ಮಿಕೋಯಾನ್ MiG-35

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1-2 |}

ಮಿಕೋಯಾನ್ MiG-35 (Russian: Микоян МиГ-35, NATO ವರದಿಮಾಡುವ ಹೆಸರು : Fulcrum-F ) MiG-29M/M2 ಹಾಗೂ MiG-29K/KUBತಂತ್ರಜ್ಞಾನದ ಮುಂದುವರೆದ ಅಭಿವೃದ್ಧೀಕರಣ.

ಅದು ತಯಾರಕರಿಂದ 4++ ತಲೆಮಾರಿನ ಜೆಟ್ ಫೈಟರ್ ಎಂದು ವರ್ಗೀಕರಿಸಲ್ಪಟ್ಟಿದೆ.[೧] ಮೊದಲನೆಯ ಮೂಲ ರೂಪವು ಹಿಂದೆ ಪ್ರದರ್ಶನ ಮಾದರಿಯಾಗಿ ಉಪಯೋಗಿಸುತ್ತಿದ್ದ MiG-29M2 ವಿಮಾನದ ತಿದ್ದುಪಡಿ. ಇಲ್ಲಿಯವರೆಗು 10 ಮೂಲ ರೂಪಗಳನ್ನು ರೂಪಿಸಿ ಅವುಗಳನ್ನು ಪ್ರಯೋಗಗಳಿಗೆ ಅಳವಡಿಸಲಾಗಿದೆ.[೨] MiG-35ವನ್ನು  ಈಗ ಮಧ್ಯಮ ತೂಕದ ವಾಯು ಯಂತ್ರವೆಂದು ವಿಂಗಡಿಸಲಾಗಿದೆ, ಕಾರಣ ಅದರ ಟೇಕ್-ಆಫ್ ತೂಕ ಮೊದಲಿನ ಪ್ರಮಾಣಕ್ಕಿಂತಲೂ ಶೇಕಡ 30ರಷ್ಟು ಹೆಚ್ಚಿರುವುದು. ಅದರ ತೂಕವನ್ನು ಆಧಾರಿಸಿ ಅದನ್ನು ವಿಂಗಡಿಸಲ್ಪಟ್ಟಿತ್ತು.

MiG ಕಾರ್ಪೊರೇಷನ್ ಮೊದಲಬಾರಿಗೆ MiG-35ಯನ್ನು ಅಧಿಕೃತವಾಗಿ ಅಂತರಾಷ್ಟ್ರೀಯವಲಯದಲ್ಲಿ ಏರೋ ಇಂಡಿಯಾ 2007 ವಾಯು ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.[೩]

ರಷಿಯಾದ ರಕ್ಷಣಾಮಂತ್ರಿ ಸೆರ್ಗೆ ಐವನೊವ್, ಲುಖೊವಿಟ್‌ಸ್ಕಿಯ ಮೆಷೀನ್ ಬಿಲ್ಡಿಂಗ್ ಪ್ಲ್ಯಾಂಟ್ "MAPO-MIG"ಗೆ ಭೇಟಿ ನೀಡಿದಾಗ MiG-35 ಅನ್ನು ಅಧಿಕೃತವಾಗಿ ಅನಾವರಣಮಾಡಿದರು.[೪] ಒಂಟಿ ಆಸನ ಮಾದರಿಯನ್ನು MiG-35 ಎಂದು ಮತ್ತು ದ್ವಿಆಸನ ಮಾದರಿಯನ್ನು MiG-35D ಎಂದೂ ಹೆಸರಿಸಲಾಯಿತು. ಫೈಟರ್ ಎವಿಯೊನಿಕ್ಸ್ ಮತ್ತು ವಿಸ್ತಾರವಾಗಿ ಅಭಿವೃದ್ಧಿಗೊಂಡ ಶಸ್ತ್ರ ಪದ್ಧತಿಗಳನ್ನು ಹೋಂದಿದೆ, ಗಮನೀಯವಾಗಿ ಹೊಸ AESA radar ಮತ್ತು ನಿರ್ಧಿಷ್ಟವಾಗಿ ರಚಿಸಲ್ಪಟ್ಟ Optical Locator System (OLS), ಮತ್ತು ವಿಮಾನ ಭೂ ನಿಯಂತ್ರಣ ತಡೆ (GCI) ಪದ್ಧತಿಗಳ ಮೇಲಿನ ಅವಲಂಬನೆಯಿಂದ ವಿಮುಕ್ತಿ ಪಡಿಸಿ, ಬಹುಪಾತ್ರ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಶಕ್ತವಾಗುತ್ತದೆ.

ವಿಕಸನ[ಬದಲಾಯಿಸಿ]

MiG-29K/KUB ಮತ್ತು MiG-29M/M2 fightersಗಳಲ್ಲಿ ಇತ್ತೀಚೆಗೆ ಅಭಿವೃದ್ಧಿಗೊಳಿಸಿದ ಉನ್ನತೀಕರಿಸಿದ ಗುಣಗಳನ್ನು MiG-35/MiG-35D ಪ್ರದರ್ಶಿಸುತ್ತದೆ. ಆ ಗುಣಗಳೆಂದರೆ: ಕದನದ ಕಾರ್ಯಸಮರ್ಥತೆಯ ಅಭಿವೃದ್ಧೀಕರಣ ಸಾರ್ವತ್ರಿಕತೆ ಮತ್ತು ಕಾರ್ಯಗತಗೊಳಿಸುವ ಗುಣಗಳ ಅಭಿವೃದ್ಧೀಕರಣ.[೫]

