ಮೃದುಲಾ (ಪುಸ್ತಕ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಮೃದುಲಾ Mrudula
[[File:ಮೃದುಲಾ ]|frameless|upright=1]]
ಮೃದುಲಾ
ಲೇಖಕರುಇಂದ್ರಕುಮಾರ್ ಎಚ್.ಬಿ.
ಮುಖಪುಟ ಕಲಾವಿದವಿನಯ ಕುಮಾರ ಸಾಯ
ದೇಶಭಾರತ
ಭಾಷೆಕನ್ನಡ
ವಿಷಯಕಾದಂಬರಿ
ಪ್ರಕಾಶಕರುಚಿಗುರು ಪುಸ್ತಕ
ಪ್ರಕಟವಾದ ದಿನಾಂಕ
೨೦೧೩
ಪುಟಗಳು೧೬೪

ಮೃದುಲಾ - ಆತ್ಮದ ಹಕ್ಕಿಯ ಹಾಡು 2013ರಲ್ಲಿ ಪ್ರಕಟಿತವಾದ ಕಾದಂಬರಿ. ಲೇಖಕರಾದ ಇಂದ್ರಕುಮಾರ್ ಎಚ್.ಬಿ. ಅವರ ಮೊದಲ ಕಾದಂಬರಿ. ಇದು ಸಾಫ್ಟ್ ವೇರ್ ಪ್ರಪಂಚದಲ್ಲಿ ನಡೆಯುವ ಕಥೆ. ಗೌತಮ್ ನಿಷಾಧ್, ಮನಸ್ವಿ ಹಾಗೂ ಕಾತ್ಯಾಯಿನಿ ಈ ಕಾದಂಬರಿಯ ಮುಖ್ಯ ಪಾತ್ರಗಳು.

ನಾ. ದಾಮೋದರ ಶೆಟ್ಟಿ ಅವರು ಬರೆದ ಮುನ್ನುಡಿಯಿಂದ ಆಯ್ದ ಭಾಗ:

ಈ ಕಾದಂಬರಿಯಲ್ಲಿ ಪಾತ್ರಗಳು ಕಡಿಮೆ. ಅವು ಮಾಡುವ ದುಡಿಮೆ ಕಡಿಮೆಯದ್ದಲ್ಲ. ಕಾದಂಬರಿಕಾರ ತಾನು ಆಯ್ದುಕೊಂಡ ಕಥಾವಸ್ತುವಿನ ಜೊತೆ ತೋರಿಸುವ ತಾದಾತ್ಮ್ಯಕ್ಕೆ ಅಪಾರ ಬೆಲೆಯಿದೆ. ಇಂದ್ರಕುಮಾರ್ ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರೂ ಸಾಫ್ಟ್‌ವೇರ್ ಎಂಜಿಯರ್‌ಗಳ ಬದುಕಿನೊಳಕ್ಕೆ ಪರಕಾಯ ಪ್ರವೇಶ ಮಾಡಿ ಅಲ್ಲಿನ ಸಕಲವನ್ನೂ ಶೋಧಿಸಿದ್ದಾರೆ. ಅಲ್ಲಿ ಬಳಸಲಾಗುವ ತಾಂತ್ರಿಕ ಪದಗಳನ್ನು ಕರಗತಮಾಡಿದ್ದಾರೆ. ಒಂದು ಸಾಫ್ಟ್‌ವೇರ್ ಕಂಪೆನಿಯನ್ನೇ ಕಣ್ಣಮುಂದೆ ಅನಾವರಣಗೊಳಿಸುತ್ತಾರೆ. ಸಾಮಾನ್ಯವಾಗಿ ಎಂಜಿನಿಯರ್‌ಗಳ ಪ್ರತಿಭೆ ಅಷ್ಟಕ್ಕೇ ಸೀಮಿತವಾಗುವುದು ಅಧಿಕ. ಆದರೆ ಇಲ್ಲಿ ಬರುವ ಗೌತಮ ಒಳ್ಳೆಯ ಅಂತಾರಾಷ್ಟ್ರೀಯ ಗುಣಮಟ್ಟದ ಕಲಾವಿದನೂ ಹೌದು. ಆದರೆ ಚಾಂಚಲ್ಯಕ್ಕೆ ಶರಣಾಗಬೇಕಾದ ಅನಿವಾರ್ಯತೆಯಲ್ಲಿ ಆತ ಪರಿತಪಿಸುತ್ತಾನೆ. ರೂಪದರ್ಶಿಯಾದ ಆತನ ಪತ್ನಿ ಮನಸ್ವಿಗೊ ತನ್ನ ರೂಪದ ಬಗ್ಗೆ ಕಾಳಜಿ. ಪರಿಣಾಮವಾಗಿ ಮಕ್ಕಳ ಮಹತ್ವಕ್ಕೆ ಕಿವುಡಾಗುತ್ತಾಳೆ. ಬದುಕಿನ ಸಕಲ ಜಂಜಡಗಳ ನಡುವೆ ಒದ್ದಾಡುವ ಆದರೆ ನಿರ್ಮಲ ಮನಸ್ಸನ್ನು ಕಾಪಾಡುವ ಕಾತ್ಯಾಯಿನಿ ಎನ್ನುವ ನಿಗೂಢ ಕನ್ಯೆ ಕೊನೆಗೂ ಮೃದುಲಾ ಎಂಬ ಗೌತಮನಿಟ್ಟ ಹೆಸರಿಗೆ ಅರ್ಹಳಾಗುತ್ತಾಳೆ.

