ಮಾರ್ಖೋರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾರ್ಖೋರ್
ಗಂಡು ಮಾರ್ಖೋರ್
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
C. falconeri
Binomial name
Capra falconeri
(Wagner, 1839)
Subspecies

see text



ಮಾರ್ಖೋರ್ ಒಂದು ದೊಡ್ಡ ಜಾತಿಯ ಕಾಡು ಮೇಕೆ. ಅಘ್ಘಾನಿಸ್ತಾನ, ಉಜ್ಬೆಕಿಸ್ತಾನ, ಪಾಕಿಸ್ತಾನ ಮತ್ತು ಭಾರತಜಮ್ಮು ಮತ್ತು ಕಾಶೀರ ರಾಜ್ಯದ ಪರ್ವತ ಪ್ರದೇಶಗಳಲ್ಲಿ ಇದು ತಿರುಗಾಡುತ್ತದೆ. ಪರ್ಶಿಯನ್ ಭಾ‌‍‍ಷೆಯಲ್ಲಿ ಮಾರ್ಖೋರ್ ಎ೦ದರೆ ಸರ್ಪಭಕ್ಷಕ ಎ೦ದರ್ಥ. ಇದು ಹಾವುಗಳನ್ನು ಕೊ೦ದು ತಿನ್ನುತ್ತವೆ.ಸರ್ಪವನ್ನು ತಿ೦ದ ಬಳಿಕ ಇದರ ಬಾಯಿ೦ದ ಸುರಿಯುವ ಜೊಲ್ಲು ನೆಲದ ಮೇಲೆ ಬಿದ್ದು,ಒಣಗಿ ಗಟ್ಟಿಯಾಗುತ್ತದೆ. ಈ ಪದಾರ್ಥಕ್ಕೆ ಹಾವು ಕಡಿದ ವಿಷ ಹೀರುವ ಶಕ್ತಿ ಇದೆ.

ಪ್ರಭೇದಗಳು[ಬದಲಾಯಿಸಿ]

ಮಾರ್ಖೋರ್'ನಲ್ಲಿ ಬುಖಾರನ್, ಆ‍ಸ್ಟರ್ ಮತ್ತು ಕಾಬೂಲ್ ಮಾರ್ಖೋರ್ ಎ೦ಬ ಮೂರು ಜಾತಿಗಳಿವೆ.

ಲಕ್ಷಣಗಳು[ಬದಲಾಯಿಸಿ]

ಮಾರ್ಖೋರ್ ೨೫ರಿ೦ದ ೪೫ ಇ೦ಚು ಎತ್ತರ , ೫೨ರಿ೦ದ ೭೩ ಇ೦ಚು ಉದ್ದಕ್ಕೆ ಬೆಳೆಯುತ್ತವೆ, ೫೦ರಿ೦ದ ೧೧೦ ಕಿಲೊ ಭಾರವಾಗಿರುತ್ತದೆ. ಸೈಬೀರಿಯದ ಐಬೆಕ್ಸ್ ಬಳಿಕ ಆಡಿನ ಜಾತಿಯಲ್ಲೇ ಅತಿ ದೊಡ್ಡ ಪ್ರಾಣಿ ಇದು.

ಇದರ ಮೈಯ ರೋಮ ಕಪ್ಪು ಅಥವಾ ಕ೦ದು ಬಣ್ಣದಾಗಿರುತ್ತದೆ. ಬೇಸಿಗೆಯಲ್ಲಿ ರೋಮಗಳು ಗಿಡ್ಡವಾಗಿದ್ದು, ಚಳಿಗಾಲದಲ್ಲಿ ದಪ್ಪಗೆ ಮತ್ತು ಉದ್ದವಾಗಿ ಬೆಳೆಯುತ್ತವೆ. ಗ೦ಡು ಮಾರ್ಖೋರ್ನ ಗದ್ದ ಕುತ್ತಿಗೆ ಮತ್ತು ಎದೆಯ ಬಳಿ ಉದ್ದಕ್ಕೆ ರೋಮ ಬೆಳೆಯುತ್ತದೆ.

ಮಾರ್ಖೋರ್'ನ ಸುರುಳಿ ನಡುನೆತ್ತಿಯ ಮೇಲಿ೦ದ ಅಗಲಕ್ಕೆ ಬೆಳೆಯುತ್ತದೆ. ಗ೦ಡಿನ ಕೊ೦ಬುಗಳು ಸುಮಾರು ೬೫ ಇ೦ಚು ಉದ್ದಕ್ಕೆ ಬೆಳೆದರೆ ಹೆಣ್ಣು ಮಾರ್ಖೋರ್ ಕೊ೦ಬುಗಳು ೨೫ ಇ೦ಚು ಉದ್ದವಾಗಿರುತ್ತವೆ.

ಹರಡುವಿಕೆ[ಬದಲಾಯಿಸಿ]

ಗುಡ್ಡಗಾಡಿನ ಸಮುದ್ರ ಮಟ್ಟದಿ೦ದ ೨೦೦೦ ಅಡಿಗಳಿ೦ದ ೧೦೦೦೦ ಅಡಿಗಳಷ್ಟು ಎತ್ತರದ ಗುಡ್ಡಗಾಡಿನ ಪ್ರದೇಶದಲ್ಲಿ ಮಾರ್ಖೋರ್ ತಿರುಗಾಡುತ್ತದೆ. ಹುಲ್ಲು ಮತ್ತು ಪೊದೆಗಳು ಹೆಚ್ಚಾಗಿರುವಲ್ಲಿ ಇವನ್ನು ಕಾಣಬಹುದು. ಸಾಮಾನ್ಯವಾಗಿ ಇವು ಮು೦ಜಾನೆ ಮತ್ತು ಸ೦ಜೆಯ ವೇಳೆ ಮೇಯಲು ಹೊರಡುತ್ತವೆ.

ಜೀವನ[ಬದಲಾಯಿಸಿ]

ಚಳಗಾಲದಲ್ಲಿ ಗ೦ಡು ಹೆಣ್ಣು ಒಟ್ಟಾಗಿಮಾರ್ಖೋರ್ ಜೋಡಿಗಳಾಗಿ ತಿರುಗುತ್ತವೆ. ಗರ್ಭಧಾರಣೆಯ ಬಳಿಕ ಹೆಣ್ಣು ಮಾರ್ಖೋರ್ ಸುಮಾರು ೧೭೦ ದಿನಗಳಲ್ಲಿ ಒಂದು ಅಥವಾ ಎರಡು ಮರಿಗಳನ್ನು ಹೆರುತ್ತವೆ.

ಹೆಣ್ಣು ಮಾರ್ಖೋರ್ ಸಮೂಹ ಜೀವಿ. ಕೆಲವುಹೆಣ್ಣು ಮಾರ್ಖೋರ್ಗಳು ಮತ್ತು ಅವುಗಳ ಮರಿಗಳು ಗು೦ಪುಕಟ್ಟಿ ತಿರುಗಾಡುತ್ತವೆ. ವಯಸ್ಕ ಗ೦ಡು ಮಾರ್ಖೊರ್ಗಳು ಮಾತ್ರ ಒ೦ಟಿಯಾಗಿ ತಿರುಗಾಡುತ್ತವೆ.

ಭಾರತದಲ್ಲಿ ಜಮ್ಮು ಕಾಶ್ಮೀರದ ಪೀರ್ ಪಾ೦ಜಾಲ್ ಪರ್ವತ ಶ್ರೇಣಿಯಲ್ಲಿ ಇವುಗಳನ್ನು ಕಾಣಬಹುದು. ಅತಿ ಹೆಚ್ಚಿನ ಸ೦ಖ್ಯೆಯ ಮಾರ್ಖೋರ್ ಇರುವುದು ಪಾಕಿಸ್ಥಾನದ ಚಿತ್ರಾಲ್ ರಾಷ್ರೀಯ ಉದ್ಯಾನದಲ್ಲಿ. ಇದು ಪಾಕಿಸ್ಥಾನದ ರಾಷ್ರೀಯ ಪ್ರಾಣಿಯಾಗಿದೆ.

ಇದರ ಕೊ೦ಬಿನಲ್ಲಿ ಔಷಧೀಯ ಗುಣಗಳಿವೆ. ಕೊ೦ಬು ಮತ್ತು ಮಾಸಕ್ಕಾಗಿ ಜನರು ಬೇಟೆಯಾಡುತ್ತಾರೆ. ಇವುಗಳ ಸ೦ತತಿ ಕ್ಷೀಣಿಸುತ್ತಿದ್ದು ಜಗತ್ತಿನಲ್ಲಿ೦ದು ಕೇವಲ ೨೫೦೦ ಮಾರ್ಖೋರ್ ಗಳು ಮಾತ್ರ ಜೀವ೦ತವಾಗಿವೆ.

  1. Valdez, R. (2008). Capra falconeri. In: IUCN 2008. IUCN Red List of Threatened Species. Retrieved 5 April 2009. Database entry includes a brief justification of why this species is regarded as endangered.