ಮಾಹಿತಿ-ದೃಷ್ಟಿ ಪಧ್ದತಿಗಳು, ರಷಿಯನ್ ಮತ್ತು ವಿದೇಶಿ ಶತ್ರುಗಳ ಅನ್ವಹಿಸುವಿಕೆಗಳೊಡನೆ ಅನುಗುಣತೆ, ಮತ್ತು ಕದನದ ಉಳಿವನ್ನು ಹೆಚ್ಚಿಸುವ ವಿವಿಧ ಅನುಗುಣವಾದ ರಕ್ಷಣಾ ಪಧ್ದತಿಗಳೇ ಐದನೇ ತಲೆಮಾರಿನ ಹೊಸ ವಿನ್ಯಾಸದ ಮುಖ್ಯಲಕ್ಷ್ಣಣಗಳು. ಹೊಸ ಸಮರ್ಥ ವಿನ್ಯಾಸವು ಮೂಲ ಮಾದರಿಯ ವಿನ್ಯಾಸ ಕಲ್ಪನೆಗಳನ್ನು ಹಿಂದೆಹಾಕಿದೆ ಮತ್ತು ಹೊಸ ವಿಮಾನವು ಅವುಗಳ ಪಾಶ್ಚ್ಯಾತ್ಯ ಪ್ರತಿರೂಪಿಗಳಂತೆ ಪರಿಪೂರ್ಣವಾಗಿ ವಿವಿಧ ಪಾತ್ರ ಕಾರ್ಯಗಳನ್ನು ನಿರ್ವಹಿಸಲು ಶಕ್ತವನ್ನಾಗಿಸಿದೆ.[೫]

MiG-35ಯು ವಾಯು ಶ್ರೇಷ್ಟತೆಯನ್ನು ಪಡೆಯಲು ಮತ್ತು ಎಲ್ಲಾ-ಹವಾಮಾನಗಳಲ್ಲಿ ವಿಮಾನವನ್ನು ಭೂಮಿಗಿಳಿಸುವುದು, ಅಪ್ಟೋ-ಎಲೆಕ್ಟ್ರಾನಿಕ್ ಮತ್ತು ರಡಾರ್ ಸಲಕರಣೆಗಳೊಡನೆ ವಾಯು ಮಂಡಲದ ಸ್ಠಳ ಪರಿಶೋಧನೆ, ಮತ್ತು ಸಮಿಶ್ರಿತ ಸಹ ಕಾರ್ಯಗಳನ್ನು ನಿರ್ವಹಿಸುವುದು ಇವೇ ಹೊಸ ಏವಿಯೋನಿಕ್ಸ್‌ನ ಮುಖ್ಯ ಉದ್ದೇಶವಾಗಿದೆ.[೫]

ಹೊಸ ವಿಮಾನವು ತನ್ನ ನೈನ್ ಪೈಲಾನ್ಸ್‌ನಲ್ಲಿ ಶ್ರೇಷ್ಟ ಆಯುಧಗಳನ್ನು, ಹೆಚ್ಚಿನ ಇಂಧನ ಸಾಮರ್ಥತೆಯನ್ನು, ಜಂಗಿನ ವಿರುಧ್ದ ಉತ್ತಮ ರಕ್ಷಣೆ, ಮಹತ್ವವಾಗಿ ಕ್ಷೀಣಿಸಿದ ರಡಾರ್ ಸಿಗ್ನೆಚರ್ ಮತ್ತು ನಾಲ್ಕರಷ್ಟು ಹೆಚ್ಚಿನ ಫ್ಲೆ-ಬೈ-ವಯರ್ ನಿಯಂತ್ರಣ ಪಧ್ದತಿಯನ್ನು ಹೊಂದಿದೆ.

ಮೊದಲಿನ ವಿನ್ಯಾಸಗಳ ಮೇಲಿನ ಟೀಕೆಗಳಿಗೆ ಉತ್ತರವಾಗಿ ಹೊಸ ವಿನ್ಯಾಸವು ಮೊದಲಿನ ವಿನ್ಯಾಸಗಳಿಗಿಂತ ಸಾಕಷ್ಟು ಹೆಚ್ಚು ಭರವಸೆಯುಳ್ಳದಾಗಿದೆ. ಏರ್‌ಫ್ರೇಮ್‌ನ ಜೀವನಾವಧಿ, ಮತ್ತು ಅದರ ಓಡಾಟದ ಅವಧಿಯನ್ನು ವಿಸ್ತಾರಗೊಳಿಸಲಾಗಿದೆ ಮತ್ತು ಉದ್ದವಾದ ಮೀನ್ ಟೈಮ್ ಬಿಟ್ವೀನ್ ಒವರಾಲ್ಸ್ (MTBO) ಹೊಂದಿರುವ ಹೊಸ ಇಂಜಿನ್ನುಗಳನ್ನು ಜೋಡಿಸಲಾಗಿದೆ. ಇದರ ಪರಿಣಾಮವಾಗಿ ವಿಮಾನ ಹಾರುವ ವೆಚ್ಚವು ಮೊದಲಿನ ವಿನ್ಯಾಸಗಳಿಗಿಂತ 2.5 ರಷ್ಟು ಬಾರಿ ಕಡಿಮೆಯಾಗಿದೆ.

                  ಹೊಸ ಇಂಜಿನ್‌ಗಳು ಈಗ ವಾಯುರಹಿತವಾಗಿದೆ ಮತ್ತು ಉತ್ತಮ ಕಾರ್ಯ ನಿರ್ವಹಣೆಗಾಗಿ FADEC ಮಾದರಿಯ ಎಲೆಕ್ಟ್ರಾನಿಕ್ ನಿಯಂತ್ರಣ ಪದ್ಧತಿಯನ್ನು ಒಳಗೊಂಡಿದೆ.      MiG-29OVT ಮೇಲೆ ನಡೆಸಿದ ವೆಕ್ಟರ್ ನಾಜಲ್‌ಗಳ ವಿಷಯಾಂಶಗಳ ನಿರೂಪಣೆಯು ಇಚ್ಛೆಗನುಸಾರವಾಗಿದೆ.

ವಿಮಾನವು ಸ್ವತಂತ್ರವಾಗಿ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ವೃದ್ಧಿಸಲು ಮತ್ತಿತರ ತಾಂತ್ರಿಕ ಅಭಿವೃದ್ಧಿಗಳನ್ನು ಪರಿಚಯಿಸಲಾಯಿತು.

ಉದಾಹರಣೆಗೆ, ಎರ್‌ಬೊರ್ನ್ ಆಮ್ಲಜನಕ ಉತ್ಪಾದನ ಯಂತ್ರವನ್ನು ಸೇರಿಸಲಾಯಿತು. MIG-35ಗೆ ಹೊಸ ವಿವಿಧ ಕಾರ್ಯಸ್ ಸ್ಚಯಂ-ರಕ್ಷಣೆಯ ಜಾಮ್ಮರ್ ಅನ್ನು ಒದಗಿಸಲು RAC MiG ಮತ್ತು ಇಟಾಲಿಯನ್ ಕಂಪನಿ ಎಲೆಕ್ಟ್ರಾನಿಕಾ ಸೇರಿ ಒಂದು ಮೆಮೊರಾಂಡಮ್ ಆಫ್ ಅಂಡರ್ಸ್ಟಾಂಡಿಂಗ್ ಒಪ್ಪಂದಕ್ಕೆ ಸಹಿ ಮಾಡಿದರು.[೬]

ಇನ್ನೂ ಮುಂದೆ RAC MiG ಇಂಜಿನಿಯರರು ವಿಮಾನದ ಸೂಕ್ಷ್ಮವಾದ ನಿಯಂತ್ರಣಗಳನ್ನು ಉಪಯೋಗಿಸುವುದರಲ್ಲಿ ನಿಪುಣರಾಗಲು ವಿಮಾನ ಚಾಲಕರಿಗೆ ತರಬೇತಿ ನೀಡಲು ನಿಯಂತ್ರಣಗಳ ನಕಲುಗಳನ್ನು ತಯಾರಿಸಿದರು. ಈ ನಕಲುಗಳು ಗಣಕಯಂತ್ರ ಆಧಾರಿತ ತರಬೇತಿ ಪದ್ಧತಿಗಳನ್ನು ಮತ್ತು ಫುಲ್-ಮಿಶನ್ ಚಾಲನೆ ನಕಲನ್ನು ಪ್ರಸ್ತಾಪಿಸುತ್ತದೆ.


ಏರೋ ಇಂಡಿಯಾ 2007ರಲ್ಲಿ MIG-35D

ಮೊದಲ ನಿರೂಪಕ ದ್ವಿ ಆಸನ ವಿಮಾನವನ್ನು ಅಸ್ಥಿತ್ವದಲ್ಲಿದ್ದ MiG-29M2 ಎರ್‌ಫ್ರೇಮ್‌ನ ಮೇಲೆ ಕಟ್ಟಲಾಯಿತು.ಇದು ಮೊದಲು ಮಾರ್ಪಡಿಕೆಗಾಗಿ ನೇಮಕವಾದ MiG-29MRCA ಮತ್ತು MiG-29M2ಗೆ ನಿರೂಪಕವಾಗಿ ಉಪಯೊಗಿಸಲ್ಪಟ್ಟಿತು.

ಏರೋಇಂಡಿಯಾದಲ್ಲಿ ಅನಾವರಣ[ಬದಲಾಯಿಸಿ]

ಮಾಸ್ಕೋ ಈ ವಿಮಾನಗಳನ್ನು ಭಾರತಕ್ಕೆ ಮಾರುವ ಉತ್ಸುಕತೆಯಲ್ಲಿ ರಶಿಯಾವು [೭] ಬೆಂಗಳೂರಿನಲ್ಲಿ 2007ರಲ್ಲಿ ನಡೆದ ಏರೋ ಇಂಡಿಯಾ ವಾಯು ಪ್ರದರ್ಶನದಲ್ಲಿ MiG-35ಯ ಅನಾವರಣ ಮಾಡಿತು.

MiG-35ಯು ಮಾಸ್ಕೋದಿಂದ ಬೆಂಗಳೂರಿಗೆ ಮೂರು ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಹಾರುತ್ತಿರುವಂತೆಯೆ ಇಂಧನವನ್ನು ವಿಮಾನದಲ್ಲೆ ತುಂಬಿಸುವ ಸೌಲಭ್ಯದ ಸಹಾಯದಿಂದ ಸೂಪರ್‌ಸಾನಿಕ್ ವೇಗದಲ್ಲಿ ತಲುಪಿತೆಂದು ವರದಿಮಾಡಲಾಯಿತು.

