ವಿಷಯಕ್ಕೆ ಹೋಗು

ಮಾವಿನ ಮಾಂಬಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾವಿನ ಹಣ್ಣು ಎಂದರೆ ಉಷ್ಣವಲಯದ ಮರ ಮ್ಯಾಂಗಿಫೆರಾ ಇಂಡಿಕಾದಿಂದ ಉತ್ಪತ್ತಿ ಆಗುವ ಒಂದು ತಿನ್ನುವ ಫಲ. ಇದು ವಾಯುವ್ಯ ಮ್ಯಾನ್ಮಾರ್, ಬಾಂಗ್ಲಾದೇಶ,ಮತ್ತು ಈಶಾನ್ಯ ಭಾರತದ ನಡುವೆ ಇರುವ ಪ್ರದೇಶಗಳಲ್ಲಿ ಹುಟ್ಟಿ ಬಂದಿದೆ.

ಮಾವಿನ ಮರದಲ್ಲಿ ಮಾವು
ಮಾವಿನ ಹಣ್ಣಿನ ಒಂದು ಜಾತಿ

ಮಾವಿನ ಮಾಂಬಲೊ ಅಂತ ಹೇಳಿದರೆ ಮಾವಿನಹಣ್ಣಿನಲ್ಲಿ ಮಾಡುವ ಒಂದು ಖಾದ್ಯ. ಮಾವಿನ ಹಣ್ಣು ಎಲ್ಲಾ ಸಮಯದಲ್ಲಿ ಸಿಗದ ಕಾರಣ ಅದನ್ನು ದಾಸ್ತಾನು ಮಾಡಿ ಇಡುವ ವಿಧಾನ ಇದು. ಹೀಗೆ ಬೇರೆ ಬೇರೆ ರೀತಿಯಲ್ಲಿ ದಾಸ್ತಾನ್ ಮಾಡಿ ಇಡುತ್ತಾರೆ. ಇದರಲ್ಲಿ ಮಾಂಬಲ ಒಂದು ರೀತಿಯ ಬಗೆ.

ಮಾಂಬಲ ಮಾಡುವ ವಿಧಾನ

[ಬದಲಾಯಿಸಿ]

ಮಾವಿನ ಹಣ್ಣನ್ನು ಹೆಕ್ಕಿ ತಂದು ಅದರ ರಸವನ್ನು ತೆಗೆದು, ಆ ರಸವನ್ನು ಒಂದು ಚಾಪೆಯಲ್ಲಿ ಒಯ್ದು ಬಿಸಿಲಿಗೆ ಒಣಗಳು ಇಡಬೇಕು. ನಂತರ ಮರುದಿನ ಪುನಃ ಮಾವಿನ ಹಣ್ಣನ್ನು ಹೆಕ್ಕಿ ತಂದು ಅದರ ರಸ ತೆಗೆದು ಆ ರಸವನ್ನು ಅದೇ ಚಾಪೆಯಲ್ಲಿ ಮೊದಲು ಒಯ್ದ ಮೇಲೆಯೇ ಪುನಃ ಒಯ್ಯಬೇಕು. ಅದನ್ನು ಬಿಸಿಲಿಗೆ ಒಣಗಿಸಬೇಕು.ಹಾಗೇ ದಿನಾಲು ಸಿಕ್ಕಿದ ಮಾವಿನ ಹಣ್ಣಿನ ರಸವನ್ನು ತೆಗೆದು ಒಣಗಿಸಿ ಮಳೆಗಾಲಕ್ಕೆ ಉಪಯೋಗ ಮಾಡಲು ಬೆಚ್ಚಗಿನ ಜಾಗದಲ್ಲಿ ದಾಸ್ತಾನು ಮಾಡಿ ಇಡಬೇಕು.

ಮಾಂಬಲದ ಉಪಯೋಗ

[ಬದಲಾಯಿಸಿ]

ಮಾವಿನ ಹಣ್ಣು ಇಲ್ಲದ ಸಮಯದಲ್ಲಿ ಮಾಂಬಲದ ಗೊಜ್ಜು, ಗಸಿ ಮಾಡುವರು. ಇದು ಮಾವಿನ ಹಣ್ಣಿನ ಸಾರಿನ ತರಾನೇ ರುಚಿ ಇರಿತ್ತದೆ. ಹಾಗೆ ಮಾವಿನ ಹಣ್ಣು ಇಲ್ಲದ ಟೈಮಲ್ಲಿ ಮಾವಿನ ಶರಬತ್ ಮಾಡಲು ಮಾಂಬಲವನ್ನು ನೀರಲ್ಲಿ ನೆನೆಸಿ ಅದಕ್ಕೆ ನೀರು, ಸಕ್ಕರೆ ಹಾಕಿದರೆ ಶರಬತ್ತ್ ಆಗ್ತದೆ.

ಮಾವಿನ ಹಣ್ಣಿನ ವಿಧಗಳು

[ಬದಲಾಯಿಸಿ]

ತೋತಾಪುರಿ, ಮಲ್ಲಿಕಾ, ನೀಲಂ, ಮಲಗೋಬಾ, ರಸಪೂರಿ, ಮುಂಡಪ್ಪ, ರತ್ನಗಿರಿ, ಬಾದಾಮ್, ಇತ್ಯಾದಿ ಬಗೆಯ ಮಾವಿನ ಹಣ್ಣುಗಳು ತಿನ್ನಲು ಬಾರೀ ರುಚಿ ಕೊಡುತ್ತದೆ.

ಮಾವಿನ ಉಪಯೋಗಗಳು

[ಬದಲಾಯಿಸಿ]
  1. ಮಾವು ಕಾಯಿ ಇರುವಾಗ, ಉಪ್ಪಿನಕಾಯಿ, ಮುಡಿ ಉಪ್ಪಿನಕಾಯಿ, ಇದೆಲ್ಲ ಬಾರೀ ರುಚಿ.
  2. ಮಾವಿನ ಚಟ್ನಿ, ಗೊಜ್ಜು, ಚಿತ್ರಾನ್ನ, ಸಾರು, ಬಾರೀ ರುಚಿ.
  3. ಇದರ ಪಾನಕ, ಐಸ್ಕ್ರೀಂಮ್, ತುಂಬಾ ರುಚಿ ಕೊಡುತ್ತದೆ.
  4. ಸಣ್ಣ ಸಣ್ಣ ಮಾವಿನ ಹಣ್ಣಿನ ಕೊದ್ದೆಲ್ ಮಾಡುತ್ತಾರೆ.

[]

ಮಾವಿನ ಮರ ಮತ್ತು ಎಲೆಯ ಉಪಯೋಗ

[ಬದಲಾಯಿಸಿ]

ಮಾವಿನ ಮರಗಳು ತುಳುನಾಡಿನಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ಮದುವೆ, ಮತ್ತೆ ಎಲ್ಲಾ ಶುಭ ಕಾರ್ಯಗಳಿಗೆ ತೋರಣ ಕಟ್ಟಲು ಮಾವಿನ ಎಲೆಯನ್ನು ಉಪಯೋಗಿಸುತ್ತಾರೆ. ಮಾವಿನ ಎಲೆಯಲ್ಲಿ ಹಲ್ಲು ಉಜ್ಜುತ್ತಾರೆ. ತುಳುನಾಡಿನಲ್ಲಿ ಶವ ಸಂಸ್ಕಾರಕ್ಕೆ ಮಾವಿನ ಮರದ ಗೆಲ್ಲು ಅಗತ್ಯ ವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Archive copy". Archived from the original on 2016-06-28. Retrieved 2016-06-30. {{cite web}}: Unknown parameter |dead-url= ignored (help)CS1 maint: archived copy as title (link)