಿದಿರುವ ಬಗ್ಗೆ ಹೀಗೆ ಹೇಳಿದಳು: "ನಾನು ಖಂಡಿತವಾಗಿ ತಯಾರಾಗಿಲ್ಲ ಎಂದು ಭಾವಿಸುತ್ತೇನೆ; ಅಂದರೆ, ಯಾರಾದರೂ ಕುಳಿತು 'ತಾನು ಪ್ರಖ್ಯಾತಿಯ ವ್ಯಕ್ತಿಯೆಂದು ಭಾವಿಸಲು ಇದು ಸರಿಯಾದ ಕ್ಷಣ"ವೆಂದು ಭಾವಿಸುತ್ತಾರೆಂದು ತನಗೆ ತಿಳಿದಿಲ್ಲ- ಆದರೆ ಇದು ಅಪಕ್ವ ಕಾಲವೆಂದು ತಾನು ಖಂಡಿತವಾಗಿ ಭಾವಿಸುತ್ತೇನೆ. ಇದುವರೆಗೆ ನಾನು ಅಭಿನಯಿಸಿದ ಕೇವಲ ಒಂದು ಚಿತ್ರವನ್ನು ಮಾತ್ರ ಜನರು ನೋಡಿದ್ದಾರೆ."[೩೨]
ಫಾಕ್ಸ್ ಹಲವಾರು ನಿಯತಕಾಲಿಕೆಗಳ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾಳೆ. 2007ರಲ್ಲಿ ಮ್ಯಾಕ್ಸಿಮ್ ನಿಯತಕಾಲಿಕೆಯಲ್ಲಿ ಕಾಣಿಸಿಕೊಂಡಿದ್ದಾಳೆ;[೩೩] 2008ರಲ್ಲಿ ಕೊಸ್ಮೊ ಗರ್ಲ್ ,[೩೪][೩೫] ಪಾವ್ ಪ್ರಿಂಟ್ ,[೩೬] ಜ್ಯಾಕ್ (ITALY),[೩೭] FHM (UK),[೩೮] ಮತ್ತು GQ ಸೇರಿದಂತೆ ಪಟ್ಟಿ ಬೆಳೆಯಿತು.[೩೯][೪೦] 2009ರ ಪಟ್ಟಿಯಲ್ಲಿ USA ವೀಕೆಂಡ್ ,[೪೧] ಎಸ್ಕ್ವೈರ್ ,[೪೨] ಎಂಪೈರ್ ,[೪೩] ಮ್ಯಾಕ್ಸಿಮ್ ,[೪೪] GQ (UK),[೪೫] ಎಂಟರ್‌ಟೈನ್‌ಮೆಂಟ್ ವೀಕ್ಲಿ [೪೬] ಮತ್ತು ELLE ಸೇರಿದೆ.[೭] "ಫ್ಯುಚರ್ ಸ್ಟಾರ್ಸ್ ಆಫ್ ಟುಮಾರೊವ್" ವೀಕ್ಷಣೆಯ ಸಂದರ್ಭದಲ್ಲಿ ಹಾಲಿವುಡ್ ನಿಯತಕಾಲಿಕೆಗಳು ನಡೆಸಿದ ಸಂದರ್ಶನದಲ್ಲಿ ಫಾಕ್ಸ್ #17 ಸ್ಥಾನವನ್ನು ಗಳಿಸಿದ್ದಳು,(not clear) ಮ್ಯಾಕ್ಸಿಮ್ ನಿಯತಕಾಲಿಕೆಯ 2008ರ ಹಾಟ್ 100 ಪಟ್ಟಿಯಲ್ಲಿ #16 ಸ್ಥಾನವನ್ನು ಗಳಿಸಿದ್ದಳು, FHM ನಿಯತಕಾಲಿಕೆಯ "2006ರ 100 ಅತ್ಯಂತ ಲೈಂಗಿಕಾರ್ಷಣೆಯ ಮಹಿಳೆ" ಪತ್ರಿಕಾ ಪುರವಣಿಯಲ್ಲಿ #68 ಸ್ಥಾನವನ್ನು ಗಳಿಸಿದ್ದಳು, ಮ್ಯಾಕ್ಸಿಮ್ ನಿಯತಕಾಲಿಕೆಯ 2007ರ ಹಾಟ್ 100 ಪಟ್ಟಿಯಲ್ಲಿ #18 ಸ್ಥಾನದಲ್ಲಿದ್ದಳು, 2008ರಲ್ಲಿ ಮೂವೀಫೋನ್‌ನ '25ಕ್ಕಿಂತ ಕಡಿಮೆ ವಯಸ್ಸಿನ 25 ಅತಿಲೈಂಗಿಕಾರ್ಷಕ ನಟಿ'ಯರಲ್ಲಿ #1ನೇ ಸ್ಥಾನ ಗಳಿಸಿದ್ದಳು ಮತ್ತು 2009ರಲ್ಲಿ ಮ್ಯಾಕ್ಸಿಮ್ ನಿಯತಕಾಲಿಕೆಯ 2009ರ ಹಾಟ್ 100 ಪಟ್ಟಿಯಲ್ಲಿ #2ನೇ ಸ್ಥಾನವನ್ನು ಗಳಿಸಿದ್ದಳು. 2008ರಲ್ಲಿ FHM ಓದುಗರು ಫಾಕ್ಸ್‌ಳನ್ನು "ವಿಶ್ವದ ಅತ್ಯಂತ ಲೈಂಗಿಕಾರ್ಷಣೆಯ ಮಹಿಳೆ"ಯಾಗಿ ಆಯ್ಕೆ ಮಾಡಿದರು.[೧][೨]
2009ರ ಜುಲೈ ಕೊನೆಯ ಭಾಗದಲ್ಲಿ, ಮಾಧ್ಯಮದ ಕೆಲವು ಭಾಗಗಳಲ್ಲಿ ಫಾಕ್ಸ್‌ನ ಅತಿಯಾದ ಮೈಮಾಟ ಪ್ರದರ್ಶನವು ಹಲವು ಪುರುಷರ ವೆಬ್‌ಸೈಟ್‌ಗಳು ಅವಳನ್ನು ಬಹಿಷ್ಕರಿಸಲು ಪ್ರೇರೇಪಿಸಿದವು.[೪೭] AOLರ ಪುರುಷರ- ಬ್ಲಾಗ್ ಅಸಿಲಮ್,"ಎ ಡೇ ವಿದೌಟ್ ಮೇಗನ್ ಫಾಕ್ಸ್" ಎಂದು 2009ರ ಆಗಸ್ಟ್ 4ನ್ನು ಹೆಸರಿಸಿ, ಆ ದಿನ ಅವಳ ವಿಶೇಷ ಲೇಖನ ಅಥವಾ ಪ್ರಸ್ತಾಪ ಮಾಡುವುದಿಲ್ಲ ಎನ್ನುವ ಭರವಸೆ ನೀಡಿತು ; ಅವರು ಇದನ್ನೇ ನಕಲಿಸುವಂತೆ ಇತರ ಪುರುಷರ ಜಾಲತಾಣಗಳಿಗೂ ಹೇಳಿತು ಮತ್ತು ಅದನ್ನು ಹಲವು ಜಾಲತಾಣಗಳು AskMen.com ಜಸ್ಟ್ ಎ ಗೇ ಥಿಂಗ್, ಮತ್ತು ಬ್ಯಾನಡ್ ಇನ್ ಹಾಲಿವುಡ್)ನಂತಹವು ಅನುಸರಿಸಿದವು. ನ್ಯೂಯಾರ್ಕ್ ಡೈಲಿ ನ್ಯೂಸ್ ಗೆ TheBachelorGuy.comನ ಎರಿಕ್ ರೋಜಲ್, "ಕೇಳಿ, ನಾವು ಮೇಗನ್‌ಳನ್ನು ಪ್ರೀತಿಸುತ್ತೇವೆ" ಎಂದು ಹೇಳುತ್ತಾನೆ. " ನಮ್ಮ ಜಾಲತಾಣಗಳ ಮೇಲೆ ಹೆಚ್ಚು ಜನರ ಕಣ್ಣುಗಳನ್ನು ಸೆಳೆಯಲು ಅವಳು ಕಾರಣಳಾಗಿದ್ದಾಳೆ-ಬಿಳಿಯ T-ಶರ್ಟ್‌ನಲ್ಲಿ ಬೀದಿಯಲ್ಲಿ ನಡೆಯುವಾಗ ಛಾಯಾಚಿತ್ರಕ್ಕೆ ಭಂಗಿ ನೀಡುವ ಮೂಲಕ-ಯಾವುದೇ ಜೀವಂತ ಪ್ರಸಿದ್ಧ ನಟಿಗಿಂತ. [ಆದರೆ] ಇನ್ನೊಂದು ಯುವ ನಟಿಯ ಬಗ್ಗೆ ಜನರ ಗಮನ ಸೆಳೆಯುವ ಅವಕಾಶಕ್ಕೆ ಇದು ಸಕಾಲ"[೪೭] ಇದಕ್ಕೆ ಪ್ರತಿಯಾಗಿ, 2009ರ ಸಪ್ಟೆಂಬರ್‌ನಲ್ಲಿ ನೈಲಾನ್ ನಿಯತಕಾಲಿಕೆಗೆ ಫಾಕ್ಸ್ ನೀಡಿದ ಸಂದರ್ಶನದಲ್ಲಿ,ಟ್ರಾನ್ಸ್‌ಫಾರ್ಮರ್ಸ್‌ಗೆ "ಮಾಧ್ಯಮದ ತೀರ್ಪಿ"ನಿಂದಾಗಿ ಮಾಧ್ಯಮದಲ್ಲಿ ತನ್ನ ಸ್ವಾಗತವನ್ನು ಇನ್ನಷ್ಟು ವಿಸ್ತರಿಸಲು ನೆರವಾಯಿತು ಎಂದು ಫಾಕ್ಸ್ ಪ್ರತಿಕ್ರಿಯಿಸಿದ್ದಾಳೆ. "ನಾನು $700 ದಶಲಕ್ಷದಷ್ಟು ಆದಾಯವನ್ನು ಖಾತ್ರಿಮಾಡಲು [ಸ್ಟುಡಿಯೊ]ಬಯಸುವ ಈ ಚಿತ್ರದ ಭಾಗವಾಗಿದ್ದೇನೆ. ಹಾಗಾಗಿ ಚಿತ್ರದ ನಟರ ವರ್ಣನೆಗಳನ್ನು ಮಾಧ್ಯಮದಲ್ಲಿ ಹೆಚ್ಚಾಗಿ ಅವರು ತುಂಬಿದ್ದಾರೆ" ಎಂದು ಹೇಳಿದಳು.[೪೮] "ನಾನು ಸ್ವಲ್ಪವಾದರೂ ತರ್ಕಬದ್ಧ ಕೆಲಸ ಮಾಡುವ ಮೊದಲೇ ಜನರು ನನ್ನ ಬಗ್ಗೆ ಸಂಪೂರ್ಣವಾಗಿ ಜುಗುಪ್ಸೆಗೊಳ್ಳುವುದು ತನಗೆ ಇಷ್ಟವಿಲ್ಲ" ಎಂದು ಹೇಳಿದ್ದಾಳೆ.[೪೮]
