ಮಾವಿನಗುಂಡಿ ಜಲಪಾತ
ಮಾವಿನಗುಂಡಿ ಜಲಪಾತವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿರುವ ಒಂದು ಜಲಪಾತವಾಗಿದೆ.[೧] ಇದು ಪ್ರಸಿದ್ಧ ಜೋಗ ಜಲಪಾತದಿಂದ ಸುಮಾರು ೪ ಕಿ.ಮೀ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಜಲಪಾತವು ಸಿದ್ದಾಪುರ ತಾಲ್ಲೂಕಿನ ಗಡಿಭಾಗವಾಗಿದೆ. ಗಡಚಿಕ್ಕುವ ಸದ್ದಿನೊಂದಿಗೆ ಈ ಜಲಪಾತ ಧುಮುಕುವ ಕಾರಣ ಸ್ಥಳೀಯರು ಇದನ್ನು ಕೆಪ್ಪಜೋಗ ಎಂದೂ ಸಹ ಕರೆಯುತ್ತಾರೆ.
ಮಾವಿನಗುಂಡಿ - ಸಿದ್ದಾಪುರ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಜಲಪಾತವು ಸುಮಾರು ೩೦ ಅಡಿ ಎತ್ತರದಿಂದ ರಭಸವಾಗಿ ಧುಮುಕುತ್ತದೆ. ಗುಡ್ಡದ ಮೇಲಿನಿಂದ ಹರಿದು ಬರುವ ಮಾವಿನಗುಂಡಿ ನದಿಯು ಈ ಸ್ಥಳದಲ್ಲಿ ನೊರೆ ನೊರೆಯಾಗಿ ಬೀಳುತ್ತದೆ.[೨] ಜೂನ್‌ನಿಂದ ನವೆಂಬರ್ ವರೆಗಿನ ಮಳೆಗಾಲದ ಸಮಯದಲ್ಲಿ ಜಲಪಾತಕ್ಕೆ ಹೆಚ್ಚು ನೀರು ಹರಿದುಬಂದು ವಿಜೃಂಭಿಸುತ್ತದೆ. ಈ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.[೩]
ಪ್ರವಾಸಿಗರಿಗೆ ಮಾರ್ಗದರ್ಶನ
[ಬದಲಾಯಿಸಿ]ಇದರ ಹತ್ತಿರವಿರುವ, ಹೆಚ್ಚು ಪ್ರಸಿದ್ಧವಾದ ಜೋಗ ಜಲಪಾತವನ್ನು ನೋಡಲು ಬರುವ ಪ್ರವಾಸಿಗರು ಈ ಜಲಪಾತವನ್ನೂ ನೋಡಬಹುದಾಗಿದೆ. ಜೋಗದಿಂದ ಹೊನ್ನಾವರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ೪ ಕಿ.ಮೀ ಕ್ರಮಿಸಿದರೆ ಮಾವಿನಗುಂಡಿ ಸರ್ಕಲ್ ಬರುತ್ತದೆ. ಇಲ್ಲಿಂದ ಸಿದ್ದಾಪುರ ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ಅರ್ಧ ಕಿ.ಮೀ ದೂರದಲ್ಲಿ ಎಡಭಾಗದಲ್ಲಿ ಈ ಜಲಪಾತವಿದ್ದು, ಪ್ರವಾಸಿಗರಿಗೆ ಕೈಗೆಟಕುವಂತಿದೆ.
ಸಿರ್ಸಿ ಮೂಲಕ ಬರುವವರು ಶಿರಸಿಯಿಂದ ೩೦ ಕಿ.ಮೀ ದೂರ ಸಿದ್ದಾಪುರ, ಸಿದ್ದಾಪುರದಿಂದ ೨೮ ಕಿ.ಮೀ ದೂರದಲ್ಲಿ ಮಾವಿನಗುಂಡಿ ಜಲಪಾತ ಸಿಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "12 mini hydel power projects proposed in Uttara Kannada". The Hindu, Newspaper. 28 April 2011. Retrieved 22 August 2015.
- ↑ "Taking the Road back to glory". Deccan Herald. 16 November 2014. Archived from the original on 23 ನವೆಂಬರ್ 2015. Retrieved 22 August 2015.
- ↑ "When Jog Falls beckon". Deccan Herald. 15 October 2013.