ಬಾಂಬೆ ಸಮಾಚಾರ್
ವರ್ಗ | ದಿನಪತ್ರಿಕೆ |
---|---|
ವಿನ್ಯಾಸ | Broadsheet |
ಸಂಪಾದಕ | Pinki Dalal |
ಸ್ಥಾಪನೆ | ೧೮೨೨ |
ಭಾಷೆ | ಗುಜರಾತಿ, ಇಂಗ್ಲಿಷ್ |
ಕೇಂದ್ರ ಕಾರ್ಯಾಲಯ | Horniman Circle, Fort, ಮುಂಬೈ |
ಅಧಿಕೃತ ತಾಣ | bombaysamachar |
ಮುಂಬಯಿ ಸಮಾಚಾರ್, ಅಥವಾ ಮುಂಬಯಿ ಸಮಾಚಾರ್ ಭಾರತದ ಅತಿ ಪ್ರಾಚೀನ ವೃತ್ತಪತ್ರಿಕೆ, ೧೮೩೨ ರಲ್ಲಿ ಬೊಂಬಾಯಿನಿಂದ ಪ್ರಕಟವಾಗುತ್ತಿತ್ತು. ಭಾರತದಲ್ಲೇ ಇದು ಪ್ರಪ್ರಥಮ, ಹಾಗೂ ಬಹಳಕಾಲದ ವರೆಗೆ ಪ್ರಕಟವಾಗುತ್ತಿರುವ ಪತ್ರಿಕೆಯಾಗಿದೆ. ಗುಜರಾತಿ, ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ಈ ಪತ್ರಿಕೆ, ಅತ್ಯಂತ ವಿಶ್ವಾಸನೀಯ ಸುದ್ದಿಸಂಗ್ರಹವಾಗಿತ್ತು. ೧೮೩೨ ನಲ್ಲಿ ಮುಂಬಯಿ ಸಮಾಚಾರ್ ಎಂದು ಕರೆಯಲ್ಪಡುತ್ತಿತ್ತು. ಇಂಗ್ಲಿಷ್, ವಾರಪತ್ರಿಕೆಯಾಗಿ. ೧೮೩೨ ರಲ್ಲೇ, ಅದು ಬೈವೀಕ್ಲಿಯಾಯಿತು. ೧೮೫೫ ರಲ್ಲಿ ಅದು ದೈನಿಕವಾಗಿ ಹೊರಬಂತು. ಇಂದಿಗೂ ವಿಶ್ವದ ಅತಿ ಪುರಾತನ ಪತ್ರಿಕೆಗಳಲ್ಲೊಂದಾಗಿದೆ, ಹಾಗೂ ಅತಿದೀರ್ಘಕಾಲದಿಂದ ಪ್ರಕಟಿತವಾದ ಪತ್ರಿಕೆಯಾಗಿ, ಮುಂದುವರೆಯುತ್ತಿದೆ. ೧೯೪೪ ರಲ್ಲಿ ಚಿತ್ರಸಂಗ್ರಹ ಅಸ್ತಿತ್ವಕ್ಕೆ ಬಂತು. ಆದ್ದರಿಂದ ಮೊದಲ ೧೨೨ ವರ್ಷಗಳ ಪತ್ರಿಕೆಗಳು ಲಭ್ಯವಿಲ್ಲ.
(ಮುಂಬಯಿ ಸಮಾಚಾರ್), ಮುಂಬೈಸಮಾಚಾರ್ , ಪತ್ರಿಕೆಯ ಸ್ಥಾಪಕರು
[ಬದಲಾಯಿಸಿ]ಫರ್ದೂನ್ ಜಿ ಮರ್ಝಬಾನ್, ಎಂಬ ಪಾರ್ಸಿ ಸದ್ಗೃಹಸ್ತರು ಇದನ್ನು ಪ್ರಾರಂಭಿಸಿದರು. ಆವರ ಸಂತತಿಯವರಾದ ಪಿರೊಜ್ ಶ ಜೆಹಾಂಗೀರ್ ಮರ್ಝ್ ಬಾನ್ [೧೮೭೬-೧೯೩೩] " ಪಿಜಮ್ , " ಎಂಬ ಹೆಸರಿನಲ್ಲಿ ಬರೆಯುತ್ತಿದ್ದರು. ಆವರನ್ನು ಜನರು ಪ್ರೀತಿಯಿಂದ ಪಾರ್ಸಿಗಳ ಮಾರ್ಕ್ ಟ್ವೇನ್, ಎಂದು ಕರೆಯುತ್ತಿದ್ದರು. ಗುಜರಾತಿ ಆವೃತ್ತಿಯ, ಮುಂಬಯಿ ಸಮಾಚಾರ್, ಎಶಿಯದ ಅತಿ ಪ್ರಾಚೀನ ಪತ್ರಿಕೆಗಳಲ್ಲೊಂದು.