ಭಾರತದ MRCA ಸ್ಪರ್ಧೆಗೆ ಭಾರತೀಯ ವಾಯು ಪಡೆಯು 126 ಕ್ಕಿಂತ ಹೆಚ್ಚು ವಿವಿಧ ಪಾತ್ರದ ಕದನ ವಿಮಾನವನ್ನು ಪಡೆಯಬೇಕಾದಾಗ ಯುರೊಫೈಟರ್ ಟೈಫೂನ್, F/A-18E/F ಸೂಪರ್ ಹಾರ್ನೆಟ್, ಡಸ್ಸಾಲ್ಟ್ ರಫಾಲೆ, JAS 39 ಗ್ರಿಪೆನ್ ಮತ್ತು F-16 ಫಾಲ್ಕನ್ ವಿಮಾನಗಳಿಗೆ MiG-35 ಒಂದು ಪ್ರತಿಸ್ಪರ್ಧಿಯಾಗಿದೆ.

MAKS 2009ರಲ್ಲಿ MIG-35

ಎರೊ ಇಂಡಿಯಾ 2007 ರಲ್ಲಿ ನಡೆದ ಅಂತರ್‌ರಾಷ್ಟ್ರೀಯ ಮಟ್ಟದ ವಾಯು ಪ್ರದರ್ಶನದಲ್ಲಿ MiG-35 ಫೈಟರ್‌ನ ಅಂತಿಮ ವರದಿಯನ್ನು ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಅಲ್ಲಿಯವರೆಗು MiG-35ರ ಮೂಲರೂಪವನ್ನು ಮಾತ್ರ 2005ರಲ್ಲಿ ರಶಿಯಾ ಮತ್ತು UK ದೇಶಗಳಲ್ಲಿ ವಾಯು ಪ್ರದರ್ಶನಗಳಲ್ಲಿ ಜನಸಾಮಾನ್ಯರಿಗೆ ಪ್ರದರ್ಶಿಸ್ಲಾಗಿತ್ತು.


ಅದನ್ನು ಮತ್ತೆ ಬೆಂಗಳೂರಿನ ಹತ್ತಿರದ ಯಲಹಂಕ ಎರ್‌ಬೇಸ್ ನಲ್ಲಿ ನಡೆದ ಏರೊ ಇಂಡಿಯಾ 2009ರಲ್ಲಿ ಭಾರತೀಯ ವಾಯು ಪಡೆಯ ವಿಮಾನ ಚಾಲಕ ಹಾರಿಸಿ ಪ್ರದರ್ಶಿಸಿದನು.[೮]

ಏಪ್ರಿಲ್ 2010ರಂದು ಎರೆಡು ಹೊಸ MiG-35 ನಿರೂಪಕಗಳು, ಏಕ-ಆಸನ MiG-35 ಬಾರ್ಟ್ "961" ಮತ್ತು ದ್ವಿ-ಆಸನ MiG-35D "967" ವಿಮಾನಗಳ ಚಿತ್ರಗಳು ಮತ್ತು ಹೆಚ್ಚಿನ ಮಾಹಿತಿಗಳು ಹೊರಬಂದವು. ರಶಿಯಾದ ಮಾಧ್ಯಮದ ಪ್ರಕಾರ ಅವುಗಳು ಮೊದಲಬಾರಿಗೆ 2009ರ ಶರತ್ಕಾಲದ ಆರಂಭದಲ್ಲಿ ಹಾರಿದವು ಮತ್ತು ಅನಂತರ ಭಾತರದಲ್ಲಿ 2009 ಆಕ್ಟೊಬರ್ ತಿಂಗಳಿಂದ ನಡೆದ MRCA ಶೊಧನೆಗಳಲ್ಲಿ ಪಾಲ್ಗೊಂಡಿತು. ಎರಡಕ್ಕೂ ಮೊದಲಿನ MiG-29K/KUB ಎರ್‌ಫ್ರೆಮ್‌ಗಳೊಡನೆ ಬಹಳಷ್ಟು ಸಮಾನತೆಗಳಿವೆ. ತಕ್ಷಣ ಕಾಣುವ ವ್ಯತ್ಯಾಸವು ಜಲಪಡೆ ವಿಮಾನದಲ್ಲಿ ಕೊಂಡಿ ಇದ್ದ ಸ್ಥಳದಲ್ಲಿ ಬ್ರೇಕಿಂಗ್ ಪ್ಯಾರಾಶೂಟ್‌ನ ಸ್ಥಾಪನೆಯಾಗಿದೆ.[೯] ತರುವಾಯ MiG-35D "967" ಗೆ ಕಡುಬೂದಿ ಬಣ್ಣದ ಗಿಡ್ಡು ಮೂಗಿನ ರಡೊಮ್‌ನಿಂದ ಗುರುತಿಸಲ್ಪಟ್ಟ ಹಳೆಯ MiG-35 ನಿರೂಪಕ ಬಾರ್ಟ್ "154"ಗೆ ಜೋಡಿಸಿದಂತಹ AESA ರಡಾರಿಂದ ಸಜ್ಜುಗೊಂಡಂತೆ ಕಾಣುತ್ತದೆ.[೧೦]

ವಿನ್ಯಾಸ[ಬದಲಾಯಿಸಿ]

ಫಜೊಟ್ರೊನ್ ಝುಕ್-AE ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರ್ರೆ (AESA) ರಡಾರ್, RD-33MK ಇಂಜ್ಗಿಗಳು ಮತ್ತು ಹೊಸದಾಗಿ ವಿನ್ಯಾಸಿಕರಿಸಲ್ಪಟ್ಟ Optical Locator System (OLS)ಗಳೇ ಅತೀ ಮುಖ್ಯ ಬದಲಾವಣೆಗಳು.[೧೧][೧೨][೧೩] ಅನಲಾಗ್ ಎಲೆಕ್ಟ್ರಾನಿಕ್ಸ್‌ನಲ್ಲಿ ಕ್ಷೀಣತೆಯೇ ಕಾಕ್‌ಪಿಟ್‌ನಲ್ಲಿನ ಮತ್ತಿತರ ಸ್ಪಷ್ಟವಾದ ವ್ಯತ್ಯಾಸಗಳು.

