ವಿಷಯಕ್ಕೆ ಹೋಗು

ಮುಖವಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಕ್ಕರೆ ಲೇಪಿತ ಸೋಂಪು ಬೀಜಗಳು

ಮುಖವಾಸ ವರ್ಣರಂಜಿತ ಊಟದ ನಂತರದ ಲಘು ಆಹಾರ ಅಥವಾ ಜೀರ್ಣ ಸಹಾಯಕವಾಗಿದೆ. ಇದನ್ನು ಬಾಯಿಯನ್ನು ಶುದ್ಧಗೊಳಿಸುವ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ, ವಿಶೇಷವಾಗಿ ಊಟದ ನಂತರ.[] ಇದನ್ನು ವಿವಿಧ ಬೀಜಗಳು ಮತ್ತು ನಟ್‍ಗಳಿಂದ ತಯಾರಿಸಬಹುದು, ಉದಾಹರಣೆಗೆ ಹಲವುವೇಳೆ ಸೊಂಪು, ಸಾಲೇಯ, ಕೊಬ್ಬರಿ, ಕೊತ್ತುಂಬರಿ ಬೀಜ ಮತ್ತು ಎಳ್ಳು. ಸಕ್ಕರೆ ಮತ್ತು ಪುದೀನಾ ಎಣ್ಣೆ ಸೇರಿದಂತೆ ವಿವಿಧ ಸಾರತೈಲಗಳನ್ನು ಸೇರಿಸಿರುವುದರಿಂದ ಇದು ರುಚಿಯಲ್ಲಿ ಸಿಹಿಯಾಗಿದ್ದು ಬಹಳ ಸುವಾಸನೆಯುಕ್ತವಾಗಿರುತ್ತದೆ. ಬೀಜಗಳು ಉಪ್ಪ/ಖಾರವಾಗಿ ಅಥವಾ ಸಿಹಿಯಾಗಿರಬಹುದು—ಸಕ್ಕರೆಯಿಂದ ಲೇಪಿತವಾಗಿರುತ್ತವೆ ಮತ್ತು ಹೊಳೆಯುವ ಬಣ್ಣಗಳನ್ನು ಹೊಂದಿರುತ್ತದೆ.[]

ಈ ಪದವು ಮುಖ (ಅಂದರೆ ಬಾಯಿ) ಮತ್ತು ವಾಸ (ಅಂದರೆ ಗಂಧ) ಗಳ ಸಂಯೋಜನೆಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2017-08-18. Retrieved 2020-08-02.
  2. Pursell, JJ (2015). The Herbal Apothecary: 100 Medicinal Herbs and How to Use Them. Portland: Timber Press. p. 36. ISBN 9781604696622. Retrieved 20 June 2016.
"https://kn.wikipedia.org/w/index.php?title=ಮುಖವಾಸ&oldid=1238953" ಇಂದ ಪಡೆಯಲ್ಪಟ್ಟಿದೆ