ವಿಷಯಕ್ಕೆ ಹೋಗು

ಮುಮ್ತಾಜ ಬೇಗಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಮ್ತಾಜ ಬೇಗಮ್
Mumtaz Begum
ಜನನದೆಸೆಂಬರ್ ೨೧, ೧೯೪೮
ಕಾರ್ಕಳ
ಸಾವುಎಪ್ರಿಲ್ ೬, ೨೦೨೧[]
ವೃತ್ತಿಬರಹಗಾರ್ತಿ, ಸಮಾಜ ಸೇವಕಿ
ಗಮನಾರ್ಹ ಕೆಲಸಸ್ವಾತಂತ್ರ್ಯದ ಕಹಳೆ, ಅವ್ಯಕ್ತ, ಅಂಕುರ, ವರ್ತುಲ, ಬಂದಳಿಕೆ, ಚಿಂಪಿ, ಸರ್ವ ಋತುಗಳು ನಿನಗಾಗಿ, To The Unknown Destination
ಗೌರವಕರ್ನಾಟಕ ಮುಸ್ಲಿಂ ಲೇಖಕರ ಸಂಘ ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಚೆನ್ನಶ್ರೀ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಬಸವ ಜ್ಯೋತಿ ಪ್ರಶಸ್ತಿ, ಹಿರಿಯನಾಗರಿಕರ ಸಾಹಿತ್ಯ ಸಾಧಕಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ.

ಮುಮ್ತಾಜ ಬೇಗಮ್ (ಡಿಸೆಂಬರ್ 21, 1948 - ಏಪ್ರಿಲ್ 6, 2021) ಇವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿವಿಜಯ ಕಾಲೇಜಿನಿಂದ ಪದವಿ ಪಡೆದು ಕೆಲ ಕಾಲ ಸುಧಾ ವಾರಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.ಕತಾರಿನ ಬ್ಯಾಂಕ ಒಂದರಲ್ಲಿ ಕೆಲ ವರ್ಷ ನೌಕರಿ ಮಾಡಿದ್ದಾರೆ. ಕನ್ನಡದ ಪ್ರಮುಖ ಲೇಖಕಿ ಮತ್ತು ಸಮಾಜ ಸೇವಕಿ. ಕರ್ನಾಟಕ ಮುಸ್ಲಿಂ ಲೇಖಕರ ಸಂಘದ 2019ನೇ ಸಾಲಿನ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು.

ಜನನ ಮತ್ತು ಆರಂಭಿಕ ಜೀವನ

[ಬದಲಾಯಿಸಿ]

ಮುಮ್ತಾಜ್ ಬೇಗಮ್ ಅವರು ಡಿಸೆಂಬರ್ 21, 1948 ರಂದು ಜನಿಸಿದರು. ಅವರ ತಾಯಿ ಫಾತಿಮಾ ಬೇಗಂ, ಕಾರ್ಕಳದ ಕನ್ನಡ ಶಾಲೆಯಲ್ಲಿ ಶಿಕ್ಷಣ ಪಡೆದು ಉಡುಪಿಯ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಶಿಕ್ಷಕಿಯಾದವರು. ತಂದೆ ಮಹಮ್ಮದ್ ಇಶಾಕ್ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಮುಮ್ತಾಜ್ ಬೇಗಮ್ ಅವರು ಕಾರ್ಕಳ ಮತ್ತು ಮುಲ್ಕಿ ಕಿಲ್ಪಾಡಿಯಲ್ಲಿ ಬೆಳೆದರು.

ಶಿಕ್ಷಣ ಮತ್ತು ವೃತ್ತಿ

[ಬದಲಾಯಿಸಿ]