ಕಾರ್ಯಶಕ್ತಿ ಯಂತ್ರೊಪಕರಣ[ಬದಲಾಯಿಸಿ]

ಹೊಸದಾದ ತಿದ್ದುಪಡಿಯಿಂದ RD-33MK "ಮೊರ್ಸ್‌ಕಯ ಒಸ" (Russian: Морская Оса, ಅಕ್ಷರಶಃ: "ಸೀ ವಾಸ್ಪ್‌" ಅಥವಾ ಚಿರೊನೆಕ್ಸ್‌ ಫ್ಲೆಕೆರ್ನ್‌ )ಯನ್ನು ಸ್ಥಾಪಿಸಲಾಯಿತು. ಇದು RD-33ನ ಇತ್ತಿಚ್ಚಿನ ವರದಿಯಾಗಿದೆ ಮತ್ತು ಅದರ ಉದ್ದೇಶವು MiG-29K and MiG-29KUBಯನ್ನು ಶಕ್ತಗೊಳಿಸುವುದಾಗಿತ್ತು. ಆಧುನಿಕ ವಸ್ತುಗಳನ್ನು ಕೂಲ್ಡ್ ಬ್ಲೇಡ್‌ನಲ್ಲಿ ಉಪಯೊಗಿಸಿರುವ ಕಾರಣ ಇದಕ್ಕೆ ಮೂಲ ಮಾದರಿಗಿಂತಲೂ 7%ರಷ್ಟು ಹೆಚ್ಚಿನ ಕಾರ್ಯಶಕ್ತಿ ಇದೆ.ಇದರಿಂದ ವಿಮಾನಕ್ಕೆ 9,000 kgf ರಷ್ಟು ಹೆಚ್ಚಿನ ಇರಿತ ಶಕ್ತಿಯನ್ನು ಒದಗಿಸಲಾಗುತ್ತದೆ.

 ಮೊದಲಿನ ಟೀಕೆಗಳಿಗೆ ಉತ್ತರವಾಗಿ ಹೊಸ ಇಂಜಿನ್‌ಗಳನ್ನು ಧೂಮರಹಿತವಾಗಿದೆ ಮತ್ತು ಇನ್‌ಫ್ರಾರೆಡ್ ಮತ್ತು ಆಪ್ಟಿಕಲ್‌ ಗೋಚರತೆಯನ್ನು ತೀಕ್ಷಣಗೊಳಿಸುವ ಪದ್ಧತಿಗಳನ್ನು ಒಳಗೊಂಡಿದೆ. ಇಂಜಿನ್‌ಗಳಿಗೆ ವೆಕ್ಟರ್ಡ್‌-ಥ್ರಷ್ಟ್ ನಾಜಲ್‌ಗಳನ್ನು ಜೊಡಿಸಬಹುದು. ಇದರಿಂದ ಕದನ ಸಾಮರ್ಥತೆಯು 12 ರಿಂದ 15%ರಷ್ಟು ಹೆಚ್ಚುತ್ತದೆ.[೫][೧೪]

RD-33OVTಎಂದು ನೇಮಕವಾದ ಇಂಜಿನ್‌ಗಳು ವೆಕ್ಟರ್ಡ್ ಥ್ರಷ್ಟ್ ನಾಜ್‌ಲ್‌ಗಳನ್ನು ಹೊಂದಿವೆ ಮತ್ತು Mig-35 ಮೊದಲ ದ್ವಿ ಇಂಜಿನ್‌ ವಿಮಾನವೆಂದು ನೇಮಕವಾಗಲು ಅನುಮತಿಪಡೆದಿದೆ. ಇವುಗಳು ಎಲ್ಲಾ ಅಕ್ಸ್‌ಗಳಲ್ಲಿ ಚಲಿಸುವ ವೆಕ್ಟರಿಂಗ್ ನಾಜಲ್‌ಗಳನ್ನು ಹೊಂದಿವೆ. Su-30MK ಮತ್ತು F-22,ವಿಮಾನಗಳಂತೆ ಅಸ್ತಿತ್ವದಲ್ಲಿರುವ ಮತ್ತಿತರ ಥ್ರಸ್ಟ್ ವೆಕ್ಟರಿಂಗ್ ವಿಮಾನಗಳೆಲ್ಲವೂ ಟು-ಡೈಮೆನ್ಶನಲ್ ವೆಕ್ಟರಿಂಗ್ ನಾಜ್‌ಲ್‌ಗಳನ್ನು ಹೊಂದಿವೆ.[೨]

ವಿಮಾನದ ಆಯಕಟ್ಟಿನ ಸ್ಥಳ[ಬದಲಾಯಿಸಿ]

ಅನಲಾಗ್ ಎಲೆಕ್ಟ್ರಾನಿಕ್ಸ್‌ ಅನ್ನು ಕನಿಷ್ಟಪಡಿಸಿ ಮತ್ತು 3 ಸಮಪ್ರಮಾಣದ ಬಣ್ಣದ ಲಿಕ್ವಿಡ್-ಕ್ರಿಸ್ಟಲ್ (LCD), ವಿವಿಧ-ಕಾರ್ಯ ಪ್ರದರ್ಶನಗಳು (MFDs) , OLSಗೆ( MiG-35D ವಿಮಾನದ ಹಿಂದಿನ ಕಾಕ್ಪಿಟ್‌ಗೆ ನಾಲ್ಕು LCDsಗೆಳಿವೆ) ಅಧಿಕ ಪ್ರದರ್ಶನಗಳಿಂದ ಸ್ಥಾನಪಲ್ಲಟ ಮಾಡಲಾಗಿದೆ.

