ವಿಷಯಕ್ಕೆ ಹೋಗು

ಮುನ್ನುಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಲಿಯಮ್ ಬ್ಲೇಕ್‍ನ ಮಿಲ್ಟನ್ ಕಾವ್ಯದ ಮುನ್ನುಡಿ

ಮುನ್ನುಡಿ ಕೃತಿಯ ಲೇಖಕನಿಂದ ಬರೆಯಲಾದ ಒಂದು ಪುಸ್ತಕ ಅಥವಾ ಇತರ ಸಾಹಿತ್ಯ ಕೃತಿಗೆ ಪೀಠಿಕೆ. ಒಬ್ಬ ಬೇರೆ ವ್ಯಕ್ತಿಯು ಬರೆದ ಪರಿಚಯಾತ್ಮಕ ಪ್ರಬಂಧಕ್ಕೆ ಪ್ರಸ್ತಾವನೆ ಎಂದು ಕರೆಯಲಾಗುತ್ತದೆ ಮತ್ತು ಇದು ಲೇಖಕನ ಮುನ್ನುಡಿಗಿಂತ ಮೊದಲು ಬರುತ್ತದೆ. ಮುನ್ನುಡಿಯು ಹಲವುವೇಳೆ ಆ ಸಾಹಿತ್ಯ ಕೃತಿಯಲ್ಲಿ ನೆರವಾದವರಿಗೆ ವಂದನೆಗಳೊಂದಿಗೆ ಅಂತ್ಯಗೊಳ್ಳುತ್ತದೆ.

ಮುನ್ನುಡಿಯು ಸಾಮಾನ್ಯವಾಗಿ ಪುಸ್ತಕವು ಹೇಗೆ ಅಸ್ತಿತ್ವಕ್ಕೆ ಬಂದಿತು, ಅಥವಾ ಪುಸ್ತಕದ ವಿಚಾರವನ್ನು ಹೇಗೆ ಅಭಿವೃದ್ಧಿಗೊಳಿಸಲಾಯಿತು ಎಂಬುದರ ಚರಿತ್ರೆಯನ್ನು ವರದಿ ಮಾಡುತ್ತದೆ; ಇದರ ನಂತರ ಹಲವುವೇಳೆ ಬರವಣಿಗೆಯ ಅವಧಿಯಲ್ಲಿ ಲೇಖಕನಿಗೆ ಸಹಾಯಮಾಡಿದ ಜನರಿಗೆ ವಂದನೆಗಳು ಬರುತ್ತದೆ.

ಮುನ್ನುಡಿಗೆ ಸಾಮಾನ್ಯವಾಗಿ ಸಹಿ ಮಾಡಿರಲಾಗುತ್ತದೆ (ಮತ್ತು ದಿನಾಂಕ ಹಾಗೂ ಬರೆದ ಸ್ಥಳವು ಹಲವುವೇಳೆ ಸಹಿಯ ನಂತರ ಬರುತ್ತವೆ); ಮತ್ತೊಬ್ಬ ವ್ಯಕ್ತಿಯ ಪ್ರಸ್ತಾವನೆ ಯಾವಾಗಲೂ ಸಹಿಯನ್ನು ಒಳಗೊಂಡಿರುತ್ತದೆ. ಮುಖ್ಯ ಪಠ್ಯಕ್ಕೆ ಅತ್ಯಗತ್ಯವಾದ ಮಾಹಿತಿಯನ್ನು ಮುನ್ನುಡಿಯ ಬದಲಾಗಿ ಸಾಮಾನ್ಯವಾಗಿ ವಿವರಣಾತ್ಮಕ ಟಿಪ್ಪಣಿಗಳ ಸಮೂಹದಲ್ಲಿ, ಅಥವಾ ಬಹುಶಃ ಪುಟಗಳಾಗಿ ವಿಂಗಡಿಸಲಾದ ಪೀಠಿಕೆಯಲ್ಲಿ ಇರಿಸಲಾಗುತ್ತದೆ.

ಹೆಚ್ಚಿನ ವಾಚನ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]