ಖತಾರ್‌ನಲ್ಲಿರುವ ಯುನೆಸ್ಕೊದ ಆರ್ಥಿಕ ಹಾಗೂ ಆಡಳಿತ ಸಹಾಯಕರಾಗಿ, ದುಬೈನ ಅಲ್ ಮೀರ್ ಸಂಸ್ಥೆ ಮತ್ತು ಫ್ಯೂಜಿ ಗಾರ್ಮೆಂಟ್ಸ್'ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವರು, ಮುಲ್ಕಿಯ ಕಾನ್ವೆಂಟ್ ಮತ್ತು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಪಡೆದು, ಮುಲ್ಕಿ ವಿಜಯ ಕಾಲೇಜಿನಲ್ಲಿ ಪದವಿ ಪಡೆದರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರಾವಳಿ ಲೇಖಕಿ ಮತ್ತು ವಾಚಕಿಯರ ಸಂಘದ ಸಕ್ರಿಯ ಸದಸ್ಯರಾಗಿದ್ದು, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿ, 2017 ರಿಂದ 2019ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು.[]

ಸಾಹಿತ್ಯ ಕೃತಿಗಳು

[ಬದಲಾಯಿಸಿ]
  • ಅವ್ಯಕ್ತ (ಕಥಾ ಸಂಕಲನ) []
  • ಅಂಕುರ (ಕಥಾ ಸಂಕಲನ)
  • ಪರದೇಶಿ (ಧಾರವಾಹಿ)
  • ವರ್ತುಲ (ಕಾದಂಬರಿ)
  • ಬಂದಳಿಕೆ (ಕಾದಂಬರಿ)
  • ಚಿಂಪಿ (ಮಕ್ಕಳ ಸಾಹಿತ್ಯ)
  • ಸರ್ವ ಋತುಗಳೂ ನಿನಗಾಗಿ (ಕವನ ಸಂಕಲನ)
  • ಸ್ವಾತಂತ್ರ್ಯದ ಕಹಳೆ (ಕೃತಿ)
  • ಸೂರ್ಯಾಸ್ತ (ಕೃತಿ)
  • ಟು ದಿ ಅನ್‌ನೌನ್ ಡೆಸ್ಟಿನೇಶನ್ - To The Unknown Destination (ಇಂಗ್ಲಿಷ್ ಕಾದಂಬರಿ)
  • ನೀನೊಂದು ಮರೆಯಲಾಗದ ನೆನಪು (ಕಥಾ ಸಂಕಲನ)
  • ಕಾಲನ ಕೈಯ ನಕ್ಷೆ(ಕವನ ಸಂಕಲನ)
  • ಅಳಿದುಳಿದ ಕತೆಗಳು(ಕಥಾ ಸಂಕಲನ)
  • ಸ್ವರ್ಗಕ್ಕೆ ದಾರಿ(ಕಾದಂಬರಿ)

ಪ್ರಶಸ್ತಿಗಳು

[ಬದಲಾಯಿಸಿ]
  • ಕರ್ನಾಟಕ ಮುಸ್ಲಿಂ ಲೇಖಕರ ಸಂಘದ 2019ನೇ ಸಾಲಿನ ಮುಸ್ಲಿಂ ಸಾಹಿತ್ಯ ಪ್ರಶಸ್ತಿ[]
  • ಅತ್ತಿಮಬ್ಬೆ ಪ್ರಶಸ್ತಿ
  • ಚೆನ್ನಶ್ರೀ ಪ್ರಶಸ್ತಿ
  • ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ
  • ಬಸವ ಜ್ಯೋತಿ ಪ್ರಶಸ್ತಿ
  • ಹಿರಿಯ ನಾಗರಿಕರ ಸಾಹಿತ್ಯ ಸಾಧಕಿ ಪ್ರಶಸ್ತಿ
  • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ

ಮುಮ್ತಾಜ್ ಬೇಗಮ್ ಅವರು ಏಪ್ರಿಲ್ 6, 2021 ರಂದು ಕೋವಿಡ್-19 ಸಾಂಕ್ರಾಮಿಕದಿಂದ ನಿಧನರಾದರು.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Kannada author Mumtaz Begum dies at 73". 6 April 2021.
  2. "ನಿರಂತರ ಕಲಿಕೆಯ ಆಕಾಂಕ್ಷಿ ಮುಮ್ತಾಜ್‌ ಬೇಗಂ".
  3. ೩.೦ ೩.೧ "ಮುಮ್ತಾಜ್ ಬೇಗಮ್‌ರ 'ಸ್ವಾತಂತ್ರ್ಯದ ಕಹಳೆ'ಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ".