ಮಾಯಾರಾವ್
ಡಾ. ಮಾಯಾರಾವ್
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಮಾಯಾ ರಾವ್ ೨ ಮೇ ೧೯೨೮ ರಿಂದ ಸೆಪ್ಟೆಂಬರ್ ೨೦೧೪ ವರೆಗೆ ಕಥಕ್ ನೃತ್ಯದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ, ನೃತ್ಯ ನಿರ್ದೆಶಕ ಮತ್ತು ಶಿಕ್ಷಕರಾಗಿದ್ದರು. ಕಥಕ್ ನೃತ್ಯವನ್ನು ಬೆಂಗಳೂರಿನ ತಂದ ಖ್ಯಾತಿ ಇವರಿಗಿದೆ. ೧೯೬೧ ರಲ್ಲಿ ನೃತ್ಯ ಸಂಯೋಜನೆ ಕೋರ್ಸ್ ಕಲಿಯಲೆಂದು ರಷ್ಯಾಕ್ಕೆ ಹೋದ ಮೊದಲ ಮಹಿಳೆ ಮಾಯಾರಾವ್. ಮಾಸ್ಕೋದ ರಂಗ ಕಲಾ ತರಬೇತಿ ಸಂಸ್ಥೆಯಿಂದ ಸ್ನಾತ್ತಕೋತ್ತರ ಪದವಿ ಪಡೆದ ಎಕೈಕ ಭಾರತೀಯ ಮಹಿಳೆ ಇವರಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಕೋರಿಯೋಗ್ರಾಫಿ ನಾಟ್ಯ ಮತ್ತು ಡಾನ್ಸ್ ಕಂಪನಿಯನ್ನು ಇವರ ಮಗಳು ಮಧು ನಟರಾಜ್ ಸ್ಥಾಪಿಸಿದರು.
ಜೀವನ
[ಬದಲಾಯಿಸಿ]ಡಾ.ಮಾಯಾರಾವ್ ೧೯೨೮ ಮೇ ೨ ರಂದು ಬೆಂಗಳೂರಿನ ಮಲ್ಲೆಶ್ವರಂನಲ್ಲಿ ಎಸ್.ಸಂಜೀವರಾವ್ ಮತ್ತು ಲಲಿತಾಬಾಯಿ ದಂಪತಿಗಳಿಗೆ ಜನಿಸಿದರು. ಇವರಿಗೆ ೩ ಸಹೋದರ ಮತ್ತು ಸಹೋದರಿಯರಿದ್ದರು. ಕೊಂಕಣಿ ಸರಸ್ವತ್ ಬ್ರಾಹ್ಮಣ ಕುಟುಂಬದವರಾಗಿದ್ದರು. ಇವರ ತಂದೆ ಸಂಜೀವ್ ರಾವ್ ಪ್ರಸಿದ್ಧ ವಾಸ್ತು ಶಿಲ್ಪಿಯಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ರಾಮಾ ರಾವ್ ಅವರಿಂದ ಹಿಂದೂಸ್ಥಾನಿ ಸಂಗೀತ-ಗಾಯನ ಮತ್ತು ವಾದ್ಯ ವೃಂದದ ದಿಲ್ರುಬಾವನ್ನು ಕಲಿತರು. ಹುಡುಗಿಯರು