ಮಾರಾಟ ವ್ಯವಸ್ಥೆ

ವಿಕಿಪೀಡಿಯ ಇಂದ
Jump to navigation Jump to search
ಸಂಬಾರ ಪದಾರ್ಥ

"ಮಾರ್ಕೆಟ್" ಎಂಬ ಶಬ್ದ "ಮಾರ್ಕಟಸ್" ಎಂಬ ಲ್ಯಾಟಿನ್ ಶಬ್ದದಿಂದ ಬಂದಿದೆ. ಅಂದರೆ "ವ್ಯಾಪಾರ ಮಾಡು" ಎಂದು. ಈ "ಮಾರ್ಕೆಟ್" ಎಂಬ ಶಬ್ದವನ್ನು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆಯಾಗಿ ಬಳಸಲಾಗುತ್ತದೆ. ಸಾಮಾನ್ಯ ಅರ್ಥದಲ್ಲಿ "ಮಾರ್ಕೆಟ್" ಅಥವಾ ಮಾರುಕಟ್ಟೆಯೆಂದರೆ ಮಾರುವವರು ಮತ್ತು ಕೊಳ್ಳವವರು ಪರಸ್ಪರ ಭೇಟಿಯಾಗಿ,ಮಾರುವುದು ಮತ್ತು ಕೊಳ್ಳವ ಸ್ಥಳ.

 • ಪ್ರೊ.ಫಿಲಿಪ್ ಕೋಟ್ಲರ್:"ಒಂದು ಸಮರ್ಥ ವಿನಿಮಯಕ್ಕೆ ಒಂದು ಪ್ರದೇಶ ಅಥವಾ ವಾತಾವರಣವೇ ಮಾರುಕಟ್ಟೆ."
 • ಕ್ಲಾರ್ಕ್ ಮತ್ತು ಕ್ಲಾರ್ಕ್:"ಮಾರುಕಟ್ಟೆ ಒಂದು ನಿರ್ದಿಷ್ಟ ಉತ್ಪನ್ನದ ಕಾರ್ಯಾಚರಣೆಗೆ ಹಕ್ಕನ್ನು ವಿನಿಮಯ ಮಾಡಲು ಮತ್ತು ಯಾವುದರಿಂದ ಯಾವುದರ ಕಡೆಗೆ ವಾಸ್ತವ ಸರಕುಗಳು ಸಾಗುವುದಕ್ಕೆ ದಾರಿ ಮಾಡುವುದೋ ಅಂಥ ಪ್ರದೇಶ."

ಮಾರುಕಟ್ಟೆಗಳ ವರ್ಗೀಕರಣ[ಬದಲಾಯಿಸಿ]

ವಿವಿಧ ದೃಷ್ಟಿಕೋನಗಳ ಆಧಾರದ ಮೇಲೆ ಮಾರುಕಟ್ಟೆಯನ್ನು ಹಲವು ರೀತಿಯಲ್ಲಿ ವರ್ಗೀಕರಿಸಲಾಗಿದೆ. ಅವುಗಳಲ್ಲಿ ಕೆಲವನ್ನು ಕೆಳಗೆ ಕೊಟ್ಟಿದೆ.

ಭೌಗೋಳಿಕ ಪ್ರದೇಶದ ಅನುಸಾರ[ಬದಲಾಯಿಸಿ]

ಭೌಗೋಳಿಕ ಪ್ರದೇಶದ ಆಧಾರದ ಮೇಲೆ ಮಾರುಕಟ್ಟೆಗಳನ್ನು ನಾಲ್ಕು ಬಗೆಯಾಗಿ ವರ್ಗೀಕರಿಸಬಹುದು.ಅವು

 • ಸ್ಥಳೀಯ ಮಾರುಕಟ್ಟೆ
 • ಪ್ರಾದೇಶಿಕ ಮಾರುಕಟ್ಟೆ
 • ರಾಷ್ಟ್ರೀಯ ಮಾರುಕಟ್ಟೆ
 • ವಿಶ್ವ ಅಥವಾ ರಾಷ್ಟ್ರೀಯ ಮಾರುಕಟ್ಟೆ

