ಮೂರು ಆಯಾಮದ ಮುದ್ರಣ
ಮೂರು ಆಯಾಮದ ಮುದ್ರಣವನ್ನು ಮೂರು ಆಯಾಮದ ವಸ್ತುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಇದನ್ನು ಸಂಯೋಜನೀಯ ಉತ್ಪಾದನಾ ಎಂದು ಕರೆಯಲಾಗುತ್ತದೆ. ಹಲವಾರು ಕಾರ್ಯವಿಧಾನಗಳನ್ನು ಉಪಯೋಗಿಸಿ ಮೂರು ಆಯಾಮದ ಮುದ್ರಣವು ಮೂರು ಆಯಾಮದ ವಸ್ತುಗಳನ್ನು ತಯಾರಿಸುತ್ತದೆ. ಈ ತಂತ್ರಜ್ಞಾನವನ್ನು ೧೯೮೪ನಲ್ಲಿ ಚಾರ್ಲ್ಸ್ ಹಲ್ ಎಂಬ ವ್ಯಕ್ತಿ ಕಂಡುಹಿಡಿದನು. ಇದು ಒಂದು ರೀತಿಯ ಕೈಗಾರಿಕಾ ಯಂತ್ರಮಾನವ. ಇದು ಗಣಕಯಂತ್ರದ ಆಧಾರಿತವಾಗಿದೆ. ಇಂಟರ್ನೆಟ್‍ನಿಂದ ಯಾವುದೇ ವಸ್ತುವಿನ ನೀಲಿನಕ್ಷೆಯನ್ನು ಕಳುಹಿಸುವುದರ ಮುಖಾಂತರ ಜಗತ್ತಿನಲ್ಲಿರುವ ಯಾವುದೇ ವಸ್ತುವನ್ನು ತಯಾರಿಸಲು ಮೂರು ಆಯಾಮದ ಮುದ್ರಣದಿಂದ ಸಾಧ್ಯವಾಗುತ್ತದೆ. ಭವಿಷ್ಯತಾವಾಧಿಗಳಾದ ಜೆರೆಮಿ ರಫ್‍ಕಿನ್‍ರವರು ಮೂರನೆ ಕೈಗಾರಿಕಾ ಅವೃಥಿ ಮೂರು ಆಯಾಮದ ಮುದ್ರಣದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದ್ದಾರೆ. ಹತೋಂಬತ್ತನೇ ಶತಮಾನದಲ್ಲಿ ಇದರ ಉತ್ಪಾಧನೆಯನ್ನು ಪ್ರಾರಂಭಿಸಲಾಯಿತು.[೧]
ತಯಾರಿಸುವ ವಿಧಾನಗಳು
[ಬದಲಾಯಿಸಿ]ಮೆತ್ತಗಿರುವ ಅಥವ ಅರೆ ದ್ರವ ಸ್ತಿತಿಯಲ್ಲಿರುವ ವಸ್ತುಗಳನ್ನು ಮೂರು ಆಯಾಮದ ಮುದ್ರಣ ವಸ್ತುಗಳನ್ನು ತಯಾರಿಸಲು ಬಳಸುತ್ತದೆ. ಗಣಕಯಂತ್ರದ ನೆರವಿನ ವಿನ್ಯಾಸದಿಂದ ತಯಾರಿಸಿದ ಮೂರು ಆಯಾಮದ ಚಿತ್ರದ ಮೂಲಕ ಇದು ವಸ್ತುಗಳನ್ನು ತಯಾರಿಸುತ್ತದೆ. ಇದು ಸ್ಥೂಲಕಲ್ಪದಿಂದ ವಸ್ತುಗಳನ್ನು ತಯಾರಿಸುತ್ತದೆ. ಹಿಡಿಯೋಕದಮ ಎಂಬ ಪುರಸಭೆಯ ಔದ್ಯಮಿಕ ಸಂಶೋಧನಾ ಸಂಸ್ಥೆಯಲ್ಲಿದ್ದ ವ್ಯಕ್ತಿ ಪ್ರಕಾಶದಿಂದ ಗಟ್ಟಿಯಾಗುವ ಪಾಲಿಮರ್ ಉಳ್ಳ ಎರಡು ರೀತಿಯ ಸಂಯೋಜನೀಯ ಉತ್ಪಾದನಾ ತಯಾರಿಕೆಗಳನ್ನು ಆವಿಷ್ಕಾರಿಸಿದನು. ಆಯ್ದ ಲೇಸರ್ ಹೆಪ್ಪುಗಟ್ಟಿಸುವುದು, ಕೂಡಿಕೊಂಡಿರುವ ಶೇಖರಣೆ ಮಾಡೆಲ್ಲಿಂಗ್, ಸ್ಟಿರಿಯೋಲಿತೊಗ್ರಫಿ ತಂತ್ರಜ್ಞಾನಗಳು ಇದರಲ್ಲಿ ಬಳಸಲಾಗುತ್ತದೆ.
ಕೂಡಿಕೋಂಡಿರುವ ಶೇಖರಣೆ ಮಾಡೆಲ್ಲಿಂಗ್
[ಬದಲಾಯಿಸಿ]ಕೂಡಿಕೋಂಡಿರುವ ಶೇಖರಣೆ ಮಾಡೆಲ್ಲಿಂಗ್- ಈ ತಂತ್ರಜ್ಞಾನವನ್ನು ಸ್ಟಾಟ್ ಕ್ರಂಪ್ ಆವಿಷ್ಕಾರಿಸಿದನು.[೨] ಈ ತಂತ್ರಜ್ಞಾನವನ್ನು ಅವಲಂಬಿಸಿ ಚಾಲನೆಯಲ್ಲಿರುವ ಮೂರು ಆಯಾಮದ ಮುದ್ರಣವು ವಿವಿಧ ಭಾಗಗಳನ್ನು ಹಲವಾರು ಪದರಗಳಾಗಿ ನಿರ್ಮಿಸುತ್ತದೆ. ಕೆಳಗಿನಿಂದ ಒಂದಾದ ನಂತರ ಮತ್ತೊಂದು ಪದರಗಳನ್ನು ನಿರ್ಮಿಸಿ ಅದನ್ನು ವಸ್ತುವಿನ ಆಕಾರಕ್ಕೆ ಕಾಯಿಸುವುದರ ಮೂಲಕ ತರುತ್ತದೆ. ಇದರಲ್ಲಿ ಮೂರು ಪ್ರಕ್ರಿಯೆಗಳು ಒಳಗೊಂಡಿವೆ. ಅವು ಪೂರ್ವ ಸಂಸ್ಕರಣೆ, ಉತ್ಪಾದನೆ, ಸಂಸ್ಕರಣೆಯ ನಂತರ. ಪೂರ್ವ ಸಂಸ್ಕರಣೆ- ಗಣಕಯಂತ್ರ ನೆರವಿನ ವಿನ್ಯಾಸ ತಂತ್ರಜ್ಞಾನದಿಂದ ವಿನ್ಯಾಸವನ್ನು ಶೃಸ್ಟಿಸಲಾಗುತ್ತದೆ. ಉತ್ಪಾಧನೆ- ಮೂರು ಆಯಾಮದ ಮುದ್ರಣವು ಥರ್ಮೋಪ್ಲಾಸ್ಟಿಕ್‍ಕ್ಕನ್ನು ಕಾಯಿಸುವ ಮೂಲಕ ಅದನ್ನು ಅರೆ ಸ್ರವಿಸ್ಥಿತಿಗೆ ತರುತ್ತದೆ. ಅರೆ ಸ್ರವಿಸ್ಥಿತಿಯಲ್ಲಿರುವ ಥರ್ಮೋಪ್ಲಾಸ್ಟಿಕ್‍ಕ್ಕನ್ನು ನಿಕ್ಷೇಪಿಸಿ ವಸ್ತುಗಳನ್ನು ತಯಾರಿಸುತ್ತದೆ. ತಯಾರಿಸುವ ಕ್ರಿಯೆಯಲ್ಲಿ ತೆಗೆಯಬಹುದಾದ ಕೆಲವು ವಸ್ತುಗಳನ್ನು ಅಗತ್ಯವಿದಕಲ್ಲಿ ಇಡಲಾಗುತ್ತದೆ. ಸಂಸ್ಕರಣೆ ನಂತರ- ಬಳಕೆದಾರ ಬೆಂಬಲಕ್ಕಾಗಿ ಇಟ್ಟಿರುವ ವಸ್ತುಗಳನ್ನು ತೆಗೆಯುತ್ತಾರೆ ಅಥವಾ ಅದನ್ನು ಮಾರ್ಜಕದಲ್ಲಿ ಕರಗಿಸುತ್ತಾರೆ. ಇದರ ಪ್ರಯೋಜನಗಳು- ಇದನ್ನು ಕಾರ್ಯಾಲಯದಲ್ಲಿ ಬಳಸಲಾಗುತ್ತದೆ. ಇದು ಯಾಂತ್ರಿಕವಾಗಿ ಮತ್ತು ಪರಿಸರದಲ್ಲಿ ಸ್ತಿರವಾಗಿದೆ. ಸಂಕೀರ್ಣವಾದ ಆಕಾರ ಉಳ್ಳ ವಸ್ತುಗಳನ್ನು ಇದರಿಂದ ತಯಾರಿಸಬಹುದು.
