ಮುಂಬೈ ನಗರದ ಮಾನೋ ರೈಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ಮುಂಬಯಿನಗರದ ಮಾನೋ ರೈಲಿನ ಸಂಚಾರ ವ್ಯವಸ್ಥೆ'[೧] ನಗರದ ಹೆಚ್ಚುತ್ತಿರುವ ನಾಗರಿಕ ಪ್ರಯಾಣದ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಅತಿ ಮಹತ್ವದ ಪಾತ್ರ ವಹಿಸಿದೆ. ಮುಂಬಯಿ ಮೆಟ್ರೋ ಪಾಲಿಟನ್ ಡೆವೆಲಪ್ ಮೆಂಟ್ ಅಥಾರಿಟಿ ಸಂಚಾರ ವ್ಯವಸ್ಥೆಯ ಅಭಿಯಾನ ಪ್ರಾರಂಭಿಸಿತು. ಮುಂಬಯಿನಲ್ಲಿ ಸ್ಥಿತ ಲಾರ್ಸೆನ್ ಅಂಡ್ ಟುಬ್ರೋ ಕಂಗ್ಲಾಮ ರೇಟ್, ಮತ್ತು, ಸ್ಕೊಮಿ ಇಂಜಿನಿಯರಿಂಗ್ ಎಂಬ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮಲೇಷಿಯನ್ ಸಂಸ್ಥೆಯ ಜೊತೆಗೂಡಿ ಕಾರ್ಯ ನಿರ್ವಹಿಸಲು ಸಜ್ಜಾಗಿದೆ. ಈ ಮಾನೋರೈಲ್ ಸಂಚಾರ ವ್ಯವಸ್ಗ್ಥೆ,ಭಾರತದ ಸ್ವಾತಂತ್ರ್ಯಾ ನಂತರದ ಮೊತ್ತಮೊದಲ 'ಮಾನೋ ರೈಲ್ ವ್ಯವಸ್ಥೆ' ಎಂದು ಪರಿಗಣಿಸಲ್ಪಟ್ಟಿದೆ. ೨೦೧೪ ರ ಫೆಬ್ರವರಿ ೨ ರಂದು, ೯.೯ ಕಿ.ಮೀ.ದೂರದ ವಡಾಲ, ಚೆಂಬೂರ್ ಮಧ್ಯೆ ಬೆಳಗಿನ ೭.೦೮ ರಿಂದ ಸಾಯಂಕಾಲ ೪-೩೦ ರ ವರೆಗೆ ಕೆಲಸ ನಿರ್ವಹಿಸಿತು. ಒಟ್ಟು ಸಂಚಾರ ಮಾಡಿದ ಪ್ರಯಾಣಿಕರು, ೧೯, ೬೭೮. ಗಳಿಸಿದ ರೆವಿನ್ಯೂ -೩.೩೦ ಲಕ್ಷ. ಒಂದು ಕೋಚ್ ನಲ್ಲಿ ೫೬೦ ಪ್ರಯಾಣಿಕರು ಹೋಗಬಹುದು. ಅಂತಹ ೪ ಕೋಚ್ ಗಳಿವೆ.

ಮಾನೋ ರೈಲ್ ಶುರುವಾಗಿದ್ದು[ಬದಲಾಯಿಸಿ]

'ಕುಂಡಲ ವ್ಯಾಲಿ ರೈಲ್ವೆ' ಮತ್ತು 'ಪಾಟಿಯಾಲ ಸ್ಟೇಟ್ ಮಾನೋ ರೈಲ್ ಟ್ರೈನ್ ವೇಸ್' ೧೯೨೦ ರಲ್ಲಿ ಮುಚ್ಚಲ್ಪಟ್ಟಿತು.ಈಗ ಚಾಲ್ತಿಯಲ್ಲಿರುವ ಮಾನೋರೈಲ್ವೆ ಕೆಲಸ ೨೦೦೯ ರಲ್ಲಿ ನಿರ್ಮಾಣ ಕಾರ್ಯ ಆರಂಭವಾಯಿತು. ೨೦೧೪ ರ ಫೆಬ್ರವರಿ, ೧ ರಂದು ಮೊದಲ ಟೆಸ್ಟ್ ಯಾನ ಶುರುಮಾಡಲಾಯಿತು. ಫೆಬ್ರವರಿ, ೨ ರಿಂದ ನಾಗರಿಕ ಯಾನಕ್ಕೆ ಅನುವುಮಾಡಿ ಕೊಡಲಾಯಿತು.

ಉಲ್ಲೇಖಗಳು[ಬದಲಾಯಿಸಿ]

<References / >

  1. "Hindustan times, Mumbai gets country's first monorail after 88-year wait for new mode of transport February 01, 2014". Archived from the original on ಫೆಬ್ರವರಿ 11, 2014. Retrieved ಫೆಬ್ರವರಿ 11, 2014.