ಮಾರಾಟಗಾರರ ಸ್ಥಾನದ ಆಧಾರದ ಮೇಲೆ[ಬದಲಾಯಿಸಿ]

ಮಾರುಕಟ್ಟೆಗಳಲ್ಲಿ ಮಾರಾಟಗಾರರ ಸ್ಥಾನದ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು

 • ಪ್ರಾಥಮಿಕ ಮಾರುಕಟ್ಟೆ
 • ದ್ವಿತೀಯ ಮಾರುಕಟ್ಟೆ
 • ಅಂತಿಮ ಮಾರುಕಟ್ಟೆ

ಅವಧಿಯ ಆಧಾರದ ಮೇಲೆ[ಬದಲಾಯಿಸಿ]

ಅವಧಿಯ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು

 • ಅತ್ಯಲ್ಪ ಅವಧಿಯ ಮಾರುಕಟ್ಟೆ
 • ಅಲ್ಪಾವಧಿಯ ಮಾರುಕಟ್ಟೆ
 • ದೀರ್ಘಾವಧಿಯ ಮಾರುಕಟ್ಟೆ

ವ್ಯವಹಾರದ ಗಾತ್ರ ಅಥವಾ ಪ್ರಮಾಣದ ಮೇಲೆ[ಬದಲಾಯಿಸಿ]

ವಹಿವಾಟಿನ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು

 • ಸಗಟು ಮಾರುಕಟ್ಟೆ
 • ಚಿಲ್ಲರೆ ಮಾರುಕಟ್ಟೆ

ವಹಿವಾಟಿನ ಲಕ್ಷಣದ ಆಧಾರದ ಮೇಲೆ[ಬದಲಾಯಿಸಿ]

ವಹಿವಾಟಿನ ಆಧಾರದ ಮೇಲೆ, ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು

 • ಸ್ಥಾನಿಕ ಮಾರುಕಟ್ಟೆ
 • ಭವಿಷ್ಯದ ಮಾರುಕಟ್ಟೆ

ವಹಿವಾಟು ನಡೆಸಿದ ಸರಕಿನ ಆಧಾರದ ಮೇಲೆ[ಬದಲಾಯಿಸಿ]

ವಹಿವಾಟು ನಡೆಸಿದ ಸರಕಿನ ಆಧಾರದ ಮೇಲೆ ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು

ನಿಯಂತ್ರಣದ ಆಧಾರದ ಮೇಲೆ[ಬದಲಾಯಿಸಿ]

ನಿಯಂತ್ರಣದ ಆಧಾರದ ಮೇಲೆ ಮಾರುಕಟ್ಟೆಗಳನ್ನು ಎರಡು ವಿಧಗಳಾಗಿ ವರ್ಗೀಕರಿಸಬಹುದು. ಅವು

ಆರ್ಥಿಕತೆಯ ಆಧಾರದ ಮೇಲೆ[ಬದಲಾಯಿಸಿ]

ಆರ್ಥಿಕತೆಯ ಆಧಾರದ ಮೇಲೆ ಮಾರುಕಟ್ಟೆಗಳನ್ನು ಮೂರು ವಿಧಗಳಾಗಿ ವರ್ಗೀಕರಿಸಲಾಗಿದೆ. ಅವು

 • ಸಮರ್ಪಕ ಮಾರುಕಟ್ಟೆ
 • ಅಸಮರ್ಪಕ ಮಾರುಕಟ್ಟೆ
 • ಏಕಸ್ವಾಮ್ಯ ಮಾರುಕಟ್ಟೆ

ಉಲ್ಲೇಖ[ಬದಲಾಯಿಸಿ]