ಮೀನರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೀನರಾಶಿ- ರಾಶಿಚಕ್ರದ (ಝೋಡಿಯಾಕ್) ಹನ್ನೆರಡು ರಾಶಿಗಳ ಪೈಕಿ ಕೊನೆಯದು (ಪಿಸೀನ್). ಶರತ್ಕಾಲದ ನಕ್ಷತ್ರಪುಂಜ. ಟ್ರಯಾಂಗ್ಯುಲಮ್, ಆಂಡ್ರೊಮೀಡ. ಪೆಗಾಸಸ್, ಆಕ್ವೇರಿಯಸ್ (ಕುಂಭರಾಶಿ). ಸೀಟಸ್ ಮತ್ತು ಏರಿಸ್ (ಮೇಷರಾಶಿ) ನಕ್ಷತ್ರಪುಂಜಗಳು ಇದನ್ನು ಸುತ್ತುವರಿದಿವೆ. ಸನ್ನಿಹಿತ ಸ್ಥಾನ: ವಿಷುವದಂಶ 2ಗಂ. ಮತ್ತು 23 ಗಂಟೆಗಳ ನಡುವೆ; ಫಂಟಾವೃತ್ತಾಂಶ 00 ಉ ಮತ್ತು 300 ಉಗಳ ನಡುವೆ. ವಿಷುವದ್ವøತ್ತಕ್ಕೆ ಬಲು ಸಮೀಪದಲ್ಲಿದೆ. ನಾಲ್ಕನೆಯ ಕಾಂತಿಮಾನಕ್ಕಿಂತಲೂ ಹೆಚ್ಚಿನದಾದ ನಕ್ಷತ್ರಗಳು ಮೂರು ಮಾತ್ರ ( ಮತ್ತು). ಐದನೆಯ ಕಾಂತಿಮಾನದವು ಆರು ಇವೆ. ಎರಡು ಯಮಳ ತಾರೆಗಳೂ ನಾಲ್ಕು ಚರಕಾಂತೀಯ ತಾರೆಗಳೂ ಒಂದು ನೀಹಾರಿಕೆಯೂ ಇಲ್ಲಿವೆ. ಖಗೋಳೀಯ ವರ್ಷದ ಆರಂಭವನ್ನು ಸೂಚಿಸುವ ಮೇಷಸಂಕ್ರಾಂತಿ ಬಿಂದು (ವರ್ನಲ್ ಈಕ್ವಿನಾಕ್ಸ್) ಈ ರಾಶಿಯಲ್ಲಿದೆ.

ಪುರಾಣೇತಿಹಾಸ[ಬದಲಾಯಿಸಿ]

ಬಲು ಪ್ರಾಚೀನದಿಂದಲೂ ಬ್ಯಾಬಿಲೋನಿಯನ್ನರು, ಸಿರಿಯನ್ನರು, ಪರ್ಷಿಯನ್ನರು ಮತ್ತು ಗ್ರೀಕರು ಇದನ್ನು ಎರಡು ಮೀನುಗಳ ರೂಪದಲ್ಲಿ ಕಲ್ಪಿಸಿಕೊಂಡಿದ್ದರು. ಗ್ರೀಕ್ ಪುರಾಣದ ಕತೆಯೊಂದು ಹೀಗಿದೆ : ಪ್ರಣಯ ದೇವತೆಗಳಾದ ವೀನಸ್ ಮತ್ತು ಕ್ಯೂಪಿಡ್ಡರು ವಿಹಾರಾರ್ಥ ಯೂಫ್ರೇಟೀಸ್ ನದಿಯ ದಂಡೆಯ ಮೇಲೆ ನಡೆದು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ತುಫಾನು ಬಿರುಗಾಳಿ ಪ್ರಾರಂಭವಾಯಿತು. ಇದರ ಅಘಾತದಿಂದ ಪಾರಾಗಲು ಈರ್ವರೂ ನೀರಿನೊಳಕ್ಕೆ ದುಮುಕಿದರಂತೆ. ಒಡನೆಯೇ ಇಬ್ಬರೂ ಮೀನಿನ ರೂಪ ತಾಳಿದರಂತೆ. ತಪ್ಪಿಸಿಕೊಂಡು ಹೋಗುವುದರ ಜ್ಞಾಪಕಾರ್ಥ ಪ್ರಜ್ಞಾದೇವತೆ ಮಿನರ್ವ ಈ ಮೀನುಗಳಿಗೆ ಆಕಾಶದಲ್ಲಿ ಯುಕ್ತಸ್ಥಾನ ಕಲ್ಪಿಸಿತಂತೆ. ಎಂದೇ ಈ ರಾಶಿಗೆ ಇದ್ದ ಮತ್ತೊಂದು ಪ್ರಾಚೀನ ಹೆಸರು ವೀನಸ್ ಮತ್ತು ಕ್ಯೂಪಿಡ್.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೀನರಾಶಿ&oldid=1173369" ಇಂದ ಪಡೆಯಲ್ಪಟ್ಟಿದೆ