ವಿಷಯಕ್ಕೆ ಹೋಗು

ಮಾಲ್ಪುವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಲ್ಪುವಾ ಡಿಸರ್ಟ್ ಅಥವಾ ಲಘು ಆಹಾರವಾಗಿ ಬಡಿಸಲಾದ ಒಂದು ಪ್ಯಾನ್‍ಕೇಕ್. ಇದು ಭಾರತೀಯ ಉಪಖಂಡದಿಂದ ಹುಟ್ಟಿಕೊಂಡಿದೆ, ಮತ್ತು ಭಾರತ, ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲಿ ಜನಪ್ರಿಯವಾಗಿದೆ. ಇದು ಒಡಿಶಾದಲ್ಲಿ ಬಹಳ ಜನಪ್ರಿಯವಾದ ಖಾದ್ಯವಾಗಿದೆ ಮತ್ತು ಇದನ್ನು ಪುರಿಜಗನ್ನಾಥನಿಗೆ ಅವನ ಸಕಲ ಧೂಪದಲ್ಲಿ (ದೇವರಿಗೆ ಅರ್ಪಿಸಲಾದ ಬೆಳಿಗ್ಗೆಯ ಆಹಾರ) ಕೂಡ ಬಡಿಸಲಾಗುತ್ತದೆ.[೧] ಫೇಣಿ, ರಬಿಡಿ, ಖೀರಾ ಸಾರಾ ಹಾಗೂ ಇತರ ಕೆನೆ ಅಥವಾ ಛೇನಾ ಆಧಾರಿತ ಖಾದ್ಯಗಳ ಹೊರತಾಗಿ, ಮಾಲ್ಪುವಾ ಒಡಿಶಾದ ಪುರಿಯ ಬೀದಿಗಳಲ್ಲಿನ ಅತ್ಯಂತ ಜನಪ್ರಿಯ ಖರೀದಿಗಳಲ್ಲಿ ಒಂದಾಗಿದೆ. ಮಾಲ್ಪುವಾಗಳನ್ನು ಒಡಿಯಾ ಮನೆಗಳಲ್ಲಿ ರಾಜಾ ಸಂಕ್ರಾಂತಿಯ ಅವಧಿಯಲ್ಲಿಯೂ ತಯಾರಿಸಲಾಗುತ್ತದೆ.

ಕೆಲವು ಪ್ರದೇಶಗಳಲ್ಲಿ ಮಾಲ್ಪುವಾದ ಹಿಟ್ಟನ್ನು ಪಕ್ವವಾದ ಬಾಳೆಹಣ್ಣುಗಳು ಅಥವಾ ಕೊಬ್ಬರಿಗೆ, ಹಿಟ್ಟು, ಮತ್ತು ನೀರು ಅಥವಾ ಹಾಲನ್ನು ಸೇರಿಸಿ ತಯಾರಿಸಲಾಗುತ್ತದೆ. ಮಿಶ್ರಣಕ್ಕೆ ಕೆಲವೊಮ್ಮೆ ಏಲಕ್ಕಿಯಿಂದ ಮೃದುವಾಗಿ ರುಚಿಗೊಳಿಸಲಾಗುತ್ತದೆ. ಇದನ್ನು ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಬಡಿಸಲಾಗುತ್ತದೆ. ಒರಿಸ್ಸಾದಲ್ಲಿ, ಮಾಲ್ಪುವಾಗಳನ್ನು ಎಣ್ಣೆಯಲ್ಲಿ ಕರಿದ ನಂತರ ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. ಈ ಖಾದ್ಯದ ಬಿಹಾರಿ ರೂಪದಲ್ಲಿ ಕರಿಯುವ ಮುನ್ನ ಹಿಟ್ಟಿಗೆ ಸಕ್ಕರೆಯನ್ನು ಸೇರಿಸಲಾಗುತ್ತದೆ. ಮಾಲ್ಪುವಾದ ಇತರ ರೂಪಗಳು ಬಾಳೆಹಣ್ಣಿನ ಬದಲಾಗಿ ಅನಾನಸ್ ಅಥವಾ ಮಾವಿನಹಣ್ಣನ್ನು ಬಳಸುತ್ತವೆ. ಬಂಗಾಳಿ, ಮೈಥಿಲಿ ಮತ್ತು ಒಡಿಯಾ ಮಾಲ್ಪುವಾವನ್ನು ಸಾಂಪ್ರದಾಯಿಕವಾಗಿ ಕೇವಲ ಗಟ್ಟಿಬರಿಸಿದ ಹಾಲು ಮತ್ತು ಸ್ವಲ್ಪ ಹಿಟ್ಟಿನಿಂದ (ಕೆಲವೊಮ್ಮೆ ಗೋಧಿ ಹಿಟ್ಟಿನ ಬದಲಾಗಿ ಅಕ್ಕಿ ಹಿಟ್ಟು) ತಯಾರಿಸಲಾಗುತ್ತದೆ.

ಉತ್ತರ ಭಾರತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನಗಳಲ್ಲಿ, ಮಾಲ್ಪುವಾ ಹಣ್ಣನ್ನು ಹೊಂದಿರುವುದಿಲ್ಲ. ಹಲವಾರು ರೂಪಗಳಿವೆ, ಮತ್ತು ಮುಂದೆ ಹೇಳಲಾದ ಪದಾರ್ಥಗಳಲ್ಲಿ ಕೆಲವು ಅಥವಾ ಎಲ್ಲವನ್ನು ಬಳಸುತ್ತವೆ: ಮೈದಾ, ರವೆ, ಹಾಲು, ಮತ್ತು ಮೊಸರು. ಹಿಟ್ಟನ್ನು ಸ್ವಲ್ಪ ಗಂಟೆಯವರೆಗೆ ಹಾಗೇ ಬಿಡಲಾಗುತ್ತದೆ. ನಂತರ ಚಮಚದಿಂದ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಬಿಸಿ ಎಣ್ಣೆಯಿರುವ ಕಢಾಯಿಯಲ್ಲಿ ಹಾಕಿ ಕರಿಯಲಾಗುತ್ತದೆ. ಇದರಿಂದ ತೂತುಗಳಿರುವ ಪ್ಯಾನ್‍ಕೇಕ್‍ನ ರಚನೆಯಾಗುತ್ತದೆ. ಇದು ಅಂಚುಗಳ ಸುತ್ತ ಗರಿಗರಿಯಾಗಿರಬೇಕು. ನಂತರ ಇವನ್ನು ಗಟ್ಟಿಯಾದ ಸಕ್ಕರೆ ಪಾಕದಲ್ಲಿ ಮುಳುಗಿಸಲಾಗುತ್ತದೆ. ಹಿಂದೂ ಧಾರ್ಮಿಕ ಹಬ್ಬವಾದ ಹೋಳಿಯಲ್ಲಿ ತಯಾರಿಸಲು ಮಾಲ್ಪುವಾ ಒಂದು ಜನಪ್ರಿಯ ಸಿಹಿಖಾದ್ಯವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "CHHAPAN BHOG, 56 sacred items of Jagannath Temple, Puri". Archived from the original on 2016-03-09. Retrieved 2018-05-08.