ಆಯ್ದ ಲೇಸರ್ ಹೆಪ್ಪುಗಟ್ಟಿಸುವುದು
[ಬದಲಾಯಿಸಿ]ಆಯ್ದ ಲೇಸರ್ ಹೆಪ್ಪುಗಟ್ಟಿಸುವುದು - ಈ ತಂತಜ್ಞಾನದಲ್ಲಿ ಪುಡಿಯನ್ನು ಕೂಡಿಸಿ ವಸ್ತುವನ್ನು ತಯಾರಿಸಲಾಗುತ್ತದೆ. ಪುಡಿಯನ್ನು ಕೂಡಿಸಿ ವಸ್ತುವಿನ ಆಕಾರದಲ್ಲಿ ಪದರ ಪದರವಾಗಿ ಹರಡಲಾಗುತ್ತದೆ. ಇಂಗಾಲದ ಡೈಆಕ್ಸೈಡ್ ಉಳ್ಳ ಲೇಸರ್‍ರನ್ನು ಪುಡಿಯಿಂದ ತಯಾರಿಸಲಾದ ವಸ್ತುವಿನ ಮೇಲೆ ಬಿಡಲಾಗುತ್ತದೆ. ಇದನ್ನು ಬಿಡುವುದರ ಮೂಲಕ ಪುಡಿಯಾಗಿರುವ ಅಣುಗಳು ಗಟ್ಟಿಯಾಗಿ ಕೂಡಿಕೊಳುತ್ತವೆ.
ಸ್ಟಿರಿಯೋಲಿಥೊಗ್ರಫಿ
[ಬದಲಾಯಿಸಿ]ಸ್ಟಿರಿಯೋಲಿಥೊಗ್ರಫಿ- ಈ ತಂತ್ರಜ್ಞಾನವನ್ನು ೧೯೮೪ನಲ್ಲಿ ಆವಿಷ್ಕಾರಿಸಲಾಯಿತು. ಅಲೈನ್ ಲೆ ಮೆಹೌತೆ, ಒಲಿವಿಯರ್ ಡೆ ವಿಟ್ಟೆ ಮತ್ತು ಜೀನ್ ಕ್ಲೌಡ್ ಆಂಡ್ರೆ ಈ ತಂತ್ರಜ್ಞಾನಕ್ಕೆ ಸ್ವಾಮ್ಯದ ಸನದು ಸಲ್ಲಿಸಿದರು ಆದರೆ ಮೂರು ವಾರದ ಮುಂಚಿತವಾಗಿ ಚಾರ್ಲ್ಸ್ ಹಲ್ ಸ್ವಾಮ್ಯದ ಸನದು ಸಲ್ಲಿಸಿದರು. ಫ್ರೆಂಚ್ ಸಂಶೋಧಕರು ಸಲ್ಲಿಸಿದ ಅರ್ಜಿಯನ್ನು ಫ್ರೆಂಚ್ ವಿದ್ಯುತ್ ಸಂಸ್ಥೆ ಮತ್ತು ಲೇಸರ್ ಒಕ್ಕೂಟ ವ್ಯಾಪಾರದ ದೃಷ್ಟಿಕೋನದಿಂದ ಕೊರತೆ ಇದ್ದ ಕಾರಣ ಪರಿತ್ಯಕ್ತಗೊಳಿಸಿತು. ಈ ತಂತ್ರಜ್ಞಾನದಲ್ಲಿ ವಸ್ತುಗಳನ್ನು ಪದರ ಪದರವಾಗಿ ನಿರ್ಮಿಸಲಾಗುತ್ತದೆ. ಅದಕ್ಕೆ ನೇರಳಾತೀತ ಲೇಸರ್‍ರನ್ನು ಉಪಯೋಗಿಸಿ ವಸ್ತುವಿನ ವಿನ್ಯಾಸವನ್ನು ತಯಾರಿಸಲಾಗುತ್ತದೆ. ಚಾರ್ಲ್ಸ್ ಹಲ್ ಈ ಪ್ರಕ್ರಿಯೆಯನ್ನು ಮೂರು ಆಯಾಮದ ವಸ್ತುವಿನ ಅಡ್ಡ ವಿಭಾಗವನ್ನು ತಯಾರಿಸುವುದರ ಮೂಲಕ ಮೂರು ಆಯಾಮದ ವಸ್ತುಗಳನ್ನು ತಯಾರಿಸುವ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಿದರು. ಸ್ಟಿರಿಯೋಲಿಥೊಗ್ರಫಿಯ ವಿನ್ಯಾಸವು ಚಾರ್ಲ್ಸ್ ಹಲ್ ನೀಡಿರುವ ಕೊಡುಗೆ.