ನೃತ್ಯವನ್ನು ಕಲಿಯದವರ ಸಂಪ್ರದಾಯವಾದಿ ಕುಟುಂಬದಿಂದ ಬಂದವರು. ೧೨ನೇ ವಯಸ್ಸಿನಲ್ಲಿಯೇ ಅವರು ಮತ್ತು ಅವರ ತಂದೆ ಬೆಂಗಳೂರಿನ ಬಿಆರ್ವಿ ಟಾಕೀಸ್ ಆಡಿಟೋರಿಯಮ್‌ನಲ್ಲಿ ಉದಯ್‌ಶಂಕರ್ ಅವರ ತಂಡವನ್ನು ವೀಕ್ಷಿಸಿ ತಂದೆ ತನ್ನ ಎಲ್ಲಾ ಹೆಣ್ಣು ಮಕ್ಕಳನ್ನು ನೃತ್ಯ ಕಲಿಯಬೇಕೆಂದು ಬಯಸಿದರು. ಅವರ ಗುರು ಪಂಡಿತ್ ರಾಮಾರಾವ್ ನಾಯ್ಕ್ ಅವರು ಉಸ್ತಾದ್ ಫಿಯಾಜ್ ಖಾನ್ ಅವರ ಶಿಷ್ಯರಾಗಿದ್ದರು, ಮತ್ತು ಆಗ್ರಾ ಘರಾನದ ಗಾಯಕರಾಗಿದ್ದರು. ಬೆಂಗಳೂರಿನ ಬೆನ್ಸನ್ ನಗರದಲ್ಲಿ ನೃತ್ಯ ಮತ್ತು ಸಂಗೀತ ಶೈಲಿಗಳನ್ನು ಕಲಿಸಿದ ಅವರು ಸಂಗೀತ ಮತ್ತು ನೃತ್ಯ ಶಾಲೆಗಳನ್ನು ನಡೆಸಿದರು. ಇಲ್ಲಿ ಜೈಪುರ್ ಘರಾನಾದ ಸೋಹಾನ್ ಲಾಲ್ ಕಥಕ್ ವಿಭಾಗದ ಮುಖ್ಯಸ್ಥರಾಗಿದ್ದರು. ನಂತರ ದಿನಗಳಲ್ಲಿ ಆರು ಮತ್ತು ನಾಲ್ಕು ವಯಸ್ಸಿನ ಉಮ ಮತ್ತು ಚಿತ್ರ ಮಾಯಾರಾವ್ ಸಹೋದರಿಯರು ಗುರು ಸೋಹಾನ್ ಲಾಲ್ ಅಡಿಯಲ್ಲಿ ಕಥಕ್ ಕಲಿಯಲು ಸೇರಿದರು. ಆ ಸಮಯದಲ್ಲಿ ಮಾಯಾ ಅವರಿಗೆ ಹದಿನಾಲ್ಕರ ವಯಸ್ಸಾಗಿತ್ತು. ಆ ವಯಸ್ಸಿನ ಹುಡುಗಿಯರು ನೃತ್ಯ ಕಲಿಯುವ ಕಲ್ಪನೆಯೇ ಇಲ್ಲದಿರುವ ವಾತಾವರಣದಲ್ಲಿ, ಸೋಹಾನ್ ಲಾಲ್ ಅವರ ಒತ್ತಾಯಕ್ಕೆ ಮಣಿದು ಸಂಜೀವ್ ರಾವ್ ದಂಪತಿಗಳು ಮಾಯಾ ಅವರು ತಂಗಿಯರ ಜೊತೆಯಲ್ಲಿ ನೃತ್ಯ ಕಲಿಯಲು ಅನುಮತಿ ನೀಡಿದರು. ನಂತರ ೧೯೪೨ರಲ್ಲಿ ಮಯಾರಾವ್ ಅವರಿಗೆ ಸೋಹಾನ್ ಅವರಿಂದ ಜೈಪುರ್ ಘರಾನಾದ ಕಥಕ್ ಶಿಕ್ಷಣ ಪ್ರಾರಂಭವಾಯಿತು.
