ಮಿಲನ ನಾಗರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಲನ ನಾಗರಾಜ್
Born೨೫-ಏಪ್ರೀಲ್-೧೯೮೯
ಹಾಸನ, ಕರ್ನಾಟಕ, ಭಾರತ
Occupation(s)ನಟಿ, ಮಾಡೆಲ್
Years active೨೦೧೩ - ಇಂದಿನವರೆಗೆ
Parent(s)ನಾಗರಾಜ್, ಚಂದ್ರಕಲಾ

ಮಿಲನ ನಾಗರಾಜ್ (ಜನನ ೨೫ ಏಪ್ರೀಲ್ ೧೯೮೯) ಭಾರತೀಯ ನಟಿ, ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.[೧] ಇವರು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾಗಿದ್ದರು.

ಜನನ[ಬದಲಾಯಿಸಿ]

ಇವರು ೨೫ ಏಪ್ರೀಲ್ ೧೯೮೯ ರಲ್ಲಿ ಹಾಸನದಲ್ಲಿ ಜನಿಸಿದರು.[೨]

ಶಿಕ್ಷಣ[ಬದಲಾಯಿಸಿ]

ಅವರು ತನ್ನ ಶಾಲಾ ಶಿಕ್ಷಣ ಮತ್ತು ಕಾಲೇಜು ಶಿಕ್ಷಣವನ್ನು ಹಾಸನದಲ್ಲಿಯೇ ತೆಗೆದುಕೊಂಡರು. ಅವರು ಬ್ಯಾಚುಲರ್ ಇನ್ ಕಂಪ್ಯೂಟರ್ ಸಾಯನ್ಸ್. ಬೆಂಗಳೂರಿನ ವಿಕೆಐಟಿ ಕಾಲೇಜಿನಿಂದ ಎಂಜಿನಿಯರಿಂಗ್ ಮಾಡಿದರು. ಬಾಲ್ಯದಿಂದಲೂ ಅವರು ಉತ್ತಮ ಈಜುಗಾರ್ತಿ.[೩]

ಜೀವನ[ಬದಲಾಯಿಸಿ]

ಇವರು ೧೨ ನೇ ತರಗತಿಯಲ್ಲಿ ಇರುವಾಗ ಬೋರ್ಡ್ ಪರೀಕ್ಷೆಗೆ ಕೆಲವೇ ತಿಂಗಳುಗಳ ಮೊದಲು ಇವರು ಅಪಘಾತಕ್ಕೀಡಾದರು. ಇವರ ಕಾಲಿನ ಮೂಳೆ ತುಂಬಾ ಕೆಟ್ಟದಾಗಿ ಮುರಿದುಹೋಗಿತ್ತು. ಈ ದುರಂತದಿಂದ ಇವರಿಗೆ ಈಜಲು ಸಾಧ್ಯವಾಗಲಿಲ್ಲ. ನಂತರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ಎಂಜಿನಿಯರಿಂಗ್ ಗೆ ಆಯ್ಕೆಯಾದರು. ನಂತರ ಇವರು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮಿಸ್ ಬೆಸ್ಟ್ ಪರ್ಸನಾಲಿಟಿ ವಿಜೇತರಾದರು. ನಂತರ ಅವರು ೨೦೧೩ ರಲ್ಲಿ ನಮ್ ದುನಿಯಾ ನಮ್ ಸ್ಟೈಲ್ ಚಲನಚಿತ್ರದ ಮೂಲಕ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು.

ಫಿಲ್ಮೊಗ್ರಾಫಿ[ಬದಲಾಯಿಸಿ]

ಕೀ
Films that have not yet been released ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿ
೨೦೧೩ ನಮ್ ದುನಿಯಾ ನಮ್ ಸ್ಟೈಲ್ ಮಿಲನ ಕನ್ನಡ
೨೦೧೩ ಬೃಂದಾವನ ಮಧು ಕನ್ನಡ
೨೦೧೫ ಚಾರ್ಲಿ ಪೂರ್ವಿ ಕನ್ನಡ
೨೦೧೭ ಅವರುಡೆ ರಾವುಕಲ್ ಮೇಘ ಮಲಯಾಳಂ
೨೦೧೭ ಜಾನಿ ಐಶ್ವರ್ಯಾ ಕನ್ನಡ
೨೦೨೦ ಲವ್ ಮಾಕ್ಟೇಲ್ [೪] ನಿಧಿ ಕನ್ನಡ ನಿರ್ಮಾಪಕ
೨೦೨೦ ಮತ್ತೆ ಉದ್ಭವ ಸ್ಪಂದನ ಕನ್ನಡ
೨೦೨೨ ಲವ್ ಮಾಕ್ಟೇಲ್ ೨ ನಿಧಿ ಕನ್ನಡ
೨೦೨೨ ವಿಕ್ರಾಂತ್ ರೋಣ ರೆಣು ರೋಣ ಕನ್ನಡ

ಉಲ್ಲೇಖಗಳು[ಬದಲಾಯಿಸಿ]

  1. "Milana to play NRI in Mr Jani - Times of India". The Times of India (in ಇಂಗ್ಲಿಷ್). Retrieved 1 July 2020.
  2. "All you want to know about #MilanaNagraj". FilmiBeat (in ಇಂಗ್ಲಿಷ್). Retrieved 1 July 2020.
  3. "Milana Nagaraj wanted to be a national level swimmer - Times of India". The Times of India (in ಇಂಗ್ಲಿಷ್). Retrieved 1 July 2020.
  4. "ಲವ್ ಮಾಕ್ಟೇಲ್ ಕಥೆ | Love Mocktail Sandalwood Movie Story, Preview in Kannada - Filmibeat Kannada". FilmiBeat. Retrieved 1 July 2020.