ಸೆನ್ಸರ್ಸ್[ಬದಲಾಯಿಸಿ]

ಹೊಸ ಬದಲಾವಣೆಮಾಡಿದ ಸೆನ್ಸರ್‌ಗಳಲ್ಲಿ ಹೊಸದಾಗಿ ಬಿಡುಗಡೆಯಾದ ಫಜೊಟ್ರೋನ್ ಜುಕ್-ಯೆ ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರ್ರೆ (AESA) ರಡಾರ್ ಮತ್ತು ಅಪ್ಟ್ರನಿಕ್ಸ್ ಕಾಂಪ್ಲೆಕ್ಸ್‌ಗಳು ಮೊದಲಿನ IRST ಸ್ಥಳ ಬದಲಾವಣೆ ಮಾಡಲು ಹೊಸದಾಗಿ ವಿನ್ಯಾಸಿಸಲ್ಪಟ್ಟ OLS ಅನ್ನು ಹೊಂದಿದೆ. ಬಲ ವಾಯು ಗ್ರಹಣದ ಕೆಳಗೆ ಹೆಚ್ಚಿನ OLS , ಮತ್ತು ಪ್ರತಿಯೊಂದು ರೆಕ್ಕೆಯ ತುದಿಯಲ್ಲಿ ಒಂದು ಜೊತೆ ಲೇಸರ್ ಎಮಿಶನ್ ಡಿಟೆಕ್ಟರ್ಸ್‌ಗಳಿವೆ.

Phazotron Zhuk-AE AESA ರಡಾರ್ ಆಪರೇಟಿಂಗ್ ಫ್ರಿಕ್ವೆನ್ಸೀಸ್‌‌ನ ವಿಶಾಲ ವ್ಯಾಪ್ತಿಯನ್ನು ನೀಡುತ್ತದೆ, ಮತ್ತು ಎಲೆಕ್ಟ್ರಾನಿಕ್ ಕೌಂಟರ್‌ಮೆಶರ್ಸ್ (ECM), ಹೆಚ್ಚಿನ ಕಂಡುಹಿಡಿಯುವ ವ್ಯಾಪ್ತಿ, ಹೆಚ್ಚು ವಾಯು ಮತ್ತು ಭೂ ಗುರಿಗಳನ್ನು ಕಂಡುಹಿಡಿದದ್ದು, ಪತ್ತೆಮಾಡಿದ್ದು, ಮತ್ತು ಎಕಕಾಲದಲ್ಲಿ ಕೆಲಸದಲ್ಲಿ ತೊಡಗುವ ಸಾಮರ್ಥ್ಯತೆಗಳಿಗೆ ಹೆಚ್ಚಿನ ತಡೆಶಕ್ತಿಯನ್ನು ವದಗಿಸುತ್ತದೆ. ರಡಾರಿನ ಗ್ರಹಕ ವ್ಯಾಪ್ತಿಯು ವಾಯು ಗುರಿಗಳಿಗೆ 160 km (86 nmi) ಮತ್ತು ಹಡಗುಗಳಿಗೆ 300 km (160 nmi) ಎಂದು ತಿಳಿದಿದೆ.[೧೫]

ಅಂತರಿಕ್ಷ ತಂತ್ರಜ್ಞಾನಗಳ ಒಂದು ಹೊಸ ಅಭಿವೃದ್ಧಿ OLS, ಹೆಲ್ಮೆಟ್-ಮೌಂಟೆಡ್ ಟಾರ್ಗೆಟ್ ಪದ್ಧತಿಯನ್ನು ಸಂಯೋಜಿಸುತ್ತದೆ ಮತ್ತು ವಿಮಾನದ ಫಾರ್ವರ್ಡ್ ಮತ್ತು ಅಫ್ಟ್ ಹೆಮಿಸ್ಫಿಯರ್ನಲ್ಲಿರುವ ಭೂ ಮತ್ತು ವಾಯು ಗುರಿಗಳಿಗೆ ಟಾರ್ಗೆಟ್ಟಿಂಗ್ ಸಮಾಧಾನಗಳನ್ನು ಒದಗಿಸುತ್ತದೆ. ಮೊದಲಿನ IRST ಸೆನ್ಸರ್‌ಗೂ ಹೊಸ ಉಪಕರಣಕ್ಕೂ ಇರುವ ಅತೀ ಮಹತ್ವದ ವ್ಯತ್ಯಾಸವು ಉತ್ತಮ ಆಪರೇಷನ್ ವ್ಯಾಪ್ತಿ ಅಲ್ಲದೆ ಮನುಷ್ಯ ಚಲಾಯಿಸುವ IR ದೃಶ್ಯದ ಸ್ವಿಚಬಲ್ ಡಿಸ್‌ಪ್ಲೆ ಆಪ್ಷನ್ಸ್ ಮತ್ತು ಅದನ್ನು ಮಹತ್ವವಾಗಿ ಅಭಿರುದ್ಧಿಪಡಿಸುವ ಮನುಶ್ಯ ಮತ್ತು ಯಂತ್ರದ ಸಂಯೋಜನೆ ಹೆಚ್ಚಿಸುವ TV ಮೋಡ್ ಅಥವಾ ಎರಡರ ಮಿಶ್ರಣವನ್ನು ವದಗಿಸುತ್ತದೆ.

   OLS ವಿಮಾನದ ಮೂಗಿನ ಮೇಲೆ IRSTಆಗಿ ಸೇವೆಸಲ್ಲಿಸುವಾಗ OLS ಕೆಳಗೆ ಬಲ ವಾಯು ಒಳಗೆಳೆತದ ಭಾಗದಲ್ಲಿ ಗ್ರೌಂಡ್ ಸ್ಟ್ರೈಕ್ ಡೆಸಿಗ್ನೇಟರ್‌ ಆಗಿ ಸೇವೆಸಲ್ಲಿಸುತ್ತದೆ ಕಾರ್ಯ ನಿರ್ವಹಿಸುತ್ತದೆ.

ವಾಯು ಕದನದಲ್ಲಿ ಆಪ್‌ಟ್ರಾನಿಕ್ಸ್ ಸೂಟ್ ಅನುಮತಿಸುವುದು:

 • 45 kmಗಳಿಗಿಂತ ಹೆಚ್ಚಿನ ವ್ಯಾಪ್ತಿ ಪ್ರದೇಶದಲ್ಲಿ ನಾನ್-ಆಫ್ಟರ್‌ಬರ್ನಿಂಗ್ ಗುರಿಗಳನ್ನು ಕಂಡುಹಿಡಿಯುವುದು;


 • 8 ರಿಂದ 10 km ವ್ಯಾಪ್ತಿ ಪ್ರದೇಶದಲ್ಲಿರುವ ಗುರಿಗಳನ್ನು ಗುರುತಿಸುವುದು ಮತ್ತು
 • 15 km ಮತ್ತು ಅಲ್ಲಿಯವರೆಗೆ ಇರುವ ಪ್ರದೇಶದಲ್ಲಿರುವ ಏರಿಯಲ್ ಗುರಿಗಳ ವ್ಯಾಪ್ತಿ ಪ್ರದೇಶದ ಅಂದಾಜು.

ಭೂ ಗುರಿಗಳಿಗೆ, ಸೂಟ್ ಅನುಮತಿಸುವುದು:

 • 15 kmವರೆಗು ಟ್ಯಾಂಕ್- ಎಫೆಕ್ಟಿವ್ ಕಂಡುಹಿಡಿಯುವ ವ್ಯಾಪ್ತಿ ಪ್ರದೇಶ ಮತ್ತು 60 ರಿಂದ 80 km ವರೆಗು ಕ್ಯಾರಿಯರ್ ವಿಮಾನದ ಕಂಡು ಹಿಡಿಯುವಿಕೆ
 • 8 ರಿಂದ 10 kmವರೆಗಿನ ವ್ಯಾಪ್ತಿ ಪ್ರದೇಶದಲ್ಲಿ ಟ್ಯಾಂಕ್‌ಅನ್ನು ಕಂಡು ಹಿಡಿಯುವುದು, ಮತ್ತು 40 ರಿಂದ 60 km ಅಷ್ಟು ದೂರದಲ್ಲಿ ಕ್ಯಾರಿಯರ್ ವಿಮಾನವನ್ನು ಕಂಡುಹಿಡಿಯುವುದು ಮತ್ತು
 • 20 kmಗಳತನಕ ಭೂ ಗುರಿಗಳ ವ್ಯಾಪ್ತಿಪ್ರದೇಶದ ಅಂದಾಜು.

ರಕ್ಷಣಾ ಪದ್ಧತಿಯ ಸಲಕರಣೆಗಳು ರಡಾರ್ ರೆಕನ್ನೈಸ್ಸೆನ್ಸ್‌, ತಾಂತ್ರಿಕ ಕೌಂಟರ್‌ಮೆಶರ್ಸ್‌, ಮತ್ತು ಆಪ್ಟಿಕಲ್ ಪದ್ಧತಿಗಳನ್ನು ಒಳಗೊಂಡಿದೆ-ಗಮನಾರ್ಹವಾಗಿ ಪ್ರತಿಯೋಂದು ರೆಕ್ಕೆಯ ಮೇಲೆ ಲೇಸರ್ ಎಮಿಶನ್ ಡಿಟೆಕ್ಟರ್‌-ಅವುಗಳು ಸಮೀಪಿಸುತ್ತಿರುವ ಅಪಾಯವನ್ನು ಕಂಡುಹಿಡಿದು ಪರಿಶೀಲಿಸಲು ಸಮರ್ಥವಾಗಿದೆ ಮತ್ತು ರಡಾರ್ ಮತ್ತು ಇನ್‌ಫ್ರಾರೆಡ್ ವ್ಯಾಪ್ತಿಯಲ್ಲಿ ಸಮೀಪಿಸುತ್ತಿರುವ ಬೆದರಿಕೆ ತಡೆಯೊಡ್ಡಲು ಡೀಕೊಯ್ ಡಿಸ್ಪೆನ್ಸರ್ಸ್‌ಗಳನ್ನು ಉಪಯೊಗಿಸುತ್ತದೆ.

