ವಿಷಯಕ್ಕೆ ಹೋಗು

ಮಿಥುನ್ ಬೀರಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಿಥುನ್ ಬೀರಲಾ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಮಿಥುನ್ ರಘುನಾಥ್ ಬೀರಲಾ
ಹುಟ್ಟು (1977-10-07) ೭ ಅಕ್ಟೋಬರ್ ೧೯೭೭ (ವಯಸ್ಸು ೪೬)
ಬೆಂಗಳೂರು, ಕರ್ನಾಟಕ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಮಧ್ಯಮ ವೇಗ
ಪಾತ್ರಆಲ್ರೌಂಡರ್
ಮೂಲ: ESPNcricinfo, ೧೩ ಜೂನ್ ೨೦೨೨


ಮಿಥುನ್ ಬೀರಲಾ (ಜನನ ೭ ಅಕ್ಟೋಬರ್ ೧೯೭೭) ಒಬ್ಬ ಮಾಜಿ ಭಾರತೀಯ ಕ್ರಿಕೆಟಿಗ. ಇವರು ಕರ್ನಾಟಕ ಕ್ರಿಕೆಟ್ ತಂಡ[೧] ಮತ್ತು ಭಾರತೀಯ ಕ್ರಿಕೆಟ್ ಮ್ಯಾಚ್ ರೆಫರಿಯಲ್ಲಿ ಆಡಿದರು.[೨][೩]

ಕ್ರಿಕೆಟ್ ಕ್ಷೇತ್ರ

ವೈಯಕ್ತಿಕ ಜೀವನ[ಬದಲಾಯಿಸಿ]

ಮಿಥುನ್ ರಘುನಾಥ್ ಬೀರಲಾ ಅವರು ೭ ಅಕ್ಟೋಬರ್ ೧೯೯೭ ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ರಘುನಾಥ್ ಬೀರಲಾ. ಅವರು ಸಹ ಕರ್ನಾಟಕದ ಪರವಾಗಿ ರಾಂಜಿ ಟ್ರೋಫಿ ಆಡಿದ್ದಾರೆ ಮತ್ತು ಮ್ಯಾಚ್ ರೆಫರಿಯೂ ಆಗಿದ್ದರು. ಮಿಥುನ್ ಬೀರಲಾ ಅವರು ವಂದಿತಾ ಶ್ರೀಕಾಂತ್ ಅವರೊಂದಿಗೆ ವಿವಾಹವಾದರು.

ವೃತ್ತಿಜೀವನ[ಬದಲಾಯಿಸಿ]

ಮಿಥುನ್ ಬೀರಲಾ ಅವರು ಮಾಜಿ ಕ್ರಿಕೆಟ್ ಆಟಗಾರ. ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಆಡಿದರು. ೨೫ ಡಿಸೆಂಬರ್ ೧೯೯೯ ರಂದು ೧೯೯೯-೨೦೦೦ ರಾಂಜಿ ಟ್ರೋಫಿನಲ್ಲಿ[೪] ಬಿರಾಲಾ ಅವರು ಆಂಧ್ರ ಕ್ರಿಕೆಟ್ ತಂಡಕ್ಕೆ ತಮ್ಮ ಪ್ರಥಮ-ದರ್ಜೆಯ ಚೊಚ್ಚಲ ಪ್ರವೇಶ ಮಾಡಿದರು. ತಮ್ಮ ಮೊದಲ ಇನಿಂಗ್ಸ್‌ನಲ್ಲಿ ೮೩(೯೬)ರನ್ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ೯೩(೧೩೩) ರನ್ ಗಳಿಸಿದರು.

