ಮೂಲಿಕಾಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸು೦ದರವಾದ ಪಶ್ಚಿಮ ಕರಾವಳಿಯ ಬ೦ದರು ಪ್ರದೇಶವಾದ ಮಂಗಳೂರು ಹಾಗೂ ಆಚಾರ್ಯ ಮಧ್ವರಿ೦ದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಕೃಷ್ಣನ ಊರು ಉಡುಪಿ-ಇವೆರಡರ ಮಧ್ಯೆ ರಾಷ್ಟ್ರೀಯ ಹೆದ್ದಾರಿ ೧೭ರ,೧೮ ಮೈಲುಗಳ ಸಮಾನಾಂತರದಲ್ಲಿ ಸಿಗುವ ಪುಟ್ಟ ಊರು ಮುಲ್ಕಿ, ಬಜ್ಪೆ ವಿಮಾನ ನಿಲ್ದಾಣದಿಂದ ೧೫ ಮೈಲು ಉತ್ತರ ಪಶ್ಚಿಮಾಭಿಮುಖವಾಗಿ ಮೂಲ್ಕಿಗೆ ತಲುಪಬಹುದು.

ಪುರಾತನ ಕಾಲದಲ್ಲಿ ಮೂಲಿಕಾ ವೃಕ್ಷ ವನರಾಶಿಗಳಿಂದ ಸುಶೋಭಿಸುತ್ತಿದ್ದ ಪ್ರದೇಶವಾದುದರಿಂದ ಇದು ಮೂಲಕಾಪುರ-ಮೂಲಿಕೆ-ಮೂಲ್ಕಿ ಎಂಬ ಹೆಸರಲ್ಲಿ ಪ್ರಸಿದ್ಧವಾಯಿತು. ಮೂಲ್ಕಿಯು ಪುರಾತನ ಪಟ್ಟಣ ಹಾಗೂ ಬಂದರುಗಳಲ್ಲಿ ಒಂದಾಗಿತ್ತು ಎಂದು ತಿಳಿದುಬರುತ್ತದೆ, ಮೂಲ್ಕಿಯು ಜಿಲ್ಲೆಯ ವ್ಯಾಪಾರೀ ಭೂಪಟದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿತು.ಇಲ್ಲಿಂದ ಶಾಂಭವಿ ನದಿಯ ಮೂಲಕ ಸಾಗರೀಯ ಚಟುವಟಿಕೆಗಳು ನಡೆಯುತ್ತಿದ್ದು ಹೇರಳವಾಗಿ ಅಕ್ಕಿ, ಕರಿಮೆಣಸು, ಚಿಪ್ಪುಮೀನು ಹಡಗುಗಳ ಮೂಲಕ ರಫ್ತಾಗುತ್ತಿತ್ತು. ಮೂಲ್ಕಿ ಸೀಮೆಯನ್ನು ಆಳುತ್ತಿದ್ದ ಸಾಮಂತರಸರು ಒಂದೊಮ್ಮೆ ಒಳಲಂಕೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು.