ಮೂರನೇ ರುದ್ರಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೂರನೇ ರುದ್ರಸಿಂಹ
ಭದ್ರಮುಖರ ರಾಜ ಮೂರನೇ ರುದ್ರಸಿಂಹನ ನಾಣ್ಯ, ಸುಮಾರು ಕ್ರಿ.ಶ. 385-415.
ಪಶ್ಚಿಮ ಕ್ಷತ್ರಪ
ಆಳ್ವಿಕೆ c. 388 – c. 395 AD
ಪೂರ್ವಾಧಿಕಾರಿ ನಾಲ್ಕನೇ ರುದ್ರಸೇನ
ಉತ್ತರಾಧಿಕಾರಿ ಯಾರೂ ಇಲ್ಲ

ಮೂರನೇ ರುದ್ರಸಿಂಹ ಭಾರತದಲ್ಲಿ ೪ನೇ ಶತಮಾನದಲ್ಲಿ, ಪಶ್ಚಿಮ ಕ್ಷತ್ರಪರ ಕೊನೆಯ ಅರಸನಾಗಿದ್ದನು.

ಎರಡನೇ ಚಂದ್ರಗುಪ್ತನ ಅಣ್ಣ ಗುಪ್ತ ಅರಸ ರಾಮಗುಪ್ತನು ಗುಜರಾತ್‍ನಲ್ಲಿ ಪಶ್ಚಿಮ ಕ್ಷತ್ರಪರ ಮೇಲೆ ದಾಳಿ ಮಾಡಿ ತನ್ನ ರಾಜ್ಯವನ್ನು ವಿಸ್ತರಿಸಲು ನಿರ್ಧರಿಸಿದನು ಎಂದು ನಾಟ್ಯ ದರ್ಪಣ ನಾಟಕದ ಒಂದು ತುಣುಕು ಉಲ್ಲೇಖಿಸುತ್ತದೆ. ಶೀಘ್ರದಲ್ಲೇ ಈ ದಂಡಯಾತ್ರೆ ಹದಗೆಟ್ಟಿತು ಮತ್ತು ಗುಪ್ತ ಸೇನೆಯು ಸಿಕ್ಕಿಬಿದ್ದಿತು. ಶಾಂತಿಗಾಗಿ ರಾಮಗುಪ್ತನು ಹೆಂಡತಿ ಧ್ರುವಾದೇವಿಯನ್ನು ಒಪ್ಪಿಸಬೇಕೆಂದು ಶಕ ರಾಜ ಮೂರನೇ ರುದ್ರಸಿಂಹನು ಬೇಡಿಕೆ ಇಟ್ಟನು. ಅವಮಾನ ತಪ್ಪಿಸಲು ಗುಪ್ತರು ಚಂದ್ರಗುಪ್ತನ ಪ್ರೀತಿಪಾತ್ರಳು ಮತ್ತು ಗಣಿಕೆಯಾದ ಮಾಧವಸೇನಾಳನ್ನು ರಾಣಿಯ ಮಾರುವೇಷದಲ್ಲಿ ಕಳುಹಿಸಲು ನಿರ್ಧರಿಸಿದರು. ಆದರೆ, ಚಂದ್ರಗುಪ್ತನು ಯೋಜನೆಯನ್ನು ಬದಲಿಸಿದನು ಮತ್ತು ರಾಣಿಯ ಮಾರುವೇಷದಲ್ಲಿ ತಾನೇ ಶಕ ರಾಜನ ಬಳಿ ಹೋದನು. ನಂತರ ಅವನು ರುದ್ರಸಿಂಹನನ್ನು ಮತ್ತು ತನ್ನ ಸ್ವಂತ ಅಣ್ಣ ರಾಮಗುಪ್ತನನ್ನು ಕೊಂದನು. ಧ್ರುವಾದೇವಿ ನಂತರ ಚಂದ್ರಗುಪ್ತನನ್ನು ವಿವಾಹವಾದಳು.

ಪಶ್ಚಿಮ ಕ್ಷತ್ರಪರು ಅಂತಿಮವಾಗಿ ಸಾಮ್ರಾಟ ಎರಡನೇ ಚಂದ್ರಗುಪ್ತನಿಂದ ಪರಾಜಿತಗೊಂಡರು. ಈ ಘಟನೆಯು ಭಾರತೀಯ ಉಪಖಂಡದಲ್ಲಿ ಶಕರ ಆಳ್ವಿಕೆಯನ್ನು ಸಂಪೂರ್ಣವಾಗಿ ಕೊನೆಗೊಳಿಸಿತು.

ಉಲ್ಲೇಖಗಳು[ಬದಲಾಯಿಸಿ]

  • Rapson, "A Catalogue of Indian coins in the British Museum. Andhras etc.."