ಮುಖಸ್ತುತಿ

ವಿಕಿಪೀಡಿಯ ಇಂದ
Jump to navigation Jump to search

ಮುಖಸ್ತುತಿ (ಹೊಗಳಿಕೆ ಅಥವಾ ಪುಸಲಾವಣೆ ಎಂದೂ ಕರೆಯಲ್ಪಡುತ್ತದೆ) ಎಂದರೆ ಮಿತಿಮೀರಿದ ಶ್ಲಾಘನೆಯನ್ನು ಕೊಡುವ ಕ್ರಿಯೆ, ಸಾಮಾನ್ಯವಾಗಿ ತನಗಾಗಿ ಒಬ್ಬ ವ್ಯಕ್ತಿಯ ಅನುಗ್ರಹ ಸಂಪಾದಿಸುವ ಉದ್ದೇಶದಿಂದ. ಇದನ್ನು ಲೈಂಗಿಕ ಅಥವಾ ಪ್ರೇಮಯಾಚನೆ ಪ್ರಾರಂಭಿಸುವ ಪ್ರಯತ್ನ ಮಾಡಿದಾಗ ಪರಿಚಯಾತ್ಮಕ ಸಾಲುಗಳಲ್ಲಿ ಕೂಡ ಬಳಸಲಾಗುತ್ತದೆ.

ಐತಿಹಾಸಿಕವಾಗಿ, ರಾಜ ಅಥವಾ ರಾಣಿಯನ್ನು ಸಂಬೋಧಿಸುವಾಗ ಮುಖಸ್ತುತಿಯನ್ನು ಸಂವಹನದ ಸಾಮಾನ್ಯ ರೂಪವಾಗಿ ಬಳಸಲಾಗಿದೆ. ಪುನರುಜ್ಜೀವನ ಕಾಲದಲ್ಲಿ, ಬರಹಗಾರರು ಆಳ್ವಿಕೆಯಲ್ಲಿರುವ ರಾಜ/ರಾಣಿಯನ್ನು ಅತಿಯಾಗಿ ಹೊಗಳುವುದು ಸಾಮಾನ್ಯ ಅಭ್ಯಾಸವಾಗಿತ್ತು, ಉದಾಹರಣೆಗೆ ಮ್ಯಾಕ್ ಬೆತ್‍ನಲ್ಲಿ ವಿಲಿಯಂ ಷೇಕ್ಸ್‌ಪಿಯರ್ ಒಂದನೇ ಜೇಮ್ಸ್ ರಾಜನ ಮುಖಸ್ತುತಿ ಮಾಡಿದ್ದು, ಫ಼ೇರಿ ಕ್ವೀನ್‍ನಲ್ಲಿ ಎಡ್ಮ್ಂಡ್ ಸ್ಪೆನ್ಸರ್ ಮೊದಲನೆಯ ಎಲಿಜಬೆಥ್‍ನ ಮುಖಸ್ತುತಿ ಮಾಡಿದ್ದು, ಇತ್ಯಾದಿ.

ಆದರೆ, ಮುಖಸ್ತುತಿಯೊಂದಿಗಿನ ಬಹುತೇಕ ಸಂಬಂಧಗಳು ನಕಾರಾತ್ಮಕವಾಗಿರುತ್ತವೆ. ಮುಖಸ್ತುತಿಯ ನಕಾರಾತ್ಮಕ ವಿವರಣೆಗಳು ಇತಿಹಾಸದಲ್ಲಿ ಕನಿಷ್ಠಪಕ್ಷ ಬೈಬಲ್‍ನಷ್ಟು ಹಿಂದಕ್ಕೆ ವ್ಯಾಪಿಸುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]