ಮುನಿ ಜನಪದ
ಕನ್ನಡ ಟೆಲಿವಿಶನ್ ನ ಹಾಸ್ಯಧಾರಾವಾಹಿಗಳನ್ನು ನಿರ್ದೇಶಿಸಿ, ಜನಗಳಿಗೆ ಪ್ರತಿದಿನವೂ ಮನರಂಜನೆಯನ್ನು ನೀಡುತ್ತಿರುವ ಮುನಿ ಜನಪದ ಎಂಬ ಹೆಸರಿನ ಜನಪ್ರಿಯ ನಿರ್ದೇಶಕ, ರ ಮನೆಯ ಹೆಸರು, 'ಮುನಿರಾಜು' ಎಂದು. ಶ್ರೀ ಮುನಿ ಜನಪದರು, 'ಪಾ.ಪ. ಪಾಂಡು' ನಿಂದ ಆರಂಬಿಸಿ 'ಪಾಂಡುರಂಗ ವಿಠಲ' ವರೆಗೆ ಕಳೆದ ೮ ವರ್ಷ ಹಲವಾರು ಧಾರಾವಾಹಿಗಳನ್ನೂ ಸತತವಾಗಿ ನಿರ್ದೇಶಿದ ದಾಖಲೆ ಮಾಡಿದ್ದಾರೆ. ಇವುಗಳ ನಿರ್ಮಾಪಕ,'ಸಿಹಿ ಕಹಿ ಚಂದ್ರು',.ರವರ 'ಫೈನಲ್ ಕಟ್ ನಿರ್ಮಾಣ ಸಂಸ್ಥೆ 'ಯಿಂದ.
- ಪಾ.ಪ. ಪಾಂಡು- ೧,೦೧೪ ಸಂಚಿಕೆಗಳು.
- ಸಿಲ್ಲಿ ಲಲ್ಲಿ- ೧,೧೧೬ ಸಂಚಿಕೆಗಳು.
- ಪಾಂಡುರಂಗ ವಿಠಲ, ಈಗ ೯೬೦ ಸಂಚಿಕೆಗಳನ್ನು ದಾಟಿದೆ. ಸನ್.೨೦೧೩ ರ, ಆಗಸ್ಟ್ ೨೨ ಕ್ಕೆ ಸಾವಿರ ಸಂಚಿಕೆಯನ್ನು ತಲುಪುತ್ತದೆ.
'ಪಾ 'ನಿಂದ 'ಪಾ' ವರೆಗೆ
[ಬದಲಾಯಿಸಿ]' ಪಾ ನಿಂದ ಪಾ ' ವರೆಗೆ ಮಧ್ಯದಲ್ಲಿ ನಿರ್ದೇಶಿಸಿದ, 'ಪಾಂಡು ಐ. ಲವ್ ಯು', 'ಯಾಕಿಂಗಾಡ್ತಿರೋ', 'ಪತಿ ಪತ್ನಿ ಗುಲಾಮ' ( ಪರಮ ಪದ ಒಂದನ್ನು ಬಿಟ್ಟು ) ಎಲ್ಲವೂ ಹಾಸ್ಯ ಧಾರಾವಾಹಿಗಳೆ. ಇವೆಲ್ಲದರ ನಿರ್ದೇಶಕ, 'ಮುನಿ ಜನಪದ'.
ಬೆಳೆದ ವಾತಾವರಣ
[ಬದಲಾಯಿಸಿ]'ಮುನಿ ಜನಪದ, ಬೆಂಗಳೂರಿನ ಹೊರವಲಯದ 'ಕೆಂಗೇರಿ'ಯಲ್ಲಿ ಬೆಳೆದರು. ಅಲ್ಲಿನ ಗಣೇಶೋತ್ಸವ ಸಮಯದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. 'ಮೈನಾ ಚಂದ್ರಶೇಖರ ರ ಜನಪದ ತಂಡ'ದ ಮೂಲಕ 'ರವಿಂದ್ರ ಕಲಾಕ್ಷೇತ್ರ'ದ ಮೆಟ್ಟಿಲು ಎರಿದರು. 'ಪಾ.ಪ.ಪಾಂಡು' ಆರಂಭದ ಸಂಚಿಕೆಗಳನ್ನು 'ವಿಜಯ ಪ್ರಸಾದ್' ನಿರ್ದೇಶನ ಮಾದಿದ್ದನ್ನು ಹೊರತುಪಡಿಸಿ, ಉಳಿದ ೯೦೦ ಕ್ಕೂ ಅಧಿಕ ಕಂತುಗಳನ್ನೂ ಮುನಿಪದ ನಿರ್ದೆಶಸಿದ್ದಾರೆ. ಒಟ್ಟು ೨ ಸಾವಿರ ಹಾಸ್ಯ ಸಂಚಿಕೆಗಳ ನಿರ್ದೆಶನದ ಅನುಭವಿ.
ಹಾಸ್ಯ ಧಾರಾವಾಹಿಯ ಸವಾಲುಗಳು
[ಬದಲಾಯಿಸಿ]ಹಾಸ್ಯ ಧಾರಾಹಿಗಳನ್ನು ತರಲು ಬಹಳ ಶ್ರಮ ಬೇಕು. ಅಪಾರ ಪ್ರತಿಭೆಗಳ ಆವಶ್ಯಕತೆ ಇದೆ. ಚಿತ್ರೀಕರಣದ ಸಮಯದಲ್ಲಿ ಲವಲವಿಕೆ, ಹಾಗು ಸೃಜನಶೀಲತೆಗಳು ಪರಿಶ್ರಮದ ಆಯಾಸವನ್ನು ಕಡಿಮೆಮಾಡುವಲ್ಲಿ ಸಹಾಯಕವಾಗುತ್ತವೆ. 'ನರಸಿಂಹ ಮೂರ್ತಿ ರುದ್ರೇಶ್ ಎಂಬ ಸಂಭಾಷಣೆ' , ಕಥಾ ತಯ್ಯಾರಿಕರ ಕಾರ್ಖಾನೆ ಇದೆ. ಜೊತೆಗೆ ನಟ ನಟಿಯರು ಬಹಳ ಪ್ರತಿಭಾಶಾಲಿಗಳು.' ಪಾಂಡುರಂಗ ಟೀಮ್' ಚೆನ್ನಾಗಿದೆ. ಧಾರಾವಾಹಿಗಳಿಗೆ ತನ್ನದೇ ಆದ ಸ್ವಂತಿಕೆ ಅಗತ್ಯ.ವಿದೆ. ವಿಶ್ವದ ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ರ,ಎಲ್ಲಾ ಸಿನಿಮಾಗಳನ್ನು ಮಿನಿ ಜನಪದ ನೋಡಿದ್ದಾರೆ. ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಾಗಿ ಮೆರೆದ, ಬಾಲಕೃಷ್ಣ , ನರಸಿಂಹರಾಜುರವರ, ಸದಭಿರುಚಿಯ ಹಾಸ್ಯ ವನ್ನೂ ಸವಿದಿದ್ದಾರೆ.
ಪರಿವಾರ
[ಬದಲಾಯಿಸಿ]'ಮುನಿ ಜನಪದ ರ, ತಂದೆ ಮುದ್ದು ರಾಮು, ಅಮ್ಮ, ಶಾರದಮ್ಮ. ಮುನಿ ಜನಪದರು, ತಮ್ಮ ಪದವಿ ಮುಗಿಸಿ, ನಾಟಕ ರಂಗಕ್ಕೆ ಕೈ ಹಾಕಿದರು. ಅವರ ಹಿರಿಯ ನಾಟಕ ಕಲೆಯ ಮೇರು ವ್ಯಕ್ತಿ, 'ಮೈನಾ ಚಂದ್ರಶೇಖರ್ ' ತೀರಿಹೋದರು. ಅವರ ತಂಡದ ಹೆಸರನ್ನು ಶಾಸ್ವತವಾಗಿ ಉಳಿಸಿಕೊಳ್ಳುವ ಪ್ರಯತ್ನ ಸಾಗಿದೆ.