ಓಪನ್ ಆರ್ಕಿಟೆಕ್ಚರ್[ಬದಲಾಯಿಸಿ]

MiG-35ರ ಆನ್‌ಬೋರ್ಡ್ ಸಲಕರಣೆಯ ಅಂತಿಮ ಸಾಪೇಕ್ಷ ರೂಪ MIL-STD-1553 ಬಸ್ ಅನ್ನು ಉಪಯೋಗಿಸುತ್ತಾ ಉದ್ದೇಶ ಪೂರ್ವಕವಾಗಿ ತೆರೆದು ಬಿಟ್ಟಿದೆ.[೧೬] ಓಪನ್ ಆರ್ಕಿಟೆಕ್ಚರ್ ಸಾಪೇಕ್ಷರೂಪದ ಏವಿಯಾನಿಕ್ಸ್‌ಗೆ ಅದರ ಮುಖ್ಯ ಉಪಯೋಗವೆಂದರೆ , ಭವಿಷ್ಯದಲ್ಲಿ ಗ್ರಾಹಕರು ರಶಿಯಾ,ಫ್ರೆಂಚ್‌ ಮತ್ತು ಇಸ್ರೇಲ್ ಕಂಪನಿಗಳಿಂದ ತಯಾರಿಸಲ್ಪಟ್ಟ ಉಪಾಂಗಗಳು ಮತ್ತು ಪದ್ಧತಿಗಳನ್ನು ಆಯ್ಕೆಮಾಡಿಕೊಳ್ಳಬಹುದು. ರಮೆನ್ಸ್‌ಕೊ ಡಿಸೈನ್ ಕಂಪೆನಿ ಪದ್ಧತಿಗಳ ಸಂಯೊಜಕನಾಗಿ ವರ್ತಿಸುತ್ತದೆ [೨]

ನಿರ್ದಿಷ್ಟ ವಿವರಣೆಗಳು[ಬದಲಾಯಿಸಿ]

MiG-35 ಸಧ್ಯದಲ್ಲಿ ಅಭಿವೃದ್ಧೀಕರಣದಲ್ಲಿದೆ. ಕೆಳಗೆ ಒದಗಿಸಿರುವ ಪಟ್ಟಿಯು ಪ್ರಸ್ತಾವನೆರೂಪದ್ದು ಮತ್ತು ಬದಲಾವಣೆಗೆ ಒಳಪಟ್ಟಿದೆ.

Data from Mikoyan MiG-29M2 data,[೧೭] Aero India,[೭] deagel.com,[೧೮] ASD-network,[೧೯] and Rian.ru[೨೦]

General characteristics

Performance

Armament

Avionics

ಇವನ್ನೂ ಗಮನಿಸಿ[ಬದಲಾಯಿಸಿ]

Related development
Aircraft of comparable role, configuration and era

Related lists

ಆಕರಗಳು[ಬದಲಾಯಿಸಿ]

 1. MiG-35/MiG-35D Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.. RAC MiG ಕಾರ್ಪೊರೇಷನ್
 2. ೨.೦ ೨.೧ ೨.೨ http://www.domain-b.com/aero/mil_avi/mil_aircraft/20090814_mig-35_oneView.html
 3. MiG-35 photos from Air India 2007 on aviapedia.com
 4. MiG-35 page. ೇವಿಯಾಪೀಡಿಯಾ
 5. ೫.೦ ೫.೧ ೫.೨ ೫.೩ MiG-35/MiG-35D Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ., ರಷಿಯನ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ MiG.
 6. "Feb. 5-11, 2007 News on adnkronos.com". Archived from the original on 2012-03-22. Retrieved 2010-06-09.
 7. ೭.೦ ೭.೧ "Russia to Unveil Latest MiG-35 at Bangalore During Aero India 2007". ಇಂಡಿಯಾ ಡಿಫೆನ್ಸ್, 2007-02-02
 8. http://www.aeroindia.in/pdf/exhibitors.pdf[ಶಾಶ್ವತವಾಗಿ ಮಡಿದ ಕೊಂಡಿ]
 9. "Тендер MMRCA" (PDF). Take-Off (in Russian): 36–37. 2009. Retrieved 2010-04-13. {{cite journal}}: Unknown parameter |month= ignored (help)CS1 maint: unrecognized language (link)
 10. Photo of MiG-35 '967'. Airliners.net
 11. http://www.aviapedia.com/files/books/PhazotronMagAI07_full.pdf
 12. Aviapedia » Klimov fighter engines video. RD-33
 13. Aviapedia » New MiG-35 OLS video
 14. "Klimov :: Production :: Aircraft Program :: RD-33MK". Archived from the original on 2007-09-27. Retrieved 2010-06-09.
 15. ಉಲ್ಲೇಖ ದೋಷ: Invalid <ref> tag; no text was provided for refs named AF_Tech_MiG-35
 16. "MiG-35 Multi-Role Combat Aircraft". Archived from the original on 2007-03-14. Retrieved 2010-06-09.
 17. "MiG-29M2 product page". Archived from the original on 2010-07-31. Retrieved 2010-06-09.
 18. MiG-35 page. deagel.com.
 19. MiG-35 debut at AeroIndia-2007 Archived 2009-10-12 ವೇಬ್ಯಾಕ್ ಮೆಷಿನ್ ನಲ್ಲಿ., (ferry range with three external up to 3,100 km MiG-35), ASD-Network.com
 20. http://en.rian.ru/infographics/20090219/120216946.html
 21. "defense-update.com Zhuk AE". Archived from the original on 2010-03-28. Retrieved 2010-06-09.
 22. "ಆರ್ಕೈವ್ ನಕಲು". Archived from the original on 2007-09-27. Retrieved 2010-06-09.

ಬಾಹ್ಯ ಕೊಂಡಿಗಳು[ಬದಲಾಯಿಸಿ]

| 23/02/2007

ಟೆಂಪ್ಲೇಟು:Mikoyan aircraft