ಇಂದ್ರಕುಮಾರ್ ಈ ಕಾದಂಬರಿಯನ್ನು ಸಣ್ಣಕತೆಯ ವಿಸ್ತೃತರೂಪ ಎಂಬ ನೆಲೆಯಲ್ಲಿ ರಚಿಸಿದ್ದಾರೆ. ಬೃಹತ್ತಾದ ಕಾಂಡದ ಮೂಲಕ ಹೊರಹೊರಡುವ ರೆಂಬೆಕೊಂಬೆಗಳ ಆಲದಮರವನ್ನಿಲ್ಲಿ ಸೃಜಿಸಹೋಗಿಲ್ಲ.

ಆದರೆ ಸಿದ್ಲಿಂಗು, ಜಗನ್, ನಿಂಗಮ್ಮನಂಥ ಪಾತ್ರಗಳು ಕೂಡ ಇಲ್ಲಿ ಮಹತ್ವದ ಪಾತ್ರಗಳೆ. ಇಂಥ ಕಾದಂಬರಿಗಳಲ್ಲಿ ವಸ್ತುನಿಷ್ಠ ಹಾಗೂ ಸಹಜ ಚಲನೆ ಇರುವುದರಿಂದ ಓದುಗರಿಗೆ ಅವು ಅಂತೆಯೇ ನಾಟುತ್ತದೆ. ಅದು ಜನಪ್ರಿಯ ಕಾದಂಬರಿಗೂ ಈ ಬಗೆಯ ಸಹಜ ಚಿತ್ರಣಗಳಿಂದ ಕೂಡಿದ ಕಾದಂಬರಿಗೂ ಇರುವ ವ್ಯತ್ಯಾಸ. ಕೊನೆಯ ಕೆಲವು ತಿರುವುಗಳು ತುಸು ಸಿನಿಮೀಯವೆನಿಸಿದರೂ ಕಾದಂಬರಿಯ ಸಂಘರ್ಷವು ನಾಳೆಯ ಚಿಗುರಿನ ಕನಸಿನೊಂದಿಗೆ, ಪರಿಶುದ್ಧವಾದ ಮನಸ್ಸಿನೊಂದಿಗೆ ಮುಕ್ತಾಯ ಕಾಣುತ್ತದೆಯಲ್ಲ; ಅದು ಮುಖ್ಯ.

ಕಾದಂಬರಿಯಲ್ಲಿ ಬಳಕೆಯಾದ ಭಾಷೆ ತುಂಬ ಸೊಗಸಾಗಿದೆ. ಷಟ್ಪದಿ ವಿಭಕ್ತಿ ಪ್ರತ್ಯಯದ ಮೂಲಕ ದ್ವಿತೀಯ ವಿಭಕ್ತಿ ಪ್ರತ್ಯಯದ ಕಸುವನ್ನು ಕಂಡುಕೊಳ್ಳುವ ಇಂದ್ರಕುಮಾರ್ ಅವರ ಪ್ರಯತ್ನ ಸೊಗಸಾಗಿದೆ. ಅನೇಕ ಸಂದರ್ಭಗಳಲ್ಲಿ ಇದು ಯಶಸ್ವಿಯಾಗಿದೆ. ಈ ಪ್ರಯೋಗವನ್ನು ಇನ್ನಷ್ಟು ಎಚ್ಚರಿಕೆಯಿಂದ ಮಾಡುತ್ತ ಹೋದಲ್ಲಿ ಇಂದ್ರಕುಮಾರ್ ತನ್ನದೇ ಆದ ಛಾಪೊಂದನ್ನು ಒತ್ತುವ ಸಾಧ್ಯತೆಯಿದೆ.

ಕಾತ್ಯಾಯಿನಿ ಎಂಬ ಸಾಮಾನ್ಯ ಹುಡುಗಿಯೊಬ್ಬಳು ಮೃದುಲಾ ಆಗಿ ಅಸಾಮಾನ್ಯ ಮಟ್ಟಕ್ಕೇರಿ ಓದುಗರ ಆತ್ಮದಲ್ಲಿಯೂ ಉಳಿಯುವಂತಾಗುವುದು ಕಾದಂಬರಿಯ ಹೆಚ್ಚುಗಾರಿಕೆ. ಕಾದಂಬರಿಯ ಹಿನ್ನೆಲೆಯ ಕುರಿತು ದಟ್ಟವಾಗಿ ಅಧ್ಯಯನ ನಡೆಸಿ ಬಳಿಕ ಅದಕ್ಕೆ ಕಥಾವಸ್ತುವನ್ನು ಪೊಣಿಸಿ ಬೆಳೆಸುವ ಎಚ್ಚರಿಕೆಯೂ ಈ ಕಾದಂಬರಿಯಲ್ಲಿ ಇದೆ. ಹಾಗಾಗಿಯೇ 'ಮೃದುಲಾ - ಆತ್ಮದ ಹಕ್ಕಿಯ ಹಾಡು' ನಿರ್ದಿಷ್ಟ ದೃಷ್ಟಿಕೋನದಲ್ಲಿ ಸೃಷ್ಟಿಗೊಂಡ ಪರಿಪೂರ್ಣ ಕಾದಂಬರಿ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಚುಕುಬುಕ್ಕು ಜಾಲತಾಣದಲ್ಲಿ[ಶಾಶ್ವತವಾಗಿ ಮಡಿದ ಕೊಂಡಿ]