2009ರ ಸಪ್ಟೆಂಬರ್ 11ರಂದು ಅಡೋಲ್ಫ್ ಹಿಟ್ಲರ್‌ನೊಂದಿಗೆ ಹೋಲಿಕೆ ಸೇರಿದಂತೆ ಸೆಟ್‌ನಲ್ಲಿ ಮೈಕೇಲ್ ಬೇ ನಡವಳಿಕೆ ಬಗ್ಗೆ ಫಾಕ್ಸ್ ಮಾಡಿದ ಆರೋಪಗಳ ವಿರುದ್ಧ ಟ್ರಾನ್ಸ್‌ಫಾರ್ಮರ್ಸ್ ಸಿಬ್ಬಂದಿ ಸದಸ್ಯರ ಸಹಿಮಾಡದ ಪತ್ರವು ಮೈಕೇಲ್ ಬೇನನ್ನು ಸಮರ್ಥಿಸಿಕೊಂಡಿತು. ಫಾಕ್ಸ್ ಸೆಟ್‌ನಲ್ಲಿ ಕೆಲಸ ಮಾಡುವುದು ಅಹಿತಕಾರಿಯೆನಿಸುತ್ತದೆ ಎಂದು ಪತ್ರದಲ್ಲಿ ಆರೋಪಿಸಲಾಯಿತು ಮತ್ತು ಅವಳ ಸಾರ್ವಜನಿಕ ವ್ಯಕ್ತಿತ್ವಕ್ಕೆ ಭಿನ್ನವಾದ ಅಸೌಜನ್ಯದ ನಡವಳಿಕೆ ತೋರಿಸುತ್ತಾಳೆಂದು ಅನೇಕ ಆರೋಪಗಳನ್ನು ಮಾಡಿತು. ಬೇ ಫಾಕ್ಸ್ ಪರವಾಗಿ ಮಾತನಾಡಿ, ನಾನು ಪತ್ರವನ್ನು "ಗಣನೆಗೆ ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದರು. ಟ್ರಾನ್ಸ್‌ಫಾರ್ಮರ್ಸ್ ಚಿತ್ರದಲ್ಲಿ ನಿರ್ಮಾಣ ಸಹಾಯಕರಾಗಿ ಕೆಲಸ ಮಾಡಿದ ಅಂಥೋನಿ ಸ್ಟೀನ್‌ಹಾರ್ಟ್‌ರು ಫಾಕ್ಸ್‌ಳನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿ, "...ಫಾಕ್ಸ್ ಮಾಡಬೇಕಾದ ಕೆಲಸಕ್ಕೆ ಅಥವಾ ಜನರ ಭಾವನೆಗಳಿಗೆ ಬೆಲೆಕೊಡದೇ ಒರಟಾಗಿ ವರ್ತಿಸಿದ್ದನ್ನು ತಾವು ಕಂಡಿಲ್ಲ" ಎಂದು ಹೇಳಿದ್ದಾರೆ. .[೪೯]
ಏಂಜಲಿನಾ ಜೂಲಿಯೊಂದಿಗೆ ಹೋಲಿಕೆ
[ಬದಲಾಯಿಸಿ]ಫಾಕ್ಸ್‌ಳನ್ನು ಹೆಚ್ಚಾಗಿ ನಟಿ ಏಂಜಲಿನಾ ಜೂಲಿಯೊಂದಿಗೆ ಹೋಲಿಸುವರು ಮತ್ತು ಮಾಧ್ಯಮದವರು ಅವಳನ್ನು "ಮುಂದಿನ ಏಂಜಲಿನಾ ಜೂಲಿ" ಎಂಬಂತೆ ಪ್ರತಿಬಿಂಬಿಸಿದರು.[೫೦][೫೧][೫೨] ಫಾಕ್ಸ್‌ಳನ್ನು ಜೂಲಿಯೊಂದಿಗೆ ಹೋಲಿಸಲಾಗಿರುವುದು ಏಕೆಂದರೆ ಪ್ರತಿಯೊಬ್ಬರೂ "ಹಚ್ಚೆ ಸಂಗ್ರಹ"ವನ್ನು ಹೊಂದಿದ್ದರು ಮತ್ತು "ಸಹಜ ಲೈಂಗಿಕಾರ್ಷಣೆಯ ಸಂಕೇತದ ಸ್ಥಾನಮಾನ" ಗಳಿಸಿದ್ದರು.[೫೩][೫೪][೫೫] ತಾನು ಮತ್ತು ಜೂಲಿ ಕಪ್ಪು ಕೂದಲು ಮತ್ತು ಹಚ್ಚೆಗಳನ್ನು ಹೊಂದಿದ್ದು, ಇಬ್ಬರೂ ಸಾಹಸ ಚಿತ್ರಗಳಲ್ಲಿ ಅಭಿನಯಿಸಿದ ಮಾತ್ರಕ್ಕೆ, ಈ ರೀತಿ ಹೋಲಿಕೆಗಳನ್ನು ಮಾಡುವುದು ಮಾಧ್ಯಮದ ಕಡೆಯಿಂದ ಕ್ರಿಯಾಶೀಲತೆಯ ಕೊರತೆಯನ್ನು ತೋರಿಸುವುದು ಎಂದು ಫಾಕ್ಸ್ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಲಾರಾ ಕ್ರೋಫ್ಟ್ ಚಲನಚಿತ್ರದಲ್ಲಿ ಜೂಲಿ ಬದಲಿಗೆ ಫಾಕ್ಸ್ ನಟಿಸುವಳು ಎನ್ನುವ ಬಗ್ಗೆ ಹಲವಾರು ಖಚಿತವಲ್ಲದ ಗಾಳಿ ಸುದ್ದಿಗಳಿವೆ.[೫೬][೫೭][೫೮] ಫಾಕ್ಸ್ ಈ ಹೋಲಿಕೆಗಳ ಬಗ್ಗೆ ತಿಳಿಸುತ್ತಾ: "ನಾನು ಹಚ್ಚೆಗಳನ್ನು ಹಾಕಿಸಿಕೊಂಡ ಕಪ್ಪು ಕೂದಲಿನ ಹೆಂಗಸಾಗಿದ್ದೇನೆ. ನಾನು ದೂಷಿಸುತ್ತೇನೆ ಮತ್ತು ಈ ಮುಂಚೆ ಲೈಂಗಿಕತೆ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಜನರು ಗುರುತಿಸಿದ ಹೋಲಿಕೆಯ ಬಗ್ಗೆ ನಾನು ಹಾಸ್ಯ ಮಾಡಿದ್ದೇನೆ. ಹಾಗಾಗಿ ಅದನ್ನು ಅಪಮಾನಕಾರಿ ಎಂದು ಜನರು ಭಾವಿಸಿ ಸತತವಾಗಿ ಜೂಲಿಗೆ ತನ್ನನ್ನು ಹೋಲಿಸಲು ಬಯಸಿದ್ದಾರೆ" ಎಂದು ಹೇಳಿದಳು.[೫೯] ನನಗೆ ಜೂಲಿಯನ್ನು ಬೇಟಿ ಮಾಡುವ ಅವಕಾಶ ಸಿಗಲಿಲ್ಲ. ಆದರೆ ನಾನು "ಭೇಟಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇನೆ, ಏಕೆಂದರೆ ನನಗೆ ಭಯವಾಗುವುದು." ಏಕೆಂದರೆ "ಜೂಲಿಯು ತುಂಬಾ ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ನನ್ನನ್ನು ಖಂಡಿತ ಜೀವಂತವಾಗಿ ತಿಂದುಹಾಕುತ್ತಾಳೆ" ಎಂದು ಫಾಕ್ಸ್ ನುಡಿದಿದ್ದಾಳೆ.[೫೬][೬೦] ಫಾಕ್ಸ್ ಮುಂದುವರಿಸುತ್ತಾ, "ನಾನು ಯಾರೆಂಬ ಬಗ್ಗೆ ಜೂಲಿಗೆ ಕಲ್ಪನೆಯಿಲ್ಲ. ಆದರೆ ನಾನು ಅವಳಾಗಿದ್ದರೆ,'ನನ್ನ ನಂತರ ಭರವಸೆ ಮೂಡಿಸಿದಟ್ರಾನ್ಸ್‌ಫಾರ್ಮರ್ಸ್ ನಲ್ಲಿ ಅಭಿನಯಿಸಿದ ಈ ಅಸಂಬದ್ಧ ಪಿಳ್ಳೆ ಯಾರು?' ಎಂದು ಭಾವಿಸುತ್ತಿದ್ದೆ. ನಾನು ಅವಳನ್ನು ಭೇಟಿಯಾಗಲು ಬಯಸುವುದಿಲ್ಲ. ಅದು ನನಗೆ ಕಸಿವಿಸಿಯಾಗಬಹುದು" ಎಂದು ಹೇಳಿದಳು.[೫೩][೬೧]
ಟಾಟೂಗಳು (ಹಚ್ಚೆಗಳು)
