ಮಿಚ್ಛಾಮಿ ದುಕ್ಕಡಂ

ವಿಕಿಪೀಡಿಯ ಇಂದ
Jump to navigation Jump to search

ಮಿಚ್ಛಾಮಿ ದುಕ್ಕಡಂ-  ಇದು ಪುರಾತನ ಪ್ರಾಕೃತ ನುಡಿ.  ಇದರ ಶಬ್ದಶಃ  ಅನುವಾದ ಅರ್ಥ — "ಮಾಡಿದ ಎಲ್ಲಾ ದುಷ್ಟ  ಕೆಲಸಗಳು ಫಲ ನೀಡದಿರಲಿ".[೧]  ಇದನ್ನು  ಜೈನ ಸಮುದಾಯದ  ಪ್ರಮುಖ ಉತ್ಸವಗಳಲ್ಲೊಂದಾದ    ಎಂಟು ಅಥವಾ ಹತ್ತು ದಿನಗಳ  ಪರ್ಯೂಷಣ  ಹಬ್ಬದ ಕೊನೆಯ ದಿನ - ಸಂವತ್ಸರಿಯ ಸಂದರ್ಭದಲ್ಲಿ (ಅಥವಾ ದಶಲಕ್ಷಣದ ಮೊದಲ ದಿನ )   ವಿಶೇಷವಾಗಿ ಬಳಸಲಾಗುತ್ತದೆ .  ಈ ದಿನ, ಜೈನರು ತಾವು ಮಾಡಿದ ಅಪರಾಧಗಳನ್ನು ಕ್ಷಮಿಸುವಂತೆ ಸುವಂತೆ  ಪರಸ್ಪರರಲ್ಲಿ ವಿನಂತಿಮಾಡುತ್ತಾರೆ .[೨][೩]  ಈ ನುಡಿಗಟ್ಟನ್ನು ದೈನಂದಿನ ಜೀವನದಲ್ಲಿ   ತಪ್ಪು ಮಾಡಿದಾಗ ಅಥವಾ  ತಪ್ಪು  ಮಾಡಿದ್ದನ್ನು ನೆನೆದುಕೊಂಡಾಗ    ಸಹ ಬಳಸಲಾಗುತ್ತದೆ.  ಅಜಾಗರೂಕತೆಯಿಂದ   ವ್ಯಕ್ತಿಯು ಮಾಡುವ ತಪ್ಪುಗಳಿಗಾಗಿ  ಮುಂಚಿತವಾಗಿ ಕ್ಷಮೆ ಕೇಳುವಾಗಲೂ  ಬಳಸಲಾಗುತ್ತದೆ.[೪]

ಆ ಸಂದರ್ಭದಲ್ಲಿ ಧಾರ್ಮಿಕ ಪದ್ಧತಿಯಾಗಿ ಕೂಡ ಜೈನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳನ್ನು ಎದಿರುಗೊಂಡಾಗ  "ಮಿಚ್ಛಾಮಿ ದುಕ್ಕಡಂ," ಎಂದು ಪರಸ್ಪರ  ಹೇಳುವ ಮೂಲಕ  ಅವರ ಕ್ಷಮೆ ಕೋರುವರು.   ಇದರ ಅರ್ಥ "ನಾನು  ತಮ್ಮಲ್ಲಿ  ತಿಳಿದೋ ಅಥವಾ ತಿಳಿಯದೆಯೋ ಯಾವುದೇ ರೀತಿಯಲ್ಲಿ, ಕಾಯಾ ವಾಚಾ ಮನಸಾ (ಚಿಂತನೆ, ಪದ ಅಥವಾ  ಕೃತಿಗಳ  ಮೂಲಕ )  ಅಪರಾಧ  ಮಾಡಿದ್ದಲ್ಲಿ   ನಾನು ನಿಮ್ಮ ಕ್ಷಮೆ" ಕೋರುತ್ತೇನೆ.[೫]   ಯಾವುದೇ ಖಾಸಗಿ ಜಗಳ ಅಥವಾ ವಿವಾದವನ್ನು  ಸಂವತ್ಸರಿಯ ನಂತರ ಮುಂದುವರೆಸುವುದಿಲ್ಲ,  ಮತ್ತು ಸಾಂಪ್ರದಾಯಿಕವಾಗಿ, ಸ್ನೇಹಿತರು ಮತ್ತು ಸಂಬಂಧಿಗಳಿಗೆ ಪತ್ರಗಳನ್ನು  ಕಳುಹಿಸಿ  ಮತ್ತು ದೂರವಾಣಿ ಕರೆಗಳನ್ನು ಮಾಡಿ  ಅವರ ಕ್ಷಮೆ ಕೇಳಲಾಗುತ್ತದೆ.[೬]

ಮಿಚ್ಛಾಮಿ ದುಕ್ಕದಂ  ಪ್ರಾರ್ಥನೆ[ಬದಲಾಯಿಸಿ]

ಖಾಮೇಮಿ ಸವ್ವ ಜೀವೇ
ನಾನು ಎಲ್ಲಾ ಜೀವಿಗಳನ್ನು ಕ್ಷಮಿಸುತ್ತೇನೆ.
ಸವ್ವೇ ಜೀವಾ ಖಮಂತು ಮೇ   ಎಲ್ಲಾ ಜೀವಿಗಳು ನನ್ನನ್ನು ಕ್ಷಮಿಸಲಿ
ಮಿತ್ತೀ ಮೇ ಸವ್ವ-ಭೂಏಸು ಎಲ್ಲರಲ್ಲೂ ನನಗೆ ಗೆಳೆತನವು,
ವೇರಂ ಮಜ್ಝ ನ ಕೇಣಇ ಯಾರಲ್ಲೂ ನನಗೆ ವೈರವಿಲ್ಲ.
ಮಿಚ್ಛಾಮಿ ದುಕ್ಕಡಂ  ಎಲ್ಲಾ ನನ್ನ ದೋಷಗಳು ಕರಗಿ ಹೋಗಲಿ.

ವ್ಯುತ್ಪತ್ತಿ[ಬದಲಾಯಿಸಿ]

ಈ ನುಡಿಗಟ್ಟು  ಐರ್ಯಪಥಿಕಿ ಸೂತ್ರದಲ್ಲಿಯೂ ಸಹ  ಕಂಡು ಬರುತ್ತದೆ.[೩]  ಇದು  ಪ್ರಾಕೃತ ಭಾಷೆ    ಈ ನುಡಿಗಟ್ಟಿನ ಸಂಸ್ಕೃತ ಛಾಯೆಯು ಮಿಥ್ಯಾ ಮೇ ದುಷ್ಕೃತಾಂ ಎಂದು ಆಗಿದೆ [೩]

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Chapple.
  2. "Jains pray for peace, brotherhood". The Hindu. 2007-09-13. Retrieved 2009-11-11.
  3. ೩.೦ ೩.೧ ೩.೨ R. Williams (1991). Jaina yoga: a survey of the mediaeval śrāvakācāras. Motilal Banarsidass Publ. p. 205. ISBN 81-208-0775-8.
  4. M.R.P. Vijaya; K.C. Jani (1951). Śramana Bhagavān Mahāvira: pt. 1. Sthavirāvali. Śri Jaina Siddhanta Society. p. 120.
  5. Preeti Srivastav (2008-08-31). "Request for Forgiveness". Indian Express. Retrieved 2009-11-11.
  6. Hastings, James (2003), Encyclopedia of Religion and Ethics Part 10, Kessinger Publishing ISBN 978-0-7661-3682-3 p.876