ವೃತ್ತಿ
[ಬದಲಾಯಿಸಿ]೧೯೪೪ರಲ್ಲಿ ಕಥಕ್ ಶೈಲಿಯ ಮೊದಲ ನೃತ್ಯ ಪ್ರದರ್ಶನವನ್ನು ಮಾಯಾರಾವ್ ನೀಡಿದರು. ಅದು ಸಾರ್ವಜನಿಕ ಪ್ರದರ್ಶನದಲ್ಲಿ. ಸಾರಸ್ವತ ಸಮಾಜದ ಒಂದು ಸಮಾವೇಶ ಬೆಂಗಳೂರಿನ ಪುಟ್ಟಣ್ಣ ಚೆಚ್ಚಿ ಪುರಭವನದಲ್ಲಿ ೧೯೪೨ ರಿಂದ ೧೯೪೫ರ ತನಕ ಸೋಹಾನ್ ಲಾಲ್ ಅವರ ಮಾರ್ಗದರ್ಶನದಲ್ಲಿ ನೃತ್ಯ ಕಲಿತ ಅವರು ತಮ್ಮ ಸಾಧನೆಯನ್ನು ತಾವೇ ಮುಂದುವರೆಸಿಕೊಂಡು ಬಂದರು. ಈ ಅವಧಿಯಲ್ಲೆ ಕಥಕ್ ನೃತ್ಯ ಶೈಲಿಯಲ್ಲಿ ಕೆಲವು ಕ್ರಿಯಾಶೀಲ ಪ್ರಯತ್ನವನ್ನು ಮಾಯಾರಾವ್ ವೇದಿಕೆಗೆ ತಂದು ನೃತ್ಯಸಕ್ತರ ಗಮನ ಸೆಳೆದರು. ಬೆಂಗಳೂರಿನ ಕಂಟೋನ್ಮೆಂಟಿನಲ್ಲಿದ್ದ ಕಮಲಬಾಯಿ ಶಾಲೆಯಲ್ಲಿ ಪ್ರೆಮರಿ ಶಿಕ್ಷಣ ಮುಗಿಸಿ, ಸೆಂಟ್ರೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಸ್ನಾತ್ತಕೋತ್ತರ ಪದವಿ ಪಡೆದರು. ಇಲ್ಲಿ ಅವರು ನೃತ್ಯ ನಾಟಕಗಳನ್ನು ಮಾಡಲು ಕ್ಲಬ್ ಅನ್ನು ರಚಿಸಿದರು. ಮಹರಾಣಿಯ ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳಿಗೆ ೧೯೪೭ರಲ್ಲಿ ಬ್ಯಾಲೆಟ್ “ಸೀವಾ ಹರಾನ್” ಪ್ರದರ್ಶನ ನೀಡಿದರು.
ಅವರ ತಂದೆ ೧೯೪೬ರಲ್ಲಿ ನಿಧನರಾದರು. ವ್ಯವಹಾರದಲ್ಲಿ ವಂಚನೆಗೊಳಗಾಗಿ ಭಾರೀ ನಷ್ಟವನ್ನು ಅನುಭವಿಸಿದರು. ನಂತರ ಅವರ ಕುಟುಂಬದ ಮನೆಯು ಒಂದು ವರ್ಷದೊಳಗೆ ಹರಾಜು ಹಾಕಲ್ಪಟ್ಟಿತು. ಸಹೋದರ ಮನೋಹರ್ ಮನೆಯೊಂದಕ್ಕೆ ಕರೆದೊಯ್ದರು, ಮತ್ತು ತನ್ನ ಕುಟುಂಬಕ್ಕೆ ಬೆಂಬಲ ನೀಡಲು ೧೭ನೇ ವಯಸ್ಸಿನಲ್ಲಿ ಅವರು ನೃತ್ಯವನ್ನು ಪ್ರಾರಂಭಿಸಿದರು. ೧೯೫೧ ರಲ್ಲಿ ಕಥಕ್ ಕಲಿಯಲು ಜೈಪುರಕ್ಕೆ ತೆರಳಿದರು. ಮಹಾರಾಣಿ ಗಾಯತ್ರಿ ದೇವಿ ಗರ್ಲ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಎರಡು ವರ್ಷಗಳ ಕಾಲ ಇಂಗ್ಲಿಷ್ ಭಾಷೆ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು. ನಂತರ ಅವರು ಶ್ರಿಲಂಕಾಕ್ಕೆ ತೆರಳಿ, ಕ್ಯಾಂಡಿಯನ್ ನೃತ್ಯವನ್ನು ಪ್ರಸಿದ್ಧ ನರ್ತಕಿ ಚಿತ್ರಸೇನಾ ಅವರಿಂದ ಕಲಿತರು. ೧೯೫೫ ರಲ್ಲಿ ಅವರು ಪ್ರತಿಷ್ಠಿತ ಗವರ್ನಮೆಂಟ್ ಆಫ್ ಇಂಡಿಯಾ ವಿದ್ಯಾರ್ಥಿ ವೇತನವನ್ನು ಪಡೆದರು. ನವದೆಹಲಿಯ ಭಾರತೀಯ ಕಲಾ ಕೇಂದ್ರದಲ್ಲಿ ಲಕ್ನೊÃ ಫುರಾನದ ಪ್ರಸಿದ್ಧ ಗುರು ಶಂಭು ಮಹಾರಾಜರ ತರಬೇತಿ ಪಡೆದರು. ೧೯೬೦ರಲ್ಲಿ ರಷ್ಯಾದ ಮಾಸ್ಕೊದಲ್ಲಿರುವ ಸ್ಟೆ ಸೈಟ್ ಇನಿಸ್ಟಿಟ್ಯೂಟ್ ಆಫ್ ಥಿಯೇಟರ್ ಕೊರಿಯೋಗ್ರಫಿ ತರಬೇತಿಗೆ ಆಯ್ಕೆಯಾಗಿ ಶಿಷ್ಯವೇತನ ಪಡೆದರು. ೧೯೬೪ರಲ್ಲಿ ಹಿಂದಿರುಗಿ ಬಂದು ಕಮಾಲಾದೇವಿ ಚಟ್ಟೋಪಾಧ್ಯಾಯ ಅವರ ಸಹಾಯದಿಂದ, ಸಂಗೀತ ಅಕಾಡೆಮಿಯ ವೈಸ್ ಜೇಪರ್ಸನ್ ಅವರು ಭಾರತೀಯ ನಾಟ್ಯ ಸಂಘಟದ ನೇತೃತ್ವದಲ್ಲಿ ದೆಹಲಿಯಲ್ಲಿ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿದರು. ನಂತರ ಎಂ.ಎಸ್ ನಟರಾಜ್ ಅವರನ್ನು ವಿವಾಹವಾದರು. ೧೯೭೧ರಲ್ಲಿ ಜನಿಸಿದ ಒಬ್ಬಳೇ ಮಗಳು ಮಧು ನಟರಾಜ್. ಮಧು ನಟರಾಜ್ ಕಥಕ್ ನೃತ್ಯ ಶೈಲಿ ಮತ್ತು ಆಧುನಿಕ ನೃತ್ಯಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.
೧೯೫೮ರಲ್ಲಿ ಸೋಲೋ ನರ್ತಕಿಯಾಗಿ ಭಾರತ ಮತ್ತು ನಿಲೋನ್ ದೇಶಗಳ ಪ್ರಮುಖ ಕೇಂದ್ರಗಳಲ್ಲಿ ಕಾರ್ಯಕ್ರಮ ನೀಡಿದರು. ನಂತರ ತಮ್ಮ ನಾಟ್ಯ ಸಂಸ್ಥೆಯಲ್ಲಿ ತುಳಸಿರಾಮ್, ಕೃಷ್ಣಲೀಲಾ, ವೆಂಕಟೇಶ್ವರ ವಿಲಾಸಂ, ಬಸವೇಶ್ವರ ವೈಭವ, ಶಾಕುಂತಲ ಪುಲಕೇಶಿ ಮತ್ತು ಹರ್ಷವರ್ಧನರ ಕೆಲವು ಘಟನೆಗಳನ್ನು ಆಧರಿಸಿ ಸಮರ್ ಶಾಂತಿ ಕುವೆಂಪು ಅವರ ರಾಮಾಯಣ ದರ್ಶನಂ, ಮಾಸ್ತಿ ಅವರ ಬಿಲ್ಲು, ಅಮಿರ್ ಖುಸ್ರು, ಊರು ಭಂಗ ಇವೆಲ್ಲಾವನ್ನು ನಿರ್ಮಿಸಿ, ನಿರ್ದೇಶಿದ ರೂಪಕಗಳು. ೧೯೮೭ ರಿಂದ ೧೯೯೦ ವರೆಗೆ ಕರ್ನಾಟಕ ಸಂಗೀತ ನೃತ್ಯ ಸಂಸ್ಥೆಯ ಅಕಾಡೆಮಿ, ರಾಜ್ಯ ಅಕಾಡೆಮಿಯ ಮುಖ್ಯಸ್ಥರಾಗಿ, ಅಧಿಕಾರವಧಿಯಲ್ಲಿ ಸೋಮನಾರ್ಥ, ಪಟ್ಟದಕಲ್ಲು ಮತ್ತು ಹಳೆಬೀಡುಗಳಂತಹ ರಾಜ್ಯದ ಪರಂಪರೆಯ ಸ್ಮಾರಕಗಳಲ್ಲಿ ನ್ಯಾಷನಲ್ ಪರ್ಫಮಿಂಗ್ ಆರ್ಟ್ ಫೆಸ್ಟಿವಲ್‌ಗಳನ್ನು ಪ್ರಾರಂಭಿಸಿದರು.[೧]