[ಬದಲಾಯಿಸಿ]ಫಾಕ್ಸ್ ತನ್ನ ಕೆಳಭಾಗದ ಸೊಂಟದಲ್ಲಿರುವ ತನ್ನ ಹಳೆಯ ಭಾವಿ ವರನ ಹೆಸರು "ಬ್ರೈನ್" ಮತ್ತು ಬಲಮುಂಗೈಯಲ್ಲಿಮರ್ಲಿನ್ ಮನ್ರೊಯ ಮುಖದ ಚಿತ್ರದ ಹಚ್ಚೆ[೬೨] ಸೇರಿ ತಿಳಿದಿರುವಂತೆ ಎಂಟು ಹಚ್ಚೆಗಳನ್ನು ಹಾಕಿಸಿಕೊಂಡಿದ್ದಳು.[೬೩] ವಿಲಿಯಂ ಶೇಕ್ಸ್ಪೀಯರ್ರ ಕಿಂಗ್ ಲಿಯರ್ ನಾಟಕದಿಂದ ಆಯ್ದುಕೊಂಡ "ನಾವು ಚಿನ್ನದ ಬಣ್ಣದ ಚಿಟ್ಟೆಗಳನ್ನು ನೋಡಿ ನಗಬೇಕು" ಎಂಬ ಸಾಲನ್ನು ತನ್ನ ಬಲಗೈ ಭುಜದ ಮೇಲೆ ಹಚ್ಚೆಹಾಕಿಕೊಂಡಿದ್ದಳು, ಎಡಗೈ ಮಣಿಕಟ್ಟಿನ ಒಳಭಾಗದಲ್ಲಿ ಯಿನ್ ಮತ್ತು ಯಾಂಗ್(ಸ್ತ್ರೀಪುಂತತ್ವಗಳು) ಹಚ್ಚೆಯನ್ನು ಹಾಕಿಸಿಕೊಂಡಿದ್ದಳು, "ಒಬ್ಬಳು ಚಿಕ್ಕ ಹುಡುಗಿಯ HEART ಒಬ್ಬ ಬಾಲಕ ಒಡೆಯುವ ತನಕ, ಅವಳಿಗೆ ಪ್ರೀತಿ ಎಂದರೆ ಏನು ಅಂತ ತಿಳಿದಿರಲಿಲ್ಲ" ಎನ್ನುವ ಹಾಡಿನ ಸಾಲನ್ನು ತನ್ನ ಎಡ ಪಕ್ಕೆಲುಬಿನ ಮೇಲೆ ಮತ್ತು "ಬಲ" ಎಂದು ಅರ್ಥ ಕೊಡುವ ಚೀನಿ ಪದವನ್ನು ತನ್ನ ಕುತ್ತಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಳು.[೬೪] ಫಾಕ್ಸ್ ತನ್ನ ಕಾಲಿನ ಕೆಳಭಾಗದಲ್ಲಿ ಬಲ ಕಣಕಾಲಿನ ಮೇಲೆ ಐದು ಬಿಂದುವಿನ ನಕ್ಷತ್ರದ ಮೇಲೆ ಅರ್ಧ ಚಂದ್ರಾಕಾರದ ಹಚ್ಚೆ ಕೂಡ ಇತ್ತು.[೬೫] ಇದು ಫಾಕ್ಸ್ ಹಾಕಿಸಿಕೊಂಡ ಏಕಮಾತ್ರ ಬಣ್ಣದ ಹಚ್ಚೆಯಾಗಿದೆ.[೬೬]
ಫಾಕ್ಸ್ ತಾನು ಮರ್ಲಿನ್ ಮನ್ರೊ ಹಚ್ಚೆ ಹಾಕಿಸಿಕೊಂಡಿರುವ ಬಗ್ಗೆ , ಏಕೆಂದರೆ "ಅಕ್ಷರಶಃ ನಾನು ಹುಟ್ಟಿದ ನಂತರದ ಕ್ಷಣಗಳಲ್ಲಿ, ನಾನು ಕಿರುತೆರೆಯಲ್ಲಿ ನೋಡಿದ ಮೊದಲ ವ್ಯಕ್ತಿ ಎಂದು ಹೇಳಿದ್ದಾಳೆ,. ನಾನು ಬೆಳೆಯುತ್ತಾ,ಪ್ರತಿಬಾರಿ ಅವಳ ಧ್ವನಿ ಕೇಳಿದಾಗಲೆಲ್ಲಾ,ಸದಾ ಅಳುತ್ತಿದ್ದೆ. ನಾನು ಚಿಕ್ಕವಳಾಗಿದ್ದಾಗ ಯಾಕೆಂದು ತಿಳಿಯುತ್ತಿರಲಿಲ್ಲ.ಆದರೆ ನಾನು ನನ್ನದೇ ಆದ ಸಿದ್ಧಾಂತಗಳನ್ನು ಹೊಂದಿದ್ದೆ" ಎಂದಿದ್ದಾಳೆ. ಫಾಕ್ಸ್ ಅವಳೊಂದಿಗೆ "ತಾದಾತ್ಮ್ಯತೆ" ಹೊಂದುತ್ತಿದ್ದಳು .[೬೭] ಅವಳು ಯಿನ್/ಯಾಂಗ್ ಹಚ್ಚೆಯನ್ನು ಅಳಿಸಲು ಆಸಕ್ತಿ ತೋರಿಸಿದಳು. ಹಚ್ಚೆ ಕಲಾವಿದ "ಸರಿಯಾಗಿ ಬಿಡಿಸಲಿಲ್ಲ" ಎಂಬ ಕಾರಣ ನೀಡಿದಳು.ಏಕೆಂದರೆ ಆ ಸಮಯದಲ್ಲಿ ಅವನುಮರಿಜುವಾನ ಅಮಲಿನಲ್ಲಿದ್ದ; ಆದರೂ 2009ರ ಆಗಸ್ಟ್‌ನಲ್ಲಿರುವಂತೆ ಫಾಕ್ಸ್ ಇಂದಿಗೂ ಆ ಹಚ್ಚೆಯನ್ನು ಇರಿಸಿಕೊಂಡಿದ್ದಾಳೆ.[೬೭] ಫಾಕ್ಸ್ ತಾನು ಹಚ್ಚೆಯನ್ನು ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಬೇರೆಯಾರಾದರೂ ಅಡ್ಡಿಪಡಿಸಿದರೆ ಅವರನ್ನು ಶಪಿಸುವುದಾಗಿ ತನ್ನ ಹಚ್ಚೆಗಳ ಬಗ್ಗೆ ಫಾಕ್ಸ್ ಹೇಳಿದ್ದಾಳೆ."[೬೮]
ವೈಯಕ್ತಿಕ ಜೀವನ
[ಬದಲಾಯಿಸಿ]2004ರಿಂದ, ಅಂದರೆ ಹೋಪ್ ಆಂಡ್ ಫೆಯಿಥ್ ಚಿತ್ರೀಕರಣ ಸ್ಥಳದಲ್ಲಿ ಮೊದಲ ಬಾರಿಗೆ ಭೇಟಿಯಾದಾಗಿನಿಂದ ಫಾಕ್ಸ್ ನಟ ಬ್ರೈನ್ ಆಸ್ಟಿನ್ ಗ್ರೀನ್‌ನೊಂದಿಗೆ ಕಾಲಕಳೆಯುತ್ತಿದ್ದರು.[೩][೪] 2006ರಲ್ಲಿ, ಇವರಿಬ್ಬರೂ ಮದುವೆಯ ನಿಶ್ಚಿತಾರ್ಥ ಮಾಡಿಕೊಂಡರು. ಆದರೆ ಮದುವೆಯ ಬಗ್ಗೆ ಯಾವುದೇ ಯೋಜನೆಗಳನ್ನು ಹೊಂದಿಲ್ಲವೆಂದು ತಿಳಿಸಿದರು.[೪] 2008ರ ಜುಲೈಯಲ್ಲಿ ಮತ್ತು 2009ರ ಫೆಬ್ರುವರಿಯಲ್ಲಿ ಇವರಿಬ್ಬರ ನಡುವಿನ ಸಂಬಂಧ ಅಂತ್ಯಗೊಂಡಿದೆ ಎಂದು ವರದಿಯಾಗಿತ್ತು[೬೯][೭೦];[೭೧][೭೨] ಆದಾಗ್ಯೂ, ಫಾಕ್ಸ್ ಮತ್ತು ಗ್ರೀನ್ ಇಬ್ಬರೂ, ಎರಡೂ ಸಂದರ್ಭಗಳಲ್ಲಿ ತಾವಿಬ್ಬರೂ ಇನ್ನೂ ಸಂಬಂಧ ಹೊಂದಿರುವುದಾಗಿ ತಿಳಿಸಿದರು.[೩][೭೩] 2009ರ ಜೂನ್ 15ರಂದು ನಡೆದ Transformers: Revenge of the Fallen ಚಿತ್ರದ UK ಪ್ರಥಮ ಪ್ರದರ್ಶನದಲ್ಲಿ, ಫಾಕ್ಸ್ ತಾನು ಏಕಾಂಗಿ ಎಂದು ಹೇಳಿಕೊಂಡಿದ್ದಳು;[೭೪] ಆದರೂ ಅವಳು ಮತ್ತೆ ಗ್ರೀನ್‌ನೊಂದಿಗೆ ಕಾಣಿಸಿಕೊಂಡಳು. ಹಾಗಾಗಿ ಇವರಿಬ್ಬರು ಮತ್ತೆ ಸಂಬಂಧ ಹೊಂದಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಯಿತು.[೭೫] ಫಾಕ್ಸ್ ಆಯೋಜಿಸಿದ ಸಾಟರ್ಡೇ ನೈಟ್ ಲೈವ್ ನ ಋತುಮಾನ 35ರ ಪ್ರಥಮ ಸಂಚಿಕೆಲ್ಲಿ SNL ಡಿಜಿಟಲ್ ಶಾರ್ಟ್ "ಮೇಗನ್'ಸ್ ರೂಮ್‌ಮೇಟ್"ನಲ್ಲಿ ಸಹ ಗ್ರೀನ್ ಕಾಣಿಸಿಕೊಂಡಿದ್ದನು.
ಜನ್ನಿಫರ್ ಬ್ಲ್ಯಾಂಕ್, ಕೆಲ್ಲನ್ ರುಡ್, ಜನ್ನಿಫರ್'ಸ್ ಬಾಡಿ ಚಿತ್ರದ ಸಹನಟ ಅಮಂಡ ಸೇಫ್ರೈಡ್, ಮೈಕಲ್ ಬೀನ್ ಮತ್ತು ಟ್ರಾನ್ಸ್‌ಫಾರ್ಮರ್ಸ್ ಚಿತ್ರದ ಸಹನಟ ಶಿಯಾ ಲಾಬೆಯೊಫ್‌ರೊಂದಿಗೆ ಫಾಕ್ಸ್ ಉತ್ತಮ ಸ್ನೇಹಸಂಬಂಧವನ್ನು ಹೊಂದಿದ್ದರು.[೭೬] ಅವಳು ಹಾಸ್ಯ ಚಿತ್ರಕಥೆಗಳ ಪುಸ್ತಕಗಳು, ಎನಿಮೆ, ಮತ್ತು ವೀಡಿಯೊ ಗೇಮ್ಸ್‌ನ ಅಭಿಮಾನಿಯಾಗಿದ್ದಳು ಮತ್ತು ಅವಳೇ ಹೇಳುವಂತೆ ತನ್ನ 12ನೇ ವರ್ಷದವಳಾಗಿರುವಾಗ, ಕಾರ್ಟೂನ್ ನೆಟ್ವರ್ಕ್‌ನಲ್ಲಿ ಅಡಲ್ಟ್ ಸ್ವಿಮ್‌ನ ಎನಿಮೇಟೆಡ್ ಪ್ರದರ್ಶನಗಳನ್ನು ವೀಕ್ಷಿಸಿದಾಗ, ಅವಳು ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಿದಳು.[೧೪] ಮೈಕಲ್ ಟ್ಯುರ್ನರ್‌ನು ಫಾಕ್ಸ್‌ಳ ನೆಚ್ಚಿನ ನಟನಾಗಿದ್ದು, ಅವರ ಫ್ಯಾಥಮ್ ಹಾಸ್ಯಕಥೆಯು ದೀರ್ಘಾವಧಿಯವರೆಗೆ ಗೀಳು ಹಿಡಿದಿತ್ತು ಎಂದು ಬಣ್ಣಿಸಿದ್ದಾಳೆ.[೭] ಫಾಕ್ಸ್ ಎರಡು ಸಾಕುನಾಯಿಗಳನ್ನು ಹೊಂದಿದ್ದಳು, ಅದರಲ್ಲಿ ಒಂದು ಪಾಮೇರೇನಿಯನ್ ನಾಯಿಗೆ ಪಂಕ್ ತಾರೆ ಸಿದ್ ವಿಷಿಯಸ್‌ನ ಹೆಸರನ್ನು ಇಡಲಾಗಿತ್ತು.[೭೬][೭೭] ಫಾಕ್ಸ್ ತಾನು ಮಾದಕ ವಸ್ತುಗಳನ್ನು ಸೇವಿಸಿದ್ದಾಗಿ ಬಹಿರಂಗವಾಗಿ ಹೇಳಿದ್ದಾಳೆ, ಅದು ಅವಳಿಗೆ ಇಷ್ಟವಿರಲಿಲ್ಲ ವೆಂಬ ಅರ್ಥವನ್ನು ಕಲ್ಪಿಸಿತ್ತು. ನನ್ನನ್ನು ಸೇರಿ, ಕೆಲವರು ಮಾದಕ ವಸ್ತುಗಳ ಮೇಲೆ ಅವಲಂಬಿತವಾಗಿಲ್ಲ ಎಂದು ತಿಳಿದಿದ್ದಾಗಿ ಹೇಳಿದಳು.[೭೮] ಮರಿಜುವಾನ ಎಂಬ ಮಾದಕ ವಸ್ತುವನ್ನು ಕಾನೂನುಬದ್ಧಗೊಳಿಸುವುದಕ್ಕೆ ನನ್ನ ಬೆಂಬಲವಿದೆ ಎಂದು ಸಹ ಫಾಕ್ಸ್ ಬಹಿರಂಗವಾಗಿ ಹೇಳಿಕೆ ನೀಡಿದ್ದಲ್ಲದೆ, ತಾನು ಅದನ್ನು ಮಾದಕ ವಸ್ತುವೆಂದು ಪರಿಗಣಿಸುವುದಿಲ್ಲ ಮತ್ತು ಸುತ್ತಿದ ಮರಿಜುವಾನ ಎಲೆಗಳ ಪೊಟ್ಟಣ ಕೊಳ್ಳುವ ಸರದಿಯಲ್ಲಿ ನಾನು ಮೊದಲು ನಿಲ್ಲುವೆನೆಂದು ಹೇಳಿದ್ದಳು.[೭೯]
2008ರ ಸಪ್ಟೆಂಬರ್‌ನಲ್ಲಿ, GQ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ಫಾಕ್ಸ್ ಉಭಯಲಿಂಗಿಯಾಗಿದ್ದರ ಕುರಿತು ಪ್ರಾಸಂಗಿಕವಾಗಿ ಹೇಳಿದ್ದಳು. ತಾನು 18 ವರ್ಷದವಳಾಗಿದ್ದಾಗ ಒಬ್ಬಳು ಬೆತ್ತಲೆಯಾಗುವ ನೃತ್ಯಗಾತಿಯನ್ನು ಪ್ರೀತಿಸಿ, ಅವಳೊಂದಿಗೆ ಸಂಬಂಧವನ್ನು ಸ್ಥಾಪಿಸಲು ಕೋರಿದ್ದಾಗಿ ಬಹಿರಂಗ ಮಾಡಿದಳು. "ಎಲ್ಲಾ ಮಾನವರು ಉಭಯಲಿಂಗಿಗಳಿಗೆ ಆಕರ್ಷಿತರಾಗುವ ಸಾಮರ್ಥ್ಯದೊಂದಿಗೆ ಜನಿಸುವರು" ಎಂದು ತನ್ನ ನಂಬಿಕೆಯನ್ನು ವಿವರಿಸಲು, ಈ ಅನುಭವವನ್ನು ಬಳಸಿಕೊಂಡಳು. ಇದಲ್ಲದೆ ಒಲಿವಿಯಾ ವಿಲ್ಡೆ ಮತ್ತು ಜೆನ್ನಾ ಜೇಮ್ಸನ್ ಮೇಲೆ ಕೂಡ ತನ್ನ ಆಸಕ್ತಿಯನ್ನು ತೋರಿಸಿದಳು.[೮೦][೮೧][೮೨] 2009ರ ಮೇಯಲ್ಲಿ, ಫಾಕ್ಸ್ ತನ್ನ ಉಭಯಲಿಂಗತ್ವವನ್ನು ಖಚಿತಪಡಿಸಿದಳು.[೮೩] ಆದಾಗ್ಯೂ 2009 ಜೂನ್‌ರ ELLE ಸಂಚಿಕೆಯಲ್ಲಿ ಬತ್ತಲೆ ನೃತ್ಯಗಾತಿ ಜತೆ ತನ್ನ ಸಂಬಂಧದ ವಿದ್ಯಮಾನಗಳನ್ನು ತಿರುಚಿ ಬರೆದಿರುವುದಾಗಿಯೂ,ತಾನು ಕೆಲವು ಪುರುಷ ಲೇಖಕರಿಗೆ ತನ್ನ ಗತಿಸಿದ ಜೀವನದ "ಆಂಶಿಕ ರೂಪ"ವನ್ನು ಮಾತ್ರ ನೀಡಿದ್ದೆ ಎಂದು ಹೇಳಿದ್ದಾಳೆ. ಹಾಗೆಯೇ ಮುಂದುವರಿಸುತ್ತಾ,"ಅವರು ಹುಡುಗರು; ಅವರನ್ನು ಸುಲಭವಾಗಿ ಆಟವಾಡಿಸಬಹುದು" ಎಂದೂ ಸಹ ಹೇಳಿದ್ದಳು. "ನಾನು ಕಥೆಗಳನ್ನು ಹೇಳುತ್ತೇನೆ ಅದನ್ನು ತಿದ್ದಿಬರೆಯಲಾಗುತ್ತದೆ. ಅವುಗಳಲ್ಲಿ ಎಲ್ಲವು ಸತ್ಯವಲ್ಲ. ಅವುಗಳಲ್ಲಿ ಹೆಚ್ಚಿನವು ಅಸಂಬದ್ಧವಾಗಿರುವುದು."[೮೪] ಫಾಕ್ಸ್ ಮುಂದುವರಿಸಿ, "ಅವಳು ನನ್ನ ಗೆಳತಿ ಎಂದು ನಾನು ಎಲ್ಲೂ ಹೇಳಿಲ್ಲ! ನಾನು ಕೇವಲ ಅವಳನ್ನು ಪ್ರೀತಿಸುತ್ತಿದ್ದೆ ಎಂದಷ್ಟೆ ಹೇಳಿದ್ದೆ ಮತ್ತು ನಾನು ಪ್ರೀತಿಸಿದೆ. ನಿಜವಾದ ಕಥೆಯು ಹೆಚ್ಚು ದುಃಖಕರವಾಗಿದೆ. ಅಧು ಲೈಂಗಿಕಾಕರ್ಷಣೆಯ, ವಿನೋದದ, ಕಾಲ್ಪನಿಕ ಕಥೆಯಲ್ಲ. ಆದರೆ ಅದು ನೀವು ಹೇಳುವ GQ ಕಥೆಯಲ್ಲ."[೮೪] 2009ರ ಜೂನ್ 15ರಲ್ಲಿ ಟ್ರಾನ್ಸ್‌ಫಾರ್ಮರ್ಸ್: ರಿವೇಂಜ್ ಆಫ್ ದಿ ಫಾಲನ್ ನ UK ಪ್ರಥಮ ಪ್ರದರ್ಶನದಲ್ಲಿ, ಫಾಕ್ಸ್ ಚೆರಿಲ್ ಕೋಲೆಬಗ್ಗೆ ತನ್ನ ವಾಂಛೆ ಮತ್ತು ಕೋಲೆಯ ಹಚ್ಚೆಗಳಿಗಾಗಿ ಪ್ರೀತಿಯನ್ನು ಬಹಿರಂಗಪಡಿಸಿದಳು.[೮೫] 2009ರ ಜೂನ್‌ರಂದು ದಿ ಕಿಲೆ ಆಂಡ್ ಜಾಕಿ ಒ ಶೋ ನಲ್ಲಿ ಕಾಣಿಸಿಕೊಂಡಿದ್ದ ಫಾಕ್ಸ್, ಕೊರಿಯಾದ ಪಾಪ್ ಹಾಡುಗಾರ ರೈನ್‌ಬಗ್ಗೆ ತಾನು ಆಸಕ್ತಿ ಹೊಂದಿರುವುದಾಗಿ ತಿಳಿಸಿದಳು.[೮೬][೮೭][೮೮]