ನೇರ ಲೋಹದ ಲೇಸರ್ ಹೆಪ್ಪುಗಟ್ಟಿಸುವುದು
[ಬದಲಾಯಿಸಿ]ನೇರ ಲೋಹದ ಲೇಸರ್ ಹೆಪ್ಪುಗಟ್ಟಿಸುವುದು- ಈ ತಂತ್ರಜ್ಞಾನದಲ್ಲಿ ಹೆಚ್ಚಿನ ಸಾಮರ್ಥ್ಯ ಪ್ರಮಾಣದ ಲೆಸರ್ ಉಪಯೋಗಿಸಿ ಲೋಹವನ್ನು ಹಾಗು ಮಿಶ್ರಲೋಹಗಳನ್ನು ಬೆಸುಗೆ ಹಾಕುತ್ತಾರೆ. ಇದು ಕಡಿಮೆ ಸಮಯದಲ್ಲಿ ಬಹಳ ಸಂಕೀರ್ಣ ಆಕಾರ ಉಳ್ಳ ವಸ್ತುಗಳನ್ನು ತಯಾರಿಸುತ್ತದೆ. ಈ ರೀತಿ ತಯಾರಿಸಲು ಬೇರೆ ಲೋಹದ ತಯಾರಿಕಾ ಪ್ರಕ್ರಿಯೆಗಳಿಂದ ಸಾಧ್ಯವಾಗುವುದಿಲ್ಲ. ಅಲ್ಯೂಮಿನಿಯಂ, ಸ್ಟೀಲ್ ಮತ್ತು ಟೈಟಾನಿಯಮ್ ಲೋಹವನ್ನು ಉಪಯೋಗಿಸಿ ವಸ್ತುಗಳನ್ನು ತಯಾರಿಸಲಾಗುತ್ತದೆ. ತಯಾರಿಸಲಾದ ವಸ್ತುಗಳು ಪ್ರಬಲ, ಬಾಳಿಕೆ ಬರುವ, ಮತ್ತು ಶಾಖ ನಿರೋಧಕವಾಗಿರುತ್ತದೆ. ಈ ತಂತ್ರಜ್ಞಾನವನ್ನು ಉಪಯೋಗಿಸಿ ತಯಾರಿಸಿದ ವಸ್ತುಗಳು ಬಂಡವಾಳ ಎರಕಹೊಯ್ದ ಲೋಹಕ್ಕಿಂತ ಹೆಚ್ಚು ಸಾಂದ್ರವಾಗಿರುತ್ತದೆ.
