ಮುಮ್ತಾಜ್ ಬೇಗಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಸ್ಲಿಂ ಸಮುದಾಯದಲ್ಲಿ ಹಿರಿಯ ಲೇಖಕಿಯೆಂದು ಗುರುತಿಸಿಕೊಂಡವರು. ನಿಸರ್ಗಪ್ರಿಯತೆಯನ್ನು ರೂಢಿಸಿಕೊಂಡ ಸಾಹಿತ್ಯ ಪ್ರೇಮಿ. ಕನ್ನಡ ಕಥೆಗಾರ್ತಿಯೆಂದು ಗುರುತಿಸಿಕೊಂಡಿದ್ದಾರೆ[೧]. ಇವರ ತಾಯಿ ಅಧ್ಯಾಪಕಿ ಹಾಗೂ ತಂದೆ ಸೈನ್ಯ ದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ವಿದ್ಯಾಭ್ಯಾಸ[ಬದಲಾಯಿಸಿ]

ಉರ್ದು ಮಾಧ್ಯಮದಲ್ಲಿ ಪ್ರಾರ್ಥಮಿಕ ವಿದ್ಯಾಭ್ಯಾಸ ಮಾಡಿ, ಕನ್ನಡದಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಪೂರೈಸಿದರು. ಸಮಾಜಶಾಸ್ತ್ರದಲ್ಲಿ ಬಿ. ಎ. ಪದವಿ ಹಾಗೂ ಬಿ. ಎಡ್. ಪದವೀಧರರು. ಪ್ರಜಾವಾಣಿ ಬಳಗದ ವಾರಪತ್ರಿಕೆ, ಸುಧಾಪತ್ರಿಕೆಯ ಸಹಸಂಪಾದಕಿಯಾಗಿದ್ದರು. ಕೆಲವು ಕಾಲ ಗ್ರಿಂಡ್ಲೆಸ್ ಬ್ಯಾಂಕ್ ನಲ್ಲಿ ಹಾಗೂ ಯುನೆಸ್ಕೋದಲ್ಲಿ ಸೇವೆಗೈದಿದ್ದಾರೆ. ಇವರು ವಿಜಯಾಟೈಮ್ಸ್ ನಲ್ಲಿ ಉದ್ಯೋಗಿಯಾಗಿದ್ದರು.

ಕೃತಿಗಳು[ಬದಲಾಯಿಸಿ]

೩೦೦ ಕ್ಕೂ ಹೆಚ್ಚು ಸಣ್ಣಕಥೆಗಳನ್ನು ರಚಿಸಿರುವ ಹೆಗ್ಗಳಿಕೆ ಇವರದು.

ಸಣ್ಣಕಥೆ[ಬದಲಾಯಿಸಿ]

  • ನವಭಾರತ(೧೯೬೫)

ಕಥಾಸಂಕಲನ[ಬದಲಾಯಿಸಿ]

  • ಅಧ್ಯಕ್ಷ (೧೯೮೫)

ಕಾದಂಬರಿ[ಬದಲಾಯಿಸಿ]

  • ತಪಸ್ವಿ
  • ಪರದೇಶಿ(೧೯೮೯)
  • ವರ್ತುಲ(೧೯೯೪)
  • ಬಂದಳಿಕೆ(೨೦೦೨)
  • ಜಂಪಿ ಮತ್ತು ಕೆಂಪಿ(ಮಕ್ಕಳ ವೈಜ್ಞಾನಿಕ ಕಾದಂಬರಿ)

ಕವನಸಂಕಲನ[ಬದಲಾಯಿಸಿ]

  • ಸರ್ವಋತುಗಳು ನಿನಗಾಗಿ

ಪ್ರಶಸ್ತಿಗಳು[ಬದಲಾಯಿಸಿ]

  • ಮಾತೃಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ
  • ಜಿಲ್ಲಾ ರಾಜ್ಯೊತ್ಸವ ಪ್ರಶಸ್ತಿ
  • ಚೆನ್ನಶ್ರೀ ಪ್ರಶಸ್ತಿ
  • ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
  • ಅತ್ತಿಮಬ್ಬೆ ಪ್ರಶಸ್ತಿ[೨]

ಉಲ್ಲೇಖ[ಬದಲಾಯಿಸಿ]

  1. ಚಂದ್ರಗಿರಿ, ನಾಡೋಜ ಡಾ ಸಾರಾಅಬೂಬ್ಬಕರ್ ಅಭಿನಂದನಾ ಗ್ರಂಥ, ಸಂಪಾದಕರು ಡಾ. ಸಬಿಹಾ, ಸಿರಿವರ ಪ್ರಕಾಶನ, ಬೆಂಗಳೂರು, ಮೊದಲ ಮುದ್ರಣ-೨೦೦೯, ಪುಟ ೩೪೭
  2. "ಆರ್ಕೈವ್ ನಕಲು". Archived from the original on 2015-12-11. Retrieved 2015-12-11.