ಸೆಪ್ಟೆಂಬರ್ ೨೦೦೬ ರಲ್ಲಿ ಮಿಥುನ್ ಆಟದಿಂದ ನಿವೃತ್ತರಾಗುವ ಮೊದಲು ಮಧ್ಯಪ್ರದೇಶ ಕ್ರಿಕೆಟ್ ತಂಡಕ್ಕೆ ಸೇರಿದರು. ೨೦೦೭ ರಲ್ಲಿ ರೋಹ್ಟಕ್‌ನಲ್ಲಿ ನಡೆದ ಹರಿಯಾಣ ಕ್ರಿಕೆಟ್ ತಂಡದ ವಿರುದ್ಧ ಮಧ್ಯಪ್ರದೇಶ ಕ್ರಿಕೆಟ್ ತಂಡಕ್ಕಾಗಿ ೫(೧೨) ರನ್‌ಗಳನ್ನು ಗಳಿಸುವ ಮೂಲಕ ಅವರು ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದರು. ರಾಂಜಿ ಟ್ರೋಫಿಯಲ್ಲಿ ೨೪ ಪ್ರಥಮ ದರ್ಜೆ ಪಂದ್ಯಗಳಲ್ಲಿ ಬೀರಲಾ ಅವರು ಬ್ಯಾಟ್ ಮಾಡಿದ ೪೩ ಇನ್ನಿಂಗ್ಸ್‌ಗಳಲ್ಲಿ ೩೩.೦೭ ಸರಾಸರಿಯಲ್ಲಿ ೧ ಶತಕ ಮತ್ತು ೬ ಅರ್ಧ ಶತಕಗಳನ್ನು ಒಳಗೊಂಡಂತೆ ೧೨೯೦ ರನ್ ಗಳಿಸಿದರು. ಅವರು ಔಟಾಗದೆ ೧೦೧ ‌ರನ್‌‌‌‌‌‌‌ಗಳನ್ನು ಗಳಿಸಿದರು.[೫]

ಬೀರಲಾ ಅವರು ಆಟವನ್ನು ತ್ಯಜಿಸಿದ ನಂತರ ಕ್ರಿಕೆಟ್ ತರಬೇತುದಾರರಾಗಿ ತಮನ್ನು ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ಪ್ರೀಮಿಯರ್ ಲೀಗ್[ಬದಲಾಯಿಸಿ]

ಬೀರಲಾ ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದರು. ಅಲ್ಲಿ ಅವರು ಬಿಜಾಪುರ ಬುಲ್ಸ್ ಪರವಾಗಿ ಆಡಿದರು. ಆ ಆಟದಲ್ಲಿ ಅವರ ತಂಡವು ಸೆಮಿಫೈನಲ್‌ಗೆ ತಲುಪಿತು.[೬] ಬೀರಲಾ ಅವರು ೨೧ ಲಿಸ್ಟ್ ಎ ಆಟಗಳಲ್ಲಿ ಕಾಣಿಸಿಕೊಂಡರು. ಕರ್ನಾಟಕದ ಪರ ಅವರು ಬ್ಯಾಟ್ ಮಾಡಿದ ೨೧ ಇನ್ನಿಂಗ್ಸ್‌ಗಳಲ್ಲಿ ೪ ಅರ್ಧ ಶತಕ ಸೇರಿದಂತೆ ೫೮೦ ರನ್ ಗಳಿಸಿದರು. ೩೦.೫೨ ಸರಾಸರಿಯಲ್ಲಿ ಔಟಾಗದೆ ೮೦ ರನ್ ಗಳಿಸಿದರು.[೭]

ಉಲ್ಲೇಖಗಳು[ಬದಲಾಯಿಸಿ]

  1. https://www.espncricinfo.com/cricketers/mithun-beerala-26877
  2. https://www.deccanherald.com/content/633226/mithun-becomes-match-referee.html
  3. https://www.business-standard.com/amp/article/specials/ranji-super-league-karnataka-gain-vital-lead-100031601009_1.html
  4. https://m.rediff.com/sports/2000/apr/13ranji2.htm
  5. https://m.tribuneindia.com/2000/20000317/sports.htm
  6. https://bangaloremirror.indiatimes.com/sports/beerala-steers-gulbarga-home/articleshow/22047267.cms
  7. https://www.dnaindia.com/sports/report-indian-oil-clinch-dy-patil-title-1335986