ಇದಲ್ಲದೆ ಫಾಕ್ಸ್, ತನ್ನ ಅಭದ್ರತಾ ಭಾವನೆ ಮತ್ತು ಸ್ವಯಂ ದಂಡನೆ ಬಗ್ಗೆ ಬಹಿರಂಗವಾಗಿ ಹೇಳಿದ್ದಾಳೆ. ಅವಳಲ್ಲಿ ಸ್ವಾಭಿಮಾನ ಕಡಿಮೆಯಿರುದಾಗಿ ಒಪ್ಪಿಕೊಂಡಿದ್ದಾಳೆ:
“ | Yeah. But I don't want to elaborate. I would never call myself a cutter. Girls go through different phases when they're growing up, when they're miserable and do different things, whether it's an eating disorder or they dabble in cutting. I'm really insecure about everything. I see what I look like, but there are things that I like and things that I dislike. My hair is good. The color of my eyes is good, obviously. I'm too short. But overall, I'm not super excited about the whole thing. I never think I'm worthy of anything... I have a sick feeling of being mocked all the time. I have a lot of self-loathing. Self-loathing doesn't keep me from being happy. But that doesn't mean I don't struggle. I am very vulnerable. But I can be aggressive, hurtful, domineering and selfish, too. I'm emotionally unpredictable and all over the place. I'm a control freak.[೮೯] | ” |
ಇದಲ್ಲದೇ ಫಾಕ್ಸ್ ವಿಮಾನದಲ್ಲಿ ಹಾರಾಟಕ್ಕೆ ಭಯ ಹೊಂದಿದ್ದಳು;20ರ ಪ್ರಾಯ ದಾಟುತ್ತಿದ್ದಂತೆ ಈ ಭಯ ಅವಳಲ್ಲಿ ಹುಟ್ಟಿಕೊಂಡಿತು. ಅವಳು ವಿಮಾನದೊಳಗೆ ಪ್ರವೇಶಿಸುವಾಗ, ಭಯದ ದಾಳಿಗಳಿಂದ ತಪ್ಪಿಸಿಕೊಳ್ಳಲು ದಾರಿಗಳನ್ನು ಹುಡುಕಿದ್ದಳು. ಬ್ರಿಟ್ನಿ ಸ್ಪೀಯರ್ಸ್ ಹಾಡುಗಳನ್ನು ಕೇಳುವುದು ಅವುಗಳಲ್ಲಿ ಗಮನಾರ್ಹವಾಗಿದೆ.[೯೦] ಅದಲ್ಲದೆ ಅವಳು ಪುರುಷರ ಬಗ್ಗೆ ಅಪನಂಬಿಕೆಯನ್ನು ವ್ಯಕ್ತಪಡಿಸುತ್ತಾ, ಫಾಕ್ಸ್, "ನಾನು ಅವರನ್ನು ಇಷ್ಟಪಡುವುದಿಲ್ಲ ಅಥವಾ ನಂಬುವುದಿಲ್ಲ" ಎಂದು ಹೇಳಿದಳು.[೮೪]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಸಿನಿಮಾ | |||
---|---|---|---|
ವರ್ಷ | ಸಿನಿಮಾ | ಪಾತ್ರ | ಟಿಪ್ಪಣಿಗಳು |
2003 | ಬ್ಯಾಡ್ ಬಾಯ್ಸ್ II | ಕ್ಲಬ್ ಬಾಲಕಿ | ಸಹನಟಿ (ಹೆಸರಿಸದ) |
2004 | ಕನ್ಫೆಷನ್ಸ್ ಆಫ್ ಎ ಟೀನೇಜ್ ಡ್ರಾಮಾ ಕ್ವೀನ್ | ಕಾರ್ಲ ಸಂಟಿನಿ | ಪೋಷಕ ಪಾತ್ರ |
2007 | ಟ್ರಾನ್ಸ್‌ಫಾರ್ಮರ್ಸ್ | ಮೈಕೀಲಾ ಬೇನ್ಸ್ | ಪ್ರಮುಖ ಪಾತ್ರ |
2008 | ಹೌ ಟು ಲೂಸ್ ಫ್ರೆಂಡ್ಸ್ ಅಂಡ್ ಅಲೀನೇಟ್ ಪೀಪಲ್ | ಸೋಫಿ ಮೇಸ್ | ಪೋಷಕ ಪಾತ್ರ |
ವೋರ್ | ಲಾಸ್ಟ್ | ಪ್ರಮುಖ ಪಾತ್ರ | |
2009 | Transformers: Revenge of the Fallen | ಮೈಕೀಲಾ ಬೇನ್ಸ್ | ಪ್ರಮುಖ ಪಾತ್ರ |
ಜನ್ನಿಫರ್'ಸ್ ಬಾಡಿ | ಜನ್ನಿಫರ್ ಚೆಕ್ | ಪ್ರಮುಖ ಪಾತ್ರ | |
2010 | ಜೋನ್ನಾ ಹೆಕ್ಸ್ | ಲೈಲಾ | (ನಿರ್ಮಾಣದ-ನಂತರದ್ದು) |
ಪ್ಯಾಶನ್ ಪ್ಲೇ | (ಚಿತ್ರೀಕರಣ) | ||
2011 | ದಿ ಕ್ರಾಸಿಂಗ್ | ಟಿಬಿಎ | ಪ್ರಮುಖ ಪಾತ್ರ (ನಿರ್ಮಾಣದ ಮೊದಲು) |
ಟ್ರಾನ್ಸ್‌ಫೋರ್ಮರ್ಸ್ 3 | ಮೈಕೀಲಾ ಬೇನ್ಸ್ | ಪ್ರಮುಖ ಪಾತ್ರ (ನಿರ್ಮಾಣದ ಮೊದಲು)[೯೧][೯೨][೯೩] | |
ಕಿರುತೆರೆ ಅಥವಾ ವೀಡಿಯೊಗಾಗಿ ರಚಿಸಿದ ಚಿತ್ರ | |||
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
2001 | ಹಾಲಿಡೇ ಇನ್ ದಿ ಸನ್ | ಬ್ರೈನ್ನಾ ವಲ್ಲೇಸ್ | ನೇರ DVDಗೆ (ಚೊಚ್ಚಲ ಪಾತ್ರ) |
2004 | ಕ್ರೈಮ್ಸ್ ಆಫ್ ಫ್ಯಾಶನ್ | ಕ್ಯಾಂಡೇಸ್ | ಕಿರುತೆರೆ ಚಿತ್ರ |
ಕಿರುತೆರೆ | |||
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
2002–2003 | ಒಷಿಯನ್ ಏವ್. | ಲೋನ್ ಸ್ಟಾರ್ | ಪ್ರಮುಖ ಪಾತ್ರ |
2004–2006 | ಹೋಪ್ ಆಂಡ್ ಫೆಯಿಥ್ | ಸಿಡ್ನಿ ಶನೋವ್ಸ್ಕಿ | ಸಾಮಾನ್ಯ ಪಾತ್ರ |
ಕಿರುತೆರೆ ಅತಿಥಿ ನಟ ಪಾತ್ರಗಳು | |||
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
2003 | ವಾಟ್ ಐ ಲೈಕ್ ಅಬೌಟ್ ಯು | ಶನ್ನಾನ್ | "ಲೈಕ್ ಎ ವಿರ್ಜಿನ್ (ಕಿಂಡಾ)" (ಭಾಗ 2, ಸಂಚಿಕೆ 5) |
2004 | ಟೂ ಅಂಡ್ ಎ ಹಾಫ್ ಮೆನ್ | ಪ್ರೂಡನ್ಸ್ | "ಕ್ಯಾಮಲ್ ಫಿಲ್ಟರ್ಸ್ ಆಂಡ್ ಫೆರೊಮನಸ್" (ಭಾಗ 1, ಸಂಚಿಕೆ 12) |
ದಿ ಹೆಲ್ಪ್ | ಕ್ಯಾಸೆಂಡ್ರಾ ರಿಡ್ಜ್‌ವೇ | "ಪೈಲೆಟ್" (ಭಾಗ 1, ಸಂಚಿಕೆ 1) "ಒಲೀ ಶೇರ್ಸ್" (ಭಾಗ 1, ಸಂಚಿಕೆ 2) "ಡೇನ್ ಗೆಟ್ಸ್ ಎ ಕೋಲ್ಡ್" (ಭಾಗ 1, ಸಂಚಿಕೆ 5) | |
ಇತರೆ | |||
ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
2009 | ಎವೆರಿ ಗರ್ಲ್ | ಹರ್‌ಸೆಲ್ಫ್ | ಸಂಗೀತ ವಿಡಿಯೊ |
ಪ್ರಶಸ್ತಿಗಳು
[ಬದಲಾಯಿಸಿ]ಪ್ರಶಸ್ತಿಗಳು | ||||
---|---|---|---|---|
ವರ್ಷ | ಫಲಿತಾಂಶ | ಪ್ರಶಸ್ತಿ | ವಿಭಾಗ | ನಾಮನಿರ್ದೇಶಿತ ಕೆಲಸ |
2005 | ನಾಮನಿರ್ದೇಶನ | ಯುವ ಕಲಾವಿದ ಪ್ರಶಸ್ತಿ | TV ಸರಣಿಗಳಲ್ಲಿ ಉತ್ತಮ ಅಭಿನಯ (ಹಾಸ್ಯ ಅಥವಾ ನಾಟಕ) – ಪೋಷಕ ಯುವ ನಟಿ | ಹೋಪ್ ಆಂಡ್ ಫೆಯಿಥ್ |
2007 | ಟೀನ್ ಚಾಯಿಸ್ ಅವಾರ್ಡ್ಸ್ | ಚಾಯಿಸ್ ಚಿತ್ರ ನಟಿ: ಅಭಿನಯ, ಸಾಹಸ | ಟ್ರಾನ್ಸ್‌ಫಾರ್ಮರ್ಸ್ | |
ಚಾಯಿಸ್ ಚಿತ್ರ: ಜನಪ್ರಿಯ ಮಹಿಳಾ ಪಾತ್ರ | ||||
ಚಾಯಿಸ್ ಚಿತ್ರ: ಲಿಪ್‌ಲಾಕ್ | ||||
ನ್ಯಾಷನಲ್ ಮೂವೀ ಪ್ರಶಸ್ತಿ | ಚಿತ್ರನಟಿಯ ಉತ್ತಮ ಅಭಿನಯ | |||
2008 | MTV ಮೂವೀ ಪ್ರಶಸ್ತಿ | ಅದ್ಭುತ ಅಭಿನಯ | ||
2009 | ಗೆಲುವು[೯೪] | ಟೀನ್ ಚಾಯಿಸ್ ಪ್ರಶಸ್ತಿ | ಚಾಯಿಸ್ ಲೈಂಗಿಕಾಕರ್ಷಣೆಯ ನಟಿ | ಯಾರೂ ಇಲ್ಲ |
ಚಾಯಿಸ್ ಸಮ್ಮರ್ ಮೂವೀ ಸ್ಟಾರ್ ಫೀಮೇಲ್ | Transformers: Revenge of the Fallen | |||
ಸ್ಕ್ರೀಮ್ ಅವಾರ್ಡ್[೯೫] | ಉತ್ತಮ ವೈಜ್ಞಾನಿಕ- ಕಾಲ್ಪನಿಕ ಚಿತ್ರನಟಿ | |||
ಸ್ಪೈಕ್ ವೀಡಿಯೊ ಗೇಮ್ ಅವಾರ್ಡ್ಸ್ | ಚಿತ್ರನಟಿಯ ಉತ್ತಮ ಅಭಿನಯ | ಟ್ರಾನ್ಸ್‌ಫಾರ್ಮರ್ಸ್: ರಿವೇಂಜ್ ಆಫ್ ದಿ ಫಾಲನ್ | ||
(Source: IMDb.com) |
ಆಕರಗಳು
[ಬದಲಾಯಿಸಿ]- ↑ ೧.೦ ೧.೧ "Maxim". BBC News. 2008-04-24. Retrieved 2008-04-25.
- ↑ ೨.೦ ೨.೧ "Megan Fox is world's sexiest woman". News.com.au. 2008-04-24. Archived from the original on 2008-05-08. Retrieved 2008-04-25.
- ↑ ೩.೦ ೩.೧ ೩.೨ "Megan Fox heats up talk about film, love life". Access Hollywood. 2009-05-05. Retrieved 2009-05-05.
- ↑ ೪.೦ ೪.೧ ೪.೨ "On The Cover: Megan Fox". The Evening Herald. Archived from the original on 2012-04-30. Retrieved 2008-08-18.
- ↑ "Megan Fox on family background and celebrity inspired tattoo from Maxim Radio". Sirius.com. Retrieved 2009-08-19.
- ↑ ೬.೦ ೬.೧ ೬.೨ ೬.೩ "18 Things you didn't know about Megan Fox". 2009-08-04. Archived from the original on 2009-08-09. Retrieved 2009-08-09.
- ↑ ೭.೦ ೭.೧ ೭.೨ ೭.೩ ೭.೪ ೭.೫ "Megan Fox". Elle. 2009-05-26. Retrieved 2009-06-12.
- ↑ "Who does Megan have tattooed on her arm?". Sirius. Retrieved 2008-04-26.
- ↑ ಟೆರ್ರಿ ಮೊರ್ರೊವ್, ಇನ್‌ಸೈಡರ್: ರಾಕ್‌ವರ್ಡ್ ಸ್ಟಾರ್ಲೆಟ್ ಮೊರ್ಫ್ಸ್ ಫ್ರಮ್ ಟಾಮ್‌ಬಾಯ್ ಟು 'ಸೆಕ್ಸಿಯೆಸ್ಟ್' Archived 2010-06-16 ವೇಬ್ಯಾಕ್ ಮೆಷಿನ್ ನಲ್ಲಿ., ನಾಕ್ಸ್‌ವಿಲ್ಲೆ ನ್ಯೂಸ್ ಸೆಂಟಿನೆಲ್, 2008ರ ಮೇ 2
- ↑ ೧೦.೦ ೧೦.೧ "Megan Fox Celebrity Profile Biography". Rotten Tomatoes. Archived from the original on 2010-06-17. Retrieved 2008-04-25.