ಉಪಯೋಗಗಳು
[ಬದಲಾಯಿಸಿ]ಇದರ ಉಪಯೋಗಗಳು- ಬೇರೆ ಪ್ರಕ್ರಿಯೆಗಳಿಂದ ಕಷ್ಟಕರವಾದ ಅಥವ ಅಸಾಧ್ಯವಾದಂತಹ ವಿನ್ಯಾಸಗಳನ್ನು ಲೋಹದಿಂದ ಈ ತಂತ್ರಜ್ಞಾನವನ್ನು ಉಪಯೋಗಿಸಿ ತಯಾರಿಸಬಹುದು. ಯೋಜನೆಯ ವಿನ್ಯಾಸವನ್ನು ಹಾಗು ತಯಾರಿಕೆಯನ್ನು ಕಡಿಮೆ ಸಮಯದಲ್ಲಿ ಮುಗಿಸುತ್ತದೆ. ಇದು ವಿನ್ಯಾಸವನ್ನು ಕ್ರೋಢೀಕರಿಸುತ್ತದೆ ಮತ್ತು ಮೌಲ್ಯ ಕಡಿಮೆಗೊಳಿಸುತ್ತದೆ. ಇದು ಆರೋಹಿಸುವುದು, ಸಲಕರಣೆಗೊಳಿಸುವುದು ಹೀಗೆ ಹಲವಾರು ಘಟಕಗಳನ್ನು ಸಂಯೋಜಿಸಿ ಒಂದು ಲೋಹದ ಭಾಗವನ್ನು ತಯಾರಿಸುತ್ತದೆ. ಇದರಿಂದ ವಸ್ತುವಿನ ತೂಕ, ತ್ಯಾಜ್ಯ, ವಸ್ತುವನ್ನು ತಯಾರಿಸಲು ಬೇಕಾದ ಸಮಯ ಹಾಗು ಸಂಪನ್ಮೂಲಗಳು ಕಡಿಮೆಯಾಗುತ್ತದೆ. ೨೦೦೦ನಲ್ಲಿ ಅಂಬ್ರಲ್ಲಾ ಸಂಯೋಜನೀಯ ಉತ್ಪಾದನಾ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯಿತು. ಕಳೆಯುವ ಉತ್ಪಾದನಾ- ಈ ಪ್ರಕ್ರಿಯೆಯನ್ನು ಗಟ್ಟಿಯಾದ ಬ್ಲಾಕ್ಗಳನ್ನು ಅನುಕ್ರಮವಾಗಿ ಕತ್ತರಿಸುವ ಮೂಲಕ ವಸ್ತುಗಳನ್ನು ತಯಾರಿಸಲಾಗುತ್ತದೆ. ಕತ್ತರಿಸುವ ಪ್ರಕ್ರಿಯೆಯನ್ನು ಗಣಕಯಂತ್ರದ ಸಂಖ್ಯಾತ್ಮಕ ನಿಯಂತ್ರಣದಿಂದ ಮಾಡಲಾಗುತ್ತದೆ. ಇದನ್ನು ನಿಯಂತ್ರಣವಾಗಿ ವಸ್ತುವನ್ನು ತೆಗೆದುಹಾಕುವ ಪ್ರಕ್ರಿಯೆ ಎನ್ನುತ್ತಾರೆ. ಈ ರೀತಿ ಹಲವಾರು ತಂತ್ರಜ್ಞಾನಗಳನ್ನು ಮೂರು ಆಯಾಮದ ವಸ್ತುಗಳನ್ನು ತಯಾಸಿಸಲು ಮೂರು ಆಯಾಮದ ಮುದ್ರಣ ಬಳಸುತ್ತದೆ. ವಿಮಾನದ ಹಾಗು ಬಾಹ್ಯಾಕಾಶದ ಭಾಗಗಳನ್ನು, ವಾಸ್ತುಶಿಲ್ಪದ ಮಾದರಿಗಳನ್ನು, ವಾಹನಗಳ ಭಾಗಗಳನ್ನು, ಶಿರಸ್ತ್ರಾಣಗಳನ್ನು ಸ್ಕೀ ಕನ್ನಡಕಗಳನ್ನು ಗೊಂಬೆಗಳನ್ನ ಹೀಗೆ ಹಲವಾರು ವಸ್ತುಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಇದನ್ನು ದಂತ ಪ್ರಯೋಗಾಲಯದಲೂ ಉಪಯೊಗಿಸಲಾಗುತ್ತದೆ. ಕಡಿಮೆ ದರದಲ್ಲಿ ಹಾಗು ಕಡಿಮೆ ಸಮಯದಲ್ಲಿ ಸ್ಥಿರವಾದ ವಸ್ತುಗಳನ್ನು ಇದರಿಂದ ತಯಾರಿಸಬಹುದು. ಆದ್ದರಿಂದ ಮೂರು ಆಯಾಮದ ಮುದ್ರಣ ಬಹಳ ಉಪಯೋಗಕರವಾದ ವಸ್ತು.
ಉಲ್ಲೇಖನಗಳು
[ಬದಲಾಯಿಸಿ]