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]೧೯೮೯ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಮ್ಯೂಸಿಕ್, ಡ್ಯಾನ್ಸ್ ಮತ್ತು ಡ್ರಾಮಾ ಎಂಬ ಸಂಗೀತ ನಾಟಕ ಅಕಾಡೆಮಿಯಿಂದ ನೀಡಲ್ಪಟ್ಟ ಕ್ರಿಯೇಟಿವ್ ನೃತ್ಯ ಸಂಯೋಜನೆ ಮಾಡಿದರು. ಇದಕ್ಕೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ೧೯೮೫ರಲ್ಲಿ ದೆಹಲಿಯ ಸಾಹಿತ್ಯ ಕಲಾ ಪರಿಷತ್ ಪ್ರಶಸ್ತಿ, ೧೯೮೬ರಲ್ಲಿ ಕರ್ನಾಟಕ ರಾಜ್ಯೇತ್ಸವ ಪ್ರಶಸ್ತಿ, ೧೯೯೬ ದೆಹಲಿಯ ಕೊರಿಯೊ ಫೆಸ್ಟ್ ಅವಾರ್ಡ್ ೧೯೮೯ರಲ್ಲಿ ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ,ಕರ್ನಾಟಕ ಪ್ರತಿಷ್ಟಿತ ನಾಟ್ಯರಾಣಿ ಶಾಂತಲಾ ಪ್ರಶಸ್ತಿ ೧೯೯೯, ೨೦೧೩ರಲ್ಲಿ ಸಂಗೀತ ನಾಟಕ ಅಕಾಡೆಮಿಯಿಂದ ‘ಟಾಗೇರ್ ರತ್ನ’ ಪ್ರಶಸ್ತಿ ಪಡೆದರು. ಎಪಿಕ್ ವುಮೆನ್ ಸಮ್ಮೇಳನ ನೃತ್ಯ ಮತ್ತು ನೃತ್ಯ ಸಂಯೋಜನೆಗಾಗಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು.
೨೦ ವರ್ಷಗಳಲ್ಲಿ ೩೦೦೦ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಮಾಯಾರಾವ್ ಅವರ ಆತ್ಮ ಚರಿತ್ರೆ ಮಾಯಾರಾವ್ ಕೊರಿಯೋಗ್ರಫಿ ೨೦೧೩ ರಲ್ಲಿ ಅವರಿಂದ ಪೂರ್ಣಗೊಳಿಸಲಾಯಿತು. ೨೦೧೪ರಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರು ಬಿಡುಗಡೆ ಮಾಡಿದರು. ಸಪ್ಟೆಂಬರ್ ೨೦೧೪ ರಂದು ಬೆಂಗಳೂರಿನ ಎಮ್.ಎಸ್ ರಾಮಯ್ಯ ಸ್ಮಾರಕ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಹೃದಯ ಸ್ತಂಭನದಿಂದ ಮೃತಪಟ್ಟರು.[೨]
ಉಲ್ಲೇಖಗಳು
[ಬದಲಾಯಿಸಿ]