- ↑ "Megan Fox: Biography". MSN. Archived from the original on 2008-05-06. Retrieved 2008-04-25.
- ↑ AMTC (2009-09-16). "Success Stories: Megan Fox". www.amtcworld.com. Archived from the original on 2009-06-01. Retrieved 2009-09-16.
- ↑ Morningsideacademy.com
- ↑ ೧೪.೦ ೧೪.೧ ೧೪.೨ ೧೪.೩ "Megan Fox: Celeb Q&A". CosmoGirl! Magazine. June/July. Archived from the original on 2009-08-03. Retrieved 2009-08-09.
{{cite web}}
: Check date values in:|date=
(help) - ↑ ೧೫.೦ ೧೫.೧ "Megan Fox Biography". Yahoo! Movies. Retrieved 2008-04-26.
- ↑ "Megan Fox: Awards". IMDb. Retrieved 2009-08-08.
- ↑ Kit, Borys (2007-06-29). "Fox making 'Friends' for Weide pic". The Hollywood Reporter. Archived from the original on 2007-07-01. Retrieved 2007-06-29.
- ↑ "How to Lose Friends and Alienate People: Release Date". IMDb. Retrieved 2009-08-19.
- ↑ ಬಾಕ್ಸ್ ಆಫ಼ೀಸ್ ಮೋಜೊದಲ್ಲಿ How to Lose Friends & Alienate People
- ↑ "Whore (2008 film): Release Date". IMDb. Retrieved 2009-07-20..
{{cite web}}
: Check date values in:|accessdate=
(help) - ↑ "ಮೇಗನ್ ಫಾಕ್ಸ್ ಟೋಲ್ಡ್ ಟು ಗೈನ್ 10 ಪೌಂಡ್ಸ್ ಫಾರ್ ಟ್ರಾನ್ಸ್‌ಫಾರ್ಮರ್ಸ್ ಸೀಕ್ವೆಲ್." Archived 2008-08-10 ವೇಬ್ಯಾಕ್ ಮೆಷಿನ್ ನಲ್ಲಿ. ಯಾಹೂ ಎಂಟರ್ಟೈನ್ಮೆಂಟ್!
- ↑ "Transformers Moved Up Two Days". ComingSoon.net. 2009-02-12. Archived from the original on 2014-09-06. Retrieved 2009-02-12.
- ↑ "IMDb Pro : Jennifer's Body Business Details". Pro.imdb.com. Retrieved 2009-07-17.
- ↑ "Jennifer's Body: Story Line". IMDb. Retrieved 2009-08-08.
- ↑ "Jennifer's Body". IMDb. Retrieved 2009-07-20..
{{cite web}}
: Check date values in:|accessdate=
(help) - ↑ Kit, Borys (March 3, 2009). "Megan Fox lines up two film projects". The Hollywood Reporter. Archived from the original on 2009-03-09. Retrieved April 8, 2009.
{{cite journal}}
: Check date values in:|accessdate=
and|date=
(help) - ↑ Liam (2009-06-23). "Megan Fox only has a small role in Jonah Hex". Filmonic. Archived from the original on 2009-06-28. Retrieved 2009-07-03.
- ↑ "The Crossing". Retrieved 2009-08-31.
- ↑ By (2009-03-03). "Megan Fox to star in 'Fathom' – Entertainment News, Film News, Media". Variety. Retrieved 2009-07-17.
- ↑ "IMDb Pro : Fathom Business Details". Pro.imdb.com. Retrieved 2009-07-17.
- ↑ ೩೧.೦ ೩೧.೧ Adam (2009-06-07). "Megan Fox: Im a role model for strong women". Archived from the original on 2010-05-21. Retrieved 2009-08-07.
- ↑ ೩೨.೦ ೩೨.೧ ೩೨.೨ "Megan Fox: 'Transformed' by fame". E! Online. 2009-06-09. Archived from the original on 2009-08-15. Retrieved 2009-08-08.
- ↑ "Megan Fox". The Insider. Archived from the original on 2009-07-13. Retrieved 2009-06-12.
- ↑ "Megan Fox – Picture of Transformers Star Megan Fox". CosmoGIRL. Archived from the original on 2009-08-03. Retrieved 2009-06-12.
- ↑ "Megan Fox is a Cosmo Girl!". The Insider. Archived from the original on 2009-06-25. Retrieved 2009-06-12.
- ↑ "Megan Fox is hot with animals". The Insider. Archived from the original on 2009-06-18. Retrieved 2009-06-12.
- ↑ "Megan Fox in Jack Magazine". The Insider. Archived from the original on 2009-05-27. Retrieved 2009-06-12.
- ↑ "Megan Fox FHM Magazine UK". The Insider. Archived from the original on 2009-06-18. Retrieved 2009-06-12.
- ↑ Published 9/16/08. "Pictures". The Insider. Archived from the original on 2010-01-27. Retrieved 2009-06-12.
{{cite web}}
: CS1 maint: numeric names: authors list (link) - ↑ "GQ Articles, Pics, and More on men.style.com". Men.style.com. Archived from the original on 2009-09-08. Retrieved 2009-07-17.
- ↑ "Seth Rogen & Megan Fox candid interview". USA Weekend. 2009-04-26. Retrieved 2009-06-12.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Sex Oozes Out of Megan Fox's Pores". The Insider. Archived from the original on 2010-09-25. Retrieved 2009-06-12.
- ↑ "Megan Fox on the Cover of Empire Magazine". The Insider. Archived from the original on 2009-05-27. Retrieved 2009-06-12.
- ↑ "Megan Fox Photos, Megan Fox Videos, Megan Fox News, on Maxim.com". Maxim. Archived from the original on 2008-04-29. Retrieved 2008-04-25.
- ↑ "Megan Fox in July's UK GQ". The Insider. Archived from the original on 2009-06-11. Retrieved 2009-06-12.
- ↑ "Quote of the Day: Megan Fox on Her Worst-Case Scenario". The Insider. Archived from the original on 2009-07-16. Retrieved 2009-06-12.
- ↑ ೪೭.೦ ೪೭.೧ Wilkinson, Amy (2009-07-29). "This Just In: Men Are Totally Over Megan Fox (Stranger Things Have Happened!)". MTV. Archived from the original on 2017-09-16. Retrieved 2009-10-01.
- ↑ ೪೮.೦ ೪೮.೧ Naoreen, Nuzhat (2009-09-30). "Megan Fox Sounds Off On Overexposure And That 'Body' In Nylon: Cover Story". MTV. Archived from the original on 2017-07-09. Retrieved 2009-10-01.
- ↑ "Fox addresses transformers crew over letter". IBTimes. 2009-09-18. Retrieved 2009-09-23.[ಶಾಶ್ವತವಾಗಿ ಮಡಿದ ಕೊಂಡಿ]
- ↑ "The Next Angelina: Evangeline Lilly vs. Megan Fox". 2009-05-27. Retrieved 2009-07-20..
{{cite web}}
: Check date values in:|accessdate=
and|date=
(help) - ↑ "Who's Hotter? Megan Fox Or Angelina Jolie". New York Post. 2009-06-04. Archived from the original on 2009-06-07. Retrieved 2009-06-12.
- ↑ "Megan Fox as Angelina Jolie 2.0 – Comedian or Sex Symbol?". National Ledger. Archived from the original on 2009-07-03. Retrieved 2009-06-12.
- ↑ ೫೩.೦ ೫೩.೧ "News – Megan Fox: Stop Comparing Me to Angelina Jolie!". US magazine. 2008-10-07. Archived from the original on 2009-06-14. Retrieved 2009-06-12.
- ↑ "It's war! Megan Fox vs. Angelina – Life and Style". Lifeandstylemag.com. Retrieved 2009-06-12.
- ↑ "Megan Fox: "Stop It With The Angelina Jolie Comparisions [sic]"". Popcrunch.com. Archived from the original on 2009-07-25. Retrieved 2009-06-12.
- ↑ ೫೬.೦ ೫೬.೧ "I'm terrified of Angelina Jolie, admits Transformers star Megan Fox". The Daily Record. Retrieved 2009-06-12.
- ↑ "Will Megan Fox replace Angelina Jolie as Lara Croft?". Los Angeles Times. Retrieved 2009-06-12.
- ↑ "Megan Fox "Lara Croft: Tomb Raider" Replacement For Angelina Jolie". Popcrunch.com. Archived from the original on 2009-07-21. Retrieved 2009-06-12.
- ↑ Hollie McKay (2009-07-30). "Megan Fox Bites Back: I Talk About Sex, That Doesn't Make Me Angelina Jolie". Fox News. Retrieved 2009-08-07.
- ↑ "Angelina Jolie Power Too Much For Megan Fox". National Ledger. 2009-05-02. Archived from the original on 2009-05-05. Retrieved 2009-06-12.
- ↑ "Megan Fox: 'Fallen' angel". Entertainment Weekly. Archived from the original on 2009-06-14. Retrieved 2009-06-12.
- ↑ "Shia LaBeouf and Megan Fox Interview – TRANSFORMERS". Collider.com. 2007-06-18. Archived from the original on 2009-05-28. Retrieved 2009-06-12.
- ↑ "Megan Fox's Marilyn Monroe Tattoo – Art Inspired by Marilyn Monroe". LIFE. 2007-08-25. Archived from the original on 2009-06-11. Retrieved 2009-06-12.
- ↑ "Megan Fox Tattoos". Meganfoxbuzz.com. Archived from the original on 2009-06-26. Retrieved 2009-06-28.
- ↑ "Megan Fox's Tattoos". LIFE. 2007-06-01. Archived from the original on 2009-05-25. Retrieved 2009-08-31.
- ↑ Browne, Sally (2007-06-23). "A star is transformed". News.com.au. Archived from the original on 2012-12-04. Retrieved 2008-04-25.
- ↑ ೬೭.೦ ೬೭.೧ "Megan Fox Regrets Stoner Tattoo". Starpulse Entertainment News. 2007-06-24. Archived from the original on 2009-07-01. Retrieved 2009-06-12.
- ↑ "Quote Of The Day: Megan Fox's Tattoo Rebellion". Starpulse Entertainment News. Archived from the original on 2009-06-12. Retrieved 2009-06-12.
- ↑ "Where's Megan Fox's Engagement Ring". Star Magazine. 2008-06-16. Retrieved 2009-07-20.
- ↑ James Wray and Ulf Stabe (2008-07-03). "Megan Fox's engagement off". Monsters and Critics. Archived from the original on 2012-09-05. Retrieved 2009-06-12.
- ↑ Jordan, Julie (2009-02-24). "Megan Fox and Brian Austin Green Call Off Engagement". People. Retrieved 2009-06-12.
- ↑ ಮೇಗನ್ ಫಾಕ್ಸ್ ಆಂಡ್ ಬ್ರೈನ್ ಆಸ್ಟಿನ್ ಗ್ರೀನ್ ಕಾಲ್ ಆಫ್ ದೇಯರ್ ಎಂಗೇಜ್‌ಮೆಂಟ್ Archived 2012-05-16 ವೇಬ್ಯಾಕ್ ಮೆಷಿನ್ ನಲ್ಲಿ. US ವೀಕ್ಲಿ, 2009ರ ಫೆಬ್ರವರಿ 24
- ↑ "News – Brian Austin Green on Megan Fox: "We're Solid"". US Magazine. 2008-07-09. Archived from the original on 2009-05-19. Retrieved 2009-06-12.
- ↑ "'I'm what you would call single'". The Sun. 2009-06-15. Archived from the original on 2009-06-18. Retrieved 2009-06-25.
- ↑ "Megan Fox & Brian Austin Green Totally On Again". OK! Magazine. 2009-06-30. Archived from the original on 2009-07-03. Retrieved 2009-06-30.
- ↑ ೭೬.೦ ೭೬.೧ Bullock, Maggie (2009-05-26). "Megan Fox". ELLE. Retrieved 2009-07-03.
{{cite magazine}}
: Cite magazine requires|magazine=
(help); Unknown parameter|month=
ignored (help)CS1 maint: date and year (link) - ↑ Castina (August 11th, 2008). "Megan Fox Evicts Brian Austin Green Dog". PopCrunch. Archived from the original on 2009-07-03. Retrieved 2009-07-03.
{{cite web}}
: Check date values in:|date=
(help) - ↑ "Megan Fox Pro-Pot". TMZ.com. 2007-07-08. Retrieved 2009-06-12.
- ↑ "Megan Fox "I Smoke Weed"". MTV UK. Retrieved 2009-06-12.
- ↑ "'Transformers' beauty: I had a crush on a stripper". CNN.com. September 16, 2008. Retrieved 2008-09-17.
- ↑ Elizabeth Snead. "'Transformers' Megan Fox tells GQ she's hot for Olivia Wilde!". LATimes.com. Retrieved 2009-07-02..
{{cite web}}
: Check date values in:|accessdate=
(help) - ↑ "Olivia Wilde Is So Sexy Even Megan Fox Wants Her". Fox News. Retrieved 2009-07-02..
{{cite web}}
: Check date values in:|accessdate=
(help) - ↑ "Megan Fox talks about being bisexual". Pink News. 2009-05-13. Archived from the original on 2009-07-03. Retrieved 2009-06-12.
- ↑ ೮೪.೦ ೮೪.೧ ೮೪.೨ Bullock, Maggie (2009-05-05). "Megan Fox: ELLE's June cover girl on breaking up, misbehaving, and having men eating out of her hand". Elle. Archived from the original on 2009-08-04. Retrieved 2009-10-10.
{{cite web}}
: Italic or bold markup not allowed in:|publisher=
(help) - ↑ Fox, Megan (2009-06-16). "London Evening Standard: Megan Fox admits to fancying Cheryl Cole". Showbiz News. Archived from the original on 2009-06-23. Retrieved 2009-06-22.
- ↑ "Megan Fox's crush, Rain: Are you digging the 'Korean Justin Timberlake'?". Entertainment Weekly. 2009-06-16. Retrieved 2009-06-25.
- ↑ "Megan Fox Single, Longing for Rain". Vanity Fair. 2009-06-15. Archived from the original on 2009-06-18. Retrieved 2009-06-25.
- ↑ "Megan Fox wants to date Rain?". allKPop. 2009-06-11. Archived from the original on 2009-06-18. Retrieved 2009-06-25.
- ↑ Everett, Christina (2009-09-17). "Megan Fox opens up to Rolling Stone about cutting herself: 'I'm really insecure about everything'". New York Daily News. Archived from the original on 2009-09-23. Retrieved 2009-10-10.
{{cite web}}
: Italic or bold markup not allowed in:|publisher=
(help) - ↑ Martin, Lara (2009-09-18). "Fox 'uses Spears to conquer fear of flying'". Digital Spy. Retrieved 2009-10-11.
- ↑ "Michaelbay.com". Archived from the original on 2009-10-12. Retrieved 2010-02-19.
- ↑ "Orci and Kurtzman not returning to write Transformers 3". TFW2005. 2009-10-06. Retrieved 2009-10-06.
- ↑ "Optimus Prime Confirms "Transformers" Trilogy". 2007-06-07. Archived from the original on 2011-09-29. Retrieved 2009-09-10.
- ↑ "Teen Choice Awards: Twilight Robert Pattinson Miley Cyrus Jonas Brothers". GoldDerby. 2009-08-10. Archived from the original on 2017-08-01. Retrieved 2009-08-10.
- ↑ Bloody-Disgusting.com, TV: ಸ್ಕ್ರೀಮ್ ೨೦೦೯ ಪ್ರಶಸ್ತಿ ವಿಜೇತರನ್ನು ಪ್ರಕಟಿಸಲಾಗಿದೆ
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ Fox
- ಟೆಂಪ್ಲೇಟು:Tvtome person
- ಮೆಗಾನ್ ಫಾಕ್ಸ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ಮೇಗನ್ ಫಾಕ್ಸ್ ಸಂದರ್ಶನ
- ಟೆಂಪ್ಲೇಟು:Amg name
- ಮೆಗಾನ್ ಫಾಕ್ಸ್ at Yahoo! Movies
- Pages using duplicate arguments in template calls
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: dates
- CS1 maint: numeric names: authors list
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: unsupported parameter
- CS1 errors: missing periodical
- CS1 maint: date and year
- CS1 errors: markup
- Commons link is locally defined
- Articles with Open Directory Project links
- 21ನೇ ಶತಮಾನದ ಅಮೆರಿಕನ್ನರು
- ಟೆನಿಸ್ಸೀಯ ನಟರು
- ಅಮೆರಿಕಾದ ಬಾಲನಟರು
- ಅಮೆರಿಕಾದ ಚಲನಚಿತ್ರ ನಟರು
- ಅಮೆರಿಕಾದ ದೂರದರ್ಶನ ನಟರು
- ಸ್ಥಳೀಯ ಅಮೆರಿಕ ಸಂತತಿಯ ಅಮೆರಿಕನ್ನರು
- ಉಭಯಲಿಂಗಿ ನಟರು
- ಐರಿಷ್ ಅಮೆರಿಕನ್ನರು
- ಫ್ರೆಂಚ್ ಅಮೆರಿಕನ್ನರು
- ಯುನೈಟೆಜ್ ಸ್ಟೇಟ್ಸ್ನ LGBT ಜನರು
- ಅಮೆರಿಕಾದ ಸ್ಥಳೀಯ ನಟರು
- ಫ್ಲೋರಿಡಾದ ನಟರು
- ಟೆನ್ನೆಸ್ಸೀಯ ಓಕ್ನಿಂದ ಬಂದಿರುವ ನಟರು
- 1986ರಲ್ಲಿ ಜನಿಸಿದವರು
- ಜನಜೀವನ
- ಚಲನಚಿತ್ರ ನಟಿಯರು
- ಹಾಲಿವುಡ್ ಚಲನಚಿತ್ರ ಕಲಾವಿದರು